ಆರೋಗ್ಯವಾಗಿರಲು (healthy) ದೈಹಿಕ ಚಟುವಟಿಕೆಯೊಂದಿಗೆ (activity) ಸರಿಯಾಗಿ ವಿಶ್ರಾಂತಿ (rest) ಪಡೆಯುವುದು ಬಹುಮುಖ್ಯ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR Good Health Guidelines) ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ. ದಿನಕ್ಕೆ ಎಂಟು ಗಂಟೆಗಳ ನಿದ್ರೆ ಮತ್ತು ಎಂಟು ಗಂಟೆಗಳ ಕೆಲಸವನ್ನು ಅದು ಶಿಫಾರಸು ಮಾಡಿದೆ.
ಮಕ್ಕಳು ಮತ್ತು ಹದಿಹರೆಯದವರು (children and youth) ದಿನಕ್ಕೆ ಕನಿಷ್ಠ 60 ನಿಮಿಷಗಳ ವರೆಗೆ ಮಧ್ಯಮದಿಂದ ಹುರುಪಿನ ವ್ಯಾಯಾಮ ನಡೆಸಬೇಕು. ಅದೇ ರೀತಿ ವಯಸ್ಕರು (aged) ವಾರದಲ್ಲಿ ಕನಿಷ್ಠ ಐದು ದಿನಗಳವರೆಗೆ ದಿನಕ್ಕೆ 30- 60 ನಿಮಿಷಗಳ ಮಧ್ಯಮ-ತೀವ್ರತೆಯ ಏರೋಬಿಕ್ ವ್ಯಾಯಾಮ ಅಥವಾ 15 ನಿಮಿಷಗಳ ತೀವ್ರವಾದ- ತೀವ್ರತೆಯ ಏರೋಬಿಕ್ ವ್ಯಾಯಾಮವನ್ನು ನಡೆಸಲು ಐಸಿಎಂಆರ್ ಶಿಫಾರಸು ಮಾಡಿದೆ.
ಯಾಕೆ?
ಪ್ರತಿ ನಿತ್ಯ ಯೋಗ, ದೈಹಿಕ ವ್ಯಾಯಾಮ ಮಾಡುವುದರಿಂದ ಒಳ್ಳೆಯ ಆರೋಗ್ಯ ಮತ್ತು ಆರೋಗ್ಯಕರ ಜೀವನವನ್ನು ನಡೆಸಬಹುದು. ಇದು ದೇಹದ ತೂಕ ಕಾಪಾಡಲು, ಮಾಂಸಖಂಡಗಳ ಶಕ್ತಿ ವೃದ್ಧಿಸಲು, ಎಲುಬಿನ ಆರೋಗ್ಯ, ಕೀಲುಗಳ ಜೋಡಣೆಯನ್ನು ಆರೋಗ್ಯವಾಗಿ ಇರಿಸುತ್ತದೆ. ನಿತ್ಯವೂ ಯೋಗ, ದೈಹಿಕ ಚಟುವಟಿಕೆ ನಡೆಸುವುದರಿಂದ ದೀರ್ಘಕಾಲದ ಕೆಲವು ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಬಹುದು.
ಯಾವ ರೀತಿ?
ನಡಿಗೆ, ಜಿಮ್, ಸ್ವಿಮ್ಮಿಂಗ್, ಜಾಗಿಂಗ್, ಸ್ಕಿಪ್ಪಿಂಗ್, ಸೈಕ್ಲಿಂಗ್ ಮೊದಲಾದವುಗಳಲ್ಲಿ ಯಾವುದಾದರೂ ಒಂದೆರಡನ್ನು ನಮ್ಮ ನಿತ್ಯದ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳಬೇಕು. ಇದರೊಂದಿಗೆ ಪ್ರಾಣಾಯಾಮ, ಧ್ಯಾನವನ್ನು ಅಳವಡಿಸಿಕೊಳ್ಳಲು ಐಸಿಎಂಆರ್ ಸೂಚಿಸಿದೆ.
ಅಲ್ಲದೇ ಮನೆ ಕೆಲಸ, ಮನೆ ಸುತ್ತಮುತ್ತ ಸುತ್ತಾಡೋದು, ಮೆಟ್ಟಿಲುಗಳನ್ನು ಹತ್ತಿ ಇಳಿಯೋದು, ಉದ್ಯಾನ ಕೆಲಸಗಳು, ಹೊರಾಂಗಣ, ಒಳಾಂಗಣ ಕ್ರೀಡೆಗಳನ್ನು ಸೇರಿಸಿಕೊಳ್ಳಬೇಕು. ಕಾರ್ಡಿಯೋ ಚಟುವಟಿಕೆಗಳನ್ನು ನಡೆಸಲು ಮರೆಯದಿರಿ.
ವೈದ್ಯರನ್ನು ನೋಡಿ
ದೈಹಿಕ ಚಟುವಟಿಕೆ ಎಷ್ಟೇ ಮಾಡಿದರೂ ಅನಾರೋಗ್ಯ ಕಾಡಿದಾಗ ವೈದ್ಯರನ್ನು ಕಾಣಲೇಬೇಕು. ಅದರಲ್ಲೂ ಮುಖ್ಯವಾಗಿ ಉಸಿರಾಟದ ತೊಂದರೆ, ದೇಹದ ಭಾಗದಲ್ಲಿ ನೋವು, ವಾಕರಿಕೆ, ಸುಸ್ತು, ತಲೆನೋವು ಕಡಿದಾಗ ದೇಹಕ್ಕೆ ವಿಶ್ರಾಂತಿಯನ್ನು ಬಯಸುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ಇದನ್ನೂ ಓದಿ: ICMR Dietary Guidelines: ನಿಮ್ಮ ಆರೋಗ್ಯ ಚೆನ್ನಾಗಿರಬೇಕೆ? ತಜ್ಞ ಸಮಿತಿಯ ಈ ಆಹಾರ ಸಲಹೆ ಪಾಲಿಸಿ
ಯಾವುದು ಎಷ್ಟು ಚಟುವಟಿಕೆ ಬೇಕು?
ನಿದ್ದೆ 8 ಗಂಟೆ, ಕಚೇರಿ ಕೆಲಸ – 8 ಗಂಟೆ, ಮನೆ ಕೆಲಸ- 3.30 ಗಂಟೆ, ತಿನ್ನುವುದು, ಟಿವಿ ನೋಡುವುದು, ತಮ್ಮನ್ನು ತಾವು ತಯಾರಿ ಮಾಡುವುದಕ್ಕೆ- 3 ಗಂಟೆ, ವ್ಯಾಯಾಮ- 60 ನಿಮಿಷ, ಏರೋಬಿಕ್ ವ್ಯಾಯಾಮ- 20 ನಿಮಿಷವನ್ನು ಮೀಸಲಿಡುವಂತೆ ಐಸಿಎಂಆರ್ ಸೂಚಿಸಿದೆ.
ಊಟ, ಉಪಾಹಾರದಲ್ಲಿ ಏನಿರಬೇಕು?
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಕಡಿಮೆ ಚಟುವಟಿಕೆ ಹೊಂದಿರುವ ಪುರುಷರು ಮತ್ತು ಮಹಿಳೆಯರು ಆಹಾರದಲ್ಲಿ (food) ಪೌಷ್ಟಿಕಾಂಶಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದ್ದು, ಇದಕ್ಕಾಗಿ ಇಂಥವರು ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಐಸಿಎಂಆರ್ ಪ್ರಕಾರ ಕಡಿಮೆ ಚಟುವಟಿಕೆ ಹೊಂದಿರುವ ಪುರುಷರ ಉಪಾಹಾರದಲ್ಲಿ ನೆನೆಸಿದ ಮತ್ತು ಬೇಯಿಸಿದ ಬಜ್ರಾ 90 ಗ್ರಾಂ ಮತ್ತು ತರಕಾರಿಗಳು 50 ಗ್ರಾಂ ಒಳಗೊಂಡಿರಬೇಕು. ಅದೇ ರೀತಿ ಮಹಿಳೆಯರಿಗೆ ನೆನೆಸಿದ ಮತ್ತು ಬೇಯಿಸಿದ ಬಜ್ರಾವನ್ನು ಉಪಾಹಾರದಲ್ಲಿ 60 ಗ್ರಾಂ ಮತ್ತು ತರಕಾರಿಗಳು 100 ಗ್ರಾಂ ಸೇರಿಸಿಕೊಳ್ಳಬೇಕು.
ಮಧ್ಯಾಹ್ನದ ಊಟದಲ್ಲಿ ಪುರುಷರು ಧಾನ್ಯಗಳನ್ನು 100 ಗ್ರಾಂ ಮತ್ತು ಬೇಳೆಕಾಳುಗಳು 30 ಗ್ರಾಂ, ಮಹಿಳೆಯರು ಮಧ್ಯಾಹ್ನದ ಊಟದಲ್ಲಿ ಧಾನ್ಯಗಳು 80 ಗ್ರಾಂ ಮತ್ತು ದ್ವಿದಳ ಧಾನ್ಯಗಳನ್ನು 20 ಗ್ರಾಂ ತೆಗೆದುಕೊಳ್ಳಬಹುದು. ಸಂಜೆ ಇಬ್ಬರಿಗೂ 50 ಮಿಲಿ ಲೀಟರ್ ಹಾಲು ಕುಡಿಯಲು ಸೂಚಿಸಲಾಗುತ್ತದೆ.