Site icon Vistara News

Hair Falling Remedy: ಕೂದಲುದುರುವಿಕೆ ಕಡಿಮೆ ಮಾಡಲು ಈ ಎಲ್ಲ ಒಣಹಣ್ಣುಗಳು ಹಾಗೂ ಬೀಜಗಳನ್ನು ತಿನ್ನಿ!

hair falling remedy

ಕೂದಲ ಆರೋಗ್ಯದ (hair care) ವಿಚಾರಕ್ಕೆ ಬಂದಾಗ ಬಹುತೇಕರನ್ನು ಕಾಡುವುದು ತಲೆಕೂದಲು ಉದುರುವ ಸಮಸ್ಯೆ (Hair Falling problem). ಸಿಕ್ಕ ಸಿಕ್ಕ ಎಣ್ಣೆಗಳು, ಹೇರ್‌ ಪ್ಯಾಕ್‌ಗಳು, ಮಸಾಜ್‌ಗಳು, ಶಾಂಪೂ ಕಂಡೀಷನರ್‌ಗಳನ್ನೆಲ್ಲ ಟ್ರೈ ಮಾಡಿ ಮಾಡಿ ಬೇಸತ್ತು, ಕೂದಲುದುರುವಿಕೆ ಸಮಸ್ಯೆ ಮಾತ್ರ ಕಡಿಮೆಯೇ ಆಗದು ಎಂದಾದಾಗ ಕೈಚೆಲ್ಲುವ ಮಂದಿ ಅನೇಕ. ಬಹುಶಃ ಒಂದು ದಿನ ತನ್ನ ತಲೆಯ ಕೂದಲೆಲ್ಲ ಉದುರಿಹೋಗಿ ಬೊಕ್ಕತಲೆಯಾಗುತ್ತದೆ ಎಂದು ಅಂದುಕೊಳ್ಳುವವರೇ ಹೆಚ್ಚು. ಆದರೆ, ವಿಚಿತ್ರವೆಂದರೆ, ಕೂದಲ ಹೊರಗಿನ ಪೋಷಣೆಗೆಕೊಟ್ಟ ಗಮನದಷ್ಟೇ ಒಳಗಿನ ಪೋಷಣೆಯತ್ತಲೂ ಗಮನ ಕೊಟ್ಟರೆ ಸಮಸ್ಯೆ ಪರಿಹಾರವಾಗುತ್ತದೆ ಎಂಬ ಸತ್ಯವನ್ನು ನಾವು ಮೊದಲು ಮನಗಾಣಬೇಕು. ಕೂದಲ ಬುಡದಲ್ಲಿರುವ ಶಕ್ತಿಯನ್ನು ವೃದ್ಧಿ ಮಾಡುವ ಆಹಾರಗಳನ್ನು ಸೇವನೆ ಮಾಡುವ ಮೂಲಕ, ಕೂದಲ ಆರೋಗ್ಯವನ್ನು ಹೆಚ್ಚಿಸುವ ಆಹಾರಗಳನ್ನು ಸೇವನೆ ಮಾಡಬಹುದು. ಬನ್ನಿ, ಯಾವೆಲ್ಲ ಬೀಜಗಳ ಸೇವನೆಯ ಮೂಲಕ ಕೂದಲುದುರುವಿಕೆಯನ್ನು ಹೇಗೆ ತಡೆಗಟ್ಟಬಹುದು (Hair Falling Remedy) ಎಂಬುದನ್ನು ನೋಡೋಣ.

1. ಬಾದಾಮಿ: ಬಾದಾಮಿಯಲ್ಲಿ ವಿಟಮಿನ್‌ ಇ, ಫ್ಯಾಟಿ ಆಸಿಡ್‌ಗಳು ಹಾಗೂ ಬಯೋಟಿನ್‌ ಹೇರಳವಾಗಿರುವುದರಿಂದ ಇದು ಕೂದಲ ಬುಡವನ್ನು ಶಕ್ತಿಯುತವನ್ನಾಗಿ ಮಾಡುವುದಷ್ಟೇ ಅಲ್ಲ, ಕೂದಲಿಗೂ ಶಕ್ತಿಯನ್ನು ತುಂಬಿ, ಕೂದಲು ಉದುರದಂತೆ ಕಾಪಾಡುತ್ತದೆ. ಕೂದಲ ಆರೋಗ್ಯವನ್ನು ಹೆಚ್ಚಿಸುತ್ತದೆ.

2. ವಾಲ್ನಟ್‌: ವಾಲ್ನಟ್‌ನಲ್ಲಿ ಬಯೋಟಿನ್‌ ಅತ್ಯಂತ ಹೆಚ್ಚು ಪ್ರಮಾಣದಲ್ಲಿರುವುದರಿಂದ ಇದು ಚರ್ಮದ ಕಾಂತಿಗೆ ಹಾಗೂ ಕೂದಲ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಕೂದಲನ್ನು ಬಲಯುತವಾಗಿಸಿ, ಸಂರಕ್ಷಿಸುವುದಷ್ಟೇ ಅಲ್ಲ, ಆರೋಗ್ಯಯುತವಾಗಿ ಉದ್ದ ಬೆಳೆಯುವಂತೆ ಮಾಡುವಲ್ಲಿಯೂ ಮುಖ್ಯ ಪಾತ್ರ ವಹಿಸುತ್ತದೆ. ನಿತ್ಯವೂ ಒಂದೋ ಎರಡೋ ವಾಲ್ನಟ್‌ ತಿನ್ನುವ ಮೂಲಕ ಕೂದಲು ಹಾಗೂ ಚರ್ಮದ ಆರೋಗ್ಯವನ್ನು ಹೆಚ್ಚಿಸಬಹುದು.

3. ಬ್ರೆಜಿಲ್‌ ನಟ್:‌ ಬ್ರೆಜಿಲ್‌ ನಟ್‌ನಲ್ಲಿ ಸೆಲೆನಿಯಮ್‌ ಎಂಬ ಖನಿಜಾಂಶವು ಹೇರಳವಾಗಿರುವುದರಿಂದ ಇದು, ಕೂದಲ ಬುಡದ ಚರ್ಮದ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದಾಗಿರುವುದರಿಂದ ಇದರ ಸೇವನೆ ಕೂದಲಿಗೆ ಮತ್ತಷ್ಟು ಶಕ್ತಿಯನ್ನು ನೀಡುತ್ತದೆ.

4. ಗೋಡಂಬಿ: ಗೋಡಂಬಿಯಲ್ಲಿ ಝಿಂಕ್‌ ಹೇರಳವಾಗಿದ್ದು, ಇದು, ಕೂದಲ ಬುಡದ ಚರ್ಮದ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಹೀಗಾಗಿ ದಿನವೂ ಒಂದೆರಡು ಗೋಡಂಬಿಯ ಸೇವನೆ ಮಾಡುತ್ತಾ ಬಂದಲ್ಲಿ ಕೂದಲು ಶಕ್ತಿಯುತವಾಗುತ್ತದೆ.

ಇದನ್ನೂ ಓದಿ: Health Tips: ಈ ಎಲ್ಲ ಸಾಮಾನ್ಯ ಆಹಾರಗಳನ್ನು ಜೊತೆಯಾಗಿ ತಿನ್ನುವುದು ಒಳ್ಳೆಯದಲ್ಲ ಗೊತ್ತೇ?

5. ಪಿಸ್ತಾ: ಪಿಸ್ತಾ ಕೂಡಾ ಕೂದಲ ಆರೋಗ್ಯದಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಇದರಲ್ಲಿ ಬಯೋಟಿನ್‌, ಫ್ಯಾಟಿ ಆಸಿಡ್‌ಗಳು ಹಾಗೂ ವಿಟಮಿನ್‌ ಇ ಇರುವುದರಿಂದ ಇವು ಕೂದಲನ್ನು ಗಟ್ಟಿಗೊಳಿಸಿ ಆರೋಗ್ಯವಾಗಿಡುತ್ತದೆ.

6. ಕಪ್ಪು ಒಣ ದ್ರಾಕ್ಷಿ: ಕಪ್ಪು ಒಣ ದ್ರಾಕ್ಷಿಯಲ್ಲಿ ನೈಸರ್ಗಿಕ ಕಬ್ಬಿಣಾಂಶವು ಹೇರಳವಾಗಿರುವುದರಿಂದ ಇದು ಕೂದಲ ಬುಡದಲ್ಲಿ ಸರಿಯಾದ ರಕ್ತ ಸಂಚಾರವಾಗುವಂತೆ ಮಾಡಿ, ಕೂದಲನ್ನು ಶಕ್ತಿಯುತಗೊಳಿಸುತ್ತದೆ.

7. ಖರ್ಜೂರ: ಖರ್ಜೂರದಲ್ಲೂ ಕಬ್ಬಿಣಾಂಶ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಇದು ಒಟ್ಟು ದೇಹಾರೋಗ್ಯವನ್ನು ಕಾಪಾಡಿ, ಸಾಮರ್ಥ್ಯವನ್ನು ಹೆಚ್ಚು ಮಾಡುವುದಷ್ಟೇ ಅಲ್ಲದೆ, ಕೂದಲ ಬುಡದಲ್ಲಿ ರಕ್ತ ಸಂಚಾರವನ್ನು ಹೆಚ್ಚು ಮಾಡುವಲ್ಲಿ ಸಹಾಯ ಮಾಡುತ್ತದೆ.ಇದರಿಂದ ಸಹಜವಾಗಿಯೇ ಕೂದಲು ಬಲಗೊಳ್ಳುತ್ತದೆ. ಉದುರುವಿಕೆ ಕಡಿಮೆಯಾಗುತ್ತದೆ.

ಇದನ್ನೂ ಓದಿ: Health Tips: ಈ ಎಲ್ಲ ಸಾಮಾನ್ಯ ಆಹಾರಗಳನ್ನು ಜೊತೆಯಾಗಿ ತಿನ್ನುವುದು ಒಳ್ಳೆಯದಲ್ಲ ಗೊತ್ತೇ?

Exit mobile version