ಹಾನಿಕಾರವಾದ ಪ್ಲಾಸ್ಟಿಕ್‌ಗಳ (Paper cup health effects) ಬದಲಿಗೆ ಪರಿಸರ-ಸ್ನೇಹಿ ಮತ್ತು ಸುಸ್ಥಿರ ಆಯ್ಕೆಗಳತ್ತ ಮುಖ ಮಾಡಲು ಪ್ರಯತ್ನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಒಂದೇ ಬಾರಿ ಬಳಸಿ ಬಿಸಾಡುವ ಪ್ಲಾಸ್ಟಿಕ್‌ಗಳಿಗೆ ಪರ್ಯಾಯವೆಂಬಂತೆ ಪೇಪರ್ ಲೋಟಗಳು, ಸ್ಟ್ರಾಗಳು ಬಳಕೆಗೆ ಬರುತ್ತಿವೆ. ಎಷ್ಟೋ ಬಾರಿ ಬಿದಿರಿನ ಸ್ಟ್ರಾಗಳು ಸಹ ಗ್ರಾಹಕರಿಗೆ ಇಷ್ಟವಾಗುತ್ತವೆ. ಆದರೆ ಇವೆಲ್ಲವೂ ಪರಿಸರಕ್ಕೆ (eco-friendly products) ಸೂಕ್ತವೇ? ಇವುಗಳಿಂದ ಯಾವುದೇ ಹಾನಿಯಿಲ್ಲವೇ? ಈ ಬಗ್ಗೆ ಐರೋಪ್ಯ ದೇಶಗಳ ಎರಡು ಬೇರೆ ಬೇರೆ ವಿಜ್ಞಾನಿಗಳ ತಂಡ ಅಧ್ಯಯನ ನಡೆಸಿದ್ದು, ಹೇಳುವಂಥ ಪೂರಕ ಪರಿಣಾಮವೇನೂ ಕಾಣುತ್ತಿಲ್ಲ ಎನ್ನುತ್ತದೆ ಅಧ್ಯಯನ.
ಪರ್ಯಾಯ ಆಯ್ಕೆಗಳೂ ಸುರಕ್ಷಿತವಲ್ಲ ಎಂಬುದು ಇದರ ಅರ್ಥವೇ? ಏನು ಹೇಳುತ್ತಿದ್ದಾರೆ ಸಂಶೋಧನೆ ನಡೆಸಿದವರು? ಮೊದಲಿಗೆ ಪ್ಲಾಸ್ಟಿಕ್ ಕಪ್‌ಗಳ ಬದಲಿಗೆ ಚಾಲ್ತಿಯಲ್ಲಿರುವ ಪೇಪರ್ ಕಪ್‌ಗಳ ಬಗ್ಗೆ ಹೇಳುವುದಾದರೆ, ಅವುಗಳು ಸರಿಯಾಗಿ ರೀಸೈಕಲ್ ಮಾಡದೆ ಸುತ್ತಲಿನ ಪರಿಸರದಲ್ಲಿ ಎಲ್ಲೆಂದರಲ್ಲಿ ಬಿಸಾಡಿದರೆ, ಪ್ಲಾಸ್ಟಿಕ್ ಕಪ್‌ಗಳಿಂದ ಕಡಿಮೆ ಹಾನಿಯನ್ನೇನೂ ಇವು ಮಾಡುವುದಿಲ್ಲ ಎನ್ನುತ್ತದೆ ಸ್ವೀಡನ್‌ನಲ್ಲಿ ನಡೆಸಲಾದ ಈ ಅಧ್ಯಯನ. ಪ್ರಾಯೋಗಿಕವಾಗಿ ಪೇಪರ್ ಕಪ್‌ಗಳು ಮತ್ತು ಪ್ಲಾಸ್ಟಿಕ್ ಕಪ್‌ಗಳನ್ನು ಜೌಗು ನೆಲದ ಮೇಲೆ ಕೆಲವು ದಿನಗಳ ಕಾಲ ಇರಿಸಲಾಯಿತು. ಸೊಳ್ಳೆ ಸೇರಿದಂತೆ ಕ್ರಿಮಿ-ಕೀಟಗಳು ಅದರ ಮೇಲೆ ಮೊಟ್ಟೆ ಇಟ್ಟವು. ಆದರೆ ಎರಡೂ ಕಪ್‌ಗಳಿಂದ ಹೊರಸೂಸಿದ ರಾಸಾಯನಿಕಗಳು ಈ ಮೊಟ್ಟೆಗಳ ಮೇಲೆ ಸಮಾನ ಪ್ರಮಾಣದಲ್ಲಿ ಹಾನಿಕಾರಕ ಪರಿಣಾಮಗಳನ್ನು (Are eco-friendly products harmful?) ಬೀರಿದವು.
ವಿಷಯವೇನೆಂದರೆ
ಆಹಾರವನ್ನು ಪ್ಯಾಕ್ ಮಾಡಲು ಬಳಸುವ ಯಾವುದೇ ವಸ್ತುಗಳ ಮೇಲ್ಮೈಗೆ ತೆಳುವಾದ ಕೋಟಿಂಗ್ ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಪಾಲಿಲ್ಯಾಕ್ಟೈಡ್ (ಪಿಎಲ್‌ಎ) ಎಂಬ ಜೈವಿಕ ವಸ್ತುವಿನಿಂದ ಈ ಮೇಲಿನ ಹೊದಿಕೆಯನ್ನು ಮಾಡಲಾಗುತ್ತದೆ. ಈ ಪಿಎಲ್‌ಎ ಸಿದ್ಧವಾಗುವುದು ರಾಸಾಯನಿಕಗಳಿಂದ ಅಲ್ಲ, ಜೈವಿಕವಾದ ವಸ್ತುಗಳಿಂದ. ಅಂದರೆ ಜೋಳ, ಕಬ್ಬು ಮುಂತಾದ ನೈಸರ್ಗಿಕ ಪದಾರ್ಥಗಳಿಂದ. ಪೆಟ್ರೋಲಿಯಂ ಉತ್ಪನ್ನಗಳಿಗಿಂತ ತ್ವರಿತವಾಗಿ ಕೊಳೆತು ಮಣ್ಣಾಗುವ ಸಾಮರ್ಥ್ಯವಿದೆ ಈ ಪಿಎಲ್‌ಎಗಿದೆ. ಆದರೆ ಇದಕ್ಕೆ ಸೂಕ್ತವಾದ ವಾತಾವರಣ ಬೇಕು. ಹೇಗೆಂದರೆ ಹಾಗೆ ಬಿಸಾಡಿದರೆ, ಸರಿಯಾಗಿ ರೀಸೈಕಲ್ ಮಾಡದಿದ್ದರೆ ಕಂಟಕ ತಪ್ಪಿದ್ದಲ್ಲ. ನೇರವಾಗಿ ಮಣ್ಣಲ್ಲಿ ಅಥವಾ ನೀರಿನಲ್ಲಿ ಇವು ಬೆರೆತರೆ ಕೊಳೆತು ಗೊಬ್ಬರವಾಗುವುದಿಲ್ಲ. ಅವುಗಳನ್ನು ಕ್ರಮ ಪ್ರಕಾರವೇ ಮಣ್ಣಾಗಿಸಬೇಕು.
ಕೊಳವೆಗಳೇನು ಕಡಿಮೆಯಿಲ್ಲ!
ಇದು ಕಪ್‌ಗಳ ವಿಷಯದಲ್ಲಾಯಿತು. ಸ್ಟ್ರಾಗಳಿಗೆ ಇಂಥ ಸಮಸ್ಯೆಯೇನಿಲ್ಲ ಎಂದು ಭಾವಿಸಿದರೆ- ಸರಿ ಮತ್ತು ತಪ್ಪು! ಅಲ್ಲಿರುವ ಸಮಸ್ಯೆ ಇದಲ್ಲ, ನಿಜ. ಬೇರೆ ಸ್ವರೂಪದ್ದು. ಬೆಲ್ಜಿಯಂನಲ್ಲಿ ನಡೆಸಿದ ಅಧ್ಯಯನ ಇದರ ಮೇಲೆ ಬಹಳಷ್ಟು ಬೆಳಕು ಚೆಲ್ಲಿದ್ದು, ಬಳಸುವ ವಸ್ತುಗಳ ವಿಷಯದಲ್ಲಿ ದುಂದು ಮಾಡದೆ ಕೃಪಣರಾಗುವುದು ಎಷ್ಟು ಮಹತ್ವದ್ದು ಎಂಬುದನ್ನು ಹೇಳುತ್ತದೆ. ಸ್ಥಳೀಯವಾಗಿ ಲಭ್ಯವಿರುವ ೩೯ ಬ್ರಾಂಡ್‌ಗಳ ಸ್ಟ್ರಾಗಳನ್ನು ಈ ಅಧ್ಯಯನಕ್ಕೆ ತೆಗೆದುಕೊಳ್ಳಲಾಗಿತ್ತು. ಅವುಗಳಲ್ಲಿ ಪ್ಲಾಸ್ಟಿಕ್, ಪೇಪರ್, ಬಿದಿರು, ಗಾಜು ಮತ್ತು ಸ್ಟೀಲ್ ಸ್ಟ್ರಾಗಳಿದ್ದವು. ಇವುಗಳಲ್ಲಿ ಪಿಎಫ್‌ಎ ವಸ್ತುಗಳು (ಪಿಎಫ್‌ಎಎಸ್) ಎಷ್ಟು ಸ್ಟ್ರಾಗಳಲ್ಲಿದೆ ಎಂಬುದನ್ನು ಪರಿಶೀಲಿಸುವುದು ಮುಖ್ಯ ಉದ್ದೇಶವಾಗಿತ್ತು.
ಈ ಸ್ಟ್ರಾಗಳ ಪೈಕಿ ಸಮಾರು ಶೇ. 69ರಷ್ಟು ಬ್ರಾಂಡ್‌ಗಳಲ್ಲಿ 18 ವಿಧದ ಪಿಎಫ್‌ಎಎಸ್‌ಗಳು ಪತ್ತೆಯಾಗಿವೆ. ಪೇಪರ್ ಸ್ಟ್ರಾಗಳ ಶೇ. 90ರಷ್ಟು ಬ್ರಾಂಡ್‌ಗಳಲ್ಲಿ, ಬಿದಿರಿನ ಸ್ಟ್ರಾಗಳ ಶೇ. 80ರಷ್ಟು ಬ್ರಾಂಡ್‌ಗಳಲ್ಲಿ, ಪ್ಲಾಸ್ಟಿಕ್ ಸ್ಟ್ರಾಗಳ ಶೇ. 75ರಷ್ಟು ಬ್ರಾಂಡ್‌ಗಳಲ್ಲಿ, ಗಾಜಿನ ಸ್ಟ್ರಾಗಳ ಶೇ. 40ರಷ್ಟು ಬ್ರಾಂಡ್‌ಗಳಲ್ಲಿ ಪಿಎಫ್‌ಎಎಸ್ ಪತ್ತೆಯಾಗಿವೆ. ಆದರೆ ಸ್ಟೀಲ್ ಸ್ಟ್ರಾಗಳಲ್ಲಿ ಇಂಥ ಯಾವುದೇ ರಾಸಾಯನಿಕಗಳು ಪತ್ತೆಯಾಗಿಲ್ಲ ಎನ್ನುತ್ತದೆ ಅಧ್ಯಯನ.
ಏನಿದು ರಾಸಾಯನಿಕ?
ಏನಿದು ಪಿಎಫ್‌ಎಎಸ್ ಅಂದರೆ? ಇದನ್ನು ಯುರೋಪ್‌ನಲ್ಲಿ ಮಾತ್ರವೇ ಉಪಯೋಗಿಸುತ್ತಾರೆಯೇ? perfluoroalkyl substances ಎಂಬುದು ಇದರ ಪೂರ್ಣರೂಪ. ಇದನ್ನು ನಿತ್ಯ ಬಳಕೆಯ ಹಲವಾರು ವಸ್ತುಗಳಲ್ಲಿ, ಅಂದರೆ ಮಳೆಯನ್ನು ತಡೆಯುವಂಥ ಬಟ್ಟೆಗಳಿಂದ ಹಿಡಿದು, ನಾನ್‌ಸ್ಟಿಕ್ ಪ್ಯಾನ್‌ಗಳವರೆಗೆ ಬಹಳಷ್ಟು ವಸ್ತುಗಳಲ್ಲಿ ಇವು ಬಳಕೆಯಾಗುತ್ತವೆ. ಇವು ಕರಗಲು ಸಾವಿರಾರು ವರ್ಷಗಳು ಬೇಕಾಗುವುದರಿಂದ ʻಫಾರ್‌ಎವರ್ ಕೆಮಿಕಲ್ಸ್ʼ ಎಂದೇ ಕುಖ್ಯಾತಿ ಗಳಿಸಿವೆ. ಜಲ, ಮಣ್ಣು ಮುಂತಾದ ನಿಸರ್ಗದ ಮೂಲಗಳನ್ನೆಲ್ಲಾ ಕಲುಷಿತಗೊಳಿಸುತ್ತವೆ.
ಇವು, ಭಾರತವೂ ಸೇರಿದಂತೆ, ಎಲ್ಲಾ ದೇಶಗಳಲ್ಲೂ ಬಳಕೆಯಲ್ಲಿವೆ. ಇದ್ದರೇನೀಗ ಎಂದರೆ- ಕಡಿಮೆ ತೂಕದ ಮಗು ಹುಟ್ಟುವಂತೆ ಮಾಡುವ, ಥೈರಾಯ್ಡ್ ಹಾಗೂ ಕೊಲೆಸ್ಟ್ರಾಲ್ ಸಮಸ್ಯೆ ತರುವ, ಯಕೃತ್ತು ಹಾಳು ಮಾಡುವ, ಕಿಡ್ನಿಗೆ ಮಾರಕವಾಗುವ ಮತ್ತು ಲಸಿಕೆಗಳು ಕೆಲಸ ಮಾಡದಂತೆ ತಡೆಯುವಂಥ ಸಾಮರ್ಥ್ಯಗಳೆಲ್ಲಾ ಈ ರಾಸಾಯನಿಕಗಳಿಗಿವೆ. ಇನ್ನೂ ಏನು ಬೇಕು? ಹಾಗಾಗಿ ಸ್ಟ್ರಾ ಬಳಕೆಯನ್ನು ತೀರಾ ಅಗತ್ಯ ಸನ್ನಿವೇಶಗಳಲ್ಲಿ ಮಾಡುವುದು, ಪೇಪರ್ ಕಪ್‌ಗಳ ಬದಲು ಗಾಜು, ಪಿಂಗಾಣಿ ಅಥವಾ ಸ್ಟೀಲ್ ಕಪ್‌ಗಳನ್ನು ಬಳಸುವ…
ಇದನ್ನೂ ಓದಿ: Tips to Keep Joints Healthy: ಹೀಗೆ ಮಾಡಿ, ಕೀಲುಗಳ ಸ್ವಾಸ್ಥ್ಯ ಕಾಪಾಡಿ