Site icon Vistara News

Heart Attack : 19ರ ಹರೆಯದ ನರ್ಸಿಂಗ್‌ ವಿದ್ಯಾರ್ಥಿನಿಯನ್ನು ಬಲಿ ಪಡೆದ ಹೃದಯಾಘಾತ

Low BP Death

ಮಂಗಳೂರು: ಕೆಲವು ವರ್ಷಗಳ 50-60 ವರ್ಷದವರಲ್ಲೂ ಅತ್ಯಂತ ಅಪರೂಪವಾಗಿದ್ದ ಕಡಿಮೆ ರಕ್ತದೊತ್ತಡ (Low Blood Pressure) ಮತ್ತು ಹೃದಯದ ಸಮಸ್ಯೆಗಳು (Heart attack) ಈಗ ಸಣ್ಣ ವಯಸ್ಸಿನವರನ್ನೂ ಕಾಡಿ ಪ್ರಾಣ ತೆಗೆಯುತ್ತಿರುವ ವಿದ್ಯಮಾನಗಳು ಹೆಚ್ಚಾಗುತ್ತಾ ಆತಂಕ ಮೂಡಿಸಿವೆ. ಈ ವಿದ್ಯಮಾನಗಳಿಗೆ ಹೊಸ ಸೇರ್ಪಡೆ ಬೆಳ್ತಂಗಡಿ ತಾಲೂಕಿನ ನರ್ಸಿಂಗ್‌ ವಿದ್ಯಾರ್ಥಿನಿ (Nursing student) ಸುಮಾ.

ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ನರ್ಸಿಂಗ್‌ ವಿದ್ಯಾರ್ಥಿನಿ ಸುಮಾ (19) ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಂಗಳೂರಿನಲ್ಲಿ ಮೊದಲ ವರ್ಷದ ನರ್ಸಿಂಗ್ ವಿದ್ಯಾಭ್ಯಾಸ ಮಾಡುತಿದ್ದ ಸುಮಾ ಅವರು ಆಗಸ್ಟ್‌ 9ರಂದು ಅನಾರೋಗ್ಯದ ಕಾರಣ ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಬಳಿಕ ಆ.11ರಂದು ಅನಾರೋಗ್ಯ ಜಾಸ್ತಿಯಾದ ಕಾರಣ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದರೆ, ಆ. 13ರಂದು ಸಂಜೆ ಮತ್ತೆ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮೃತಪಟ್ಟ ಸುಮಾ

SSLC ವಿದ್ಯಾರ್ಥಿನಿ ಹೃದಯಾಘಾತದಿಂದ ನಿಧನ

ಹೃದಯಾಘಾತ ಈಗ ಎಲ್ಲ ವಯೋಮಾನದವರನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳುತ್ತಿರುವುದಕ್ಕೆ ಇನ್ನೊಂದು ಉದಾಹರಣೆ ಕೆಲವು ದಿನಗಳ ಹಿಂದೆ ಚಾಮರಾಜ ನಗರದಲ್ಲಿ ನಡೆದ ಇನ್ನೊಂದು ಘಟನೆ ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಕೆಲವು ದಿನಗಳ ಹಿಂದೆ 16 ವರ್ಷದ ಬಾಲಕಿಯೊಬ್ಬಳು ಹೃದಯಾಘಾತಕ್ಕೆ ತುತ್ತಾಗಿದ್ದಳು. ಗುಂಡ್ಲುಪೇಟೆ ಪಟ್ಟಣದ ನಿರ್ಮಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಫೆಲಿಶಾ (16) ಮೃತ ದುರ್ದೈವಿ ಬಾಲಕಿ.

heart Attack to police constable basanagowda

ಬೆಂಗಳೂರು ನಿವಾಸಿಗಿರುವ ಫೆಲಿಶಾ ಗುಂಡ್ಲುಪೇಟೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಳೆದ ಬುಧವಾರ ಬೆಳಗ್ಗೆ ವಾಯು ವಿಹಾರ ಮಾಡುವ ವೇಳೆ ಒಮ್ಮಿಂದೊಮ್ಮೆಗೇ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದಳು. ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದ ಆಕೆಯನ್ನು ಕೂಡಲೇ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದರೆ, ಚಿಕಿತ್ಸೆ ಫಲಿಸದೆ ಸಾವು ಸಂಭವಿಸಿದೆ.

ಇದನ್ನೂ ಓದಿ: Heart Attack : ಹೃದಯಾಘಾತ ಯಾರಿಗೆ ಬೇಕಾದರೂ ಆಗಬಹುದು! ಅದರಲ್ಲೂ ಸೋಮವಾರ ಭಾರಿ Dangerous!

ಇಬ್ಬರು ಸರ್ಕಾರಿ ಉದ್ಯೋಗಿಗಳೂ ಹೃದಯಾಘಾತಕ್ಕೆ ಬಲಿ

ಕೆಲವು ದಿನಗಳ ಹಿಂದೆ ಅಂದರೆ ಆಗಸ್ಟ್‌ 10 ಮತ್ತು 11ರಂದು ರಾಯಚೂರಿನ ಮಸ್ಕಿಯಲ್ಲಿ ಪೊಲೀಸ್‌ ಠಾಣೆಯಲ್ಲಿ (Maski Police station) ರೈಟರ್‌ ಆಗಿ (writer work) ಕೆಲಸ ಮಾಡುತ್ತಿದ್ದ ಬಸನಗೌಡ ಮತ್ತು ರಾಮನಗರ ನ್ಯಾಯಾಲಯದಲ್ಲಿ ಅಟೆಂಡರ್‌ ಆಗಿ ಕೆಲಸ ಮಾಡುತ್ತಿದ್ದ ಮಧು ಅವರು ಕುಳಿತಲ್ಲೇ ಕುಸಿದು ಪ್ರಾಣ ಕಳೆದುಕೊಂಡಿದ್ದರು.

heart Attack to police constable basanagowda

ರಾಯಚೂರು ಜಿಲ್ಲೆ ಮಸ್ಕಿ ಠಾಣೆಯಲ್ಲಿ ರೈಟರ್ ಆಗಿದ್ದ ಬಸನಗೌಡ (34) ಅವರು ಕಳೆದ ಆಗಸ್ಟ್‌ 10ರಂದು ರಾತ್ರಿ ಮಲಗಿದಲ್ಲೇ ಮೃತಪಟ್ಟಿದ್ದಾರೆ. ಬಸನಗೌಡಗೆ ಬಿಪಿ, ಶುಗರ್ ಅಥವಾ ಯಾವುದೇ ಹೃದಯ ಸಂಬಂಧಿ ಖಾಯಿಲೆ ಇರಲಿಲ್ಲ.

ರಾಮನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅಟೆಂಡರ್‌ ಆಗಿ ಕೆಲಸ ಮಾಡುತ್ತಿದ್ದ ಮಧು(36) ಎಂಬವರು ಕುಳಿತಲ್ಲೇ ಕುಸಿದು ಪ್ರಾಣ ಕಳೆದುಕೊಂಡಿದ್ದಾರೆ. ನ್ಯಾಯಾಲಯದ ಆವರಣದಲ್ಲೇ ಈ ಘಟನೆ ನಡೆದಿದ್ದು, ಅವರು ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದೆ. ಕನಕಪುರ ತಾಲೂಕಿನ ಬೂದನಗುಪ್ಪೆ ಮೂಲದವರಾಗಿರುವ ಮಧು ಅವರು ಕಳೆದ ಮೂರು ವರ್ಷಗಳಿಂದ ರಾಮನಗರ ಕೋರ್ಟ್ ನಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದರು.

Exit mobile version