Site icon Vistara News

Ragi malt Benefits: ಮುಂಜಾನೆ ರಾಗಿ ಅಂಬಲಿ ಸೇವಿಸಿ, ಆರೋಗ್ಯದ ಚಿಂತೆ ಮರೆತುಬಿಡಿ!

ragi ambali

ʼರಾಗಿ ತಿಂದವ ಯೋಗಿʼ ಎನ್ನುವ ಮಾತು ನಮ್ಮ ಜನಪದದಲ್ಲಿ, ಜನರ ನಡುವೆ ಇದೆ. ಬೆಳಗ್ಗೆ ಎದ್ದು ಒಂದು ಬಟ್ಟಲು ರಾಗಿ ಗಂಜಿ (Ragi ganji, Ragi malt) ಕುಡಿದು ಹೊಲಕ್ಕೆ ತೆರಳಿದವನು ಸಂಜೆಯವರೆಗೂ ದುಡಿಯಬಲ್ಲ. ರಾಗಿ ನಮ್ಮ ಪುರಾತನ ಆಹಾರ ಧಾನ್ಯಗಳಲ್ಲಿ ಒಂದು. ಅತಿ ಹೆಚ್ಚು ಪೋಷಕಾಂಶಗಳಿಂದ (nutrients) ಕೂಡಿದೆ. ಇದನ್ನು ಸೇವಿಸಿದರೆ ನಮ್ಮ ದೇಹವು ಸದಾಕಾಲ ಶಕ್ತಿಯಿಂದ ಕೂಡಿರುತ್ತದೆ. ರಾಗಿಯಲ್ಲಿ ಮಾಡಬಹುದಾದ ಹಲವಾರು ರೆಸಿಪಿಗಳಲ್ಲಿ ರಾಗಿ ಗಂಜಿ ಅಥವಾ ಅಂಬಲಿಯೇ (Ragi ambali) ಗ್ರಾಮೀಣ ಪ್ರದೇಶದಲ್ಲಿ ಜನಪ್ರಿಯ. ರಾಗಿ ಗಂಜಿಯನ್ನು ಬೆಳಗಿನ ಸಮಯದಲ್ಲಿ ಸೇವಿಸುವುದರಿಂದ ನಿಮ್ಮ ದೇಹಕ್ಕೆ ಏನೆಲ್ಲ ಪೋಷಕಾಂಶ (Ragi malt benefits) ಸಿಗುತ್ತದೆ ಎಂಬುದು ನಿಮಗೆ ಗೊತ್ತಿರಲಿ. ಅನೇಕಾನೇಕ ಆರೋಗ್ಯ ಪ್ರಯೋಜನಗಳ (Ragi ganji health benefits) ಗಣಿಯಾದ ಇದನ್ನು ಇಂದಿನಿಂದಲೇ ಅಭ್ಯಾಸ ಮಾಡಿದರೆ ನಿಮಗೆ ಒಳ್ಳೆಯ ಆರೋಗ್ಯ ಖಾತ್ರಿ.

ಮೂಳೆಗಳಿಗೆ ಬಲ: ರಾಗಿ ಅಥವಾ ರಾಗಿ ಗಂಜಿಯಲ್ಲಿ ಮೆಕ್ಯುನೈನ್ ಅಮೈನೋ ಆಮ್ಲ ಹೆಚ್ಚಾಗಿ ಇರುತ್ತದೆ. ರಾಗಿಯಲ್ಲಿ ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಮೂಳೆಗಳಿಗೆ ಹೆಚ್ಚು ಬಲವನ್ನು ತಂದುಕೊಡುತ್ತದೆ. ಮುಖ್ಯವಾಗಿ ಬೆಳೆಯುವ ಮಕ್ಕಳಿಗೆ, ವೃದ್ಧರಿಗೆ ರಾಗಿ ತುಂಬಾ ಉಪಯೋಗ.

ಕ್ಯಾನ್ಸರ್‌ ಅನ್ನು ತಡೆಗಟ್ಟಲು: ರಾಗಿಯಲ್ಲಿ ಕ್ವೆರ್ಸೆಟಿನ್, ಸೆಲೆನಿಯಮ್ ಮತ್ತು ಪ್ಯಾಂಟೋಥೆನಿಕ್ ಆಮ್ಲದ ಅಂಶಗಳಿರುವುದರಿಂದ ಇದು ದೇಹದಲ್ಲಿ ಕ್ಯಾನ್ಸರ್ ಕೋಶಗಳನ್ನು ಉತ್ಪಾದಿಸುವುದನ್ನು ತಡೆಗಟ್ಟುತ್ತದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಜಾಸ್ತಿಯಾಗಿದೆ. ರಾಗಿಯಲ್ಲಿರುವ ಫೈಬರ್ ಅಂಶವು 30%ರಷ್ಟು ಸ್ತನ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ ಎಂದು ಹೇಳಲಾಗುತ್ತದೆ.

ರಕ್ತಹೀನತೆಯನ್ನು ತಡೆಯುತ್ತದೆ: ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ರಕ್ತಹೀನತೆಯು ಬಹಳ ಅಪಾಯಕಾರಿ ಹಾಗೂ ಮಾರಣಾಂತಿಕವೂ ಹೌದು. ರಾಗಿಯಲ್ಲಿ ಕೆಂಪು ರಕ್ತ ಕಣಗಳ ರಚನೆಗೆ ಬೇಕಾದ ಹಿಮೋಗ್ಲೋಬಿನ್ ಅಂಶವು ಜಾಸ್ತಿ ಇರುವುದರಿಂದ ರಾಗಿಯು ರಕ್ತಹೀನತೆಯನ್ನು ತಡೆಯುವಲ್ಲಿ ಸಹಕಾರಿಯಾಗಿದೆ.

ವಿಷ ಆಮ್ಲವನ್ನು ತೆಗೆದುಹಾಕುತ್ತದೆ: ನಮ್ಮ ದೇಹದಲ್ಲಿರುವ ವಿಷ ಆಮ್ಲವನ್ನು ತೆಗೆದುಹಾಕಲು ರಾಗಿ ಒಂದು ಉತ್ತಮವಾದ ಆಹಾರ ಎಂದೇ ಹೇಳಬಹುದು. ಇದರಲ್ಲಿರುವ ಕ್ವೆರ್ಸೆಟಿನ್ ಎಂಬ ಅಂಶವು ವಿಷ ಆಮ್ಲದ ವಿರುದ್ಧ ಹೋರಾಡಿ ಅದು ನಮ್ಮ ದೇಹದಲ್ಲಿ ಉತ್ಪತ್ತಿ ಆಗದಂತೆ ತಡೆಯುತ್ತದೆ. ಇದರಿಂದ ದೇಹ ಆರೋಗ್ಯಯುತವಾಗಿರುತ್ತದೆ.

ಹೃದಯದ ಆರೋಗ್ಯ: ಇದರಲ್ಲಿರುವ ಮೆಗ್ನೀಷಿಯಂ ಅಂಶವು ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುವುದಷ್ಟೇ ಅಲ್ಲ ಹೃದಯಾಘಾತದಿಂದ ಉಂಟಾಗುವ ಪಾರ್ಶ್ವವಾಯುಗಳ ಅಪಾಯವನ್ನು ತಗ್ಗಿಸುತ್ತದೆ.

ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ: ಕಡಿಮೆ ಫೈಬರ್‌ಯುಕ್ತ ಆಹಾರದ ಸೇವನೆಯಿಂದಾಗಿ ಅತಿಸಾರ, ಮಲಬದ್ಧತೆ, ಗ್ಯಾಸ್ ಮುಂತಾದ ಜೀರ್ಣಕಾರಿ ಸಮಸ್ಯೆಯಾಗುತ್ತದೆ. ರಾಗಿಯಲ್ಲಿರುವ ಫೈಬರ್ ಅಂಶವು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ.

ಮಾಡುವ ವಿಧಾನ ಹೇಗೆ?

ಇದನ್ನೂ ಓದಿ: Health Tips: ಕಿತ್ತಳೆ ಹಣ್ಣಿನ ಸಿಪ್ಪೆಯಿಂದಲೂ ಇಷ್ಟೆಲ್ಲಾ ಲಾಭವಿದೆ, ಮತ್ಯಾಕೆ ಎಸೀತೀರಾ!

Exit mobile version