Site icon Vistara News

Pista Benefits: ಪಿಸ್ತಾ ತಿಂದರೆ ಈ ಎಲ್ಲ ಪೋಷಕಾಂಶಗಳ ಕೊರತೆ ಆಗದು ಗೊತ್ತಾ?!

Pista Seeds Benefits

ಪಿಸ್ತಾ ಅಥವಾ ಪಿಸ್ತಾಶಿಯೋ (Pistachio) ಎಂಬ ರುಚಿಯಾದ ಒಣಬೀಜಗಳಲ್ಲಿ (dry fruits) ಭರ್ಜರಿ ಪೋಷಕಾಂಶಗಳಿವೆ ಗೊತ್ತಾ? ಇದರಲ್ಲಿರುವ ಆರೋಗ್ಯಕರ ಲಾಭಗಳನ್ನು (pista benefits) ನಾವು ಸರಿಯಾದ ಮಾದರಿಯಲ್ಲಿ ಬಳಸಿಕೊಂಡರೆ, ದೇಹಕ್ಕೆ ಹಲವು ಬಗೆಯ ಪೋಷಕಸತ್ವಗಳು (nutrients) ದೊರಕಿ, ಯಾವುದೇ ಬಗೆಯ ಕೊರತೆಯೂ ಆಗಲಾರದು. ಬನ್ನಿ, ಪಿಸ್ತಾ ತಿನ್ನುವುದರಿಂದ (pista health benefits) ದೇಹಕ್ಕೆ ಯಾವೆಲ್ಲ ಬಗೆಯ ಪೋಷಕಾಂಶಗಳು ಹೇರಳವಾಗಿ ದೊರೆತು ಯಾವೆಲ್ಲ ಪೋಷಕಾಂಶಗಳ ಕೊರತೆ ಎದುರಾಗದು ಎಂಬುದನ್ನು ನೋಡೋಣ.

1. ಕಬ್ಬಿಣಾಂಶ: ಪಿಸ್ತಾದಲ್ಲಿ ಕಬ್ಬಿಣಾಂಶವಿದೆ. ಕಬ್ಬಿಣಾಂಶವಲ್ಲದೆ ದೇಹಕ್ಕೆ ಬೇಕಾಗುವ ಖನಿಜ ಲವಣಗಳೂ ಇವೆ. ಇದರಿಂದಾಗಿ ಕಬ್ಬಿಣಾಂಶದ ಕೊರತೆಯಿಂದ ಬಳಲುವ, ಆಗಾಗ ಸುಸ್ತು, ನಿತ್ರಾಣ ಇತ್ಯಾದಿಗಳ ತೊಂದರೆಯಿರುವ ಮಂದಿ ಪಿಸ್ತಾವನ್ನು ತಿನ್ನಬಹುದು. ಆ ಮೂಲಕ ದೇಹಕ್ಕೆ ರಕ್ತಪೂರಣ ಸರಿಯಾಗಿ ಆಗಿ, ಕಬ್ಬಿಣಾಂಶ ಹೆಚ್ಚಾಗಿ ಅನೀಮಿಯಾದಂತಹ ತೊಂದರೆಗಳು ಹಾಗೂ ಒಳ್ಳೆಯ ತಾಜಾ ರಕ್ತ ಹೊಸದಾಗಿ ಉತ್ಪಾದನೆಯಾಗಲು ಸಹಾಯವಾಗುತ್ತದೆ.

2. ವಿಟಮಿನ್‌ ಬಿ6: ಪಿಸ್ತಾದಲ್ಲಿ ವಿಟಮಿನ್‌ ಬಿ6 ಹೇರಳವಾಗಿದೆ. ಹಾಗಾಗಿ ಮಿದುಳಿನ ಆರೋಗ್ಯಕ್ಕೆ ಪಿಸ್ತಾ ಬಹಳ ಒಳ್ಳೆಯದು. ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿಯೂ ಪಿಸ್ತಾದ್ದು ಎತ್ತಿದ ಕೈ. ಪಿಸ್ತಾವನ್ನು ತಿನ್ನುವ ಮೂಲಕ ಬಹುಮುಖ್ಯವಾದ ಈ ಆರೋಗ್ಯಕರ ಬೆಳವಣಿಗೆಗಳನ್ನು ಕಾಣಬಹುದು.

3. ಮೆಗ್ನೀಶಿಯಂ: ಪಿಸ್ತಾದಲ್ಲಿ ಮೆಗ್ನೀಶಿಯಂ ಖನಿಜವೂ ಹೇರಳವಾಗಿರುವುದರಿಂದ ಇದು ಸುಮಾರು ೩೦೦ ಬಗೆಯ ಬಯೋಕೆಮಿಕಲ್‌ ಪ್ರತಿಕ್ರಿಯೆಗಳಿಗೆ ದೇಹಕ್ಕೆ ಸಹಾಯ ಮಾಡುತ್ತದೆ. ಆದರೆ, ಮೆಗ್ನೀಶಿಐಂನ ಕೊರತೆಯಿದ್ದರೆ, ದೇಹದಲ್ಲಿ ನಿಶಃಕ್ತಿ, ತಲೆಸುತ್ತುವುದು, ದೇಹದಲ್ಲಿ ಹೃದಯಬಡಿತದಲ್ಲಿ ಏರುಪೇರು ಇತ್ಯಾದಿಗಳ ತೊಂದರೆಯನ್ನು ಎದುರಿಸಬೇಕಾಗಬಹುದು.

4. ಝಿಂಕ್:‌ ಯಾವುದೇ ಅನಾರೋಗ್ಯದಿಂದ ಮರಳುವಲ್ಲಿ ಝಿಂಕ್‌ ನಮಗೆ ಸಹಾಯ ಮಾಡುತ್ತದೆ. ಇನ್‌ಫೆಕ್ಷನ್‌ಗಳನ್ನು ಗುಣಪಡಿಸಲು, ದೇಹಕ್ಕೆ ಆಂಟಿ ಆಕ್ಸಿಡೆಂಟ್‌ ನೀಡಿ ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಝಿಂಕ್‌ ಮಹತ್ತರ ಪಾತ್ರವನ್ನು ನಿಭಾಯಿಸುತ್ತದೆ. ಹಾಗಾಗಿ ಇಂಥ ಝಿಂಕ್‌ ಪಿಸ್ತಾವನ್ನು ತಿನ್ನುವುದರ ಮೂಲಕವೂ ಪಡೆಯಬಹುದು.

5. ವಿಟಮಿನ್‌ ಇ: ಪಿಸ್ತಾದಲ್ಲಿ ಉತ್ತಮ ಪ್ರಮಾಣದಲ್ಲಿ ವಿಟಮಿನ್‌ ಇ ಕೂಡಾ ಇದ್ದು ಇದು ಪವರ್‌ಫುಲ್‌ ಆಂಟಿ ಆಖ್ಸಿಡೆಂಟ್‌ ಆಗಿ ಕಾರ್ಯ ನಿರ್ವಹಿಸುತ್ತದೆ. ಮುಖ್ಯವಾಗಿ ಫ್ರೀ ರ್ಯಾಡಿಕಲ್ಸ್‌ಗಳಿಂದ ಉಂಟಾಗುವ ಹಾನಿಯನ್ನು ಇದು ತಡೆಯುತ್ತದೆ. ಚರ್ಮದ ಆರೋಗ್ಯದಲ್ಲಿ ವಿಟಮಿನ್‌ ಇ ಕಾಣಿಕೆ ದೊಡ್ಡದು.

ಈ ಎಲ್ಲ ಪ್ರಯೋಜನಗಳಿವೆ ಎಂದುಕೊಂಡು ಪಿಸ್ತಾವನ್ನೇ ತಿನ್ನುತ್ತಾ ಇರುವುದು ಒಳ್ಳೆಯದಲ್ಲ. ಅತಿಯಾದರೆ ಅಮೃತವೂ ವಿಷ. ದಿನಕ್ಕೆ ಹೆಚ್ಚೆಂದರೆ 20ರಿಂದ 30 ಪಿಸ್ತಾ ತಿನ್ನಬಹುದು. ಅದಕ್ಕಿಂತ ಹೆಚ್ಚು ಒಳ್ಳೆಯದಲ್ಲ ಎಂಬುದನ್ನು ನೆನಪಿಡಿ.

ಇದನ್ನೂ ಓದಿ: Gooseberry Benefits: ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ ಎಷ್ಟೊಂದು ಪ್ರಯೋಜನ!

Exit mobile version