Site icon Vistara News

ಮಧುಮೇಹಿಗಳಲ್ಲಿ ಇದ್ದಕ್ಕಿದ್ದಂತೆ ಸಕ್ಕರೆಯ ಮಟ್ಟ ಏರಿಳಿಯಲು ಹತ್ತು ಕಾರಣಗಳು!

Health Tips For diabetic patients

#image_title

ಮಧುಮೇಹಿಗಳಲ್ಲಿ (Diabetic Patients) ಇದ್ದಕ್ಕಿದ್ದಂತೆ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಏರುವುದು ಹಾಗೂ ಇಳಿಯುವುದು ಕೊಂಚ ಅಪಾಯಕಾರಿಯೇ. ಆದರೆ, ಕೆಲವರಲ್ಲಿ ಇದ್ದಕ್ಕಿದ್ದಂತೆ ಸಕ್ಕರೆಯ ಮಟ್ಟದಲ್ಲಿ ಏರಿಳಿತ (Sugar Level) ಕಂಡು ಬರುತ್ತದೆ. ಇದಕ್ಕೆ ಕಾರಣಗಳು ಹಲವು. ಹಾಗಾದರೆ, ಬನ್ನಿ, ಇದ್ದಕ್ಕಿದ್ದಂತೆ ಈ ತೊಂದರೆ ಅನುಭವಿಸುವ ಮಂದಿಯಲ್ಲಿ ಇದಕ್ಕೆ ಕಾರಣಗಳೇನಿದ್ದೀತು ಎಂಬುದನ್ನು ನೋಡೋಣ.

1. ನಿರ್ಜಲೀಕರಣ: ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ಏರುವ ಸಂಭವ ಹೆಚ್ಚು. ಅಲ್ಲದೆ, ನಮ್ಮ ದೇಹಕ್ಕೆ ಬೇಕಾದಷ್ಟು ನೀರನ್ನು ನಾವು ಕುಡಿಯದಿರುವುದೂ ಕೂಡಾ ಸಕ್ಕರೆಯ ಪ್ರಮಾಣ ಏರಲು ಕಾರಣಗಳಲ್ಲಿ ಒಂದು.

2. ಒತ್ತಡ ಹಾಗೂ ಮಾನಸಿಕ ಸಮಸ್ಯೆಗಳು: ಮಾನಸಿಕವಾಗಿ ಒತ್ತಡದಂತಹ ಸಮಸ್ಯೆಗಳು ಒತ್ತಡದ ಹಾರ್ಮೋನನ್ನು ಬಿಡುಗಡೆ ಮಾಡುವುದರಿಂದ ಇದು ರಕ್ತದಲ್ಲಿರುವ ಸಕ್ಕರೆಯ ಮಟ್ಟ್‌ ಮಳೆ ನೇರ ಪರಿಣಾಮ ಬೀರುತ್ತದೆ. ಒತ್ತಡ ನಾವು ಸೇವಿಸುವ ಆಹಾದ ಪ್ರಮಾಣ, ಹಾಗೂ ಮಧುಮೇಹದ ಸ್ವಯಂನಿಯಂತ್ರಣದ ಮೇಲೆಯೂ ಪರಿಣಾಮ ಬೀರುತ್ತದೆ.

3. ಕೃತಕ ಸಿಹಿಯನ್ನು ಸೇವಿಸುವುದು: ಕೋಲಾ, ಜ್ಯೂಸ್‌ ಮತ್ತಿತರ ಪೇಯಗಳಲ್ಲಿ ಕೃತಕ ಸಿಹಿ ಹೇರಳವಾಗಿ ಸೇರಿಸಿರುತ್ತಾರೆ. ಇವುಗಳನ್ನು ಕುಡಿಯುವುದರಿಂದ ಹಾಗೂ ಕೃತಕ ಸಿಹಿಯಿಂದ ಮಾಡಿದ ಸಿಹಿತಿಂಡಿ ತಿನ್ನುವುದರಿಂದ ಇದ್ದಕ್ಕಿದ್ದಂತೆ ಸಕ್ಕರೆಯ ಮಟ್ಟ್‌ ಏರಬಹುದು.

4. ಹಾರ್ಮೋನು ಬದಲಾವಣೆ: ಮಹಿಳೆಯರಿಗೆ ಋತುಸ್ರಾವದ ದಿನಗಳಲ್ಲಿ, ಋತುಬಂಧದ ಸಂದರ್ಭ, ಗರ್ಭೀಣಿಯರಾಗಿದ್ದಾಗ ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಪರಿಣಾಮ ಬೀರಬಹುದು. ಇಸ್ಟ್ರೋಜೆನ್‌ ಹಾಗೂ ಪ್ರೊಜೆಸ್ಟೆರಾನ್‌ ಹಾರ್ಮೋನು ಇನ್ಸುಲಿನ್‌ ಮೇಲೆ ಪರಿಣಾಮ ಬೀರುವುದರಿಂದ ಸಕ್ಕರೆಯ ಮಟ್ಟ್‌ ಏರುಪೇರಾಗುವ ಸಂಭವವಿದೆ.

5. ಆರೋಗ್ಯದಲ್ಲಿ ಏರುಪೇರು: ಆರೋಗ್ಯದಲ್ಲಿ ಏರುಪೇರಾದಾಗಲೂ ಸಕ್ಕರೆಯ ಮಟ್ಟದಲ್ಲಿ ಏರುಪೇರಾಗುತ್ತದೆ. ದೇಹದಲ್ಲಿನ ಅನಾರೋಗ್ಯದಿಂದ ಒತ್ತಡದ ಹಾರ್ಮೋನು ಬಿಡುಗಡೆಯಾಗುವುದರಿಂದ ಇದು ಸಕ್ಕರೆಯ ಮಟ್ಟ್ವನ್ನು ಏರುವಂತೆ ಮಾಡುತ್ತದೆ.

ಇದನ್ನೂ ಓದಿ: Fenugreek Seeds For Diabetes: ಮಧುಮೇಹಿಗಳೇ ಬಿಡಿ ಚಿಂತೆ, ಇಷ್ಟು ತಿಂದರೆ ಸಾಕು ಮೆಂತೆ

ಧೂಮಪಾನ ಆರೋಗ್ಯಕ್ಕೆ ಹಾನಿಕರ

6. ಧೂಮಪಾನ: ಒಬ್ಬ ವ್ಯಕ್ತಿಯ ಒಟ್ಟು ಆರೋಗ್ಯದ ಮೇಲೆ ಧೂಮಪಾನ ಪರಿಣಾಮ ಬೀರುತ್ತದೆ. ಇದು ಕೇವಲ ಶ್ವಾಸಕೋಶ ಹಾಗೂ ಹೃದಯಕ್ಕಷ್ಟೇ ಮಾರಕವಲ್ಲ, ದೇಹದ ಸಕ್ಕರೆಯ ಮಟ್ಟದ ಮೇಲೂ ಅಡ್ಡ ಪರಿಣಾಮ ಬೀರುತ್ತದೆ. ಮಧುಮೇಹಿಗಳಿಗೆ ಧೂಮಪಾನದ ಅಭ್ಯಾಸವಿದ್ದರೆ, ಖಂಡಿತವಾಗಿಯೂ ಸಕ್ಕರೆಯ ಮಟ್ಟ್ದಲ್ಲಿ ಸಮತೋಲನ ಸಾಧಿಸಲು ಸಾಧ್ಯವಾಗುವುದಿಲ್ಲ.

7. ದೈಹಿಕವಾಗಿ ಕ್ರಿಯಾಶೀಲರಾಗಿಲ್ಲದಿರುವುದು: ದೈಹಿಕ ವ್ಯಾಯಾಮ ಅತ್ಯಂತ ಮುಖ್ಯ. ಅವರವರ ವಯಸ್ಸು ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ವ್ಯಾಯಾಮಕ್ಕೆ ನಿತ್ಯವೂ ಕೊಂಚ ಸಮಯ ನೀಡುವುದು ಅತ್ಯಂತ ಮುಖ್ಯ. ವ್ಯಾಯಾಮದಿಂದ ರಕ್ತದೊತ್ತಡವೂ ಸಮತೋಲಕ್ಕೆ ಬರುವುದಲ್ಲದೆ, ಇದರಿಂದ ಸಕ್ಕರೆಯ ಮಟ್ಟ ನಿಯಂತ್ರಣವೂ ಸಾಧ್ಯವಾಗುತ್ತದೆ.

8. ಔಷಧಿಗಳು: ಕೆಲವೊಂದು ಔಷಧಿಗಳು ಕೋರ್ಟಿಕೋ ಸ್ಟಿರಾಯ್ಡ್ಸ್‌, ಡೈ ಯುರೇಟಿಕ್ಸ್‌ ಹಾಗೂ ಕೆಲವು ಬಗೆಯ ಸೈಕಿಯಾಟ್ರಿಕ್‌ ಔಷಧಿಗಳ ಅಡ್ಡ ಪರಿಣಾಮವೂ ಕೂಡ ಇರುತ್ತದೆ. ಇದರಿಂದ ಸಕ್ಕರೆ ಮಟ್ಟ್ದಲ್ಲಿ ಸಮತೋಲನ ಸಾಧಿಸಲಾಗುವುದಿಲ್ಲ.

9. ಸರಿಯಾದ ಡಯಟ್‌ ಪಾಲಿಸದಿರುವುದು: ವೈದ್ಯರು ಹೇಳಿದ ಆಹಾರ ಪದ್ಧತಿ ಅನುಸರಿಸದೆ ಇರುವುದು, ಮಧುಮೇಹಕ್ಕೆ ನೀಡಿದ ಔಷಧಿಗಳನ್ನು ಸರಿಯಾಗಿ ಸೇವಿಸದೆ ಇರುವುದು, ಔಷಧಿ ಬಿಡುವುದು ಇತ್ಯಾದಿಗಳಿಂದಲೂ ಸಕ್ಕರೆಯ ಮಟ್ಟ್ದಲ್ಲಿ ಏರುಪೇರಾಗುತ್ತದೆ.

10. ಕಾರ್ಬೋಹೈಡ್ರೇಟ್‌ ಹೆಚ್ಚು ಸೇವಿಸುವುದು: ಅಗತ್ಯಕ್ಕಿಂತ ಹೆಚ್ಚಾಗಿ ಕಾರ್ಬೋಹೈಡ್ರೇಟ್‌ ದೇಹ ಸೇರುವುದೂ ಕೂಡಾ ಸಕ್ಕರೆಯ ಮಟ್ಟದಲ್ಲಿ ದಿಢೀರ್‌ ಏರುಪೇರಾಗಲು ಕಾರಣ

Exit mobile version