Site icon Vistara News

Outdoor Exercise: ಹೊರಾಂಗಣ ವ್ಯಾಯಾಮ ಖಿನ್ನತೆಯನ್ನು ದೂರ ಮಾಡುವುದೇ?

Outdoor Exercise

ಆರೋಗ್ಯವಾಗಿರಲು (healthy) ವ್ಯಾಯಾಮ (exercise) ಬಹುಮುಖ್ಯ. ಪ್ರತಿಯೊಂದು ರೀತಿಯ ವ್ಯಾಯಾಮವೂ ದೇಹ, ಮನಸ್ಸಿನ ಆರೋಗ್ಯಕ್ಕೆ ತನ್ನದೇ ಆದ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಅದರಲ್ಲೂ ಹೊರಾಂಗಣ ವ್ಯಾಯಾಮ ದೇಹಕ್ಕೆ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೆ (mental health) ಬಹು ಪ್ರಯೋಜನಕಾರಿಯಾಗಿದೆ.

ಹೊರಾಂಗಣದಲ್ಲಿ ವ್ಯಾಯಾಮ (Outdoor Exercise) ಖಿನ್ನತೆಯ (depression) ಅಪಾಯವನ್ನು ಕಡಿಮೆ ಮಾಡುವುದು ಮಾತ್ರವಲ್ಲ ವಿವಿಧ ಮಾನಸಿಕ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ ಎನ್ನುತ್ತಾರೆ ತಜ್ಞರು. ಹೊರಾಂಗಣದಲ್ಲಿ ವ್ಯಾಯಾಮ ಮಾಡುವುದರಿಂದ ಭಾವನಾತ್ಮಕ, ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಹೊರಾಂಗಣ ವ್ಯಾಯಾಮ ಮಾಡುವುದರಿಂದ ಖಿನ್ನತೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ಅಂಶಗಳು.

ಇದನ್ನೂ ಓದಿ: Vampire Facial: ಹೆಣ್ಣುಮಕ್ಕಳೇ ಎಚ್ಚರ; ಫೇಶಿಯಲ್‌ ಮಾಡಿಸಿಕೊಂಡ ಮೂವರಿಗೆ ಎಚ್‌ಐವಿ!


ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು

ಸೂರ್ಯನ ಬೆಳಕು ನಮ್ಮ ದೇಹದ ಸಿರೊಟೋನಿನ್ ಉತ್ಪಾದನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನರಗಳ ಯೋಗಕ್ಷೇಮ ಮತ್ತು ಸಂತೋಷದ ಭಾವನೆಗಳಿಗೆ ಸೂರ್ಯನ ಬೆಳಕು ಸಾಕಷ್ಟು ಕೊಡುಗೆ ನೀಡುತ್ತದೆ. ನೈಸರ್ಗಿಕ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಸೀಸನಲ್ ಎಫೆಕ್ಟಿವ್ ಡಿಸಾರ್ಡರ್ (ಎಸ್‌ಎಡಿ) ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ಸಾಮಾನ್ಯವಾಗಿ ಮನಸ್ಥಿತಿಯನ್ನು ಸುಧಾರಿಸುತ್ತದೆ.

ವಿಟಮಿನ್ ಡಿ ಉತ್ಪಾದನೆ

ಸೂರ್ಯನ ಬೆಳಕಿಗೆ ನಮ್ಮನ್ನು ನಾವು ಒಡ್ಡಿಕೊಳ್ಳುವುದರಿಂದ ವಿಟಮಿನ್ ಡಿ ಅನ್ನು ಉತ್ಪಾದಿಸಲು ಚರ್ಮಕ್ಕೆ ಉತ್ತೇಜಿನ ಸಿಕ್ಕಂತಾಗುತ್ತದೆ. ಮೆದುಳಿನ ಕಾರ್ಯವನ್ನು ಒಳಗೊಂಡಂತೆ ಒಟ್ಟಾರೆ ಆರೋಗ್ಯಕ್ಕೆ ನಿರ್ಣಾಯಕವಾಗಿದೆ. ಕಡಿಮೆ ಮಟ್ಟದ ವಿಟಮಿನ್ ಡಿ ಖಿನ್ನತೆ ಮತ್ತು ಇತರ ಮಾನಸಿಕ ಅಸ್ವಸ್ಥತೆಗಳನ್ನು ದೂರ ಮಾಡುತ್ತದೆ.

ದೈಹಿಕ ಚಟುವಟಿಕೆ

ವ್ಯಾಯಾಮ ಎಂಡಾರ್ಫಿನ್ ಗಳನ್ನು ಬಿಡುಗಡೆ ಮಾಡುತ್ತದೆ. ಮೆದುಳಿನಲ್ಲಿ ನೈಸರ್ಗಿಕ ನೋವು ನಿವಾರಕಗಳು ಮತ್ತು ಮೂಡ್ ಎಲಿವೇಟರ್ ಗಳಾಗಿ ಇದು ಕಾರ್ಯನಿರ್ವಹಿಸುವ ರಾಸಾಯನಿಕಗಳು. ಹೊರಾಂಗಣ ವ್ಯಾಯಾಮವು ಚಲನೆ ಮತ್ತು ದೈಹಿಕ ಪರಿಶ್ರಮವನ್ನು ಉತ್ತೇಜಿಸುತ್ತದೆ, ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

ಸಾಮಾಜಿಕ ಸಂವಹನ

ಹೊರಾಂಗಣದಲ್ಲಿ ವ್ಯಾಯಾಮ ಮಾಡುವುದು ಸಾಮಾನ್ಯವಾಗಿ ನಡಿಗೆ, ಜಾಗಿಂಗ್ ಅಥವಾ ತಂಡದ ಕ್ರೀಡೆಗಳಂತಹ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಇದನ್ನು ಇತರರೊಂದಿಗೆ ಮಾಡಬಹುದಾಗಿದೆ. ಮಾನಸಿಕ ಆರೋಗ್ಯಕ್ಕೆ ಸಾಮಾಜಿಕ ಸಂವಹನವು ಅತ್ಯಗತ್ಯ. ಏಕೆಂದರೆ ಇದು ಒಂಟಿತನದ ಭಾವನೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಭಾವನಾತ್ಮಕ ಬೆಂಬಲವನ್ನು ನೀಡುತ್ತದೆ.


ಪ್ರಕೃತಿಯೊಂದಿಗೆ ಸಂಪರ್ಕ

ಪರಿಸರದ ಮಧ್ಯೆ ಇರುವುದು ಮನಸ್ಸನ್ನು ಶಾಂತಗೊಳಿಸುತ್ತದೆ. ಹೊರಾಂಗಣ ವ್ಯಾಯಾಮವನ್ನು ಉದ್ಯಾನವನ, ಅರಣ್ಯ ಅಥವಾ ಕಡಲತೀರದಲ್ಲಿ ಅಥವಾ ಮನೆಯ ಬಾಲ್ಕನಿಯಲ್ಲಿ ಮಾಡುವುದರಿಂದ ಪ್ರಕೃತಿಯ ದೃಶ್ಯಗಳು, ಶಬ್ದಗಳು ಮತ್ತು ವಾಸನೆಗಳು ಮನಸ್ಸಿಗೆ ವಿಶ್ರಾಂತಿಯನ್ನು ನೀಡುತ್ತದೆ. ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.

ಒತ್ತಡ ಕಡಿಮೆ ಮಾಡುವುದು

ಹೊರಾಂಗಣ ವ್ಯಾಯಾಮವು ಮನಸ್ಸಿಗೆ ಸಾವಧಾನತೆಯನ್ನು ಒದಗಿಸುತ್ತದೆ. ಯಾಕೆಂದರೆ ಇದು ನಮ್ಮ ಸುತ್ತಮುತ್ತಲಿನ ಮತ್ತು ದೈಹಿಕ ಸಂವೇದನೆಗಳ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಸಾವಧಾನತೆಯು ಒತ್ತಡ ಮಟ್ಟವನ್ನು ಕಡಿಮೆ ಮಾಡಲು ಮತ್ತು ಮನಸ್ಸಿನ ಶಾಂತಿ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ಇದು ಸಹಾಯ ಮಾಡುತ್ತದೆ.

ಹೊಸ ಅನುಭವ

ಹೊರಾಂಗಣದಲ್ಲಿ ವ್ಯಾಯಾಮವು ದೃಶ್ಯಾವಳಿಗಳ ಬದಲಾವಣೆ ಹೊಸ ಅನುಭವಗಳನ್ನು ನೀಡುತ್ತದೆ. ಇದು ಒಳಾಂಗಣ ಜೀವನಕ್ರಮಗಳ ಏಕತಾನತೆಯನ್ನು ಹೋಗಲಾಡಿಸುತ್ತದೆ. ವ್ಯಾಯಾಮದ ದಿನಚರಿಗಳಲ್ಲಿನ ವೈವಿಧ್ಯತೆಯು ಬೇಸರವನ್ನು ದೂರ ಮಾಡುತ್ತದೆ ಮತ್ತು ಹೆಚ್ಚಿನ ಪ್ರೇರಣೆಯನ್ನು ನೀಡುತ್ತದೆ.


ಉತ್ತಮ ನಿದ್ರೆ

ನಿಯಮಿತ ವ್ಯಾಯಾಮವನ್ನು ವಿಶೇಷವಾಗಿ ಹೊರಾಂಗಣದಲ್ಲಿ ಮಾಡಿದಾಗ ಉತ್ತಮ ನಿದ್ರೆ ಆವರಿಸುವುದು. ಇದು ನಿದ್ರೆಯ ಗುಣಮಟ್ಟವನ್ನು ಸುಧಾರಿಸಬಹುದು. ಮಾನಸಿಕ ಆರೋಗ್ಯಕ್ಕೆ ಸಾಕಷ್ಟು ನಿದ್ರೆ ಅತ್ಯಗತ್ಯ, ಮತ್ತು ಸಾಕಷ್ಟು ವಿಶ್ರಾಂತಿ ಪಡೆಯುವುದು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸ್ವಾಭಿಮಾನವನ್ನು ಹೆಚ್ಚಿಸುತ್ತದೆ

ಹೊರಾಂಗಣ ವ್ಯಾಯಾಮದಲ್ಲಿ ಸಾಕಷ್ಟು ಸವಾಲುಗಳು ಎದುರಾಗುತ್ತದೆ. ಇದರಿಂದ ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಬಹುದು. ಸಾಧನೆ ಮತ್ತು ಸಮರ್ಥ ಭಾವನೆಯು ಖಿನ್ನತೆಗೆ ಸಂಬಂಧಿಸಿದ ನಿಷ್ಪ್ರಯೋಜಕತೆ ಅಥವಾ ಅಸಮರ್ಪಕತೆಯ ಭಾವನೆಗಳನ್ನು ಹೋಗಲಾಡಿಸುತ್ತದೆ.

ನಕಾರಾತ್ಮಕ ಆಲೋಚನೆಗಳಿಂದ ಮುಕ್ತಿ

ಹೊರಾಂಗಣ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದರಿಂದ ಖಿನ್ನತೆಗೆ ಕಾರಣವಾಗುವ ಒತ್ತಡಗಳು ಮತ್ತು ನಕಾರಾತ್ಮಕ ಆಲೋಚನೆಗಳಿಂದ ದೂರವಾಗಬಹುದು. ದೈಹಿಕ ಚಟುವಟಿಕೆಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವುದರಿಂದ ಮನಸ್ಸು ನಕಾರಾತ್ಮಕ ಯೋಚನೆಗಳನ್ನು ಮಾಡುವುದನ್ನು ಬಿಡುತ್ತದೆ.

Exit mobile version