Site icon Vistara News

Raisins Health benefits: ಒಣದ್ರಾಕ್ಷಿ ಘನರೂಪದ ಅಮೃತ, ಇದರ ಆರೋಗ್ಯ ಲಾಭ ಅಮಿತ!

Benefits of Raisins

ಒಣದ್ರಾಕ್ಷಿಯ (Raisins) ಆರೋಗ್ಯ ಪ್ರಯೋಜನಗಳು (Raisins Health benefits) ತುಂಬಾ ಮಂದಿಗೆ ಗೊತ್ತಿಲ್ಲ. ಹಲವರು ಒಣದ್ರಾಕ್ಷಿಯನ್ನು ಹಸಿವು ನೀಗಿಸಲು, ಬೇರೆ ಆಹಾರ ಲಭ್ಯವಿಲ್ಲದಿದ್ದಾಗ ಸೇವಿಸುತ್ತಾರೆ. ಇದು ಒಣದ್ರಾಕ್ಷಿಯನ್ನು ಸೇವಿಸುವ ಸರಿಯಾದ ಕ್ರಮವಲ್ಲ. ಹಾಗಿದ್ದರೆ ಒಣದ್ರಾಕ್ಷಿ ಸೇವನೆಯ ಸರಿಯಾದ ಕ್ರಮ ಹೇಗೆ? ಒಣದ್ರಾಕ್ಷಿಯಲ್ಲಿರುವ ಹೆಚ್ಚಿನ ಮಟ್ಟದ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ಸಿಗಬೇಕೆಂದರೆ, ಪ್ರತಿದಿನ ಮಲಗುವ ಮುನ್ನ ನಾಲ್ಕರಿಂದ ಐದು ಒಣದ್ರಾಕ್ಷಿಯನ್ನು ರಾತ್ರಿ ಅರ್ಧ ಕಪ್ ನೀರಿನಲ್ಲಿ ನೆನಸಿಟ್ಟು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಒಣದ್ರಾಕ್ಷಿಯಲ್ಲಿ ಕಬ್ಬಿನಾಂಶ, ಪೊಟಾಶಿಯಂ, ಕ್ಯಾಲ್ಸಿಯಂ, ಮೆಗ್ನಿಶಿಯಂ ಮತ್ತು ನಾರಿನಾಂಶ ಆಗಾಧ ಪ್ರಮಾಣದಲ್ಲಿದ್ದು, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗೇ ಇದರ ಇತರ ಪ್ರಯೋಜನಗಳನ್ನು (Raisins Health benefits) ನೋಡೋಣ ಬನ್ನಿ.

ತೂಕ ಇಳಿಸಿಕೊಳ್ಳಲು (weight losss) ಸಹಕಾರಿ

ನಿಮ್ಮ ದೇಹದ ಎಕ್ಸ್‌ಟ್ರಾ ಬೊಜ್ಜನ್ನು ಇಳಿಸಲು ನೀವು ನೆನೆಸಿರುವ ಒಣ ದ್ರಾಕ್ಷಿ ಸೇವಿಸಬೇಕು. ಇದರಲ್ಲಿ ನೈಸರ್ಗಿಕ ಸಕ್ಕರೆ ಅಂಶವಿದೆ ಮತ್ತು ಇದು ಊಟದ ಬಯಕೆ ಕಡಿಮೆ ಮಾಡಿ ಹೆಚ್ಚುವರಿ ಕ್ಯಾಲರಿ ಸೇರ್ಪಡೆ ಯಾಗದಂತೆ ತಡೆಯುವುದು. ಆದರೆ ಇದನ್ನು ಅತಿಯಾಗಿ ಸೇವಿಸಬೇಡಿ, ತಜ್ಞರು ಹೇಳಿದಷ್ಟೇ ಸೇವಿಸಿ. ಒಣ ದ್ರಾಕ್ಷಿ ತಿಂದರೆ ದೀರ್ಘ ಕಾಲದ ತನಕ ಹೊಟ್ಟೆಯು ತುಂಬಿದಂತೆ ಇರುವುದು.

ಖಿನ್ನತೆ ನಿವಾರಕ

ನೈಸರ್ಗಿಕ ಸಕ್ಕರೆ ಅಂಶವನ್ನು ಒಳಗೊಂಡಿರುವ ಒಣದ್ರಾಕ್ಷಿಯು ನಿಮ್ಮಲ್ಲಿ ಚುರುಕುತನ ಮತ್ತು ಶಕ್ತಿ ತುಂಬಿರುವಂತೆ ಮಾಡುವುದು. ಒಣದ್ರಾಕ್ಷಿಯಲ್ಲಿ ಉನ್ನತ ಮಟ್ಟದ ಕಬ್ಬಿನಾಂಶ, ಪೊಟಾಶಿಯಂ ಮತ್ತು ಕ್ಯಾಲ್ಸಿಯಂ ಇದ್ದು, ನಿಮ್ಮನ್ನು ದೈಹಿಕ ಹಾಗೂ ಮಾನಸಿಕವಾಗಿ ಫಿಟ್ ಆಗಿಡುತ್ತದೆ.

ಜೀರ್ಣಕ್ರಿಯೆ ಸರಾಗಗೊಳಿಸುವುದು

ಒಣ ದ್ರಾಕ್ಷಿಯಲ್ಲಿ ಹೆಚ್ಚಿನ ನಾರಿನಾಂಶವಿದೆ ಮತ್ತು ಇದು ನೈಸರ್ಗಿಕ ವಿರೇಚಕವಾಗಿ ಕೆಲಸ ಮಾಡುವುದು. ಮಲಬದ್ಧತೆ ಇದ್ದರೆ ನೆನೆಸಿದ ದ್ರಾಕ್ಷಿ ಸೇವಿಸಿ ಮತ್ತು ಕರುಳಿನ ಕ್ರಿಯೆಯನ್ನು ಇದು ಸರಾಗವಾಗಿಸುವುದು. ನೆನೆಸಿದ ದ್ರಾಕ್ಷಿ ಸೇವಿಸಿದರೆ ಜೀರ್ಣಕ್ರಿಯೆ ಸುಧಾರಣೆ ಆಗುವುದು.

ರಕ್ತದೊತ್ತಡ (blood presure) ನಿಯಂತ್ರಣ

ರಕ್ತದೊತ್ತಡ ಕಡಿಮೆ ಮಾಡಿಕೊಳ್ಳಬೇಕು ಎಂದು ನಿಮಗನಿಸುತ್ತಿದ್ದರೆ ನೀವು ನೆನೆಸಿರುವಂತಹ ಒಣದ್ರಾಕ್ಷಿ ಸೇವಿಸಿ. ಅಧಿಕ ಉಪ್ಪು ಸೇವಿಸಿರುವ ಪರಿಣಾಮವಾಗಿ ರಕ್ತದೊತ್ತಡವು ಹೆಚ್ಚಾಗುವುದು. ಇಂತಹ ವೇಳೆ ಒಣ ದ್ರಾಕ್ಷಿ ಪರಿಣಾಮಕಾರಿ. ಒಣ ದ್ರಾಕ್ಷಿಯಲ್ಲಿ ಪೊಟಾಶಿಯಂ ಅಂಶವಿದೆ. ಇದು ದೇಹದಲ್ಲಿ ಉಪ್ಪಿನ ಅಂಶವನ್ನು ಸಮತೋಲನದಲ್ಲಿ ಇಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುವುದು.

ಬಲಿಷ್ಠ ಮೂಳೆಗಳಿಗಾಗಿ

ಮೂಳೆಗಳ ನಿರ್ಮಾಣಕ್ಕೆ ಬೇಕಾಗಿರುವಂತಹ ಬೋರಾನ್ ಎನ್ನುವ ಅಂಶವು ಒಣ ದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಮೂಳೆಗಳಿಗೆ ಬಲ ನೀಡಲು ಬೇಕಾಗಿರುವ ಕ್ಯಾಲ್ಸಿಯಂ ಕೂಡ ಒಣದ್ರಾಕ್ಷಿಯಲ್ಲಿದೆ. ನೆನೆಸಿದ ಒಣದ್ರಾಕ್ಷಿ ತಿಂದರೆ ಈ ಪೋಷಕಾಂಶಗಳನ್ನು ದೇಹವು ಬೇಗನೆ ಹೀರಿಕೊಳ್ಳುವುದು ಮತ್ತು ಮೂಳೆಗಳ ಖನಿಜಾಂಶ ಸಾಂದ್ರತೆಯನ್ನು ಸುಧಾರಿಸುವುದು. ಅಸ್ಥಿರಂಧ್ರತೆ ಮತ್ತು ಇತರ ಕೆಲವು ಸಮಸ್ಯೆಗಳಿಂದ ಇದು ನಿಮ್ಮನ್ನು ದೂರವಿಡುವುದು.

ಬಾಯಿಯ ದುರ್ವಾಸನೆ ನೀಗಿಸಲು

ಬಾಯಿಯ ದುರ್ವಾಸನೆ ಜನರ ಮುಂದೆ ಮುಜುಗರ ಉಂಟು ಮಾಡುತ್ತಿದೆಯಾ? ಹಾಗಾದರೆ ನೀವು ಒಣದ್ರಾಕ್ಷಿ ಸೇವಿಸ ಬೇಕು. ಒಣದ್ರಾಕ್ಷಿಯಲ್ಲಿ ಇರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬಾಯಿಯ ಸ್ವಚ್ಛತೆ ಕಾಪಾಡಲು ನೆರವಾಗುವುದು ಮತ್ತು ಬಾಯಿಯ ದುರ್ವಾಸನೆ ತಡೆಯುವುದು. ರಾತ್ರಿ ವೇಳೆ ನೆನಸಲು ಇಟ್ಟ ಒಣ ದ್ರಾಕ್ಷಿಯ ನೀರನ್ನು ಕೂಡ ಕುಡಿಯಬಹುದು. ನೆನೆಸಿರುವ ವೇಳೆ ಇದರಲ್ಲಿ ಪೋಷಕಾಂಶಗಳು ಮತ್ತಷ್ಟು ಹೆಚ್ಚಾಗುವುದು.

ಯಕೃತ್ತಿನ ಆರೋಗ್ಯ

ದೇಹವನ್ನು ನಿರ್ವಿಷಗೊಳಿಸುವಲ್ಲಿ ಒಣದ್ರಾಕ್ಷಿ ನೆನೆಸಲು ಹಾಕಿದ ನೀರು ತುಂಬಾ ಪ್ರಮುಖ ಪಾತ್ರ ವಹಿಸುವುದು. ಇದು ಯಕೃತ್ ಮತ್ತು ಕರುಳನ್ನು ನಿರ್ವಿಷಗೊಳಿಸುವುದು. ಆಯುರ್ವೇದದ ಪ್ರಕಾರ ಇದು ಅತ್ಯುತ್ತಮವಾಗಿ ದೇಹವನ್ನು ನಿರ್ವಿಷಗೊಳಿಸುವ ಕೆಲಸ ಮಾಡುವುದು. ಒಣದ್ರಾಕ್ಷಿಯ ನೀರಿನಲ್ಲಿ ಇರುವ ಉನ್ನತ ಮಟ್ಟದ ಆಂಟಿಆಕ್ಸಿಡೆಂಟ್ ಮತ್ತು ಆಹಾರದ ನಾರಿನಾಂಶವು ಇದರಲ್ಲಿನ ನಿರ್ವಿಷಗೊಳಿಸುವ ಕಾರ್ಯಕ್ಕೆ ನೆರವಾಗುವುದು.

ಇದನ್ನೂ ಓದಿ: Benefits of Raisins: ಒಣದ್ರಾಕ್ಷಿಗಳಲ್ಲಿ ಯಾವುದು ಒಳ್ಳೆಯದು?

Exit mobile version