Site icon Vistara News

Seeds For Men Sexual Power: ಪುರುಷರ ಲೈಂಗಿಕ ಶಕ್ತಿ ಹೆಚ್ಚಳಕ್ಕೆ ಈ ಬೀಜಗಳು ಪರಿಣಾಮಕಾರಿ!

Seeds For Men Sexual Power

ಆರೋಗ್ಯದ ವಿಚಾರ ಬಂದಾಗ ಮಹಿಳೆಯರಷ್ಟೇ ಪುರುಷರೂ ಆರೋಗ್ಯದ ಕಾಳಜಿ ವಹಿಸಲೇಬೇಕು. ಏನೇನೂ ಕಾಳಜಿ ವಹಿಸದೆ, ನಮಗೇನಾಗಿದೆ, ನಾವು ಆರಾಮವಾಗಿದ್ದೇವೆ, 50 ವರ್ಷ ದಾಟಿದ ಮೇಲೆ ನೋಡಿಕೊಂಡರಾಯಿತು ಎಂದುಕೊಂಡರೆ, ಅದು ಖಂಡಿತ ನಿಮ್ಮ ಮೂರ್ಖತನ. ಒಳ್ಳೆಯ ಆಹಾರ ಸೇವನೆ ಮಾಡುತ್ತಾ, ನಿಯಮಿತ ವ್ಯಾಯಾಮ ಮಾಡುತ್ತಾ ಆರೋಗ್ಯಕರ ಜೀವನ ನಡೆಸುವುದು ವಯಸ್ಸಿನ ಹಂಗಿಲ್ಲದೆ ಬಹಳ ಮುಖ್ಯವಾಗುತ್ತದೆ. ಹೀಗೆ ಪುರುಷರ ಆರೋಗ್ಯಕ್ಕೆ ಪೂರಕವಾಗಿರುವ ಅತ್ಯಂತ ಒಳ್ಳೆಯದನ್ನೇ ಮಾಡುವ ಆಹಾರಗಳ ಪೈಕಿ ಒಣಹಣ್ಣುಗಳು ಹಾಗೂ ಬೀಜಗಳ ಪಾತ್ರವೂ ದೊಡ್ಡದು. ಅದರಲ್ಲೂ, ಸಿಹಿಕುಂಬಳದ ಬೀಜ ಪುರುಷನ ಆರೋಗ್ಯದ ಬಹುದೊಡ್ಡ ಮಿತ್ರ. ಯಾವ ಮಿತ್ರನನ್ನು ಮರೆತರೂ,ಈ ಸಿಹಿಕುಂಬಳದ ಬೀಜಗಳನ್ನು ಮಾತ್ರ ಮರೆಯಬೇಡಿ! ಬನ್ನಿ, ಈ ಬೀಜಗಳಿಂದ ಪುರುಷರ ಆರೋಕ್ಕಾಗುವ (Seeds For Men Sexual power) ಲಾಭಗಳನ್ನು ತಿಳಿಯೋಣ.

Image Of Mental Health

ಪುರುಷರ ಲೈಂಗಿಕ ಆರೋಗ್ಯ ವೃದ್ಧಿ

ಪುರುಷರ ಲೈಂಗಿಕ ಆರೋಗ್ಯ ಹೆಚ್ಚಿಸುವಲ್ಲಿ ಈ ಬೀಜಗಳು ಮುಖ್ಯ ಕೊಡುಗೆ ನೀಡುತ್ತವೆ. ವಯಸ್ಸಾದಂತೆ ಕೆಲವರಿಗೆ ಆಗುವ ವೃಷಣದ ಹಿಗ್ಗುವುಕೆಯಿಂದಾಗಿ, ಮೂತ್ರವಿಸರ್ಜನೆಯ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆಗೆ ಇದು ಅತ್ಯುತ್ತಮ ಪರಿಹಾರ ನೀಡುತ್ತದೆ. ವೃಷಣಗಳಿಗೆ ಶಕ್ತಿ ನೀಡಿ, ಲೈಂಗಿಕ ಹಾರ್ಮೋನಿನ ಉತ್ಪತ್ತಿಯನ್ನು ಸಮತೋಲನೆಗೊಳಿಸುತ್ತದೆ.

ವೀರ್ಯವೃದ್ಧಿ

ಸಿಹಿ ಕುಂಬಳದ ಬೀಜದಲ್ಲಿ ಝಿಂಕ್‌ ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ ಇದು ವೀರ್ಯವೃದ್ಧಿಗೆ ಸಹಾಯ ಮಾಡುತ್ತದೆ. ವೀರ್ಯದ ಸಂಖ್ಯೆಯಲ್ಲಿ ಕೊರತೆ ಕಾಣವು ಮಂದಿಗೆ ಇದು ಅತ್ಯಂತ ಒಳ್ಳೆಯ ಆಹಾರ. ವೀರ್ಯದ ಗುಣಮಟ್ಟವನ್ನೂ ಹೆಚ್ಚಿಸಿ, ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಲೈಂಗಿಕ ಹಾರ್ಮೋನು ಟೆಸ್ಟೋಸ್ಟೀರಾನ್‌ ಉತ್ಪತ್ತಿಗೆ ಪ್ರಚೋದನೆ ನೀಡುತ್ತದೆ.

ಪ್ರೊಟೀನ್‌ ಮೂಲ

ನಾವು ಸೇವಿಸುವ ಪೋಷಕಾಂಶಗಳ ಜೊತೆಯಲ್ಲಿ ಪ್ರೊಟೀನ್‌ನ ಅಂಶ ಇರುವುದು ಅತ್ಯಂತ ಮುಖ್ಯ. ಪ್ರತಿ 100 ಗ್ರಾಂ ಬೀಜಗಳಲ್ಲಿ 23.3 ಗ್ರಾಂನಷ್ಟು ಪ್ರೊಟೀನ್‌ ಇದ್ದು ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಪೂರೈಕೆ ಮಾಡುತ್ತದೆ. ಹಾಗಾಗಿ, ಪ್ರೊಟೀನ್‌ ಮೂಲಗಳನ್ನು ನೀವು ಹುಡುಕುತ್ತಿದ್ದರೆ, ಇದೂ ಉತ್ತಮ ಆಯ್ಕೆ.

ಇದನ್ನೂ ಓದಿ: Empty Stomach Foods: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ!

ಉತ್ತಮ ಕೊಬ್ಬು

ನೈಸರ್ಗಿಕ ಎಣ್ಣೆಯಂಶ ಹೊಂದರುವ ಉತ್ತಮ ಕೊಬ್ಬಿನ ಮೂಲ ಈ ಬೀಜಗಳು. ಅತಿಯಾದ ಸೇವನೆ ತೂಕ ಹೆಚ್ಚಿಸುವ ಸಾಧ್ಯತೆ ಇದ್ದರೂ, ನಿತ್ಯವೂ ಸ್ವಲ್ಪ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ಲಾಭಗಳನ್ನು ಪಡೆಯಬಹುದು.

ಹೃದಯದ ಆರೋಗ್ಯಕ್ಕೆ

ಈ ಬೀಜಗಳಲ್ಲಿ ಪಾಸ್ಪರಸ್‌ ಹೆಚ್ಚಿರುವುದರಿಂದ ಪಚನಕ್ರಿಯೆಗೂ ಇದು ಒಳ್ಳೆಯದು. ಮೆಗ್ನೀಶಿಯಂ ಕೂಡಾ ಉತ್ತಮ ಪ್ರಮಾಣದಲ್ಲಿರುವುದರಿಂದ ಹೃದಯದ ಆರೋಗ್ಯಕ್ಕೆ ಇದು ಅತ್ಯಂತ ಒಳ್ಳೆಯದು. ಹೃದಯಕ್ಕೆ ರಕ್ತ ಪಂಪ್‌ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ, ರಕ್ತನಾಳಗಳ ಶಕ್ತಿ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ.

ಮಾನಸಿಕ ಆರೋಗ್ಯಕ್ಕೆ

ಮಾನಸಿಕ ಆರೋಗ್ಯಕ್ಕೂ ಇದು ಅತ್ಯಂತ ಒಳ್ಳೆಯದು. ಇದರಲ್ಲಿ ಟ್ರಿಪ್ಟೋಫನ್‌ ಹೆಚ್ಚಿರುವುದರಿಂದ ಖಿನ್ನತೆಗೂ ಇದು ಒಳ್ಳೆಯದು.

Exit mobile version