Site icon Vistara News

Heart Attack : ಹೃದಯಾಘಾತ ಯಾರಿಗೆ ಬೇಕಾದರೂ ಆಗಬಹುದು! ಅದರಲ್ಲೂ ಸೋಮವಾರ ಭಾರಿ Dangerous!

Monday blues heart attack

ಬೆಂಗಳೂರು: ಹೃದಯಾಘಾತ (Heart attack) ಎನ್ನುವುದು ಈಗ ಅತ್ಯಂತ ಸಾಮಾನ್ಯ ಸಂಗತಿ ಎಂಬಂತಾಗಿದೆ. ವಯಸ್ಸಿನ ಹಂಗಿಲ್ಲದೆ ಯಾರನ್ನು ಬೇಕಾದರೂ ಇದು ಗೊತ್ತೇ ಆಗದಂತೆ ಆವರಿಸಿಕೊಳ್ಳುತ್ತದೆ. ಸಣ್ಣ ಸಣ್ಣ ಮಕ್ಕಳಲ್ಲೂ ಕಾಣಿಸಿಕೊಳ್ಳುವ ಈ ಹೃದಯದ ಹೊಡೆತ ಮಧ್ಯ ವಯಸ್ಕರಿಗಂತೂ ಡೇಂಜರಸ್‌ ಅನಿಸಿ ಬಿಟ್ಟಿದೆ. ಅದರಲ್ಲೂ ಗೊತ್ತೇ ಆಗದಂತೆ ಬಂದು ಘಾಸಿ ಮಾಡಿ ಹೋಗು ಸಡನ್‌ ಕಾರ್ಡಿಯಾಕ್‌ ಅರೆಸ್ಟ್‌ (Sudden Cardiac Arrest) ಯಾರಿಗೆ ಬೇಕಾದರೂ ಯಾವಾಗ ಬೇಕಾದರೂ ಆಗಬಹುದು. ಅದರಲ್ಲೂ ಸೋಮವಾರ ಅನ್ನೋದು ಇದೆಯಲ್ಲ ಅದು ಇನ್ನೂ ಡೇಂಜರಸ್‌ ಎಂದು ಬ್ರಿಟಿಷ್‌ ಹಾರ್ಟ್‌ ಫೌಂಡೇಷನ್‌ (British Heart Foundation) ಹೇಳಿದೆ.

ಹೃದಯಾಘಾತ ವಾರದ ಯಾವುದೇ ದಿನವೂ ಸಂಭವಿಸಬಹುದು. ಆದರೆ ಸೋಮವಾರವೇ ಹೆಚ್ಚು ಎನ್ನುವುದು ಅಂಕಿ ಅಂಶಗಳಿದ ಸಾಬೀತಾಗಿರುವ ಸಂಗತಿ. ಈ ವಿದ್ಯಮಾನವನ್ನು ಬ್ಲೂ ಮಂಡೇ (Blue Monday) ಎಂದು ಕರೆಯಲಾಗುತ್ತದೆ. ವಾರದ ಇತರ ದಿನಗಳಿಗಿಂತ ಸೋಮವಾರ ಶೇಕಡಾ 13ರಷ್ಟು ಹೆಚ್ಚು ಹೃದಯಾಘಾತಗಳು ಸಂಭವಿಸುತ್ತಿರುವುದು ದಾಖಲಾಗಿದೆ. ಅದರಲ್ಲೂ ಈ ಸಾವುಗಳು ಬೆಳಗ್ಗೆ 6ರಿಂದ 10 ಗಂಟೆಯ ನಡುವೆ ಸಂಭವಿಸುತ್ತಿರುವುದು ಕಂಡುಬಂದಿದೆ.

ಬ್ಲೂ ಮಂಡೇ ಅಂದರೆ ಏನಾಗುತ್ತದೆ?

  1. ವ್ಯಕ್ತಿಯಲ್ಲಿ ಹೃದಯ ರಕ್ತ ನಾಳದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ರಕ್ತದಲ್ಲಿನ ಕಾರ್ಟಿಸೋಲ್ ಮತ್ತು ಇತರ ಹಾರ್ಮೋನುಗಳು ಹೆಚ್ಚಾಗುವುದು ಒಂದು ಕಾರಣ.
  2. ಒಬ್ಬ ವ್ಯಕ್ತಿಯು ಒತ್ತಡದಲ್ಲಿದ್ದಾಗ ಹಾರ್ಮೋನ್ ಮಟ್ಟವು ನಮ್ಮ ದೇಹದಲ್ಲಿ ನಡೆಯುವ ಲಯಬದ್ಧ ಕಾರ್ಯಾಚರಣೆ (ಸರ್ಕಾಡಿಯನ್‌) ಮೇಲೆ ಪರಿಣಾಮ ಬೀರುತ್ತದೆ. ಇದು ಹೃದಯಾಘಾತ ಅಥವಾ ಹೃದಯರಕ್ತನಾಳದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: Heart Attack : ಸ್ಪಂದನಾ ಅವರನ್ನು ಬಲಿ ಪಡೆದ ಹೃದಯಾಘಾತ; ಏನಿದು Sudden Cardiac Death?

ಸೋಮವಾರದ ಹೃದಯಾಘಾತಕ್ಕೆ ಆರು ಕಾರಣ

  1. ಹೆಚ್ಚಿನವರು ಭಾನುವಾರ ವಾರಾಂತ್ಯದ ಮೂಡ್‌ನಲ್ಲಿರುತ್ತಾರೆ. ನಿತ್ಯದ ದಿನಚರಿಗಳಿಂದ ದೂರ ಇರುತ್ತಾರೆ. ಆಹಾರ ಪದ್ಧತಿ ಕೂಡಾ ಬದಲಾಗುತ್ತದೆ. ಹೀಗೆ ವಿರಾಮದಲ್ಲಿದ್ದವರು ಸೋಮವಾರ ಒಮ್ಮಿಂದೊಮ್ಮೆಗೆ ಆಕ್ಟಿವ್‌ ಆದಾಗ ಹೃದಯದ ಮೇಲೆ ಒತ್ತಡ ಬೀಳುವುದರಿಂದ ಹೀಗಾಗಬಹುದು.
  2. ಭಾನುವಾರ ಕೆಲವರು ಮದ್ಯ ಕುಡಿಯಬಹುದು, ವಿಪರೀತ ಆಹಾರ ಸೇವನೆ ಮಾಡುತ್ತಿರಬಹುದು. ಇದರಿಂದ ಒಟ್ಟಾರೆ ಜೀವನ ಪದ್ಧತಿಯೇ ಬದಲಾಗುತ್ತದೆ.
  3. ಕೆಲವರು ವಾರದ ಎಲ್ಲ ದಿನಗಳಲ್ಲಿ ಒಂದು ಸಾಮಾನ್ಯ ಚಟುವಟಿಕೆಯಲ್ಲಿರುತ್ತಾರೆ. ಆದರೆ, ಭಾನುವಾರ ಒಮ್ಮಿಂದೊಮ್ಮೆಗೇ ವಿಪರೀತ ಚಟುವಟಿಕೆಗೆ ಇಳಿದುಬಿಡುವುದರಿಂದ ಒತ್ತಡ ಬೀಳುತ್ತದೆ. ಇದು ಕೂಡಾ ಕಾರಣ ಆಗಿರಬಹುದು.
  4. ಭಾನುವಾರದ ವಿರಾಮ ಮತ್ತು ಸೋಮವಾರದ ವಿಪರೀತ ಒತ್ತಡಕ್ಕೆ ಒಳಗಾಗುವ ಸನ್ನಿವೇಶಗಳು ಅವರ ಹೃದಯದಲ್ಲಿ ಒತ್ತಡ ಸೃಷ್ಟಿಸಬಹುದು.
  5. ವಾರದ ಆರಂಭ ದಿನದ ಒತ್ತಡಗಳನ್ನು ನಿಭಾಯಿಸುವುದೇ ಕೆಲವರಿಗೆ ಕಷ್ಟವಾಗುತ್ತದೆ. ಇದು ಹೃದಯದ ಮೇಲಿನ ಒತ್ತಡ ವನ್ನು ಹೆಚ್ಚಿಸುತ್ತದೆ.

Exit mobile version