ಬೆಂಗಳೂರು: 19 ವರ್ಷ ವಯಸ್ಸಿನ ಯುವತಿಯ (19 year old lady) ಹೊಟ್ಟೆಯಲ್ಲಿದ್ದ 7.5 ಕೆಜಿ ಗಡ್ಡೆಯನ್ನು (tumor in stomach) ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಕ್ಯಾನ್ಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ (CANS MULTISPECIALTY HOSPITAL) ವೈದ್ಯರು ಯಶಸ್ವಿಯಾಗಿದ್ದಾರೆ (Medical power).
ಬೆಂಗಳೂರು ನಗರದ ಯುವತಿಯ ಹೊಟ್ಟೆಯ ಸುತ್ತಳತೆಯ ಕಳೆದ ಒಂದೂವರೆ ವರ್ಷಗಳಿಂದ ನಿರಂತರವಾಗಿ ಹೆಚ್ಚಳವಾಗಿದೆ. ಯುವತಿಯ ಹೊಟ್ಟೆ ಸುತ್ತಳತೆ ನಿರಂತರವಾಗಿ ಹೆಚ್ಚಳವಾಗಿದ್ದರಿಂದ ಯುವತಿಯ ಪೋಷಕರು ಆತಂಕಕ್ಕೆ ಒಳಗಾಗಿ ವಿದ್ಯಾರಣ್ಯಪುರ ಸಮೀಪವಿರುವ ಕ್ಯಾನ್ಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ತಪಾಸಣೆಗೆಂದು ಕರೆತಂದಿದ್ದರು.
ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ. ಚೈತ್ರಾ ಎಸ್.ನಿರಂತರ (Dr Chaitra S Nirantara) ಅವರು ತಪಾಸಣೆ ನಡೆಸಿ ಪರೀಕ್ಷೆಗೊಳಪಡಿಸಿದಾಗ ಗರ್ಭಕೋಶದಲ್ಲಿ 7.5 ಕೆಜಿಯಷ್ಟು ಗಡ್ಡೆ ಇರುವುದು ಪತ್ತೆಯಾಗಿದೆ. ಬಳಿಕ ಸುಮಾರು ಒಂದೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆಯನ್ನು ಹೊರತೆಗೆಯುವಲ್ಲಿ ಡಾ. ಚೈತ್ರಾ ಎಸ್. ನಿರಂತರ, ಡಾ ನಂದ ಕುಮಾರ್ ಮತ್ತು ತಂಡ ಯಶಸ್ವಿಯಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ಯುವತಿ ಆರೋಗ್ಯವಾಗಿದ್ದು ಪೋಷಕರ ಆತಂಕ ದೂರವಾಗಿದೆ.
19 ವರ್ಷದ ಯುವತಿಯಲ್ಲಿ 7.5 ಕೆಜಿ ತೂಕದ ಗಡ್ಡೆ ಇರುವುದು ತುಂಬಾ ವಿರಳ. ಶಸ್ತ್ರಚಿಕಿತ್ಸೆ ಮಾಡುವುದು ಸ್ವಲ್ಪ ಸವಾಲಿನ ಕೆಲಸವೇ, ಆದರೂ ನಮ್ಮ ವೈದ್ಯಕೀಯ ತಂಡದ ನೆರವಿನಿಂದ ಗಡ್ಡೆಯನ್ನು ಹೊರೆತೆಗೆಯುವಲ್ಲಿ ಯಶಸ್ವಿಯಾಗಿದ್ದೇವೆ. ಯುವತಿ ಆರೋಗ್ಯವಾಗಿದ್ದಾರೆ ಎಂದು ಶಸ್ತ್ರಕ್ರಿಯೆ ನಡೆಸಿದ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ. ಚೈತ್ರಾ ಎಸ್. ನಿರಂತರ ತಿಳಿಸಿದ್ದಾರೆ.
ಇದನ್ನೂ ಓದಿ : Women’s Day 2024: ಮೀನಾ ಬಿಂದ್ರಾರ ಕನಸಿನ ಕೂಸು ‘ಬೀಬಾ’ ಪ್ರತಿ ಮಹಿಳೆಗೂ ಸ್ಫೂರ್ತಿಕತೆ!