Benefits of Raisins Benefits of Raisins: ಒಣದ್ರಾಕ್ಷಿಗಳಲ್ಲಿ ಯಾವುದು ಒಳ್ಳೆಯದು? Vistara News
Connect with us

ಆರೋಗ್ಯ

Benefits of Raisins: ಒಣದ್ರಾಕ್ಷಿಗಳಲ್ಲಿ ಯಾವುದು ಒಳ್ಳೆಯದು?

ಹಲವು ರೀತಿಯಲ್ಲಿ ಒಣದ್ರಾಕ್ಷಿಗಳು ಬದುಕಿನ ರುಚಿಯನ್ನು ಹೆಚ್ಚಿಸಿವೆ. ಖರೀದಿಸಲು ಅಂಗಡಿಗೆ ಹೋದರೆ ಒಂದಕ್ಕಿಂತ ಹೆಚ್ಚು ಬಣ್ಣ-ರುಚಿಗಳ ಒಣದ್ರಾಕ್ಷಿ ಕಾಣಬಹುದು. (Benefits of Raisins) ಯಾವುದನ್ನು ಖರೀದಿಸಬೇಕು? ಇಲ್ಲಿದೆ ಮಾಹಿತಿ.

VISTARANEWS.COM


on

Benefits of Raisins
Koo

ದ್ರಾಕ್ಷಿ ತಿನ್ನುವ ಅಭ್ಯಾಸವೆ? ಅದರಲ್ಲೂ ಒಣ ದ್ರಾಕ್ಷಿ ಪ್ರಿಯರೇ? ಹಾಗಾದರೆ ಒಣ ದ್ರಾಕ್ಷಿಯಲ್ಲಿರುವ ನಮೂನೆಗಳು, ರುಚಿ ಮತ್ತು ಪೌಷ್ಟಿಕಾಂಶಗಳ ಬಗ್ಗೆ ತಿಳಿಯುವುದಕ್ಕೆ ಕುತೂಹಲವಿರುವುದು ಸಹಜ. ಹಠ ಮಾಡುವ ಮಕ್ಕಳಿಗೆ ಸಮಾಧಾನ ಮಾಡುವುದರಿಂದ ಹಿಡಿದು, ಸುಮ್ಮನೆ ಜಗಿಯುವುದಕ್ಕೆ, ದಾರಿ ಖರ್ಚಿಗೆ, ಮಲಬದ್ಧತೆ ನಿವಾರಣೆಗೆ, ಕಳ್ಳ ಅಥವಾ ಸುಳ್ಳು ಹಸಿವೆಗೆ, ಸಾಲಡ್‌ಗಳ ರುಚಿ ಹೆಚ್ಚಿಸಲು. ಸಿಹಿ ಖಾದ್ಯಗಳ ಒಗ್ಗರಣೆಗೆ… ಹೀಗೆ ಹಲವು ರೀತಿಯಲ್ಲಿ ಒಣದ್ರಾಕ್ಷಿಗಳು ಬದುಕಿನ ರುಚಿಯನ್ನು ಹೆಚ್ಚಿಸಿದೆ ಎಂದರೆ ಅತಿಶಯವಲ್ಲ. ಖರೀದಿಸಲು ಅಂಗಡಿಗೆ ಹೋದರೆ ಒಂದಕ್ಕಿಂತ ಹೆಚ್ಚು ಬಣ್ಣ-ರುಚಿಗಳ ಒಣದ್ರಾಕ್ಷಿ ಕಾಣಬಹುದು. ಯಾವುದನ್ನು ಖರೀದಿಸಬೇಕು? ಯಾವುದು ಆರೋಗ್ಯಕ್ಕೆ ಒಳ್ಳೆಯದು? ಯಾವುದರ ರುಚಿ ಹೆಚ್ಚು (Benefits of Raisins) ಎಂಬ ಗೊಂದಲಕ್ಕೆ ಬಿದ್ದರೆ ಅಚ್ಚರಿಯಿಲ್ಲ.

Benefits of Raisins

ಒಣದ್ರಾಕ್ಷಿಯ ಬಳಕೆ ಕಾಲ-ದೇಶಗಳಾದ್ಯಂತ ಹರಡಿಕೊಂಡಿದೆ. ಪೂರ್ವ-ಪಡುವಣ ದೇಶಗಳಲ್ಲೆಲ್ಲಾ ಇದರ ಬಳಕೆ ಸರ್ವವ್ಯಾಪಿ. ಹಸಿ ದ್ರಾಕ್ಷಿಯಲ್ಲಿ ಇರುವಂಥ ವ್ಯತ್ಯಾಸಗಳೇ ಒಣದ್ರಾಕ್ಷಿಯಲ್ಲಿಯೂ ಇವೆ. ಆಯಾ ಮಣ್ಣಿಯ ಗುಣ ಮತ್ತು ಹವಾಮಾನಕ್ಕೆ ಅನುಗುಣವಾಗಿ ತಳಿಗಳ ವ್ಯತ್ಯಾಸ ಸಹಜ ಎಂದಾದರೆ, ಆ ದ್ರಾಕ್ಷಿಗಳನ್ನು ಒಣಗಿಸಿದಾಗ ದೊರೆಯುವ ಒಣಹಣ್ಣುಗಳಲ್ಲೂ ವ್ಯತ್ಯಾಸಗಳಿವೆ. ಕೆಲವೊಮ್ಮೆ ಅವುಗಳನ್ನು ಸಂಸ್ಕರಿಸುವ ವಿಧಾನದಿಂದಲೂ ಆ ಬಣ್ಣ ಬರುತ್ತದೆ. ಕಪ್ಪು, ಹಸಿರು, ಕೆಂಪು ಮತ್ತು ಬಂಗಾರ ಬಣ್ಣದ ಒಣ ದ್ರಾಕ್ಷಿಗಳು ಸಾಮಾನ್ಯವಾಗಿ ಕಾಣಸಿಗುವಂಥವು. (Benefits of Raisins) ಏನಿವುಗಳಲ್ಲಿ ಇರುವಂಥ ವ್ಯತ್ಯಾಸ? ನೋಡೋಣ.

Benefits of Raisins

ಕಪ್ಪು ದ್ರಾಕ್ಷಿ

ಹೆಸರೇ ಸೂಚಿಸುವಂತೆ ಇದರ ಬಣ್ಣ ಕಡುಕಪ್ಪು. ನಾರಿನಂಶ ಹೇರಳವಾಗಿದ್ದು, ಕಬ್ಬಿಣ ಮತ್ತು ಪೊಟಾಶಿಯಂ ಸಹ ಸಾಕಷ್ಟಿದೆ ಇದರಲ್ಲಿ. ಜೊತೆಗೆ ಉತ್ಕರ್ಷಣ ನಿರೋಧಕಗಳ ದಾಸ್ತಾನೂ ಹೌದು. ಕಬ್ಬಿಣ ಸಾಕಷ್ಟು ಇರುವುದರಿಂದ ಕೂದಲು ಕಪ್ಪಾಗಿ ಮತ್ತು ಸೊಂಪಾಗಿ ಬೆಳೆಯಲು ನೆರವಾಗುತ್ತದೆ. ವಿಟಮಿನ್‌ ಸಿ ಮತ್ತು ಇ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ತ್ವಚೆಯನ್ನು ನುಣುಪು ಮತ್ತು ಕಾಂತಿಯುಕ್ತವಾಗಿಸುತ್ತದೆ.

ಇದರಲ್ಲಿ ನಾರಿನ ದೊಡ್ಡ ದಾಸ್ತಾನೇ ಇರುವುದರಿಂದ ಮಲಬದ್ಧತೆಗೆ ಒಳ್ಳೆಯ ಔಷಧಿ. ನೈಸರ್ಗಿಕ ವಿರೇಚಕವಾಗಿರುವ ಇದನ್ನು ಮಕ್ಕಳಿಗೂ ನೀಡಬಹುದು. ಹೊಟ್ಟೆ ಸ್ವಚ್ಛ ಮಾಡಿ, ಜೀರ್ಣಾಂಗಗಳ ಕ್ಷಮತೆಯನ್ನು ಹೆಚ್ಚಿಸುವ ರುಚಿಯಾದ ಉಪಾಯವಿದು.

Benefits of Raisins

ಕೆಂಪು ದ್ರಾಕ್ಷಿ

ಕಪ್ಪು ದ್ರಾಕ್ಷಿಗೆ ಹೋಲಿಸಿದಲ್ಲಿ ಇದು ಸ್ವಲ್ಪ ಹೆಚ್ಚು ರಸಭರಿತವಾಗಿರುತ್ತದೆ. ಹಾಗಾಗಿ ರುಚಿಯೂ ಹೆಚ್ಚು. ದ್ರಾಕ್ಷಿಯ ಬಣ್ಣ ನಿರ್ಧಾರವಾಗುವುದು ಇದರಲ್ಲಿರುವ ಪೋಷಕಾಂಶಗಳ ಆಧಾರದ ಮೇಲೆ. ಉತ್ತಮ ಪ್ರಮಾಣದಲ್ಲಿ ಉತ್ಕರ್ಷಣ ನಿರೋಧಕಗಳಿರುವ ಕೆಂಪು ದ್ರಾಕ್ಷಿಗಳು ವಿಟಮಿನ್‌ ಕೆ ಮತ್ತು ಸಿ ಗಳ ಖನಿ. ಇದರಲ್ಲೂ ನಾರಿನಂಶ ಬಹಳವಾಗಿರುವುದರಿಂದ ಮಧುಮೇಹ ನಿಯಂತ್ರಣಕ್ಕೆ ನೆರವಾಗಬಹುದು. ಆದರೆ ತಿನ್ನುವ ಪ್ರಮಾಣ ಮಿತಿಯಲ್ಲಿ ಇರುವುದು ಅಗ್ಯ. ಇದರಲ್ಲಿರುವ ಸತ್ವಗಳು ಹಲ್ಲುಗಳನ್ನು ಸದೃಢವಾಗಿಡಲು ಮತ್ತು ಹುಳುಕುಗಳಿಂದ ದೂರ ಇರಿಸಲು ಉಪಯುಕ್ತ. ವಿಟಮಿನ್‌ ಎ ಸಹ ಸಾಕಷ್ಟು ಇರುವುದರಿಂದ ಕಣ್ಣುಗಳ ಆರೋಗ್ಯ ರಕ್ಷಣೆಗೆ ಸಹಾಯ ಮಾಡುತ್ತವೆ.

Benefits of Raisins

ಹಸಿರು ದ್ರಾಕ್ಷಿ

ಹಸಿರು ದ್ರಾಕ್ಷಿಯಿಂದಲೇ ಮಾಡಲ್ಪಟ್ಟ ಇವು ಆಕಾರದಲ್ಲಿ ಸಾಮಾನ್ಯವಾಗಿ ಉದ್ದ ಮತ್ತು ಸಪೂರವಾಗಿರುತ್ತವೆ. ಅರಬ್‌ ದೇಶಗಳು ಮತ್ತು ಏಷ್ಯಾ ಖಂಡಗಳಲ್ಲಿ ಇವುಗಳ ಬಳಕೆ ಹೆಚ್ಚು. ಕಬ್ಬಿಣ ಸೇರಿದಂತೆ ಹಲವು ಖನಿಜಗಳು, ಜೀವಸತ್ವಗಳು ಮತ್ತು ನಾರಿನಿಂದ ಸಮೃದ್ಧವಾಗಿರುತ್ತವೆ ಈ ನಮೂನೆಯ ದ್ರಾಕ್ಷಿಗಳು. ಇದರಲ್ಲಿರುವ ಕೆಲವು ನೈಸರ್ಗಿಕ ಸತ್ವಗಳು ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ಮತ್ತು ಮಧುಮೇಹ ದೂರ ಇರಿಸಲು ನೆರವು ನೀಡುತ್ತವೆ.

ಕಬ್ಬಿಣದ ಅಂಶ ಬಹಳಷ್ಟಿರುವುದರಿಂದ ಅನೀಮಿಯ ಅಥವಾ ರಕ್ತಹೀನತೆ ನಿವಾರಣೆಗೆ ಉಪಯುಕ್ತವಿದು. ಆಹಾರ ಪಚನಕ್ಕೆ ನೆರವಾಗಿ ಜೀರ್ಣಾಂಗಗಳ ಕೆಲಸವನ್ನು ಹಗುವ ಮಾಡುವ ಗುಣವೂ ಇದಕ್ಕಿದೆ. ಜೊತೆಗೆ ಮೂಳೆಗಳನ್ನೂ ಸದೃಢವಾಗಿ ಇರಿಸುತ್ತದೆ.

Benefits of Raisins

ಹೊಂಬಣ್ಣದ ದ್ರಾಕ್ಷಿ

ಇದರ ತಯಾರಿ ನಡೆಯುವುದೂ ಹಸಿರು ದ್ರಾಕ್ಷಿಯಿಂದಲೇ. ಆದರೆ ಇದಕ್ಕೆ ಹೊಂಬಣ್ಣ ಬರುವುದಕ್ಕೆ ಕಾರಣ, ಗಂಧಕದ ಡೈಆಕೈಡ್‌ನಿಂದ ಇದನ್ನು ಸಂಸ್ಕರಿಸಿರುವುದು. ಇದೊಂದನ್ನು ಹೊರತು ಪಡಿಸಿದರೆ, ಉಳಿದೆಲ್ಲಾ ದ್ರಾಕ್ಷಿಗಳಂತೆಯೇ ಇದರ ಸದ್ಗುಣಗಳಿವೆ. ನೈಸರ್ಗಿಕ ಸಕ್ಕರೆಯಂಶ ಇದರಲ್ಲಿ ಹೆಚ್ಚಿರುವುದರಿಂದ, ಸುಸ್ತು, ಆಯಾಸ ಪರಿಹಾರಕ್ಕೆ ಇದು ಉತ್ತಮ ಆಯ್ಕೆ. ನಾರಿನಂಶವೂ ಭರಪೂರವಿದ್ದು ಮಲಬದ್ಧತೆ ನಿವಾರಣೆಗೆ ಒಳ್ಳೆಯ ಮದ್ದು ಎನಿಸಿದೆ. ಇದರದಲ್ಲಿರುವ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂನಂಥ ಖನಿಜಗಳು ಮೂಳೆಗಳ ಆರೋಗ್ಯಕ್ಕೆ ಉಪಯುಕ್ತ.

ಇದನ್ನೂ ಓದಿ: Health Tips: ಮೊಟ್ಟೆ ತಿನ್ನದವರು ಪ್ರೊಟೀನ್‌ಗಾಗಿ ಈ ಸಸ್ಯಾಹಾರಗಳನ್ನು ಸೇವಿಸಬಹುದು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Baking soda side effects: ಅಡುಗೆಯಲ್ಲಿ ಸೋಡಾ ಬಳಸಿದರೆ ಉಂಟಾಗುವ ಸೈಡ್ ಎಫೆಕ್ಟ್ ಏನೇನು?

ಯಾವತ್ತೋ ಅಪರೂಪಕ್ಕೆ ಉಪಯೋಗಿಸಿದರೆ ಸೋಡಾದಿಂದ ಹಾನಿಯಿಲ್ಲ. ಆದರೆ ಸದಾ ಕಾಲ ಇದನ್ನೇ ನೆಚ್ಚಿಕೊಂಡಿದ್ದರೆ (Baking soda side effects) ಆರೋಗ್ಯ ಹದಗೆಟ್ಟರೆ ಅಚ್ಚರಿಯಿಲ್ಲ.

VISTARANEWS.COM


on

Edited by

Baking soda
Koo

ಆಧುನಿಕ ಅಡುಗೆಯ ವಿಧಾನಗಳು (Baking soda side effects) ಬದಲಾಗಿವೆ. ಅಜ್ಜಿಯ ತಲೆಮಾರಿನ ಹಾಗೆ ಅತ್ಯಂತ ತಾಳ್ಮೆಯಿಂದ ಎಲ್ಲವನ್ನೂ ನಿರ್ವಹಿಸುವ ವ್ಯವಧಾನ ಕಡಿಮೆಯಾಗಿದೆ. ಉದಾ, ನಾಳೆ ಬೆಳಗಿನ ತಿಂಡಿಗೆ ದೋಸೆ ಅಥವಾ ಇಡ್ಲಿ ಮಾಡಬೇಕೆಂದು ರಾತ್ರಿ ಮಲಗುವಾಗ ನೆನಪಾದರೆ ಮಾಡುವುದು ಹೇಗೆ? ಇಂದಿನ ಅಡುಗೆ ಮನೆಗಳಲ್ಲಿ ಹಾಗೂ ಬೆಳಗಿನ ಹೊತ್ತಿಗೆ ದೋಸೆ ಸಿದ್ಧವಾಗುತ್ತದೆ. ಅಕ್ಕಿ-ಬೇಳೆಗಳು ಇಷ್ಟು ಹೊತ್ತು ನೆನೆಯಬೇಕು, ರುಬ್ಬಿದ ಧಾನ್ಯಗಳ ಹಿಟ್ಟು ಇದಿಷ್ಟು ಹೊತ್ತು ಹುದುಗಬೇಕು ಎಂಬಂಥ ನಿಯಮಗಳನ್ನು ಕೆಲವೊಮ್ಮೆ ಗಾಳಿಗೆ ತೂರುತ್ತೇವೆ. ಹಲವು ಶಾರ್ಟ್‌ಕಟ್‌ಗಳನ್ನು ಅರಸುತ್ತೇವೆ, ಏನಕ್ಕೇನೋ ಬೆರೆಸುತ್ತೇವೆ.

ಚಿಟಿಕೆ ಸೋಡಾ ಬೇಕೆ?

ಯೂಟ್ಯೂಬ್‌ನ ಯಾವುದೋ ಚಾನೆಲ್‌ನಲ್ಲಿ ಮೃದುವಾದ ತಟ್ಟೆ ಇಡ್ಲಿ ಮಾಡುವುದಕ್ಕೆ ಚಿಟಿಕೆ ಸೋಡಾ ಬೆರೆಸಿ ಎನ್ನುವುದು ನಮಗೆ ಅನುಸರಣೀಯ ಎನಿಸಿಬಿಡುತ್ತದೆ. ಬಹಳಷ್ಟು ಬೇಕಿಂಗ್‌ಗಳಿಗೆ ಸೋಡಾ ಎಂತಿದ್ದರೂ ಅಗತ್ಯವಲ್ಲವೇ, ಇಡ್ಲಿ-ದೋಸೆ ಹಿಟ್ಟುಗಳಿಗೂ ಬೆರೆಸಿದರಾಯಿತು ಎನಿಸಿಬಿಡುತ್ತದೆ. ʻನಾವೇನು ಸೋಡಾ ಹಾಕುವುದಿಲ್ಲ. ಇನೊ (Eno) ಮಾತ್ರ ಬಳಸೋದುʼ ಎಂಬ ಸಮಜಾಯಿಶಿ ಕೊಡುವವರೆಷ್ಟು ಮಂದಿ ಬೇಕು? ಆಂಟಾಸಿಡ್‌ನಂತೆ ಬಳಕೆಯಾಗುವ ಸ್ಯಾಶೆ ಇನೊ. ಬೇಕಿಂಗ್‌ ಸೋಡಾ, ಇನೊ ಇಂಥವುಗಳು ಹಿಟ್ಟನ್ನು ತ್ವರಿತವಾಗಿ ಹುದುಗು ಬರುವಂತೆ ಸುಲಭದಲ್ಲಿ ಮಾಡುತ್ತವೆ. ಅವಸರಕ್ಕೆ ಹಿಟ್ಟು ಹುದುಗು ಬರಿಸುವ ಈ ವಸ್ತುಗಳು ಎಷ್ಟೋ ಜನರಿಗೆ ಮೆಚ್ಚು ಎನಿಸಿವೆ. ಇಷ್ಟೊಂದು ಪೀಠಿಕೆಯ ನಂತರವೂ ವಿಷಯ ಹೇಳದಿದ್ದರೆ ಹೇಗೆ? (Health tips) ಸೋಡಾ ಬಳಕೆ ಆರೋಗ್ಯಕ್ಕೆ ಹಿತವೇ ಎಂಬುದು ಪ್ರಶ್ನೆ.

ಇದನ್ನೂ ಓದಿ: Saffron Health Benefits: ಕೇಸರಿ, ಆರೋಗ್ಯಕ್ಕೆ ಇದೇ ಸರಿ! ಮರೆವಿನ ಕಾಯಿಲೆಗೂ ಇದರಲ್ಲಿ ಮದ್ದಿದೆ!

Baking soda

ಆಹಾರ ತಜ್ಞರೇನು ಹೇಳುತ್ತಾರೆ?

ಯಾವತ್ತೋ ವರ್ಷಕ್ಕೊಂದೆರಡು ಬಾರಿ ಉಪಯೋಗಿಸಿದರೆ ಈ ವಸ್ತುಗಳಿಂದ ಹಾನಿಯಿಲ್ಲ. ಆದರೆ ಸದಾ ಕಾಲ ಇವುಗಳನ್ನೇ ನೆಚ್ಚಿಕೊಂಡಿದ್ದರೆ ಆರೋಗ್ಯ ಹದಗೆಟ್ಟರೆ ಅಚ್ಚರಿಯಿಲ್ಲ. ಸೋಡಾ ಅಥವಾ ಸೋಡಿಯಂ ಬೈಕಾರ್ಬೊನೇಟ್‌ಗೆ ಇರುವ ಸಹಜ ಗುಣವೆಂದರೆ ಕ್ಷಾರ ಅಥವಾ ಆಲ್ಕಲೈನ್. ಇದನ್ನು ಅತಿಯಾಗಿ ದೇಹಕ್ಕೆ ಸೇರಿಸಿದರೆ ರಕ್ತ ಪಿಎಚ್‌ ವ್ಯತ್ಯಾಸವಾಗಬಹುದು. ರಕ್ತದ ಪಿಎಚ್‌ ಸಾಮಾನ್ಯವಾಗಿ ಸೂಕ್ಷ್ಮ ಪ್ರಕ್ರಿಯೆಗಳಿಂದ ಸಮತೋಲನಕ್ಕೆ ಒಳಪಡುತ್ತದೆ. ಒಂದೊಮ್ಮೆ ಈ ಸಮತೋಲನ ವ್ಯತ್ಯಾಸವಾದರೆ ಅನಾರೋಗ್ಯ ನಿಶ್ಚಿತ. ದೇಹದ ಚಯಾಪಚಯದ ಮೇಲೆ ತೀವ್ರತರ ಪರಿಣಾಮ ಇದರಿಂದ ಕಾಣಿಸಿಕೊಳ್ಳಬಹುದು. ಈ ಹಂತದಲ್ಲಿ ಮೂತ್ರಪಿಂಡಗಳ ಮೇಲಿನ ಒತ್ತಡ ಹೆಚ್ಚುವುದು ಸಾಮಾನ್ಯ.

ಮೂತ್ರಪಿಂಡಕ್ಕೆ ತೊಂದರೆ

ಹಾಗಾಗಿಯೇ ಸೋಡಾ ಅಥವಾ ಸೋಡಿಯಂ ಬೈಕಾರ್ಬೊನೇಟ್‌ ಬಳಕೆ ಅತಿಯಾದರೆ, ಅದರ ದೂರಗಾಮಿ ಪರಿಣಾಮವಾಗಿ ಮೂತ್ರಪಿಂಡಗಳು ಸಂಕಷ್ಟಕ್ಕೆ ಒಳಗಾಗುತ್ತವೆ. ಇನೊದಲ್ಲಿರುವುದು ಶೇ. 60ರಷ್ಟು ಸೋಡಿಯಂ. ಈ ವಸ್ತುಗಳನ್ನು ಎಂದಾದರೊಮ್ಮೆ ಉಪಯೋಗಿಸಬಹುದೇ ಹೊರತು ನಿತ್ಯದ ಅಡುಗೆಯಲ್ಲಿ ಇವುಗಳನ್ನು ಉಪ್ಪು, ಸಕ್ಕರೆಯಂತೆ ಬಳಸುವ ಹಾಗಿಲ್ಲ. (Health tips) ಸೋಡಾಗಿಂತಲೂ ಇನೊ ಕಡಿಮೆ ತೀವ್ರತೆಯದ್ದು ಹೌದಾದರೂ, ಇಡ್ಲಿ, ದೋಕ್ಲಾ ಮುಂತಾದವುಗಳ ತಯಾರಿಕೆಯಲ್ಲಿ ಇದನ್ನು ಪದೇಪದೆ ಬಳಸಿದರೆ ರಕ್ತದೊತ್ತಡ ಹೆಚ್ಚುವುದು ಖಂಡಿತ ಎನ್ನುತ್ತಾರೆ ಆಹಾರ ತಜ್ಞರು. ಇದಕ್ಕೆ ಆಂಟಾಸಿಡ್‌ನಂತೆ ಬಳಸುವಾಗಲೂ 5 ಗ್ರಾಂ ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವುದು ಸಲ್ಲದು. ಅದರಲ್ಲೂ ರಕ್ತದೊತ್ತಡ, ಮೂತ್ರಪಿಂಡ, ಯಕೃತ್‌ ಮತ್ತು ಹೃದಯದ ಆರೋಗ್ಯಗಳ ಸಮಸ್ಯೆ ಇರುವವರು ಇಂಥ ವಸ್ತುಗಳನ್ನು ಆದಷ್ಟೂ ಬಳಸದೇ ಇರುವುದೇ ಕ್ಷೇಮ. ಹೆಚ್ಚಿನ ಸೋಡಿಯಂ ದೇಹಕ್ಕೆ ಹೊರೆಯೇ ಅಗುತ್ತದೆ ಹೊರತು ಮತ್ತೇನಿಲ್ಲ.

Baking soda

ಇನ್ನಷ್ಟು ಸಮಸ್ಯೆಗಳು

ಯಾವುದೇ ಅಂಟಾಸಿಡ್‌ಗಳು ದೇಹದ ಪ್ರತಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರಬಹುದು. ಇದರಿಂದ ಸೋಂಕುಗಳು ಹೆಚ್ಚುವ ಸಾಧ್ಯತೆಯಿದೆ. ಹಾಗಾಗಿ ಹೆಚ್ಚಾಗುವ ಆಸಿಡಿಟಿ ನಿಯಂತ್ರಣಕ್ಕೆ ಆಂಟಾಸಿಡ್‌ ಮೊರೆ ಹೋಗುವ ಬದಲು, ಜೀವನಶೈಲಿಯ ಬದಲಾವಣೆಯಿಂದ ಈ ಸಮಸ್ಯೆಯನ್ನು ಹತೋಟಿಗೆ ತರುವುದಕ್ಕೆ ಯತ್ನಿಸುವುದು ಕ್ಷೇಮ. ಸೋಡಾದಲ್ಲಿ ಹೇಳುವಂಥ ಯಾವುದೇ ಪೋಷಕಾಂಶ ಇಲ್ಲ. ಇದರಲ್ಲಿರುವ ಫಾಸ್ಫಾರಿಕ್‌ ಆಮ್ಲವು ಹೊಟ್ಟೆಯಲ್ಲಿರುವ ಜೀರ್ಣ ರಸದೊಂದಿಗೆ ಬೆರೆತು, ಪಚನವನ್ನು ಇನ್ನಷ್ಟು ನಿಧಾನಗೊಳಿಸುತ್ತದೆ; ಸತ್ವಗಳನ್ನು ಹೀರಿಕೊಳ್ಳುವ ದೇಹದ ಕೆಲಸಕ್ಕೆ ಅಡ್ಡಿ ಮಾಡುತ್ತದೆ. ಇದರಿಂದ ಆರೋಗ್ಯ ಹಾಳು ಹೊರತಾಗಿ ಮತ್ತೇನಿಲ್ಲ.

ಯಕೃತ್ತಿಗೂ ಅಪಾಯ

ಸೋಡಾ ಬಳಕೆ ಹೆಚ್ಚಾದರೆ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ಇನ್ಸುಲಿನ್‌ ಉತ್ಪಾದನೆ ಹೆಚ್ಚಾಗಿ, ರಕ್ತದಲ್ಲಿ ಸಕ್ಕರೆ ಅಂಶ ಏರಿ, ಆಹಾರದಲ್ಲಿರುವ ಸಕ್ಕರೆಯ ಅಂಶವು ಕೊಬ್ಬಾಗಿ ಪರಿವರ್ತನೆ ಹೊಂದುತ್ತದೆ. ಮಾತ್ರವಲ್ಲ, ಸರಿಯಾದ ಪ್ರಮಾಣದಲ್ಲಿ ಆಹಾರದಲ್ಲಿ ಕ್ಯಾಲ್ಶಿಯಂ ಇದ್ದರೂ ಅದನ್ನು ಹೀರಿಕೊಳ್ಳಲು ಮೂಳೆಗಳಿಗೆ ಸೋಡಿಯಂ ತಡೆಯೊಡ್ಡುತ್ತದೆ. ಆಸ್ಟಿಯೊಪೊರೊಸಿಸ್‌ನಂಥ ಮಾರಕ ಕಾಯಿಲೆಗಳು ಅಮರಿಕೊಳ್ಳುವುದಕ್ಕೆ ಇಷ್ಟು ಸಾಲದೇ?
ಹಾಗಾಗಿ ಹಿಟ್ಟು ಹುದುಗು ಬರಬೇಕೆಂದರೆ, ಎಂಟು ತಾಸುಗಳ ಅಥವಾ ರಾತ್ರಿ-ಬೆಳಗಿನ ಸಮಯ ನೀಡುವುದು ಒಳಿತು. ಕೆಲವೊಮ್ಮೆ ಬೇಕಿಂಗ್‌ ಮಾಡುವಾಗ ಮೊಟ್ಟೆ, ಮೊಸರು ಅಥವಾ ಅಗಸೆ ಬೀಜ ಮುಂತಾದ ಇನ್ನಿತರ ಮಾರ್ಗಗಳ ಬಳಕೆ ಸಾಧ್ಯವೇ ಎಂಬುದನ್ನು ಪರಿಶೀಲಿಸುವುದು ಲೇಸಲ್ಲವೇ?

Continue Reading

ಆರೋಗ್ಯ

Dengue Fever foods: ಡೆಂಗ್ಯು ಜ್ವರ ಬಂದಾಗ ಯಾವೆಲ್ಲ ಆಹಾರ ಸೇವನೆ ಬಹಳ ಮುಖ್ಯ ಗೊತ್ತೇ?

ಡೆಂಗ್ಯು ಜ್ವರ ಬಂದಾಗ ಯಾವ ಆಹಾರವನ್ನು ತೆಗೆದುಕೊಂಡರೆ ಒಳ್ಳೆಯದು, ಹಾಗೂ ಯಾವುದರ ಸೇವನೆ ಒಳ್ಳೆಯದಲ್ಲ ಎಂಬ ವಿಚಾರಗಳನ್ನು ತಿಳಿದಿರುವುದೂ ಬಹಳ ಮುಖ್ಯ. ಯಾವೆಲ್ಲ ಆಹಾರ ಡೆಂಗ್ಯುವಿನ ಸಮಯದಲ್ಲಿ ನಾವು ಸೇವಿಸಬೇಕು (Dengue Fever foods) ಎಂಬುದನ್ನು ನೋಡೋಣ.

VISTARANEWS.COM


on

Edited by

Dengue Fever foods
Koo

ಡೆಂಗ್ಯು ಎಂಬ ಜ್ವರ (Dengue Fever) ಆಗಾಗ ಎಲ್ಲೆಡೆ ಸದ್ದು ಮಾಡುತ್ತಲೇ ಇರುತ್ತದೆ. ಸೊಳ್ಳೆಯಿಂದ (Mosquito bite) ಬರುವ ಈ ಜ್ವರವೆಂದರೆ, ಹೆಚ್ಚಿದ ಉಷ್ಣಾಂಶ, ಮೈಮೇಲೆ, ಕೆಂಪನೆಯ ಸಣ್ಣ ಗುಳ್ಳೆಗಳೇಳುವುದು, ತಲೆನೋವು, ಮೈಕೈ ನೋವು ಇತ್ಯಾದಿ ಇತ್ಯಾದಿ ಲಕ್ಷಣಗಳೊಂದಿಗೆ ಬರುತ್ತದೆ. ಈ ಜ್ವರ ಎಲ್ಲ ಜ್ವರದಂತಲ್ಲ. ಅಪಾಯವಿಲ್ಲ ಎಂದುಕೊಂಡರೂ ಕೆಲವೊಮ್ಮೆ ಹಠಾತ್ತನೆ ಅಪಾಯಕ್ಕೆ ದೂಡುತ್ತದೆ. ಇಂತಹ ಸಂದರ್ಭ ನಾವು ಸೇವಿಸುವ ಆಹಾರದ ಬಗೆಗಿನ ಕಾಳಜಿ ಅತ್ಯಂತ ಅವಶ್ಯಕ. ಇದು ಬಂದಾಗ ಯಾವ ಆಹಾರವನ್ನು ತೆಗೆದುಕೊಂಡರೆ ಒಳ್ಳೆಯದು, ಹಾಗೂ ಯಾವುದರ ಸೇವನೆ ಒಳ್ಳೆಯದಲ್ಲ ಎಂಬ ವಿಚಾರಗಳನ್ನು ತಿಳಿದಿರುವುದೂ ಬಹಳ ಮುಖ್ಯ. ಹಾಗಾಗಿ, ಬನ್ನಿ, ಯಾವೆಲ್ಲ ಆಹಾರ ಡೆಂಗ್ಯುವಿನ ಸಮಯದಲ್ಲಿ ನಾವು ಸೇವಿಸಬೇಕು (Dengue Fever foods) ಎಂಬುದನ್ನು ನೋಡೋಣ.

1. ನೀರು: ನೀರು ಕುಡಿಯುವುದು ಅತ್ಯಂತ ಒಳ್ಳೆಯದು. ಡೆಂಗ್ಯು ಬಂದಾಗ ಸಾಧ್ಯವಾದಷ್ಟು ನೀರು ಕುಡಿಯುತ್ತಿದ್ದರೆ, ನಿರ್ಜಲೀಕರಣ ಇತ್ಯಾದಿ ಸಮಸ್ಯೆಗಳು ಬಾರದು. ಇದರಿಂದ ಜ್ವರದ ಉಷ್ಣಾಂಶವೂ ಕೂಡಾ ಗರಿಷ್ಠ ಮಟ್ಟಕ್ಕೇರುಬುದು ತಪ್ಪುತ್ತದೆ. ದೇಹದಲ್ಲಿ ನೀರಿನಂಶದ ಸಮತೋಲನವೂ ಕಾಯ್ದುಕೊಳ್ಳುತ್ತದೆ.

2. ಎಳನೀರು: ಎಳನೀರಿನಲ್ಲಿ ಸಾಕಷ್ಟು ಪ್ರಮಾಣದ ಎಲೆಕ್ಟ್ರೋಲೈಟ್‌ಗಳು ನೈಸರ್ಗಿಕವಾಗಿ ಸಮೃದ್ಧವಾಗಿರುವುದರಿಂದ ಜ್ವರದ ಸಂದರ್ಭ ದೇಹದಲ್ಲಿ ನಿರ್ಜಲೀಕರಣವಾಗದಂತೆ ಇದು ತಡೆಯುತ್ತದೆ. ಅಷ್ಟೇ ಅಲ್ಲ ಈ ಸಂದರ್ಭದಲ್ಲಿ, ದೇಹಕ್ಕೆ ಬೇಕಾದ ಎಲ್ಲ ಪೋಷಕಾಂಶಗಳನ್ನೂ ಅಂದರೆ, ಖನಿಜಾಂಶಗಳಾದ ಪೊಟಾಶಿಯಂ, ಸೋಡಿಯಂ, ಕ್ಯಾಲ್ಶಿಯಂಗಳನ್ನು ಒದಗಿಸಿ ಸಹಾಯ ಮಾಡುತ್ತದೆ.

3. ಹಣ್ಣುಗಳು: ಹಣ್ಣುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್‌ ಹಾಗೂ ಖನಿಜ ಲವಣಗಳೂ ಇರುವುದರಿಂದ ಡೆಂಗ್ಯು ಸಂದರ್ಭ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇವುಗಳನ್ನು ತಿನ್ನುವುದು ಬಹಳ ಮುಖ್ಯ. ಹಣ್ಣುಗಳಲ್ಲಿರುವ ಆಂಟಿ ಇನ್‌ಫ್ಲಮೇಟರಿ ಗುಣಗಳು ರೋಗಗಳ ವಿರುದ್ಧ ಕೆಲಸ ಮಾಡುತ್ತವೆ. ಅಷ್ಟೇ ಅಲ್ಲ, ಬಾಳೆಹಣ್ಣು, ಪಪ್ಪಾಯಿ, ಕಲ್ಲಂಗಡಿಯಂತಹ ಹಣ್ಣುಗಳನ್ನು ಸುಲಭವಾಗಿ ಜೀರ್ಣ ಮಾಡಬಹುದಾದ್ದರಿಂದ ಹಾಗೂ ಇವುಗಳಲ್ಲಿ ಹೇರಳವಾಗಿ ಪೋಷಕಾಂಶಗಳು ಬಹುಬೇಗನೆ ದೇಹ ಸೇರುವುದರಿಂದ ಹಣ್ಣುಗಳನ್ನು ತಿನ್ನುವುದು ಬಹಳ ಮುಖ್ಯ.

4. ಹರ್ಬಲ್‌ ಚಹಾಗಳು: ಶುಂಠಿ, ಕ್ಯಾಮೋಮೈಲ್‌ ಮತ್ತಿತರ ಹರ್ಬಲ್‌ ಚಹಾಗಳು ಜ್ವರದ ಸಂದರ್ಭ ಕುಡಿದಾಗ ಹಾಯೆನಿಸುವಂತೆ ಮಾಡಬಲ್ಲ ಶಕ್ತಿ ಇದೆ. ಸಾಮಾನ್ಯ ಚಹಾ, ಕಾಫಿಗಳು ರುಚಿಯೆನಿಸಿದರೂ, ಜ್ವರದ ಸಂದರ್ಭ ಇಂತಹ ಹರ್ಬಲ್‌ ಚಹಾಗಳು ಒಳ್ಳೆಯದು. ಶುಂಠಿ ಚಹಾದಲ್ಲಿ, ಆಂಟಿ ಇನ್‌ಫ್ಲಮೇಟರಿ ಗುಣಗಳು ಹೇರಳವಾಗಿ ಇರುವುದರಿಂದ ಜ್ವರದ ಹಲವು ಲಕ್ಷಣಗಳನ್ನು ಗುಣಪಡಿಸುವಲ್ಲಿಯೂ ಇದು ಸಹಾಯ ಮಾಡುತ್ತದೆ.

5. ಧಾನ್ಯಗಳು: ಧಾನ್ಯಗಳಿಂದ ಮಾಡಿದ ಆಹಾರಗಳಾದ ಅನ್ನ, ಓಟ್ಸ್‌, ಇಡ್ಲಿ, ದೋಸೆ, ಉಪ್ಪಿಟ್ಟು, ದಲಿಯಾ ಮತ್ತಿತರ ಆಹಾರಗಳ ಸೇವನೆ ಒಳ್ಳೆಯದು. ಇದರಿಂದ ದೇಹಕ್ಕೆ ಬೇಕಾದ ಶಕ್ತಿ ಸರಿಯಾದ ಪ್ರಮಾಣದಲ್ಲಿ ಸಿಗುತ್ತದೆ. ಸರಿಯಾಗಿ ಬೇಯಿಸಿದ, ಹೆಚ್ಚು ಅನಗತ್ಯ ಮಸಾಲೆಗಳಿಲ್ಲದ, ಹದವಾದ ತಿನಿಸುಗಳು, ಹಬೆಯಲ್ಲಿ ಬೇಯಿಸಿದ ತಿಂಡಿಗಳು ಇಂತಹ ಸಂದರ್ಭ ಅತ್ಯಂತ ಒಳ್ಳೆಯದು.

6. ಹಸಿರು ತರಕಾರಿಗಳು: ಹಸಿರು ತರಕಾರಿಗಳಲ್ಲಿ ಸಾಕಷ್ಟು ರೋಗ ನಿರೋಧಕ ಶಕ್ತಿಯೂ, ವಿಟಮಿನ್‌, ಖನಿಜಾಂಶಗಳು ಹಾಗೂ ಲವಣಗಳೂ ಇರುವುದರಿಂದ ಇವುಗಳ ಸೇವನೆ ಅತ್ಯಂತ ಮುಖ್ಯ. ಸಹಜವಾಗಿ ಸುಲಭವಾಗಿ ಕರಗಬಲ್ಲ ಹಸಿರು ತರಕಾರಿಗಳು, ಬೇಯಿಸಿ ತಿನ್ನಬಹುದಾದ, ಸೂಪ್‌ ಮಾಡಿ ಕುಡಿಯಬಹುದಾದ ಹೀಗೆ, ಹಲವು ಬಗೆಯಲ್ಲಿ ಹಸಿರು ತರಕಾರಿಗಳನ್ನು ಆದಷ್ಟು ಹೊಟ್ಟೆ ಸೇರುವಂತೆ ಮಾಡಬಹುದು.

7. ಪ್ರೊಟೀನ್‌: ಪ್ರೊಟೀನ್‌ನಿಂದ ಸಮೃದ್ಧ ಆಹಾರ ಈ ಸಂದರ್ಭ ಅತ್ಯಂತ ಅಗತ್ಯ. ಚಿಕನ್‌, ಟೋಫು, ಮೀನು ಇತ್ಯಾದಿಗಳನ್ನೂ ಹಿತಮಿತವಾಗಿ ಸೇವಿಸಿ ಪ್ರೊಟೀನ್‌ನ ಪೂರೈಕೆ ಮಾಡಬಹುದು. ಚೆನ್ನಾಗಿ ಬೇಯಿಸಿದ, ಸಮೃದ್ಧ ಆಹಾರಗಳನ್ನೂ ಸೇವಿಸುವ ಮೂಲಕ ದೇಹದಲ್ಲಿ ಮತ್ತೆ ಮಾಂಸಖಂಡಗಳು ಬಲಗೊಂಡು ಆರೋಗ್ಯ ಹೊಂದುವತ್ತ ಹೆಜ್ಜೆ ಹಾಕಬಹುದು.

ಇದನ್ನೂ ಓದಿ: Dengue problem : ರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂಗೆ ಪ್ರಕರಣ; ಸೊಳ್ಳೆ ಕಡಿತದ ಬಗ್ಗೆ ಎಚ್ಚರಿಕೆ ವಹಿಸಿ ಎಂದ ಸಿಎಂ ಸಿದ್ದರಾಮಯ್ಯ

Continue Reading

ಆರೋಗ್ಯ

Side Effects of Sugar: ಸಿಹಿ ತಿನ್ನಬೇಕು, ಆದರೆ ಎಷ್ಟು?

Side Effects of Sugar: ನೈಸರ್ಗಿಕ ಸಕ್ಕರೆಯಲ್ಲಿ ಇದ್ದಷ್ಟು ಸತ್ವಗಳು ನಾವೇ ಸೇರಿಸಿಕೊಳ್ಳುವ ಸಕ್ಕರೆಯಲ್ಲಿ (Added Sugar) ಅಥವಾ ಸಿಹಿ ತಿಂಡಿಯಲ್ಲಿ ದೊರೆಯುವುದಿಲ್ಲ. ಸಿಕ್ಕಾಪಟ್ಟೆ ಸಕ್ಕರೆ ತಿನ್ನುವುದು ಅಲ್ಪಕಾಲೀನ ಮತ್ತು ದೀರ್ಘಕಾಲೀನ ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಹಾಗಾಗಿಯೇ ಸಿಹಿ ತಿನಿಸುಗಳ ಸೇವನೆಗೆ ಮಿತಿ ಬೇಕು ಎನ್ನುವುದು.

VISTARANEWS.COM


on

Edited by

Sweets
Koo

ಬೆಂಗಳೂರು: ಶ್ರಾವಣದ ಹಬ್ಬಗಳ ಸಾಲು (Side Effects of Sugar) ಮುಗಿದಿದೆ. ಮೊನ್ನೆಯಷ್ಟೇ ಭಾದ್ರಪದದ ಚತುರ್ಥಿಯನ್ನೂ ಆಚರಿಸಿದ್ದಾಯ್ತು. ಇನ್ನೀಗ ನವರಾತ್ರಿ, ಆದಾದ ಮೇಲೆ ದೀಪಾವಳಿ. ಇಷ್ಟೊಂದು ಹಬ್ಬಗಳ ಆಚರಣೆ ಎಂದರೆ ಹುಡುಗಾಟವೇ? ಹೀಗೆ ಸಾಲು ಸಾಲು ಹಬ್ಬಗಳನ್ನು ಸಿಹಿ ತಿನ್ನದೆ ಕಳೆಯುವುದಾದರೂ ಹೇಗೆ? ಸಿಹಿ ಇಲ್ಲದ್ದು ಹಬ್ಬ ಎನಿಸೀತೆ? ಹಾಗೆಂದು ಪ್ರತೀ ಹಬ್ಬಕ್ಕೂ ಗಡದ್ದಾಗಿ ಸಿಹಿ ಬಾರಿಸಿದರೆ ನಮ್ಮ ಆರೋಗ್ಯದ ಗತಿ ಏನು? ಸಿಕ್ಕಾಪಟ್ಟೆ ಸಕ್ಕರೆ ತಿನ್ನುವುದರಿಂದ ನಮ್ಮ ದೇಹದ ಮೇಲಾಗುವ ಪರಿಣಾಮಗಳೇನು (What Happens When You Have Too Much Sugar) ಎನ್ನುವುದನ್ನು ತಿಳಿಯೋಣವೇ?

ಸಕ್ಕರೆ ಬೇಕು!

ಹೌದು, ನಮ್ಮ ದೇಹಕ್ಕೆ ಸಕ್ಕರೆಯೂ ಬೇಕು. ಸಕ್ಕರೆಯೆಂದರೆ ಒಂದು ತೆರನಾದ ಪಿಷ್ಟ. ಅದನ್ನು ವಿಘಟಿಸುವ ದೇಹ ಗ್ಲೂಕೋಸ್‌ ಆಗಿ ಪರಿವರ್ತಿಸಿ, ತನ್ನ ಶಕ್ತಿಯ ಅಗತ್ಯಗಳಿಗೆ ಬಳಸಿಕೊಳ್ಳುತ್ತದೆ. ಜೇನುತುಪ್ಪ, ಖರ್ಜೂರ, ಹಣ್ಣುಗಳು, ಡೈರಿ ಉತ್ಪನ್ನಗಳು ಮುಂತಾದ ಹಲವಾರು ಆಹಾರಗಳಲ್ಲಿ ಸಕ್ಕರೆ ತಾನಾಗಿಯೇ ಇರುತ್ತದೆ. ಇಂಥ ನೈಸರ್ಗಿಕ ಸಕ್ಕರೆಯಂಶ ನಮ್ಮ ದೇಹಕ್ಕೆ ಬೇಕು. ಮೆದುಳು, ನರವ್ಯೂಹಗಳು ಮತ್ತು ಕೆಂಪು ರಕ್ತಕಣಗಳಂಥವು ಸರಿಯಾಗಿ ಕೆಲಸ ಮಾಡಲು ಈ ನೈಸರ್ಗಿಕ ಸಕ್ಕರೆಯ ಅಗತ್ಯವಿದೆ.

ಆದರೆ ನಿಸರ್ಗದತ್ತವಾದ ಸಕ್ಕರೆ ಸತ್ವದ ಹೊರತಾಗಿ ಹೆಚ್ಚುವರಿ, ಅಂದರೆ ನಾವೇ ಸೇರಿಸಿದ ಸಕ್ಕರೆಯಂಶ ದೇಹಕ್ಕೇನೂ ಬೇಕೆಂದಿಲ್ಲ. ಹಾಗಾಗಿಯೇ ಸಿಹಿ ತಿನಿಸುಗಳ ಸೇವನೆಗೆ ಮಿತಿ ಬೇಕು ಎನ್ನುವುದು. ನೈಸರ್ಗಿಕ ಸಕ್ಕರೆಯಲ್ಲಿ ಇದ್ದಷ್ಟು ಸತ್ವಗಳು ನಾವೇ ಸೇರಿಸಿಕೊಳ್ಳುವ ಸಕ್ಕರೆಯಲ್ಲಿ ಅಥವಾ ಸಿಹಿ ತಿಂಡಿಯಲ್ಲಿ ದೊರೆಯುವುದಿಲ್ಲ. ತಜ್ಞರ ಪ್ರಕಾರ, ವಯಸ್ಕರು ದಿನವೊಂದಕ್ಕೆ 30 ಗ್ರಾಂ ಗಿಂತ ಹೆಚ್ಚಿನ ಸಕ್ಕರೆಯನ್ನು ತಿನ್ನಬಾರದು. ಮಕ್ಕಳಿಗೆ 25 ಗ್ರಾಂ ಒಳಗೇ ಸಾಕು. ಇದರಲ್ಲಿ ನಮ್ಮ ಆಹಾರದಲ್ಲಿರುವ ನೈಸರ್ಗಿಕ ಸಕ್ಕರೆಯನ್ನ ಸೇರಿಸಬೇಕಿಲ್ಲ.

ಇದನ್ನೂ ಓದಿ: National Nutrition Week 2023: ರಾತ್ರಿ ಊಟ ಬೇಗ ಮಾಡುವುದರಿಂದಲೂ ಆರೋಗ್ಯ ಹಾಳು?

Side Effects of Sugar

ಹೆಚ್ಚು ತಿಂದರೇನಾಗುತ್ತದೆ?

ಸಿಕ್ಕಾಪಟ್ಟೆ ಸಕ್ಕರೆ ತಿನ್ನುವುದು ಅಲ್ಪಕಾಲೀನ ಮತ್ತು ದೀರ್ಘಕಾಲೀನ ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಅತಿಯಾಗಿ ಸಿಹಿ ತಿಂದಾಗ ದೇಹದ ಶಕ್ತಿ ಹೆಚ್ಚುವ ಬದಲು, ಸುಸ್ತು, ಆಯಾಸ ಕಾಣಿಸಬಹುದು. ಮೂಡ್‌ ಬದಲಾವಣೆ, ಹೊಟ್ಟೆ ಉಬ್ಬರ, ಅಜೀರ್ಣ, ವಾಕರಿಕೆ ಇಂಥವು ಅಲ್ಪಕಾಲೀನ ಪರಿಣಾಮಗಳಾಗಿ ಕಾಣಿಸಿಕೊಳ್ಳಬಹುದು. ಆದರೆ ಹೆಚ್ಚು ಸಿಹಿ ತಿನ್ನುವುದನ್ನು ಮುಂದುವರಿಸಿದರೆ ದೀರ್ಘಕಾಲದಲ್ಲಿ ಪರಿಣಾಮಗಳು ಸಮಸ್ಯೆಗಳಾಗಿ ಮಾರ್ಪಡುವುದು ನಿಶ್ಚಿತ.

ಟೈಪ್‌-2 ಮಧುಮೇಹ

ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವಾಗ ರಕ್ತದಲ್ಲಿ ಸಕ್ಕರೆಯ ಮಟ್ಟ ಏರದಂತೆ ನಿಯಂತ್ರಿಸಲು ನಮಗೆ ಇನ್ಸುಲಿನ್‌ ಎಂಬ ಚೋದಕ ಬೇಕು. ಇದನ್ನು ಉತ್ಪತ್ತಿ ಮಾಡುವುದು ನಮ್ಮ ಮೇದೋಜೀರಕ ಗ್ರಂಥಿ. ಆಹಾರದಲ್ಲಿರುವ ಸಕ್ಕರೆಯಂಶ ರಕ್ತಕ್ಕೆ ಸೇರುತ್ತಿದ್ದಂತೆ ಇನ್ಸುಲಿನ್‌ ಉತ್ಪತ್ತಿ ಮಾಡುವಂತೆ ಈ ಗ್ರಂಥಿಗೆ ಸಂದೇಶ ಹೋಗುತ್ತದೆ. ಆಗ ರಕ್ತದಲ್ಲಿ ಸಕ್ಕರೆ ಮಟ್ಟ ಏರದಂತೆ ನಿಯಂತ್ರಣವಾಗಿ, ಉಳಿದ ಅಂಗಾಂಗಗಳಿಗೆ ಶಕ್ತಿ ಪೂರೈಕೆಯಾಗುತ್ತದೆ. ಒಂದೊಮ್ಮೆ ದೇಹದ ಕೋಶಗಳು ಇನ್ಸುಲಿನ್‌ಗೆ ಸ್ಪಂದಿಸುವುದನ್ನು ನಿಲ್ಲಿಸಿದರೆ ಸಮಸ್ಯೆ ಶುರುವಾಗುತ್ತದೆ. ಹೆಚ್ಚೆಚ್ಚು ಸಿಹಿ ತಿಂದರೆ ನಮ್ಮ ಮೇದೋಜೀರಕ ಗ್ರಂಥಿ ಹೆಚ್ಚು ಕೆಲಸ ಮಾಡಬೇಕು, ಅತಿಯಾಗಿ ಉತ್ಪತ್ತಿಯಾಗುವ ಇನ್ಸುಲಿನ್‌ಗೆ ದೇಹ ಕೆಲವೊಮ್ಮೆ ಸ್ಪಂದಿಸದೇ (Insulin resistance) ಹೋಗಬಹುದು. ಇದೇ ಅವಸ್ಥೆಯನ್ನು ಟೈಪ್‌-2 ಮಧುಮೇಹ ಎನ್ನುತ್ತೇವೆ.

ಬೊಜ್ಜು

ಈಗ ಆರೇಳು ವರ್ಷಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ವಿಶ್ವದಲ್ಲಿ 100 ಕೋಟಿಗೂ ಅಧಿಕ ಮಂದಿ ಬೊಜ್ಜಿನಿಂದಲೇ (Obesity) ನಾನಾ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಸಂಸ್ಕರಿಸಿದ ಆಹಾರಗಳಿಂದ (ಜ್ಯೂಸ್‌, ಸೋಡಾ, ಕೇಕ್‌ ಇತ್ಯಾದಿ) ದೇಹ ಸೇರುವ ಸಕ್ಕರೆಯಿಂದಲೇ ಬೊಜ್ಜಿಗೆ ತೊತ್ತಾದವರು. ಅತಿಯಾಗಿ ಸಕ್ಕರೆ ತಿನ್ನುವುದರಿಂದ ದೇಹಕ್ಕೆ ಬೇಕಾಗಿದ್ದಕ್ಕಿಂತ ಹೆಚ್ಚೇ ಕ್ಯಾಲರಿ ದೊರೆಯುತ್ತದೆ; ಆದರೆ ಇವೆಲ್ಲವೂ ಪೋಷಕಾಂಶವಿಲ್ಲದ ಸತ್ವಹೀನ ಕ್ಯಾಲರಿಗಳು. ಹಾಗಾಗಿ ಪೋಷಕಾಂಶಗಳ ಕೊರತೆಯಾಗುತ್ತಿದ್ದಂತೆ ಇನ್ನಷ್ಟು ತಿನ್ನಬೇಕೆಂಬ ಬಯಕೆ ದೇಹಕ್ಕೆ ಮೂಡುತ್ತದೆ. ತೂಕ ಹೆಚ್ಚಲು ಇಷ್ಟು ಸಾಲದೇ?

ಇದನ್ನೂ ಓದಿ: PM Modi Birthday: 73ರಲ್ಲೂ 23ರ ರಣೋತ್ಸಾಹ; ಇಲ್ಲಿದೆ ಮೋದಿ ಆರೋಗ್ಯದ ಗುಟ್ಟು

Side Effects of Sugar

ಹೃದಯದ ತೊಂದರೆಗಳು

ಸಕ್ಕರೆಭರಿತ ಆಹಾರಗಳು ಬೊಜ್ಜು ಹೆಚ್ಚಿಸುವುದು ಮಾತ್ರವಲ್ಲ, ದೇಹದಲ್ಲಿ ಟ್ರೈಗ್ಲಿಸರೈಡ್‌ ಅಂಶವನ್ನು ಹೆಚ್ಚಿಸುತ್ತವೆ. ಇದೇ ಮುಂದುವರಿದು ರಕ್ತನಾಳಗಳಲ್ಲಿ ಕೊಬ್ಬು ಜಮೆಯಾಗುತ್ತದೆ; ರಕ್ತದೊತ್ತಡ ಏರುತ್ತದೆ. ಮಧುಮೇಹದ ಜೊತೆಗೆ ಇವಿಷ್ಟು ಸಮಸ್ಯೆಗಳು ಸಾಕು ಹೃದಯವನ್ನು ಸಂಕಷ್ಟಕ್ಕೆ ಈಡು ಮಾಡಲು. ಇದರಿಂದ ಹೃದಯದ ತೊಂದರೆಗಳು ಮಾತ್ರವಲ್ಲ. ಪಾರ್ಶ್ವವಾಯುವಿನ ಭೀತಿಯೂ ಎದುರಾಗುತ್ತದೆ.

ಫ್ಯಾಟಿ ಲಿವರ್

ದೇಹದಲ್ಲಿ ಖರ್ಚಾಗದೆ ಉಳಿಯುವ ಶಕ್ತಿಯೆಲ್ಲಾ ಜಮೆಯಾಗುವುದು ಕೊಬ್ಬಿನ ರೂಪದಲ್ಲಿ. ಇಂಥ ಹೆಚ್ಚುವರಿ ಕೊಬ್ಬು ಜಮೆಯಾಗುವುದು ಯಕೃತ್ತಿನಲ್ಲಿ. ಆಗಿಂದಾಗ ಈ ಕೊಬ್ಬು ಖಾಲಿಯಾಗುತ್ತಿದ್ದರೆ ಹೆಚ್ಚಿನ ಜಮಾವಣೆ ಇರುವುದಿಲ್ಲ. ಆದರೆ ಅನಗತ್ಯ ಕ್ಯಾಲರಿಗಳು ಹೆಚ್ಚಾಗಿ ಕೊಬ್ಬು ಹೆಚ್ಚೆಚ್ಚು ದಾಸ್ತಾನಾಗುವುದಕ್ಕೆ ಪ್ರಾರಂಭವಾದರೆ, ಯಕೃತ್‌ನಲ್ಲಿದ್ದ ಆರೋಗ್ಯಪೂರ್ಣ ಕೋಶಗಳು ನಾಶವಾಗಿ ಈ ಕೊಬ್ಬಿನ ಕೋಶಗಳೇ ತುಂಬಲಾರಂಭಿಸುತ್ತವೆ. ಫ್ಯಾಟಿ ಲಿವರ್‌ ಕಾಡುವುದು ಹೀಗೆ. ಮದ್ಯಪಾನ ಮಾಡದೆಯೂ ಯಕೃತ್ತಿನ ಕೊಬ್ಬು ಇತ್ತೀಚೆಗೆ ಬಹಳಷ್ಟು ಜನರನ್ನು ಕಾಡಲು ಇದುವೇ ಕಾರಣ.

ಅತಿಯಾದ ಸಿಹಿಯಿಂದ ಹಲ್ಲು ಮತ್ತು ಬಾಯಿಯ ಆರೋಗ್ಯವೂ ಕ್ರಮೇಣ ನಶಿಸುತ್ತದೆ. ಅತಿ ಸಿಹಿ ಉತ್ಪತ್ತಿ ಮಾಡುವ ಆಮ್ಲಗಳಿಗೆ ಹಲ್ಲುಗಳ ಎನಾಮಲ್‌ ನಾಶವಾಗಿ, ಕುಳಿಗಳು ಬೀಳುತ್ತವೆ. ಒಸಡುಗಳ ಮೇಲೂ ಇದು ಪರಿಣಾಮ ಬೀರುತ್ತದೆ. ಹಾಗಾಗಿ ದೇಹಕ್ಕೆ ಅಗತ್ಯವಾದ ಸಕ್ಕರೆಯಂಶವನ್ನು ನೈಸರ್ಗಿಕ ತಿನಿಸುಗಳಿಂದ ಒದಗಿಸುವುದು ಕ್ಷೇಮವೇ ಹೊರತು ನಾವೇ ಬೆಲ್ಲ/ ಸಕ್ಕರೆ ಸುರಿದು ಮಾಡಿದ ಸಿಹಿತಿಂಡಿಗಳಿಂದ ಅಲ್ಲ. ಇದರರ್ಥ ಸಿಹಿ ತಿನ್ನುವುದನ್ನು ಸಂಪೂರ್ಣ ನಿಲ್ಲಿಸಬೇಕೆಂದಲ್ಲ. ಆದರೆ ತಿನ್ನುವ ಪ್ರಮಾಣದ ಮೇಲೆ ಖಂಡಿತವಾಗಿ ಮಿತಿ ಇರಲೇಬೇಕು.

Continue Reading

ಆರೋಗ್ಯ

Pneumonia Remedy: ನ್ಯುಮೋನಿಯಾಗೆ ಸೂಪರ್‌ಫುಡ್‌ ಯಾವುವೆಂದು ತಿಳಿದಿದೆಯೇ?

ನ್ಯುಮೋನಿಯಾ ಸಂದರ್ಭ ಹಾಗೂ, ಗುಣಮುಖರಾದ ಮೇಲೂ ಯಾವೆಲ್ಲ ಕೆಲವು ಆಹಾರಗಳು ನ್ಯುಮೋನಿಯಾದಿಂದ ಬಹುಬೇಗನೆ ಗುಣಮುಖರಾಗುವಂತೆ (pneumonia remedy) ಮಾಡುತ್ತದೆ ಎಂಬುದನ್ನು ನೋಡೋಣ.

VISTARANEWS.COM


on

Edited by

Pneumonia Remedy
Koo

ಕೆಲವೊಮ್ಮೆ ಕೆಲವರಿಗೆ ಸಾಮಾನ್ಯ ಜ್ವರ ನ್ಯುಮೋನಿಯಾಕ್ಕೆ (pneumonia) ತಿರುಗುವುದುಂಟು. ಸಾಮಾನ್ಯ ಜ್ವರ (viral fever) ಎಂದುಕೊಂಡು ಔಷಧಿಗಳನ್ನು ತೆಗೆದುಕೊಂಡರೂ, ದಿನಗಳೆದಂತೆ, ಕಫ, ಮೂಗು ಕಟ್ಟಿರುವುದು, ಕಡಿಮೆಯಾಗದ ಜ್ವರ, ಜೊತೆಗೆ ಚಳಿ ಎಲ್ಲವೂ ಉಲ್ಬಣಿಸಿ ಇದು ನ್ಯುಮೋನಿಯಾ ಎಂಬ ತೀರ್ಮಾನಕ್ಕೆ ವೈದ್ಯರು ಪರೀಕ್ಷೆಗಳಿಂದ ದೃಢಪಡಿಸುತ್ತಾರೆ. ಶ್ವಾಸಕೋಶದೊಳಗಿನ ಗಾಳಿಚೀಲಗಳಿಗೂ ಇನ್‌ಫೆಕ್ಷನ್‌ (Infection) ಹರಡಿಕೊಂಡು ಎದೆನೋವು ಕೂಡಾ ಕಾಣಿಸಿಕೊಳ್ಳುತ್ತದೆ. ಉಸಿರಾಟಕ್ಕೆ ಕಷ್ಟವಾಗುವುದು, ನಿರ್ಜಲೀಕರಣ (dehydration), ನಿತ್ರಾಣ, ಉಬ್ಬಸದಂತಹ ಸಮಸ್ಯೆ, ಕೆಮ್ಮಿನ ಸಂದರ್ಭ ಹಸಿರು ಮಿಶ್ರಿತ ಹಳದಿ ಬಣ್ಣದ ಕಫ ಹೊರಗೆ ಬರುವುದು, ಕೆಲವೊಮ್ಮೆ ರಕ್ತವೂ ಸೇರಿ ಕಫ ಹೊರಗೆ ಬರುವುದು ಇತ್ಯಾದಿಗಳೆಲ್ಲ ಆಗಿ ನ್ಯುಮೋನಿಯಾ ಬಹಳವಾಗಿ ಕಾಡುತ್ತದೆ. ಹೀಗೆ ನ್ಯುಮೋನಿಯಾ ಜ್ವರದಿಂದ ಬಳಲಿ ವೈದ್ಯರ ಆರೈಕೆಯ ನಂತರ ಗುಣಮುಖರಾದರೂ ಕೂಡಾ, ಬಹಳ ದಿನಗಳವರೆಗೆ ಶಿಸ್ತುಬದ್ಧ ಆಹಾರ ಸೇವನೆ, ಆರೋಗ್ಯದ ಬಗ್ಗೆ ಕಾಳಜಿ ಎಲ್ಲವೂ ಅತ್ಯಂತ ಅಗತ್ಯ. ಇದರ ನಿರ್ಲಕ್ಷ್ಯ ಸಲ್ಲದು. ಅತ್ಯಂತ ಕಾಳಜಿಯುಕ್ತ ಆಹಾರ ಸೇವನೆಯೂ (Food habit) ಅಗತ್ಯ. ಹಾಗಾಗಿ ಬನ್ನಿ, ನ್ಯುಮೋನಿಯಾ ಸಂದರ್ಭ ಹಾಗೂ, ಗುಣಮುಖರಾದ (pneumonia cure) ಮೇಲೂ ಯಾವೆಲ್ಲ ಕೆಲವು ಆಹಾರಗಳು ನ್ಯುಮೋನಿಯಾದಿಂದ ಬಹುಬೇಗನೆ ಗುಣಮುಖರಾಗುವಂತೆ (pneumonia remedy) ಮಾಡುತ್ತದೆ ಎಂಬುದನ್ನು ನೋಡೋಣ.

1. ಜೇನುತುಪ್ಪ: ಜೇನುತುಪ್ಪ ಶ್ವಾಸಕೋಶದ ಸಮಸ್ಯೆಗಳಿಗೆ ಅತ್ಯಂತ ಒಳ್ಳೆಯದು. ಇದು ಕಫ, ಶೀತ, ನೆಗಡಿ ಮತ್ತಿತರ ಸಮಸ್ಯೆಗಳಿಗೂ ಅತ್ಯುತ್ತಮ ಪರಿಹಾರ ನೀಡುತ್ತದೆ. ನಿತ್ಯವೂ ಒಂದು ಚಮಚ ಜೇನುತುಪ್ಪ ಸೇವನೆಯಿಂದ ಅಥವಾ ಜೇನುತುಪ್ಪದ ಜೊತೆಗೆ ತುಳಸಿರಸ, ಶುಂಠಿರಸ ಸೇರಿಸಿ ಸೇವಿಸುವುದರಿಂದ ಕಫ ಬಹುಬೇಗನೆ ಕರಗಿ ಶ್ವಾಸಕೋಶಗಳಿಗೆ ಆರಾಮ ದೊರೆಯುತ್ತದೆ.

2. ಅರಿಶಿನ: ನಿತ್ಯವೂ ಭಾರತೀಯರು ಅಡುಗೆಯಲ್ಲಿ ಬಳಸುವ ಮಸಾಲೆಗಳಲ್ಲಿ ಒಂದು. ಇದನ್ನು ನಮ್ಮ ಹಲವು ಸಮಸ್ಯೆಗಳಿಗೂ ನಮಗೆ ಬಳಸಿ ಗೊತ್ತು. ಯಾಕೆಂದರೆ ಇದು ತನ್ನಲ್ಲಿ ಆಂಟಿಸೆಪ್ಟಿಕ್‌ ಗುಣಗಳನ್ನು ಹೊಂದಿರುವ ಮಸಾಲೆ ಪದಾರ್ಥ. ಇದರ ಸೇವನೆಯಿಂದಲೂ ಕೂಡಾ ಇನ್‌ಫೆಕ್ಷನ್‌ ಬಹುಬೇಗನೆ ದೇಹದಿಂದ ವಾಸಿಯಾಗಿ, ಆರೋಗ್ಯ ನಮ್ಮದಾಗುತ್ತದೆ.

3. ಶುಂಠಿ: ಶೀತ, ಕಫ, ನೆಗಡಿಯಂತಹ ಸಮಸ್ಯೆಗಳಿಗೆ ಎಲ್ಲರಿಗೂ ಮೊದಲು ನೆನಪಾಗುವ ಮನೆಮದ್ದು ಎಂದರೆ ಶುಂಠಿ. ಈ ಶುಂಠಿಯೂ ನ್ಯುಮೋನಿಯಾದಂತಹ ಸಮಸ್ಯೆಗೂ ಕೂಡಾ ಅತಯುತ್ತಮ ಕೆಲಸವನ್ನೇ ಮಾಡುತ್ತದೆ. ಜೇನುತುಪ್ಪದ ಜೊತೆ ಶುಂಠಿ ರಸ ಸೇರಿಸಿ ಸೇವನೆ ಮಾಡುವುದು, ಶುಂಠಿ ಸೇರಿಸಿ ಕಷಾಯ ಮಾಡುವುದು ಅಥವಾ ಶುಂಠಿ ಟೀ ಮಾಡಿ ಕುಡಿಯುವುದರಿಂದಲೂ ಸಮಸ್ಯೆಗೆ ಉತ್ತಮ ಫಲ ಸಿಗುತ್ತದೆ.

ಇದನ್ನೂ ಓದಿ: Cashew Health Tips: ಗೋಡಂಬಿ ತಿಂದರೆ ಏನಾಗುತ್ತದೆ?

4. ಸಿಟ್ರಸ್‌ ಹಣ್ಣುಗಳು: ನಿಂಬೆಹಣ್ಣು, ಮುಸಂಬಿ ಹಾಗೂ ಕಿತ್ತಳೆ ಹಣ್ಣುಗಳಲ್ಲಿ ಹೇರಳವಾಗಿ ವಿಟಮಿನ್‌ ಸಿ ಇರುವುದರಿಂದ ಇವು ಕೂಡಾ ಶೀತ, ನೆಗಡಿ, ಕಫದಂತಹ ಸಮಸ್ಯೆಗಳಿಗೆ ನೆರವಾಗಬಲ್ಲುದು. ನ್ಯುಮೋನಿಯಾ ನಂತರಕ್ಕಿಂತ, ಇವನ್ನು ಮೊದಲೇ ನಮ್ಮ ಆಹಾರಗಳಲ್ಲಿ ಸೇವಿಸುವುದರಿಂದ ದೇಹಕ್ಕೆ ಮೊದಲೇ ವಿಟಮಿನ್‌ ಸಿ ಸರಿಯಾಗಿ ಲಭ್ಯವಾಗುವ ಮೂಲಕ ಇಂತಹ ಇನ್‌ಫೆಕ್ಷನ್‌ಗಳಿಂದ ಇವು ನಮ್ಮನ್ನು ದೂರ ಇರಿಸುವಲ್ಲಿ ನೆರವಾಗುತ್ತವೆ. ರೋಗನಿರೋಧಕ ಶಕ್ತಿಯನ್ನು ಇವು ಹೆಚ್ಚಿಸುವ ಮೂಲಕ ಇನ್‌ಫೆಕ್ಷನ್‌ಗಳಿಂದ ನಮ್ಮನ್ನು ದೂರವಿರಿಸುತ್ತವೆ.

5. ಬೀಜಗಳು: ಬಾದಾಮಿ, ಪಿಸ್ತಾ, ವಾಲ್‌ನಟ್‌ನಂತಹ ಬೀಜಗಳನ್ನು ಸೇವನೆ ಮಾಡುವ ಮೂಲಕವೂ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಪ್ರೊಟೀನ್‌ ಹಾಗೂ ಪೋಷಕಾಂಶಗಳನ್ನು ನೀಡುತ್ತಾ ರೋಗಗಳಿಂದ ರಕ್ಷಿಸಿಕೊಳ್ಳಬಹುದು.

ಇದನ್ನೂ ಓದಿ: Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!

Continue Reading
Advertisement
Narendra Modi
ದೇಶ32 mins ago

Narendra Modi : ವಾರಾಣಸಿಯಲ್ಲಿ ಪ್ರಧಾನಿ ಮೋದಿ ಭದ್ರತೆ ಉಲ್ಲಂಘನೆಗೆ ಯತ್ನಿಸಿದ ವ್ಯಕ್ತಿ ಬಂಧನ

cyclothon in Bangalore
ಬೆಂಗಳೂರು46 mins ago

World Heart Day: ಹೃದಯ ಆರೋಗ್ಯ ಜಾಗೃತಿಗಾಗಿ ಸಾಗರ್ ಆಸ್ಪತ್ರೆಯಿಂದ ‌ಸೈಕ್ಲೋಥಾನ್; 500 ಮಂದಿ ಭಾಗಿ

Hasan Mahmud running out Ish Sodhi at the non-striker's end
ಕ್ರಿಕೆಟ್1 hour ago

NZ vs BAN: ಮಂಕಡ್​ ನಿರಾಕರಿಸಿ ಕ್ರೀಡಾ ಸ್ಫೂರ್ತಿ ಮೆರೆದ ಲಿಟನ್‌ ದಾಸ್‌‌ಗೆ ನೆಟ್ಟಿಗರ ಮೆಚ್ಚುಗೆ

Narendra modi image
ಕಲೆ/ಸಾಹಿತ್ಯ1 hour ago

Narendra Modi : ಕಲಾವಿದನ ಕುಂಚ, ಕೃತಕ ಬುದ್ಧಿಮತ್ತೆ ಸೇರಿಕೊಂಡರೆ ಪ್ರಕೃತಿಯಲ್ಲೇ ಕಾಣುತ್ತದೆ ಮೋದಿ ಮುಖ

Vistara Top 10 News 2309
ಕರ್ನಾಟಕ1 hour ago

VISTARA TOP 10 NEWS : ಸೆ. 26ಕ್ಕೆ ಬೆಂಗಳೂರು ಬಂದ್‌ಗೆ ಕರೆ, ಚೈತ್ರಾ ಕುಂದಾಪುರ ಟೀಮ್‌ ಪರಪ್ಪನ ಅಗ್ರಹಾರದಲ್ಲಿ ಸೆರೆ

Anegondi Vrindavana
ಕರ್ನಾಟಕ1 hour ago

Gangavathi News: ಆನೆಗೊಂದಿ ಜಯತೀರ್ಥ-ರಘುವರ್ಯರ ವೃಂದಾವನ ವಿವಾದ; ರಾಯರ ಮಠದ ಪರ ಹೈಕೋರ್ಟ್ ತೀರ್ಪು

Modi Reservation
ದೇಶ2 hours ago

Women’s Reservation Bill : ಮಹಿಳಾ ಮೀಸಲಾತಿ ವಿರೋಧಿಸಿದವರಿಗೆ ಭೀತಿ ಶುರುವಾಗಿದೆ; ಮೋದಿ ಲೇವಡಿ

Mohammed Shami finished with 5 for 51
ಕ್ರಿಕೆಟ್2 hours ago

Mohammed Shami: 16 ವರ್ಷಗಳ ಬಳಿಕ ವಿಶೇಷ ದಾಖಲೆ ಬರೆದ ಮೊಹಮ್ಮದ್​ ಶಮಿ

MK Stalin
ದೇಶ2 hours ago

Organ Donation : ಅಂಗಾಂಗ ದಾನ ಮಾಡಿದವರ ಅಂತ್ಯ ಸಂಸ್ಕಾರಕ್ಕೆ ಸಕಲ ಸರ್ಕಾರಿ ಗೌರವ

Chaitra Kundapura
ಉಡುಪಿ2 hours ago

Chaitra Kundapura : ವಂಚಕಿ ಚೈತ್ರಾ ಜತೆಗೆ ಕುಂದಾಪುರದ ಹೆಸರು ಬಳಸಬೇಡಿ; ತಾತ್ಕಾಲಿಕ ನಿರ್ಬಂಧ ವಿಧಿಸಿದ ಕೋರ್ಟ್‌

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ7 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ2 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ7 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Dina bhavishya
ಪ್ರಮುಖ ಸುದ್ದಿ19 hours ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ನಂಬಿದ ವ್ಯಕ್ತಿಗಳು ಮೋಸ ಮಾಡ್ತಾರೆ ಹುಷಾರ್‌!

dina bhavishya
ಪ್ರಮುಖ ಸುದ್ದಿ6 days ago

Dina Bhavishya : ಆಪ್ತರೊಂದಿಗೆ ಜಗಳವಾದೀತು ಹುಷಾರ್‌!

Dina Bhavishya
ಪ್ರಮುಖ ಸುದ್ದಿ7 days ago

Dina Bhavishya : ಈ ರಾಶಿಯವರು ಇಂದು ಮುಟ್ಟಿದ್ದೆಲ್ಲಾ ಚಿನ್ನ!

Ramalinga Reddy
ಕರ್ನಾಟಕ1 week ago

ಇನ್ಮುಂದೆ ಹೇಗಂದ್ರೆ ಹಾಗೆ ದೇವಸ್ಥಾನ ಕಟ್ಟೋ ಹಾಗಿಲ್ಲ! ರಾಮಲಿಂಗಾ ರೆಡ್ಡಿ ಮಾಸ್ಟರ್ ಪ್ಲಾನ್

Bannerghatta Park
ಆರೋಗ್ಯ1 week ago

Nipah Virus : ನಿಫಾ ವೈರಸ್‌ ಭೀತಿ; ಬನ್ನೇರುಘಟ್ಟ ಪಾರ್ಕ್‌ನಲ್ಲಿ ಹೈ ಅಲರ್ಟ್

Villagers exclude menstruating women
ಕರ್ನಾಟಕ1 week ago

Tumkur News : ಮುಟ್ಟಾದ ಮಹಿಳೆಯರನ್ನು ಗ್ರಾಮದಿಂದ ಹೊರಗಿಟ್ಟು ಮೌಡ್ಯಾಚರಣೆ!

dina bhavishya
ಪ್ರಮುಖ ಸುದ್ದಿ1 week ago

Dina Bhavishya : ಈ ದಿನ ಭೂಮಿ, ಆಸ್ತಿ ಖರೀದಿಸುವ ಮುನ್ನ ಎಚ್ಚರ!

Kadri temple is the target for Shariq NIA reveals
ಕರ್ನಾಟಕ1 week ago

ಮಂಗಳೂರು ಸ್ಫೋಟ : ಶಾರಿಕ್‌ಗೆ ಕದ್ರಿ ದೇವಸ್ಥಾನವೇ ಟಾರ್ಗೆಟ್; ರಿವೀಲ್ ಮಾಡಿದ ಎನ್ಐಎ

ಟ್ರೆಂಡಿಂಗ್‌