Site icon Vistara News

ICMR Dietary Guidelines: ನಿಮ್ಮ ಆರೋಗ್ಯ ಚೆನ್ನಾಗಿರಬೇಕೆ? ತಜ್ಞ ಸಮಿತಿಯ ಈ ಆಹಾರ ಸಲಹೆ ಪಾಲಿಸಿ

ICMR Dietary Guidelines

ಬೆಳಗ್ಗೆ ಉಪಾಹಾರ (breakfast) ಚೆನ್ನಾಗಿಯೇ ಆಗಿದೆ. ಆದರೂ ಊಟಕ್ಕಿಂತ (lunch) ಮೊದಲು ಏನಾದರೂ ತಿನ್ನಬೇಕು ಎನ್ನುವ ಕಡು ಬಯಕೆ ಉಂಟಾಗುವುದು ಸಾಮಾನ್ಯ. ಆದರೆ ಎಲ್ಲರಿಗೂ ಇದನ್ನು ನಿಯಂತ್ರಿಸಲಾಗದು. ಹೀಗಾಗಿ ಕರಿದ ತಿಂಡಿಗಳು, ಕುರುಕಲು ತಿಂಡಿಗಳು (snaks), ಸಾಫ್ಟ್ ಡ್ರಿಂಕ್ಸ್ (soft drinks), ಜ್ಯೂಸ್‌ (juice) ಮೊದಲಾದವುಗಳ ಮೊರೆ ಹೋಗುತ್ತೇವೆ. ಆದರೆ ಇದು ಆರೋಗ್ಯಕರವಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಭಾರತೀಯರ ಆಹಾರ ಕ್ರಮ ಹೇಗಿರಬೇಕು ಎನ್ನುವ ಮಾರ್ಗಸೂಚಿಯನ್ನು (ICMR Dietary Guidelines) ಬಿಡುಗಡೆ ಮಾಡಿದ್ದು, ಇದರಲ್ಲಿ ಹೆಚ್ಚಿನ ಕ್ಯಾಲೋರಿ ಆಹಾರ ಪದಾರ್ಥಗಳಿಗೆ ಪರ್ಯಾಯ ಬಳಕೆ ಮಾಡಬಹುದಾದ ಪದಾರ್ಥಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಯಾವುದು ಆರೋಗ್ಯಕರ?

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಹೆಚ್ಚಿನ ಕ್ಯಾಲೋರಿ ಆಹಾರ ಪದಾರ್ಥಗಳಿಗೆ ಪರ್ಯಾಯವಾಗಿ ಆರೋಗ್ಯಕರ ಪದಾರ್ಥಗಳನ್ನು ಉಲ್ಲೇಖಿಸಿದೆ. ಇದರಲ್ಲಿ ಪಿಜ್ಜಾ, ಡೊನಟ್ಸ್ ಮತ್ತು ಹಾಟ್‌ಡಾಗ್‌ಗಳ ಬದಲಿಗೆ ಸಲಾಡ್‌ ಮತ್ತು ಮೊಳಕೆ ಭರಿಸಿದ ಕಾಳುಗಳನ್ನು ಸೇವಿಸಬಹುದು. ಆಳವಾದ ಕರಿದ ತಿಂಡಿಗಳ ಬದಲಿಗೆ ಬೀಜಗಳು ಮತ್ತು ತರಕಾರಿ ಬೀಜಗಳನ್ನು ತಿನ್ನಬಹುದು.

ಹಣ್ಣಿನ ರಸವನ್ನು ಸೇವಿಸುವ ಬದಲು ಸಂಪೂರ್ಣ ಹಣ್ಣುಗಳನ್ನು ಸೇವಿಸಬೇಕು. ಜಾಮ್ ಮತ್ತು ಸಾಸ್‌ಗಳ ಬದಲಿಗೆ ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ಚಟ್ನಿ ಮತ್ತು ಡಿಪ್‌ಗಳನ್ನು ಬಳಸಬಹುದು.


ಇದನ್ನೂ ಓದಿ: ICMR Dietary Guidelines: ಬೊಜ್ಜು ತಡೆಯಲು ಏನು ಮಾಡಬೇಕು? ಮಾರ್ಗಸೂಚಿ ಬಿಡುಗಡೆ ಮಾಡಿದ ಸಂಶೋಧನಾ ಸಂಸ್ಥೆ

ನಾವು ಸೇವಿಸುವ ಆಹಾರದಲ್ಲಿ ಹೆಚ್ಚು ಫ್ಯಾಟ್, ಸಕ್ಕರೆ, ಉಪ್ಪು, ಸಂಸ್ಕರಿಸಿದ ಆಹಾರಗಳ ಬಳಕೆಯನ್ನು ಕಡಿಮೆ ಮಾಡಿದಷ್ಟು ಹೆಚ್ಚು ಕಾಲ ನಾವು ಆರೋಗ್ಯವಾಗಿ ಜೀವಿಸಬಹುದು.


ಕುಡಿಯಲು ಏನಿರಬೇಕು?

ರೆಡಿಮೇಡ್ ಸಾಫ್ಟ್ ಡ್ರಿಂಕ್ಸ್ ,ಜ್ಯೂಸುಗಳ ಬದಲಿಗೆ ಎಳನೀರು, ಮಜ್ಜಿಗೆ, ಲಿಂಬೆ ಹಣ್ಣುಮ್ ಚಿಯಾ ಬೀಜ, ಕಿತ್ತಳೆ, ಕಲ್ಲಂಗಡಿ, ಮಾವಿನ ಹಣ್ಣು, ಫೈನಾಪಲ್, ದಾಳಿಂಬೆ ಹಣ್ಣಿನ ರಸವನ್ನು ಕುಡಿಯಬಹುದು.

ಟೀ, ಕಾಫಿಯನ್ನು ಬರಿ ಹೊಟ್ಟೆಯಲ್ಲಿ ಊಟಕ್ಕಿಂತ ಅರ್ಧ ಗಂಟೆ ಮೊದಲು ಅಥವಾ ಅನಂತರ ಸೇವಿಸುವುದು ಒಳ್ಳೆಯದಲ್ಲ. ಇದರ ಬದಲು ಗ್ರೀನ್ ಟೀ, ಬ್ಲಾಕ್ ಟೀ ಕುಡಿಯಬಹುದು. ಆಲ್ಕೋಹಾಲ್ ಸೇವನೆಯು ಆರೋಗ್ಯಕರವಲ್ಲ. ಇದರ ಬದಲಿಗೆ ಫ್ರೆಶ್ ಹಣ್ಣಿನ ರಸವನ್ನು ಸೇವನೆ ಮಾಡಬಹುದು.

ತಿನ್ನಲು ಯಾವುದಿರಬೇಕು?

  1. 1. ಪಿಜ್ಜಾ, ಡೋನಟ್ ಬದಲಿಗೆ ಸಲಾಡ್, ತರಕಾರಿ ಬೀಜಗಳನ್ನು ಸೇವಿಸಬಹುದು.

2. ಡೀಪ್ ಫ್ರೈಡ್ ತಿಂಡಿಗಳ ಬದಲು ಬೀಜ, ಧಾನ್ಯಗಳನ್ನು ಸೇವಿಸಿ.

3. ಕೇಕ್, ಚಾಕಲೇಟ್, ಸ್ವೀಟ್ಸ್ ಬದಲಿಗೆ ಮನೆಯಲ್ಲೇ ಮಾಡಿರುವ ವಿವಿಧ ಧಾನ್ಯಗಳ ಉಂಡೆಗಳು, ಚಿಕ್ಕಿ, ಹುರಿದ ಕಾಳು, ಬೀಜಗಳನ್ನು ತಿನ್ನಬಹುದು.

4. ಜಾಮ್, ಸಾಸ್ ಬದಲಿಗೆ ಮನೆಯಲ್ಲೇ ಮಾಡಿರುವ ಚಟ್ನಿ, ಡಿಪ್ ಗಳನ್ನು ಸೇವಿಸಬಹುದು.

Exit mobile version