ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು (heart attack case) ಹೆಚ್ಚಾಗುತ್ತಿದೆ. ಹೀಗಾಗಿ ಇಂದು ಹೃದಯದ ಕಾಳಜಿ ಕೊಂಚ ಹೆಚ್ಚು ವಹಿಸುವುದು ಬಹುಮುಖ್ಯವಾಗಿದೆ. ಇದಕ್ಕಾಗಿ ಸುಪ್ರಸಿದ್ಧ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಅವರು ಸೂಪರ್ ಫುಡ್ ಗಳ ಬಗ್ಗೆ ಹೇಳಿದ್ದಾರೆ. ಇದರ ಮಾಹಿತಿ ಇಲ್ಲಿದೆ.
ಆರೋಗ್ಯಕರ ಹೃದಯಕ್ಕಾಗಿ (healthy heart) ಅದರ ದಾರಿಯನ್ನು ಅನಿರ್ಬಂಧಿಸುವುದು ಕೂಡ ಅಷ್ಟೇ ಅಗತ್ಯ. ಆರೋಗ್ಯಕರ ಅಪಧಮನಿಗಳು ಮತ್ತು ಬಲವಾದ ಹೃದಯರಕ್ತನಾಳದ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಪರಿಣಾಮಕಾರಿ ವಿಧಾನವನ್ನು ಸದ್ಗುರು ಹೇಳಿದ್ದಾರೆ.
ಆರೋಗ್ಯಕರ ಅಪಧಮನಿಗಳ ರಹಸ್ಯವು ಸಾಧಾರಣ ಮತ್ತು ಶಕ್ತಿಯುತವಾದ ಸೂಪರ್‌ಫುಡ್‌ನಲ್ಲಿ ಇದೆ. ಇದು ರಕ್ತಪರಿಚಲನೆಯನ್ನು ಸುಧಾರಿಸುವ, ಮಾಲಿನ್ಯಕಾರಕಗಳನ್ನು ತೊಡೆದುಹಾಕಲು ಸಹಾಯ ಮಾಡುವ ಮತ್ತು ಆರೋಗ್ಯವನ್ನು ಹೆಚ್ಚು ವರ್ಧಿಸುವ ಆಹಾರವಾಗಿದೆ. ನಾನು ಹೇಳುವ ಸಲಹೆಯನ್ನು ಪಾಲಿಸಿ ಮತ್ತು ಆರೋಗ್ಯವನ್ನು ಸುಧಾರಿಸಲು ಸಿದ್ಧರಾಗಿ ಎಂದು ಸದ್ಗುರು ತಿಳಿಸಿದ್ದಾರೆ.ಸದ್ಗುರು ತಮ್ಮ ಜೀವನವನ್ನು ಆರೋಗ್ಯಕರವಾಗಿ ರೂಪಿಸಿಕೊಂಡಿದ್ದಾರೆ. ಜೀವನದಲ್ಲಿ ಒಳ್ಳೆಯದನ್ನು ಸಾಧಿಸಲು ಎಲ್ಲರಿಗೂ ಸಹಾಯ ಮಾಡುವ ಅವರು, ತಮ್ಮ ಭಕ್ತರಿಗೆ ಆಗಾಗ್ಗೆ ಸಲಹೆಗಳನ್ನು ನೀಡುತ್ತಿರುತ್ತಾರೆ.
ಇತ್ತೀಚೆಗೆ ಅವರು ಅಪಧಮನಿಗಳನ್ನು ಉತ್ತಮಗೊಳಿಸಲು ಸಲಹೆಗಳನ್ನು ಹಂಚಿಕೊಂಡಿದ್ದು, ಇದು ಖಂಡಿತಾ ಪ್ರಯೋಜನಕಾರಿಯಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Curry Leaves: ಇದರ ಮಹತ್ವ ತಿಳಿದರೆ ನೀವು ಇನ್ನೆಂದೂ ಕರಿ ಬೇವಿನ ಎಲೆಯನ್ನು ಪಕ್ಕಕ್ಕೆ ಎತ್ತಿಡುವುದಿಲ್ಲ!
ಕಪ್ಪು ಬಂಗಾರ ಎಂದೇ ಕರೆಯಲ್ಪಡುವ ಕರಿ ಮೆಣಸನ್ನು ದೀರ್ಘಕಾಲದವರೆಗೆ ಸಂಗ್ರಹಿಸಿ ಇಡಬಹುದು. ಆಹಾರದಲ್ಲಿ ಕರಿಮೆಣಸು ಅಥವಾ ಕಾಳುಮೆಣಸನ್ನು ಬಳಸುವುದು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ.
ಅಪಧಮನಿಗಳನ್ನು ಸ್ವಚ್ಛವಾಗಿಡುವಲ್ಲಿ ಮಹತ್ತರವಾದ ಪಾತ್ರ ವಹಿಸುವ ಕರಿಮೆಣಸು ಬಹಳ ದೊಡ್ಡ ಪ್ರಮಾಣದಲ್ಲಿ ಬಳಸಿದರೆ ಅದು ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಅದನ್ನು ಸಣ್ಣ ಪ್ರಮಾಣದಲ್ಲಿ ನಿತ್ಯವೂ ಆಹಾರದಲ್ಲಿ ಸೇವಿಸುವುದು ತುಂಬಾ ಒಳ್ಳೆಯದು ಎನ್ನುತ್ತಾರೆ ಸದ್ಗುರು.