ಜಿನೀವಾ: ವಿಶ್ವ ಆರೋಗ್ಯ ಸಂಸ್ಥೆಯು ಮಂಕಿಪಾಕ್ಸ್ (Monkeypox) ರೋಗವನ್ನು ಅಂತಾರಾಷ್ಟ್ರೀಯವಾಗಿ ಸಾರ್ವಜನಿಕ ಆರೋಗ್ಯಕ್ಕೆ ಕಳವಳಕಾರಿಯಾಗಿ ಪರಿಣಮಿಸಿರುವ ಕಾಯಿಲೆ ಎಂದು ಗುರುತಿಸಿದೆ. ಇದು ಸಾಂಕ್ರಾಮಿಕ ಕಾಯಿಲೆಗಿಂತ (Pandemic) ಒಂದು ಹೆಜ್ಜೆ ಕಡಿಮೆಯಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಘೋಷಣೆ ಪ್ರಕಾರ ಮಂಕಿಪಾಕ್ಸ್ ” ಅಂತಾರಾಷ್ಟ್ರೀಯವಾಗಿ ಕಳವಳಕಾರಿ ಹಂತದಲ್ಲಿರುವ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ( Public health emergency of international concern-PHEIC) ಆಗಿದೆ. ಅಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ರೋಗ ಹರಡುತ್ತಿದೆ. ಹಾಗೂ ಇದರ ನಿಯಂತ್ರಣಕ್ಕೆ ಜಾಗತಿಕ ಸಹಕಾರ ಅಗತ್ಯ ಎಂಬ ಸಂದೇಶವನ್ನು ಈ ಘೋಷಣೆ ಬಿಂಬಿಸುತ್ತದೆ.
16,000 ಕೇಸ್ ವರದಿ: ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಅಧಾನೋಮ್ ಗೆಬ್ರೆಯೂಸಸ್ ಪ್ರಕಾರ ೭೫ ದೇಶಗಳಲ್ಲಿ ಮಂಕಿಪಾಕ್ಸ್ ಹರಡಿದ್ದು, ಇದುವರೆಗೆ ೧೬,೦೦೦ ಪ್ರಕರಣಗಳು ವರದಿಯಾಗಿದೆ. ಈ ಹಂತದಲ್ಲಿ ಮಂಕಿ ಪಾಕ್ಸ್ ಅನ್ನು ನಿಯಂತ್ರಿಸಲು ಸಾಧ್ಯವಿದೆ. ಆದರೆ ಎಲ್ಲ ದೇಶಗಳ ಸಹಕಾರ ಇದಕ್ಕೆ ಅಗತ್ಯ ಎಂದಿದ್ದಾರೆ.
೨೦೨೦ರ ಜನವರಿ ೩೦ರಂದು ಕೋವಿಡ್-೧೯ ಅನ್ನು ಪಿಎಚ್‌ಇಐಸಿ ಎಂದು ಘೋಷಿಸಲಾಗಿತ್ತು. ಆಗ ೭,೫೦೦ ಕೇಸ್‌ಗಳು ಇತ್ತು. ಮಂಕಿ ಪಾಕ್ಸ್ ಜುಲೈ ೨೧ರ ವೇಳೆಗೆ ಹಲವು ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದೆ.
ಇದನ್ನೂ ಓದಿ:ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ; ಯುಎಇಯಿಂದ ಆಗಮಿಸಿದ್ದ ವ್ಯಕ್ತಿಯಲ್ಲಿ ಸೋಂಕು