ಎದೆಯುರಿ (heartburn), ಅಜೀರ್ಣ (indigestion) ಮತ್ತು ಗ್ಯಾಸ್ಟ್ರಿಕ್ (gastric) ಮೊದಲಾದ ಆರೋಗ್ಯ (Health Tips) ಸಮಸ್ಯೆಗಳು ನಾವು ಸಾಮಾನ್ಯ ಎಂದುಕೊಂಡಿರುತ್ತೇವೆ. ಆದರೆ ಇದನ್ನು ನಿರ್ಲಕ್ಷಿಸುವುದು ಅಪಾಯಕಾರಿಯಾಗಬಹುದು. ಜೀರ್ಣಕಾರಿ ಸಮಸ್ಯೆಗಳು (Digestive issues) ಅನೇಕ ಜನರಿಗೆ ಸಾಮಾನ್ಯ ಸಮಸ್ಯೆಗಳಾಗಿವೆ. ದುರ್ಬಲ ಜೀರ್ಣಾಂಗ ವ್ಯವಸ್ಥೆಯಿಂದಾಗಿ ಇದು ಉಂಟಾಗುತ್ತದೆ. ಇದರಿಂದ ಹೊಟ್ಟೆ ಉಬ್ಬುವುದು, ಹೊಟ್ಟೆ ಭಾರ ಮತ್ತು ಊಟದ ಅನಂತರ ಎದೆಯುರಿ ಮೊದಲಾದವುಗಳು ಕಾಣಿಸಿಕೊಳ್ಳುತ್ತವೆ.
ದೇಹವು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಮತ್ತು ಹೀರಿಕೊಳ್ಳಲು ಸಾಧ್ಯವಾಗದಿದ್ದರೆ ಪೋಷಕಾಂಶಗಳ ಕೊರತೆಗೆ ಕಾರಣವಾಗುವುದರಿಂದ ಈ ಸಮಸ್ಯೆಗಳನ್ನು ಪರಿಹರಿಸುವುದು ಮುಖ್ಯವಾಗಿದೆ. ಫೈಬರ್ ಭರಿತ ಆಹಾರಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಲ್ಲದೆ ಹೆಚ್ಚುವರಿಯಾಗಿ ಕೆಲವು ಸಾಮಾನ್ಯ ಅಡುಗೆ ಪದಾರ್ಥಗಳಿಂದ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಜೀರ್ಣಕಾರಿ ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುವ ನಾಲ್ಕು ಪರಿಹಾರಗಳು ಇಲ್ಲಿವೆ.
ಸೋಂಪು ಕಾಳು
ಸೋಂಪು ಕಾಳುಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಾಂಪ್ರದಾಯಿಕ ಪರಿಹಾರವಾಗಿದೆ. ಊಟದ ಅನಂತರ ಉಬ್ಬುವುದು ಮತ್ತು ಅಸ್ವಸ್ಥತೆಯನ್ನು ನಿವಾರಿಸಲು ಅವುಗಳನ್ನು ಶತಮಾನಗಳಿಂದ ಬಳಸಲಾಗುತ್ತದೆ. ಊಟದ ಅನಂತರ ಸೋಂಪು ಕಾಳುಗಳನ್ನು ಅಗಿಯುವುದು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ಬಳಸುವುದು ಹೇಗೆ ?
ಊಟದ ಅನಂತರ ಒಂದು ಟೀಚಮಚ ಸೋಂಪು ಕಾಳನ್ನು ಜಗಿದು ತಿನ್ನಿ. ಅಥವಾ ಒಂದು ಲೋಟ ನೀರಿನಲ್ಲಿ ಒಂದು ಟೀಚಮಚ ಸೋಂಪು ಕಾಳುಗಳನ್ನು ಕುದಿಸಿ, ಸೋಸಿಕೊಂಡು ಬೆಚ್ಚಗೆ ಕುಡಿಯಬಹುದು.
ಅಜ್ವೈನ್
ಅಜ್ವೈನ್ ಬೀಜಗಳು ಜೀರ್ಣಕ್ರಿಯೆಯನ್ನು ಸುಧಾರಿಸುವ ಗುಣ ಹೊಂದಿದೆ. ಆಮ್ಲೀಯತೆ, ಉಬ್ಬುವುದು ಮತ್ತು ಹೊಟ್ಟೆ ನೋವಿಗೆ ಇದು ಪರಿಹಾರವನ್ನು ನೀಡಬಹುದು. ಅಜ್ವೈನ್ ಗ್ಯಾಸ್ಟ್ರಿಕ್ ಜ್ಯೂಸ್ ಸ್ರವಿಸುವಿಕೆಯಲ್ಲಿ ಸಹಾಯ ಮಾಡುತ್ತದೆ, ಹೀಗಾಗಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಬಳಸುವುದು ಹೇಗೆ?
ಅಜ್ವೈನ್ ನ ಕೆಲವು ಬೀಜಗಳನ್ನು ಊಟದ ಅನಂತರ ಜಗಿಯಬಹುದು ಅಥವಾ ಒಂದು ಟೀ ಚಮಚ ಅಜ್ವೈನ್ ಬೀಜಗಳನ್ನು ಒಂದು ಕಪ್ ನೀರಿನಲ್ಲಿ ಕುದಿಸಿ ಮತ್ತು ಅದನ್ನು ಕುಡಿಯಬಹುದು.
ಏಲಕ್ಕಿ
ಏಲಕ್ಕಿಯನ್ನು ಸಾಮಾನ್ಯವಾಗಿ ಖಾರ ಮತ್ತು ಸಿಹಿ ತಿನಿಸುಗಳಲ್ಲಿ ಬಳಸಲಾಗುತ್ತದೆ. ಇದು ನೈಸರ್ಗಿಕ ಮೌತ್ ಫ್ರೆಶ್ನರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಏಲಕ್ಕಿಯು ಗ್ಯಾಸ್ ಮತ್ತು ಅಜೀರ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯುಬ್ಬರಕ್ಕೆ ಪರಿಹಾರವನ್ನು ನೀಡುತ್ತದೆ.
ಬಳಸುವುದು ಹೇಗೆ?
ಊಟದ ಅನಂತರ ಏಲಕ್ಕಿಯನ್ನು ಅಗಿಯಿರಿ. ಇದು ರುಚಿಯನ್ನು ಹೆಚ್ಚಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಇಂಗು
ಇಂಗು ಕಟುವಾದ ಪರಿಮಳ ಮತ್ತು ಜೀರ್ಣಕ್ರಿಯೆಗೆ ಪ್ರಯೋಜನಕಾರಿಯಾಗಿದೆ. ಇದು ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಂಗು ಜೀರ್ಣಕಾರಿ ಕಿಣ್ವಗಳ ಬಿಡುಗಡೆಯನ್ನು ಉತ್ತೇಜಿಸುತ್ತದೆ ಮತ್ತು ಜೀರ್ಣಕಾರಿ ಪ್ರಕ್ರಿಯೆಯನ್ನು ಸುಧಾರಿಸುತ್ತದೆ.
ಬಳಸುವುದು ಹೇಗೆ?
ಒಂದು ಚಿಟಿಕೆ ಇಂಗನ್ನು ಬೆಚ್ಚಗಿನ ನೀರಿನಲ್ಲಿ ಕರಗಿಸಿ ಮತ್ತು ಊಟದ ಅನಂತರ ಕುಡಿಯಿರಿ ಅಥವಾ ಉತ್ತಮ ಜೀರ್ಣಕ್ರಿಯೆಗಾಗಿ ಇದನ್ನು ಒಗ್ಗರಣೆಯಲ್ಲಿ ಸೇರಿಸಬಹುದು.
ಇದನ್ನೂ ಓದಿ: Sugar Vs Jaggery In Tea: ಸಕ್ಕರೆ ಬದಲು ಬೆಲ್ಲ ಹಾಕಿ ಚಹಾ ಕುಡಿದರೆ ಆರೋಗ್ಯಕ್ಕೆ ನಿಜಕ್ಕೂ ಲಾಭ ಇದೆಯೆ?
ಉತ್ತಮ ಜೀರ್ಣಕ್ರಿಯೆಗೆ ಸಲಹೆಗಳು
ಜೀರ್ಣಕ್ರಿಯೆಗೆ ಸಹಾಯ ಮಾಡಲು ದಿನವಿಡೀ ಸಾಕಷ್ಟು ನೀರು ಕುಡಿಯಿರಿ.
ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿರಲು ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸರಿಯಾಗಿ ಜಗಿದು ತಿನ್ನಿ.
ಜೀರ್ಣಾಂಗ ವ್ಯವಸ್ಥೆಯನ್ನು ಓವರ್‌ಲೋಡ್ ಮಾಡಬೇಡಿ. ಚಿಕ್ಕ ಪ್ರಮಾಣದಲ್ಲಿ ಆಗಾಗ್ಗೆ ಸೇವಿಸಿ.
ದೈಹಿಕ ಚಟುವಟಿಕೆಯು ಜೀರ್ಣಕಾರಿ ಪ್ರಕ್ರಿಯೆಯನ್ನು ಉತ್ತೇಜಿಸಲು ಮತ್ತು ಉಬ್ಬುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.