Site icon Vistara News

Monsoon Food Tips: ಮಳೆಗಾಲದಲ್ಲಿ ಆರೋಗ್ಯದ ದೃಷ್ಟಿಯಿಂದ ತಿನ್ನಲೇಬೇಕಾದ ತರಕಾರಿಗಳಿವು!

veg in monsoon

ಮಳೆಗಾಲವೆಂದರೆ (rainy season) ಖುಷಿಯೇನೋ ನಿಜ. ಆದರೆ, ಸುಲಭವಾಗಿ ಆರೋಗ್ಯ ಹದಗೆಡುವ ಕಾಲವಿದು. ಹಾಗಾಗಿ, ನಾವು ತೆಗೆದುಕೊಳ್ಳುವ ಆಹಾರದ ಬಗ್ಗೆ, ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಕಾದ ಕಾಲವಿದು. ಇಂಥ ಸಮಯದಲ್ಲಿ ಸೇವಿಸುವ ಆಹಾರ (Monsoon Food) ನಮ್ಮನ್ನು ರೋಗಗಳಿಂದ ಪಾರು ಮಾಡಿ (healthy food) ರೋಗ ನಿರೋಧಕತೆ (imuunity), ಸಾಮರ್ಥ್ಯ ಹೆಚ್ಚಿಸುವಂತಿರಬೇಕು. ಹಾಗಾಗಿ ಮುಖ್ಯವಾಗಿ ಮಳೆಗಾಲದಲ್ಲಿ ಯಾವೆಲ್ಲ ತರಕಾರಿಗಳನ್ನು (Vegetables in monsoon) ನಾವು ಹೆಚ್ಚು ಹೆಚ್ಚು ಸೇವಿಸಬೇಕು ಎಂಬ ಅರಿವೂ (Monsoon Food tips) ನಮಗಿರಬೇಕು. ಬನ್ನಿ, ಯಾವೆಲ್ಲ ತರಕಾರಿಗಳನ್ನು ಮಳೆಗಾಲದಲ್ಲಿ ತಿನ್ನುವುದು ಅತ್ಯಗತ್ಯ ಎಂಬುದನ್ನು ನೋಡೋಣ.

ಮುಖ್ಯವಾಗಿ ಸೊಪ್ಪಿನಂತಹ ತರಕಾರಿಗಳನ್ನು ಬಿಟ್ಟು ಉಳಿದೆಲ್ಲ ತರಕಾರಿಗಳು ಮಳೆಗಾಲದಲ್ಲಿ ಒಳ್ಳೆಯದೇ. ಸೊಪ್ಪುಗಳಲ್ಲಿ ಕೀಟ, ಹುಳುಹುಪ್ಪಟೆ ಹಾಗೂ ಕಣ್ಣಿಗೆ ಕಾಣದ ಜಂತುಗಳು, ಬ್ಯಾಕ್ಟೀರಿಯಾಗಳ ಬೆಳವಣಿಗೆ ಮಳೆಗಾಲದಲ್ಲಿ ಹೆಚ್ಚಿರುವ ಸಂಭವ ಇರುವುದರಿಂದ ಅವುಗಳಿಂದ ದೂರ ಇರಬಹುದು. ಉಳಿದಂತೆ ಈ ಕೆಳಗಿನ ತರಕಾರಿಗಳು ಮಳೆಗಾಲದಲ್ಲಿ ಆರೋಗ್ಯವನ್ನು (health tips) ವರ್ಧಿಸುತ್ತವೆ.

1. ಹಾಗಲಕಾಯಿ: ಕಹಿಯಾದರೂ ಗುಣದಲ್ಲಿ ಮೇಲು ಈ ಹಾಗಲಕಾಯಿ. ಇದು ಅತ್ಯಂತ ಆರೋಗ್ಯಕರ ತರಕಾರಿಗಳ ಪೈಕಿ ಮೊದಲ ಪಂಕ್ತಿಯಲ್ಲಿ ನಿಲ್ಲುತ್ತದೆ. ಮಳೆಗಾಲದಲ್ಲಿ ದೇಹ ಸೇರುವ ಪರಾವಲಂಬಿ ಜಂತುಗಳನ್ನು ಹೊಡೆದೋಡಿಸುವ ಕೆಲಸವನ್ನೂ ಈ ತರಕಾರಿ ಮಾಡುತ್ತದೆ. ಮುಖ್ಯವಾಗಿ ಕರುಳನ್ನು ಬಾಧಿಸುವ ಪರಾವಲಂಬಿ ಜೀವಿಗಳನ್ನು ಹೊರಗೆ ಕಳುಹಿಸಿ ದೇಹದ ಆರೋಗ್ಯ ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಹಾಗಾಗಿ, ನಾಲಿಗೆಗೆ ರುಚಿಸದಿದ್ದರೂ ಮಳೆಗಾಲದಲ್ಲಿ ಕೆಲವೊಮ್ಮೆಯಾದರೂ ಹಾಗಲಕಾಯಿ ಅಡುಗೆ ಮಾಡಿ ತಿನ್ನಿ.

2. ಸೋರೆಕಾಯಿ: ಮಳೆಗಾಲದಲ್ಲಿ ಬಾಧಿಸುವ ತೊಂದರೆಗಳಿಗೆಲ್ಲ ಉತ್ತರ ನೀಡುವ ಸಾಮರ್ಥ್ಯ ಇರುವ ಅಪರೂಪದ ತರಕಾರಿ ಸೋರೆಕಾಯಿ. ಸಾಕಷ್ಟು ಪೋಷಕಾಂಶಗಳು ಹಾಗೂ ಖನಿಜಾಂಶಗಳನ್ನು ಹೊಂದಿರುವ ತರಕಾರಿ ಹೊಟ್ಟೆಯನ್ನು ಶಾಂತವಾಗಿ ಹಾಗೂ ಸಮೃದ್ಧವಾಗಿ ಇಟ್ಟುಕೊಳ್ಳುವಲ್ಲಿ ಇದರ ಪಾತ್ರ ದೊಡ್ಡದು. ಜ್ವರ, ಶ್ವಾಸಕೋಶದ ತೊಂದರೆಗಳು, ಉಸಿರಾಟದ ಸಮಸ್ಯೆ ಇರುವ ಮಂದಿ, ಕಫದಂತ ಸಮಸ್ಯೆ ಇರುವ ಮಂದಿಗೆಲ್ಲ ಈ ತರಕಾರಿ ಅತ್ಯುತ್ತಮ.

mushrooms

3. ತೊಂಡೆಕಾಯಿ: ತೊಂಡೆಕಾಯಿಯೂ ಕೂಡಾ ಮಳೆಗಾಲದ ಸಮಯದಲ್ಲಿ ಸಾಕಷ್ಟು ತಿನ್ನಬಹುದಾದ ತರಕಾರಿ. ಜ್ವರ, ಶೀತ, ಕೆಮ್ಮಿನಂತಹ ಸಂದರ್ಭಗಳಲ್ಲಿ ದೇಹವನ್ನು ರಕ್ಷಿಸುತ್ತದೆ. ಮಧುಮೇಹ ನಿಯಂತ್ರಣದಲ್ಲಿಡಲು, ಕೊಲೆಸ್ಟೆರಾಲ್‌ ಅತಿಯಾಘಿದ್ದರೆ, ಈ ತೊಂಡೆಕಾಯಿ ಅದನ್ನು ಸಮತೋಲನಕ್ಕೆ ತರಲು ಸಹಾಯ ಮಾಡುತ್ತದೆ.

4. ಅಣಬೆ: ಮಳೆಗಾಲವೆಂದರೆ ಅಣಬೆಗಳ ಕಾಲ. ಹಳ್ಳಿಗಳಲ್ಲಿ ಅಣಬೆಗಳು ಮನೆಯ ಹಿತ್ತಿಲಲ್ಲೇ ಹುಟ್ಟುವುದನ್ನು ನೀವು ನೋಡಿರಬಹುದು. ಬಹಳಷ್ಟು ಮಂದಿ ಮಳೆಗಾಲದಲ್ಲಿ ಅಣಬೆಯ ಜೊತೆಗೆ ಕಣ್ಣಿಗೆ ಕಾಣದ ಜಂತುಗಳೂ ಹೊಟ್ಟೆ ಸೇರುವ ಸಂಭವ ಹೆಚ್ಚು ಎಂದು ಅಣಬೆಯನ್ನು ತಿನ್ನುವುದು ಒಳ್ಳೆಯದಲ್ಲ ಎನ್ನುತ್ತಾರೆ. ಆದರೆ, ಅಣಬೆಯಲ್ಲಿ ಸಾಕಷ್ಟು ಪೋಷಕಾಂಶಗಳೂ, ಕಡಿಮೆ ಕ್ಯಾಲರಿಯೂ ಇರುವುದಲ್ಲದೆ ಅಣಬೆಯಲ್ಲಿರುವ ಬಯೋಆಕ್ಟಿವ್‌ ಕಾಂಪೌಂಡ್‌ಗಳು ಮಾನವನ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಅಷ್ಟೇ ಅಲ್ಲ, ಇದರಲ್ಲಿ ಅತ್ಯಂತ ಹೆಚ್ಚು ರೋಗ ನಿರೋಧಕತೆಯ ಶಕ್ತಿ ಪಡೆಯಬಹುದು. ಆಂಟಿ ಬ್ಯಾಕ್ಟೀರಿಯಲ್‌ ಕೂಡಾ ಹೌದು. ಹಾಗಾಗಿ, ಅಣಬೆಗಳನ್ನು ಚೆನ್ನಾಗಿ ತೊಳೆದು, ಸರಿಯಾಗಿ ಕ್ಲೀನ್‌ ಮಾಡಿ ಮಳೆಗಾಳದಲ್ಲೂ ಅಡುಗೆ ಮಾಡಬಹುದು.

mushrooms

ಇದನ್ನೂ ಓದಿ: Monsoon Food Tips: ಮಳೆಗಾಲದಲ್ಲಿ ಮರೆಯಲೇಬಾರದ ಆಹಾರ ಸಂಗ್ರಹಣೆಯ ನವಸೂತ್ರಗಳಿವು!

5. ಬೀಟ್‌ರೂಟ್‌: ಬೀಟ್‌ರೂಟ್‌ ಎಂಬ ಸರ್ವ ಗುಣ ಸಂಪನ್ನ ಗಡ್ಡೆಯನ್ನು ಆಗಾಗ ತಿನ್ನುತ್ತಲೇ ಇರುವುದು ಒಳ್ಳೆಯದು. ಇದಕ್ಕೆ ಇಂಥ ಕಾಲ ಎಂಬುದಿಲ್ಲ. ಎಲ್ಲ ಕಾಲಕ್ಕೂ ಸಲ್ಲುವ ತರಕಾರಿ ಇದು. ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಈ ತರಕಾರಿ ನೀಡುವುದರಿಂದ ಇದು ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ರಕ್ತ ಹೆಚ್ಚಿಸುವ, ಹಿಮೋಗ್ಲೋಬಿನ್‌ ಮಟ್ಟ ಕಡಿಮೆಯಾಗಿದ್ದರೆ ಅದನ್ನು ಸಮತೋಲನಗೊಳಿಸುವ ತಾಕತ್ತು ಇರುವ ಗಡ್ಡೆ. ಮಳೆಗಾಲದಲ್ಲೂ ಇದನ್ನು ಆಗಾಗ ತಿನ್ನುವುದು ಒಳ್ಳೆಯದು.

ಇವಿಷ್ಟೇ ಅಲ್ಲ, ಕ್ಯಾರೆಟ್‌, ಮೂಲಂಗಿ, ಟಿಂಡಾ, ಸುವರ್ಣ ಗಡ್ಡೆ, ಪಡುವಲಕಾಯಿ, ಹೀರೆಕಾಯಿ ಇತ್ಯಾದಿ ತರಕಾರಿಗಳನ್ನೆಲ್ಲವನ್ನೂ ಮಳೆಗಾಲದಲ್ಲಿ ತಿನ್ನಬಹುದು. ಆದರೆ, ಕೇವಲ ಸೊಪ್ಪುಗಳು, ಬದನೆಕಾಯಿ, ಕ್ಯಾಪ್ಸಿಕಂ, ಕ್ಯಾಬೇಜ್‌, ಬ್ರೊಕೋಲಿಗಳಂತಹ ತರಕಾರಿಗಳನ್ನು ಕಡಿಮೆ ಮಾಡುವುದು ಮಳೆಗಾಲದ ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು.

ಇದನ್ನೂ ಓದಿ: Monsoon Food: ಮಳೆಗಾಲದಲ್ಲಿ ನಿದ್ದೆ ಹೊಡೆದೋಡಿಸಬೇಕೆ? ಹಾಗಾದರೆ ಇವನ್ನೆಲ್ಲ ಸೇವಿಸಬಹುದು!

Exit mobile version