Site icon Vistara News

Ghee benefits: ನಿತ್ಯ ಒಂದು ಚಮಚ ತುಪ್ಪ ಸೇವಿಸಿ, ಆರೋಗ್ಯದಲ್ಲಿನ ಬದಲಾವಣೆ ಗಮನಿಸಿ!

Ghee benefits

ನಿತ್ಯವೂ ನಾವು ಸೇವಿಸುವ ಆಹಾರದಲ್ಲಿ (food) ಪೌಷ್ಟಿಕಾಂಶ ( Nutrition) ಇದೆಯೋ, ಇಲ್ಲವೋ, ಎಷ್ಟಿದೆಯೋ ಎನ್ನುವ ಯೋಚನೆ ಖಂಡಿತಾ ಕಾಡುತ್ತದೆ. ಆದರೆ ಇದಕ್ಕೆಲ್ಲ ನಾವು ಹೆಚ್ಚು ಗಮನ ಹರಿಸೋದಿಲ್ಲ. ಆಹಾರ ರುಚಿಯಾಗಿದ್ದರೆ ಸಾಕು ಅದರಲ್ಲಿರುವ ಪೋಷ್ಟಿಕಾಂಶ ಏನು ಎಂಬುದನ್ನು ನಾವು ಮರೆತೇ ಬಿಡುತ್ತೇವೆ. ಯಾವುದಾದರೊಂದು ಅರೋಗ್ಯ (health) ಸಮಸ್ಯೆ ಕಾಣಿಸಿದಾಗಲೇ ಪೋಷ್ಟಿಕಾಂಶದ ಕೊರತೆ ಎಂದು ತಿಳಿದು ಅಯ್ಯೋ ನಾವು ಅಷ್ಟೆಲ್ಲ ಆಹಾರ ಸೇವಿಸಿದರೂ ಪೋಷ್ಟಿಕಾಂಶ ಕೊರತೆ ಯಾಕೆ ಉಂಟಾಯಿತು ಎಂದು ನಮ್ಮನ್ನು ನಾವೇ ಪ್ರಶ್ನಿಸುವಂತೆ ಮಾಡುತ್ತದೆ.

ಹಾಗಂತ ನಾವು ಪೌಷ್ಟಿಕಾಂಶದ ಬಗ್ಗೆ ಹೆಚ್ಚು ಯೋಚಿಸಬೇಕಿಲ್ಲ. ನಮ್ಮ ಆಹಾರದಲ್ಲಿ ಕೆಲವೊಂದು ವಸ್ತುಗಳನ್ನು ಸೇರಿಸಿದರೆ ಸಾಕು ನಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಹೇರಳವಾಗಿ ಸಿಗುತ್ತದೆ. ಅವುಗಳು ಒಂದು ರೀತಿಯಲ್ಲಿ ನಮ್ಮ ದೇಹಕ್ಕೆ ಪೌಷ್ಟಿಕಾಂಶಗಳ ನಿಧಿಯಂತೆ ಕೆಲಸ ಮಾಡುತ್ತದೆ. ಇದರಿಂದ ಸಮಗ್ರ ಆರೋಗ್ಯ ಪ್ರಯೋಜನಗಳು (Ghee benefits) ನಮ್ಮ ದೇಹಕ್ಕೆ ಸಿಗುವುದು. ಇಂತಹ ಒಂದು ವಸ್ತು ನಮ್ಮ ಅಡುಗೆ ಮನೆಯಲ್ಲಿ ಸದಾ ಇರುತ್ತದೆ. ಅದು ಯಾವುದೆಂದರೆ ತುಪ್ಪ.

ಮೊಸರಿನಿಂದ ಬೆಣ್ಣೆ ತೆಗೆದು ಮಾಡಲಾಗುವ ತುಪ್ಪ ಪೌಷ್ಟಿಕಾಂಶಗಳ ಕಣಜವೆಂದೇ ಹೇಳಬೇಕು. ಸಾಕಷ್ಟು ಪೋಷಕಾಂಶಗಳ ಜೊತೆಗೆ ಇದು ಔಷಧೀಯ ಗುಣಗಳನ್ನೂ ಹೊಂದಿದೆ. ಇದನ್ನು ನಮ್ಮ ಆಹಾರದಲ್ಲಿ ಸೇರಿಸಿದರೆ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.

ಇದನ್ನೂ ಓದಿ: Ugadi 2024: ಯುಗಾದಿ ಹಬ್ಬಕ್ಕೆ ಟ್ರೆಂಡಿಯಾದ ಟ್ರೆಡಿಷನಲ್‌ ಜಡೆ ಸಿಂಗಾರ-ಬಂಗಾರ

ಅತ್ಯಂತ ಸುವಾಸನೆ ಹೊಂದಿರುವ ಒಂದು ಚಮಚ ತುಪ್ಪವನ್ನು ನಮ್ಮ ಆಹಾರದಲ್ಲಿ ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಹಾಗಾದರೆ ಈ ತುಪ್ಪದಲ್ಲಿ ಅಂತಹ ಯಾವ ಪೌಷ್ಟಿಕಾಂಶದ ನಿಧಿ ಇದೆ ಹಾಗು ಇದರಿಂದ ನಮ್ಮ ದೇಹಕ್ಕೆ ಏನು ಲಾಭ ಎಂಬುದನ್ನು ನೋಡೋಣ.

ಆರೋಗ್ಯಕರ ಕೊಬ್ಬು

ಎಲ್ಲ ಕೊಬ್ಬು ಒಂದೇ ರೀತಿ ಇರುವುದಿಲ್ಲ. ದೇಹಕ್ಕೆ ಅತ್ಯಗತ್ಯವಾಗಿ ಆರೋಗ್ಯಕರ ಕೊಬ್ಬು ಬೇಕೇಬೇಕು. ಇದು ತುಪ್ಪದಲ್ಲಿ ಹೇರಳವಾಗಿದೆ. ತುಪ್ಪದಲ್ಲಿರುವ ಸ್ಯಾಚುರೇಟೆಡ್ ಕೊಬ್ಬು ವಿವಿಧ ದೈಹಿಕ ಕಾರ್ಯಗಳಿಗೆ ಅವಶ್ಯಕವಾಗಿದೆ. ಅಲ್ಲದೇ ಇದರಲ್ಲಿ ಬ್ಯುಟರಿಕ್ ಆಮ್ಲ ಎಂಬ ಕೊಬ್ಬಿನಾಮ್ಲಗಳಿದ್ದು ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಚಯಾಪಚಯ ಕ್ರಿಯೆಯ ಶಕ್ತಿಯನ್ನು ಹೆಚ್ಚಿಸುತ್ತದೆ.


ಜೀರ್ಣಕ್ರಿಯೆಗೆ ಟಾನಿಕ್

ಜೀರ್ಣಕ್ರಿಯೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುವ ಗುಣ ತುಪ್ಪಕ್ಕೆ ಇದೆ. ಹೀಗಾಗಿ ತುಪ್ಪವನ್ನು ಜೀರ್ಣಕಾರಿ ಟಾನಿಕ್ ಎಂದೇ ಕರೆಯಲಾಗುತ್ತದೆ. ತುಪ್ಪವು ದೇಹದಲ್ಲಿರುವ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ. ಆಹಾರದಲ್ಲಿರುವ ಜೀವಸತ್ವ ಮತ್ತು ಖನಿಜಗಳ ಹೀರಿಕೊಳ್ಳುವಿಕೆಯನ್ನು ಸುಗಮಗೊಳಿಸುತ್ತದೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಅಸ್ವಸ್ಥತೆಯನ್ನು ಹೋಗಲಾಡಿಸಿ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ.

ರೋಗನಿರೋಧಕ ಶಕ್ತಿ ವೃದ್ಧಿ

ತುಪ್ಪವು ರೋಗಕಾರಕಗಳು ಮತ್ತು ಸೋಂಕುಗಳಿಂದ ದೇಹವನ್ನು ರಕ್ಷಿಸುತ್ತದೆ. ಇದು ವಿಟಮಿನ್ ಎ, ಡಿ, ಇ ಮತ್ತು ಕೆ ಜೊತೆಗೆ ಅಗತ್ಯವಾದ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ ಇದು ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಒದಗಿಸಿ ಉರಿಯೂತದ ಸಮಸ್ಯೆಗಳನ್ನು ನಿವಾರಿಸುತ್ತದೆ.

ಮೆದುಳಿನ ಆರೋಗ್ಯಕ್ಕೆ ಉತ್ತಮ

ತುಪ್ಪದಲ್ಲಿರುಬುವ ಆರೋಗ್ಯಕರ ಕೊಬ್ಬು ಮೆದುಳಿನ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ. ಮೆದುಳಿಗೆ ಬೇಕಾದ ಅಗತ್ಯ ಪೋಷಕಾಂಶಗಳ ಪ್ರಬಲ ಮೂಲವಾಗಿರುವ ತುಪ್ಪದಲ್ಲಿರುವ ಸ್ಯಾಚುರೇಟೆಡ್ ಕೊಬ್ಬುಗಳು ಮೆದುಳಿಗೆ ಸ್ಥಿರವಾದ ಶಕ್ತಿಯ ಮೂಲವಾಗಿದೆ. ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳು, ಫಾಸ್ಫಾಟಿಡಿಲ್ಕೋಲಿನ್ ನಂತಹ ಗುಣಗಳು ನರಕೋಶಗಳ ಆರೋಗ್ಯವನ್ನು ಕಾಪಾಡುತ್ತದೆ. ಬೇಗನೆ ಮುಪ್ಪಿನ ಲಕ್ಷಣಗಳನ್ನು ಇದು ತಡೆಯುತ್ತದೆ.

ತೂಕ ನಿಯಂತ್ರಣ

ತುಪ್ಪ ದೇಹದ ತೂಕ ಹೆಚ್ಚಿಸುತ್ತದೆ ಎನ್ನುವ ಕಲ್ಪನೆ ಎಲ್ಲರಲ್ಲೂ ಇದೆ. ಆದರೆ ಇದು ತಪ್ಪು. ತುಪ್ಪವನ್ನು ಆಹಾರದಲ್ಲಿ ಸೇರಿಸುವುದರಿಂದ ದೇಹದ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ತುಪ್ಪದಲ್ಲಿರುವ ಕೊಬ್ಬಿನಾಮ್ಲಗಳು ಯಕೃತ್ತಿನಿಂದ ಸುಲಭವಾಗಿ ಚಯಾಪಚಯಗೊಳ್ಳುತ್ತವೆ. ಇದು ಕೊಬ್ಬಿನಂತೆ ಶೇಖರಿಸಲ್ಪಡುವ ಬದಲು ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತವೆ. ಇದಲ್ಲದೆ, ತುಪ್ಪ ಸೇವನೆಯಿಂದ ಕಡುಬಯಕೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದ ದೇಹದ ತೂಕ ನಿಯಂತ್ರಣದಲ್ಲಿ ಇರಿಸಬಹುದು.

Exit mobile version