Site icon Vistara News

Health Tips: ಮಲಗುವ ಮುನ್ನ ಹಾಲು, ಬೆಲ್ಲ ಸೇವಿಸಿದರೆ ಹಲವು ಸಮಸ್ಯೆಗಳಿಗೆ ಪರಿಹಾರ

Health Tips

ಉತ್ತಮ ಆರೋಗ್ಯಕ್ಕಾಗಿ (Health Tips) ಹಾಲು (milk benefits) ಸೇವಿಸಬೇಕು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಬರೀ ಹಾಲು ಕುಡಿಯುವುದು ಬೇಸರ. ಹೀಗಾಗಿ ಕೆಲವರು ಅರಶಿನ ಹಾಲು (turmeric milk), ಬೆಲ್ಲದ ಹಾಲನ್ನು (jaggery milk) ಶಿಫಾರಸು ಮಾಡುತ್ತಾರೆ. ಅರಶಿನ ಹಾಲಿನ ಪ್ರಯೋಜನಗಳ ಬಗ್ಗೆ ಸಾಕಷ್ಟು ಮಂದಿಗೆ ಗೊತ್ತಿದೆ. ಆದರೆ ಬೆಲ್ಲದ ಹಾಲು ಸೇವನೆಯು ಕೆಲವೊಂದು ಪ್ರಯೋಜನಗಳನ್ನು ಹೊಂದಿದೆ. ಇದಕ್ಕೆ ಆಯುರ್ವೇದ ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ.

ಹಾಲು ಉತ್ತಮ ಗುಣಮಟ್ಟದ ಪ್ರೊಟೀನ್ ಅನ್ನು ಹೊಂದಿದೆ. ಸ್ನಾಯುಗಳ ದುರಸ್ತಿ ಮತ್ತು ಬೆಳವಣಿಗೆಗೆ ಇದರ ಸೇವನೆ ಅವಶ್ಯಕವಾಗಿದೆ. ಹಾಲಿನಲ್ಲಿ ಬಿ12 ಮತ್ತು ವಿಟಮಿನ್ ಡಿಯಂತಹ ಪೋಷಕಾಂಶಗಳಿದ್ದು, ನರಗಳ ಕಾರ್ಯ ಮತ್ತು ಮೂಳೆಗಳ ಆರೋಗ್ಯಕ್ಕೆ ಅತ್ಯಂತ ಅವಶ್ಯಕವಾಗಿ ಬೇಕಾಗುವ ಆಹಾರವಾಗಿದೆ.

ಕಬ್ಬಿನ ರಸದಿಂದ ಕಚ್ಚಾ ರೂಪದಲ್ಲಿ ಸಂಗ್ರಹಿಸುವ ಬೆಲ್ಲವು ಅನೇಕ ಖನಿಜಗಳು ಮತ್ತು ವಿಟಮಿನ್‌ಗಳ ರೂಪದಲ್ಲಿ ಪೌಷ್ಟಿಕಾಂಶವನ್ನು ಒದಗಿಸುತ್ತದೆ. ಬೆಲ್ಲವು ಜೀರ್ಣಕಾರಿ ಬೆಂಕಿಯನ್ನು ಉತ್ತೇಜಿಸುತ್ತದೆ ಮತ್ತು ಕಫ ದೋಷವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಬೆಲ್ಲವು ಜೀರ್ಣವಾಗದ ಆಹಾರಗಳು ಮತ್ತು ಕರುಳಿನಲ್ಲಿ ಸಂಗ್ರಹವಾಗಬಹುದಾದ ಜೀವಾಣುಗಳನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.

ಇದಲ್ಲದೆ ಬೆಲ್ಲವು ಕಬ್ಬಿನಾಂಶವನ್ನು ಹೊಂದಿದೆ. ಇದು ವಿಶೇಷವಾಗಿ ಕಬ್ಬಿಣದ ಕೊರತೆಯಿರುವ ವ್ಯಕ್ತಿಗಳಲ್ಲಿರಕ್ತಹೀನತೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಸಣ್ಣ ಪ್ರಮಾಣದ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಇತರ ಖನಿಜಗಳನ್ನು ಹೊಂದಿರುವ ಬೆಲ್ಲವು ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡುತ್ತದೆ ಮತ್ತು ಚಯಾಪಚಯ ಪ್ರಕ್ರಿಯೆಗಳನ್ನು ಸುಸ್ಥಿಯಲ್ಲಿ ಇರಿಸುತ್ತದೆ.

ಸಂಸ್ಕರಿಸಿದ ಸಕ್ಕರೆಗಿಂತ ಭಿನ್ನವಾಗಿ ಬೆಲ್ಲವು ಕಡಿಮೆ ಗ್ಲೈಸೆಮಿಕ್ ಅನ್ನು ಹೊಂದಿದೆ. ಅಂದರೆ ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟದ ನಿಧಾನಗತಿಯ ಏರಿಕೆಗೆ ಕಾರಣವಾಗುತ್ತದೆ. ಇದು ಶಕ್ತಿಯ ಮಟ್ಟವನ್ನು ನಿರ್ವಹಿಸಲು ಉತ್ತಮ ಪರ್ಯಾಯವಾಗಿದೆ ಎನ್ನುತ್ತಾರೆ ಆಯುರ್ವೇದ ತಜ್ಞರು.

ಹಲವು ಸಮಸ್ಯೆಗಳಿಗೆ ಪರಿಹಾರ

ಹಾಲು ಮತ್ತು ಬೆಲ್ಲವು ಜೀರ್ಣಾಂಗ ವ್ಯವಸ್ಥೆಯಲ್ಲಿ ಶುಷ್ಕತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚುವರಿ ಶಾಖ ಮತ್ತು ಅತಿಯಾದ ಶೀತವನ್ನು ಕಡಿಮೆ ಮಾಡುತ್ತದೆ. ಇದು ಶಾಂತತೆ ಮತ್ತು ಸ್ಥಿರತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ನಿದ್ರೆಯ ಸಮಸ್ಯೆಗಳು ಮತ್ತು ನಿದ್ರಾಹೀನತೆಗೆ ಇದು ಅತ್ಯುತ್ತಮ ಪರಿಹಾರವಾಗಿದೆ.

ಹಾಲಿನಲ್ಲಿರುವ ಕ್ಯಾಲ್ಸಿಯಂ ದೃಢವಾದ ಮೂಳೆ ಮತ್ತು ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಖ್ಯವಾಗಿದೆ. ಬೆಲ್ಲವು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಮೂಳೆಯ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

ಮಿತವಾಗಿ ಸೇವಿಸಬೇಕು

ಬೆಲ್ಲ ಮಿಶ್ರಿತ ಹಾಲು ಮಿತವಾಗಿ ಸೇವಿಸುವುದು ಉತ್ತಮ. ವಿಶೇಷವಾಗಿ ರಕ್ತದಲ್ಲಿ ಸಕ್ಕರೆಯ ಸಮಸ್ಯೆ ಇರುವವರಿಗೆ ಬೆಲ್ಲವು ನೈಸರ್ಗಿಕ ಸಿಹಿಕಾರಕವಾಗಿದ್ದರೂ ಸಹ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ.
ಡೈರಿ ಉತ್ಪನ್ನಗಳ ಅಲರ್ಜಿ ಇರುವವರು ಈ ಮಿಶ್ರಣವನ್ನು ತಪ್ಪಿಸಬೇಕು. ಬಾದಾಮ್ ಅಥವಾ ತೆಂಗಿನ ಹಾಲಿನಂತಹ ಪರ್ಯಾಯಗಳನ್ನು ಪರಿಗಣಿಸಬೇಕು ಎನ್ನುತ್ತಾರೆ ಪರಿಣತ ವೈದ್ಯರು.

15 ದಿನಗಳಿಗೊಮ್ಮೆ ಬೆಲ್ಲದೊಂದಿಗೆ ಹಾಲನ್ನು ಸೇವಿಸುವುದು ಉತ್ತಮ. ಆದರೆ ಇದನ್ನು ದೈನಂದಿನ ಅಭ್ಯಾಸವಾಗಿ ಸೇವಿಸುವುದು ಸರಿಯಲ್ಲ ಎಂಬ ಅಭಿಪ್ರಾಯವೂ ಇದೆ.


ವೈಜ್ಞಾನಿಕ ದೃಷ್ಟಿಕೋನದಿಂದ ಕ್ಯಾಲ್ಸಿಯಂ ಮತ್ತು ಕಬ್ಬಿಣದ ನಡುವಿನ ಸಂಭಾವ್ಯ ಪರಸ್ಪರ ಕ್ರಿಯೆಯಿಂದಾಗಿ ಹಾಲು ಮತ್ತು ಬೆಲ್ಲವನ್ನು ಸಂಯೋಜಿಸುವುದು ಸೂಕ್ತವಲ್ಲ. ಹಾಲಿನಲ್ಲಿ ಕ್ಯಾಲ್ಸಿಯಂ ಅಧಿಕವಾಗಿದೆ. ಇದು ಬೆಲ್ಲದಲ್ಲಿ ಕಂಡುಬರುವ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಇದರಿಂದಾಗಿ ಬೆಲ್ಲದ ಪೌಷ್ಟಿಕಾಂಶದ ಪ್ರಯೋಜನಗಳನ್ನು ಒಟ್ಟಿಗೆ ಸೇವಿಸಿದಾಗ ಸಂಭಾವ್ಯವಾಗಿ ಇದು ಅದರ ಪ್ರಭಾವವನ್ನು ಕಡಿಮೆ ಮಾಡುತ್ತದೆ ಎಂಬ ಅಭಿಪ್ರಾಯವೂ ಇದೆ.

ಇದನ್ನೂ ಓದಿ: Eye Care Food: ನೀವು ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಈ ಆಹಾರಗಳನ್ನು ಸೇವಿಸಿ

Exit mobile version