Site icon Vistara News

Nutrition Week 2023: ಸಿರಿಧಾನ್ಯದಲ್ಲಿ ಎಷ್ಟೊಂದು ವಿಧ…ಎಷ್ಟೊಂದು ಪ್ರಯೋಜನ!

millet health benefits

ನಮ್ಮ ದೇಹಕ್ಕೆ ಸಿರಿಧಾನ್ಯ ಅತ್ಯಂತ ಆರೋಗ್ಯಕರವಾದ ಆಹಾರ. ಹಿತಮಿತವಾಗಿ ಸಿರಿಧಾನ್ಯ ಸೇವಿಸುವುದರಿಂದ ಎಷ್ಟೋ ಕಾಯಿಲೆಗಳಿಂದ ದೂರವಿರಬಹುದು. ಅಂದ ಹಾಗೆ ಈ ಸಿರಿಧಾನ್ಯಗಳೆಂದರೆ ಯಾವುದು ಎನ್ನುವ ಪ್ರಶ್ನೆ ನಿಮ್ಮಲ್ಲಿ (Types Of Millets) ಮೂಡಿರಬಹುದು. ಈ ಕುರಿತ ಮಾಹಿತಿ ಇಲ್ಲಿದೆ. ಸಿರಿಧಾನ್ಯ ಅತಿ ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿರುತ್ತದೆ. ಖನಿಜ, ವಿಟಮಿನ್‌, ಪ್ರೋಟೀನ್‌ ಎಲ್ಲವೂ ಈ ಸಿರಿಧಾನ್ಯಗಳಲ್ಲಿ (Nutrition Week 2023) ಅಕ್ಕಿ ಮತ್ತು ಗೋಧಿಗಿಂತ ಮೂರು ಪಟ್ಟು ಅಧಿಕವಾಗಿರುತ್ತದೆ. ತೂಕ ಇಳಿಸುವುದರಿಂದ ಹಿಡಿದು, ಮಧುಮೇಹ ನಿಯಂತ್ರಣದಲ್ಲಿಟ್ಟುಕೊಳ್ಳುವವರೆಗೆ ಇದರ ಪ್ರಯೋಜನ ಹಲವು.

ರಾಗಿ


ಭಾರತದಲ್ಲಿ ಅತಿ ಹೆಚ್ಚಾಗಿ ಬಳಕೆಯಾಗುವ ಸಿರಿಧಾನ್ಯಗಳಲ್ಲಿ ಒಂದು ರಾಗಿ. ಅಂಟು ಮುಕ್ತವಾಗಿರುವ ಇದು ಪ್ರೋಟೀನ್‌ ಮತ್ತು ಅಮೈನೋ ಆಮ್ಲವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ. ಮಕ್ಕಳಲ್ಲಿ ಮೆದುಳಿನ ಬೆಳವಣಿಗೆ ಹೆಚ್ಚಿಸಲು ಇದು ಸಹಾಯಕಾರಿ. ಇದರಲ್ಲಿ ಅಧಿಕ ಕ್ಯಾಲ್ಸಿಯಂ, ಕಬ್ಬಿಣಾಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ. ದೇಹದಲ್ಲಿ ಉಷ್ಣಾಂಶ ಹೆಚ್ಚಾದಾಗಲೂ ಇದರ ಬಳಕೆ ಮಾಡಲಾಗುತ್ತದೆ.

ನವಣೆ


ನವಣೆ (ಫಾಕ್ಸ್‌ಟೈಲ್‌ ಮಿಲೆಟ್‌) ಕೂಡ ಭಾರತದಲ್ಲಿ ಬಳಕೆಯಲ್ಲಿರುವ ಸಿರಿಧಾನ್ಯಗಳಲ್ಲಿ ಒಂದಾಗಿದೆ. ಇದರಲ್ಲಿ ಅತಿ ಹೆಚ್ಚು ಪ್ರಮಣದಲ್ಲಿ ಕಾರ್ಬೋಹೈಡ್ರೇಟ್‌ಗಳಿವೆ. ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿ ಇರಿಸಿಕೊಳ್ಳಲು ಇದು ಸಹಾಯಕಾರಿ. ಇದರಲ್ಲಿ ಹೆಚ್ಚಾಗಿ ಕಬ್ಬಿಣದ ಅಂಶವೂ ಇರುತ್ತದೆ.

ಮೆಕ್ಕೆ ಜೋಳ


ಭಾರತದಲ್ಲಿ ಹೆಚ್ಚಾಗಿ ಬಳಕೆಯಾಗುವ ಸಿರಿಧಾನ್ಯಗಳ ಪೈಕಿ ಮೆಕ್ಕೆ ಜೋಳ ಕೂಡ ಒಂದು. ಮೆಕ್ಕೆ ಜೋಳದ ರೊಟ್ಟಿ ಉತ್ತರ ಕರ್ನಾಟಕದ ಕಡೆ ಬಹಳ ಪ್ರಸಿದ್ಧ ಕೂಡ. ಇದರಲ್ಲಿ ಹೆಚ್ಚಾಗಿ ಕಬ್ಬಿಣಾಂಶ, ಪ್ರೋಟೀನ್‌ ಮತ್ತು ಫೈಬರ್‌ ಇರುತ್ತದೆ. ಕೊಲೆಸ್ಟ್ರಾಲ್‌ ಮಟ್ಟ ಕಡಿಮೆ ಮಾಡುವುದಕ್ಕೆ ಇದು ಸಹಾಯಕಾರಿ. ಹೆಚ್ಚು ಉತ್ಕರ್ಷಣ ನಿರೋಧಕವನ್ನು ಹೊಂದಿರುವ ಇದು ಗೋಧಿಗೆ ಪರ್ಯಾಯ ಎಂದೂ ಹೇಳಬಹುದು. ಚಯಾಪಚಯವನ್ನು ಹೆಚ್ಚಿಸಲು ಕೂಡ ಮೆಕ್ಕೆ ಜೋಳ ಸಹಾಯಕಾರಿ.

ಸಜ್ಜೆ


ಸಜ್ಜೆ ಕೂಡ ಭಾರತದಲ್ಲಿ ಬಳಕೆಯಲ್ಲಿರುವ ಸಿರಿಧಾನ್ಯಗಳಲ್ಲಿ ಒಂದಾಗಿದೆ. ಇದನ್ನು ರೊಟ್ಟಿ ಮಾಡಿಕೊಂಡು ಸೇವಿಸಲಾಗುತ್ತದೆ. ಸಜ್ಜೆಯಲ್ಲಿ ಕಬ್ಬಿಣಾಂಶ, ಫೈಬರ್‌, ಪ್ರೋಟೀನ್‌, ಮೆಗ್ನೀಶಿಯಂ ಮತ್ತು ಕ್ಯಾಲ್ಶಿಯಂ ಹೆಚ್ಚಾಗಿರುತ್ತದೆ. ಟೈಪ್‌ 2 ಮಧುಮೇಹದಿಂದ ಬಳಲುತ್ತಿರುವವರಿಗೆ ಇದು ಹೇಳಿಮಾಡಿಸಿದ ಆಹಾರ. ಸಜ್ಜೆ ಬಳಕೆಯಿಂದ ಮಧುಮೇಹ ಕಾಯಿಲೆಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು.

ಸಾಮೆ


ಲಿಟಲ್‌ ಮಿಲೆಟ್‌ ಎಂದು ಕರೆಸಿಕೊಳ್ಳುವ ಸಾಮೆ ಪೌಷ್ಟಿಕಾಂಶಯುಕ್ತ ಸಿರಿಧಾನ್ಯಗಳಲ್ಲಿ ಒಂದು. ಸಾಮೆಯಲ್ಲಿ ವಿಟಮಿನ್‌ ಬಿ ಮತ್ತು ಅಗತ್ಯ ಖನಿಜಾಂಶಗಳಾದ ಕ್ಯಾಲ್ಶಿಯಂ, ಕಬ್ಬಿಣ, ಸತು ಮತ್ತು ಪೊಟ್ಯಾಶಿಯಂ ಹೆಚ್ಚಾಗಿ ರುತ್ತದೆ. ಅಕ್ಕಿ ಬಳಕೆ ಬದಲು ಸಾಮೆ ಬಳಸಿದರೆ ಆರೋಗ್ಯವನ್ನು ಇನ್ನಷ್ಟು ಚೆನ್ನಾಗಿ ಇಟ್ಟುಕೊಳ್ಳಬಹುದಾಗಿದೆ.

ಊದಲು


ಊದಲು ಅನ್ನು ಸನ್ವಾ ಎಂದೂ ಕರೆಯಲಾಗುತ್ತದೆ. ಇದು ಕರುಳಿನ ಚಲನೆಯನ್ನು ಸುಧಾರಿಸಲು ಮತ್ತು ತೂಕ ಇಳಿಸಿಕೊಳ್ಳಲು ಸಹಾಯಕಾರಿ. ಕ್ಯಾಪ್ಶಿಯಂ ಮತ್ತು ಪಾಸ್ಪರಸ್‌ ಅನ್ನು ಹೆಚ್ಚಾಗಿ ಹೊಂದಿರುವ ಇದು ಮೂಳೆಗಳ ಸಾಂದ್ರತೆಯನ್ನು ಬಲಪಡಿಸಯತ್ತದೆ. ಇದರಲ್ಲಿ ಹೆಚ್ಚಾಗಿ ಫೈಬರ್‌ ಕೂಡ ಇರುತ್ತದೆ.

ಬರಗು


ಬರಗುನಲ್ಲಿ ಕಡಿಮೆ ಪ್ರಮಾಣದ ಗ್ಲೈಸೆಮಿಕ್‌ ಸೂಚಿ ಇರುವುದರಿಂದ ಇದು ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿರಿಸಿಕೊಳ್ಳಲು ಸಹಾಯಕಾರಿ. ಮಧುಮೇಹಿಗಳು ಇದನ್ನು ಪ್ರತಿನಿತ್ಯ ಸೇವಿಸುವುದು ಒಳ್ಳೆಯದು. ಇದು ಆನ್‌ಲೈನ್‌ ಮತ್ತು ಆಫ್‌ಲೈನ್‌ ಮಾರುಕಟ್ಟೆಗಳಲ್ಲಿ ಖರೀದಿಗೆ ಸಿಗುತ್ತವೆ.

ಅರ್ಕ


ಅರ್ಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲೆಸಿಥಿನ್ ಅಮೈನೋ ಆಮ್ಲ ಇರುತ್ತದೆ. ಇದು ನರಮಂಡಲವನ್ನು ಬಲಪಡಿಸುವಲ್ಲಿ ಗಮನಾರ್ಹ ಪರಿಣಾಮವನ್ನು ಬೀರುತ್ತದೆ. ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಸತು ಖನಿಜಗಳು ಅರ್ಕದಲ್ಲಿ ಹೆಚ್ಚಾಗಿರುತ್ತವೆ. ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್‌ ಅನ್ನು ಕಡಿಮೆ ಮಾಡುವುದಕ್ಕೂ ಇದು ಸಹಾಯಕಾರಿ.

ಇದನ್ನೂ ಓದಿ: National Nutrition Week 2023: ಡಯೆಟ್‌ ಜತೆಗೆ ಪೌಷ್ಟಿಕತೆಯನ್ನು ಬ್ಯಾಲೆನ್ಸ್‌ ಮಾಡೋದು ಹೇಗೆ?

Exit mobile version