ಸಾಮಾನ್ಯವಾಗಿ ಹೆಚ್ಚು ಕಾಲ ಕುಳಿತುಕೊಂಡು ಕೆಲಸ ಮಾಡುವುದು, ಹಳೆಯ ಗಾಯ, ಆರೋಗ್ಯದಲ್ಲಾಗುವ (Health Tips) ಏರುಪೇರುಗಳಿಂದ ಪಾದಗಳಲ್ಲಿ ಊತ, ನೋವು (feet Swelling and Pain) ಉಂಟಾಗುತ್ತದೆ. ಇದು ಸಾಕಷ್ಟು ಅಹಿತಕರವಾಗಿರುತ್ತದೆ ಮತ್ತು ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯನ್ನು ಉಂಟು ಮಾಡುತ್ತದೆ. ಇದನ್ನು ಕೆಲವು ಸರಳ ಮನೆಮದ್ದುಗಳ (home remedies) ಮೂಲಕ ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಿದೆ.
ಕಾಲು ನೋವು ಮತ್ತು ಊತವನ್ನು ತ್ವರಿತವಾಗಿ ಕಡಿಮೆ ಮಾಡಲು ಕೆಲವು ಮನೆ ಮದ್ದುಗಳು ಇಂತಿವೆ.
ಅರಿಶಿನ ಚಿಕಿತ್ಸೆ
ಅರಿಶಿನವು ಉರಿಯೂತ ಮತ್ತು ನೋವು ನಿವಾರಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದು ಊತ ಮತ್ತು ನೋವನ್ನು ಕಡಿಮೆ ಮಾಡಲು ಅತ್ಯುತ್ತಮ ಆಯ್ಕೆಯಾಗಿದೆ.
ಒಂದು ಬೌಲ್ ಬೆಚ್ಚಗಿನ ನೀರಿಗೆ ಒಂದು ಚಮಚ ಅರಿಶಿನ ಪುಡಿಯನ್ನು ಸೇರಿಸಿ. ಇದಕ್ಕೆ ಒಂದು ಟೀ ಚಮಚ ಉಪ್ಪನ್ನು ಕೂಡ ಸೇರಿಸಬಹುದು. ಈ ಮಿಶ್ರಣದಲ್ಲಿ ಪಾದಗಳನ್ನು ಸುಮಾರು 15- 20 ನಿಮಿಷಗಳ ಕಾಲನೆನೆಸಿಟ್ಟರೆ ಸ್ನಾಯುಗಳಿಗೆ ವಿಶ್ರಾಂತಿ ದೊರೆಯುತ್ತದೆ ಮತ್ತು ಉರಿಯೂತ ಕಡಿಮೆ ಮಾಡುತ್ತದೆ.
ಅರಿಶಿನಕ್ಕೆ ತೆಂಗಿನೆಣ್ಣೆ ಬೆರೆಸಿ ಪೇಸ್ಟ್ ಮಾಡಿ ಪಾದಗಳ ಊತ ಅಥವಾ ನೋವಿನ ಪ್ರದೇಶಗಳಿಗೆ ಹಾಕಿ. ಒಣಗಿದ ಮೇಲೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದು ಕೂಡ ಉರಿಯೂತ, ನೋವನ್ನು ನಿವಾರಿಸುತ್ತದೆ.
ಉಪ್ಪು ನೀರು
ಉಪ್ಪನ್ನು ಬಳಸುವುದು ಪಾದದ ಊತ ಮತ್ತು ನೋವನ್ನು ನಿರ್ವಹಿಸಲು ಮತ್ತೊಂದು ಪರಿಣಾಮಕಾರಿ ಮಾರ್ಗವಾಗಿದೆ.
ಅರ್ಧ ಕಪ್ ಉಪ್ಪನ್ನು ಬೆಚ್ಚಗಿನ ನೀರಿನಲ್ಲಿ ಕರಗಿಸಿ ಇದರಲ್ಲಿ ಸುಮಾರು 20- 30 ನಿಮಿಷಗಳ ಕಾಲ ಪಾದಗಳನ್ನು ನೆನೆಸಿ. ಉಪ್ಪಿನಲ್ಲಿರುವ ಮೆಗ್ನೀಸಿಯಮ್ ಉರಿಯೂತವನ್ನು ಕಡಿಮೆ ಮಾಡುತ್ತದೆ. ಸ್ನಾಯುವಿನ ನೋವನ್ನು ಕಡಿಮೆ ಮಾಡುತ್ತದೆ.
ಐಸ್ ಪ್ಯಾಕ್
ಐಸ್ ಪ್ಯಾಕ್ ಅನ್ನು ಅನ್ವಯಿಸುವುದು ಊತ ಮತ್ತು ಮರಗಟ್ಟುವಿಕೆ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕೆಲವು ಐಸ್ ತುಂಡುಗಳನ್ನು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ಅಥವಾ ಐಸ್ ಪ್ಯಾಕ್ ಬಳಸಿ. ಇದನ್ನು 15- 20 ನಿಮಿಷಗಳ ಕಾಲ ಪಾದಗಳ ಊತ ಅಥವಾ ನೋವಿನ ಪ್ರದೇಶಕ್ಕೆ ಅನ್ವಯಿಸಿ. ಫ್ರಾಸ್ಬೈಟ್ ಅನ್ನು ತಡೆಗಟ್ಟಲು ಐಸ್ ಮತ್ತು ನಚರ್ಮದ ನಡುವೆ ಬಟ್ಟೆಯನ್ನು ಇರಿಸಲು ಮರೆಯದಿರಿ. ಶೀತವು ರಕ್ತನಾಳಗಳನ್ನು ಸಂಕುಚಿತಗೊಳಿಸಲು ಸಹಾಯ ಮಾಡುತ್ತದೆ. ಊತ ಮತ್ತು ನೋವನ್ನು ಕಡಿಮೆ ಮಾಡುತ್ತದೆ.
ಪಾದಗಳನ್ನು ಎತ್ತರದಲ್ಲಿ ಇರಿಸುವುದು
ಪಾದಗಳನ್ನು ಎತ್ತರದಲ್ಲಿ ಇಟ್ಟುಕೊಳ್ಳುವುದು ರಕ್ತ ಪರಿಚಲನೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಮತ್ತು ಊತವನ್ನು ಕಡಿಮೆ ಮಾಡುತ್ತದೆ.
ವಿಶ್ರಾಂತಿ ಪಡೆಯುವಾಗ ಅಥವಾ ನಿದ್ರಿಸುವಾಗ ದಿಂಬುಗಳನ್ನು ಇತ್ತು ಪಾದಗಳನ್ನು ಹೃದಯ ಮಟ್ಟದಿಂದ ಮೇಲಕ್ಕೆತ್ತಿ. ಇದು ಪಾದಗಳಲ್ಲಿ ದ್ರವದ ಶೇಖರಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಿನಕ್ಕೆ ಹಲವಾರು ಬಾರಿ ನಿಮ್ಮ ಪಾದಗಳನ್ನು 15- 30 ನಿಮಿಷಗಳ ಕಾಲ ಎತ್ತರದಲ್ಲಿ ಇರಿಸಿ ಇದು ಉರಿಯೂತ, ನೋವನ್ನು ನಿವಾರಿಸುತ್ತದೆ.
ಬೆಚ್ಚಗಿನ ಎಣ್ಣೆ ಮಸಾಜ್
ಮೃದುವಾಗಿ ಬೆಚ್ಚಗಿನ ಎಣ್ಣೆ ಮಸಾಜ್ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಊತ ಮತ್ತು ನೋವಿನಿಂದ ಪರಿಹಾರವನ್ನು ನೀಡುತ್ತದೆ.
ಸಾಸಿವೆ ಎಣ್ಣೆ, ಎಳ್ಳಿನ ಎಣ್ಣೆ ಅಥವಾ ಕ್ಯಾಸ್ಟರ್ ಆಯಿಲ್ ನಂತಹ ಬೆಚ್ಚಗಿನ ಎಣ್ಣೆಗಳನ್ನು ಬಳಸಿ ವೃತ್ತಾಕಾರವಾಗಿ ಪಾದಗಳಿಗೆ ಎಣ್ಣೆಯನ್ನು ನಿಧಾನವಾಗಿ ಮಸಾಜ್ ಮಾಡಿ. ಉಷ್ಣತೆ ಮತ್ತು ಮಸಾಜ್ ಕ್ರಿಯೆಯು ಸ್ನಾಯುಗಳಿಗೆ ವಿಶ್ರಾಂತಿ ನೀಡುತ್ತದೆ. ಬಿಗಿತವನ್ನು ಕಡಿಮೆ ಮಾಡುತ್ತದೆ. ಉತ್ತಮ ಫಲಿತಾಂಶಗಳಿಗಾಗಿ ಮಲಗುವ ಮುನ್ನ ಪಾದಗಳಿಗೆ ಮಸಾಜ್ ಮಾಡಿ.
ಪಾದದ ವ್ಯಾಯಾಮಗಳು
ಸರಳವಾದ ಕಾಲು ವ್ಯಾಯಾಮಗಳನ್ನು ಮಾಡುವುದರಿಂದ ಊತವನ್ನು ಕಡಿಮೆ ಮಾಡಬಹುದು.
ಕುಳಿತಿರುವಾಗ ಪದಗಳನ್ನು ಪ್ರದಕ್ಷಿಣಾಕಾರವಾಗಿ ಮತ್ತು ಅಪ್ರದಕ್ಷಿಣಾಕಾರವಾಗಿ ವೃತ್ತಗಳಲ್ಲಿ ತಿರುಗಿಸಿ. ಪ್ರತಿ ಪಾದದಲ್ಲಿ ಸುಮಾರು 1 ನಿಮಿಷ ಇದನ್ನು ಮಾಡಿ.
ರಕ್ತಪರಿಚಲನೆಯನ್ನು ಸುಧಾರಿಸಲು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡಲು ಕಾಲ್ಬೆರಳುಗಳನ್ನು ಪದೇ ಪದೇ ಬಗ್ಗಿಸಿ.
ನೀರು, ಆಹಾರ
ಹೆಚ್ಚು ನೀರು ಕುಡಿಯುವುದು, ಆರೋಗ್ಯಕರ ಆಹಾರವನ್ನು ಕಾಪಾಡಿಕೊಳ್ಳುವುದು ಕಾಲು ಊತವನ್ನು ನಿರ್ವಹಿಸುವಲ್ಲಿ ಪಾತ್ರವನ್ನು ವಹಿಸುತ್ತದೆ. ದೇಹದಿಂದ ಹೆಚ್ಚುವರಿ ದ್ರವವನ್ನು ಹೊರಹಾಕಲು ಸಹಾಯ ಮಾಡಲು ದಿನವಿಡೀ ಸಾಕಷ್ಟು ನೀರು ಕುಡಿಯಿರಿ.
ಇದನ್ನೂ ಓದಿ: Tea vs Coffee: ಟೀ ಒಳ್ಳೆಯದಾ ಕಾಫಿ ಒಳ್ಳೆಯದಾ? ಇಲ್ಲಿದೆ ಉತ್ತರ
ಹಣ್ಣು, ತರಕಾರಿಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸಿ. ಬಾಳೆಹಣ್ಣುಗಳಂತಹ ಪೊಟ್ಯಾಸಿಯಮ್ ಅಧಿಕವಾಗಿರುವ ಆಹಾರಗಳು ದೇಹದಲ್ಲಿ ದ್ರವವನ್ನು ಸಮತೋಲನಗೊಳಿಸಲು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.