Site icon Vistara News

Silent Heart Attack: ಏನಿದು ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌? ಇದರ ಲಕ್ಷಣಗಳೇನು?

Silent Heart Attack

ಮಧ್ಯಪ್ರದೇಶದ ಇಂದೋರ್‌ನ 35 ವರ್ಷದ ವ್ಯಕ್ತಿಯೊಬ್ಬರು ತೀವ್ರ ಎದೆನೋವಿನ ಲಕ್ಷಣಗಳು ಇಲ್ಲದೆಯೇ ಹೃದಯಾಘಾತದಿಂದ (Silent Heart Attack) ಸಾವನ್ನಪ್ಪಿದ್ದಾರೆ. ಸೌಮ್ಯವಾದ ರೋಗಲಕ್ಷಣ ಅಥವಾ ಯಾವುದೇ ತೀವ್ರವಾದ ಎದೆನೋವಿನಂತಹ ವಿಶಿಷ್ಟ ಲಕ್ಷಣಗಳಿಲ್ಲದೆಯೇ ಹೃದಯಾಘಾತಗಳು ಸಂಭವಿಸುತ್ತದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

ಸಾಮಾನ್ಯವಾಗಿ ಎದೆ ನೋವಿನ ಲಕ್ಷಣಗಳು ಕಂಡು ಬಂದರೆ ECGಯಿಂದ ರೋಗ ಲಕ್ಷಣಗಳು ಪತ್ತೆಯಾಗುತ್ತದೆ. ಎಚ್ಚರಿಕೆಯ ಚಿಹ್ನೆಗಳು ಎದೆಯ ಮಧ್ಯದಲ್ಲಿ ಅಥವಾ ದೇಹದ ಮೇಲ್ಭಾಗದ ಅಸ್ವಸ್ಥತೆ, ಉಸಿರಾಟದ ತೊಂದರೆ ಮತ್ತು ತಣ್ಣನೆಯ ಬೆವರು ಕಂಡು ಬರುತ್ತದೆ. ಆದರೆ ಇದ್ಯಾವುದು ಇಲ್ಲದೆಯೇ ಸಾವನ್ನಪ್ಪುತ್ತಿರುವವರು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಯಾವ ಸೂಚನೆಯೂ ಇಲ್ಲದೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ತೀರ್ಥ ರಾಮ್ (35) ಮೃತರು.

ತೀರ್ಥ ರಾಮ್ ಬೈಕ್‌ನಲ್ಲಿ ಹೋಗುತ್ತಿದ್ದಾಗ ರಸ್ತೆ ಮಧ್ಯೆ ಏಕಾಏಕಿ ಕೆಳಗೆ ಬಿದ್ದಿದ್ದಾನೆ. ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಆತನನ್ನು ಗಮನಿಸಿದ ಸ್ಥಳೀಯರು ಕೂಡಲೇ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಅವರು ಆಸ್ಪತ್ರೆಗೆ ತಲುಪುವ ಮೊದಲು ನಿಧನರಾಗಿದ್ದಾರೆ. ಮೃತನ ಕುಟುಂಬದವರು ಆತನ ಮರಣೋತ್ತರ ಪರೀಕ್ಷೆಗೆ ನಿರಾಕರಿಸಿದ್ದಾರೆ. ಗೋವಿಂದ್ ನಗರದ ನಿವಾಸಿ ಬಿಹಾರಿ ಲಾಲ್ ಸೋನ್ವಾನೆ ಅವರ ಪುತ್ರ ತೀರ್ಥ ರಾಮ್ ಎಂದು ಮೃತನನ್ನು ಗುರುತಿಸಲಾಗಿದೆ.

ಮಂಗಳವಾರ ಬೆಳಗ್ಗೆ ಯಾವುದೋ ಕೆಲಸದ ನಿಮಿತ್ತ ತೀರ್ಥರಾಮ್ ಮನೆಯಿಂದ ಬೈಕ್ ನಲ್ಲಿ ತೆರಳಿದ್ದರು. ಕೆಲವೇ ನಿಮಿಷಗಳಲ್ಲಿ ಆತ ರಸ್ತೆಯಲ್ಲಿ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ ಎಂಬ ಸುದ್ದಿ ಮನೆಯವರಿಗೆ ತಿಳಿಯಿತು. ಕುಟುಂಬ ಸದಸ್ಯರು ಸ್ಥಳಕ್ಕೆ ಧಾವಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅವರು ಬರುವಷ್ಟರಲ್ಲಿ ಆತ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಮೌನ ಹೃದಯಾಘಾತವೇ (ಸೈಲೆಂಟ್‌ ಹಾರ್ಟ್‌ ಆಟ್ಯಾಕ್‌) ಆತನ ಸಾವಿಗೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ.


ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ ಎಂದರೇನು?

ಮೌನ ಹೃದಯಾಘಾತವನ್ನು ಸಾಮಾನ್ಯವಾಗಿ ವೈದ್ಯಕೀಯ ಪರಿಭಾಷೆಯಲ್ಲಿ ಸೈಲೆಂಟ್ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ (SMI) ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ ಹೃದಯಾಘಾತ ಸಂಭವಿಸಿದಾಗ ವ್ಯಕ್ತಿ ಎದೆಯಲ್ಲಿ ನೋವಿನ ಸಂವೇದನೆಯನ್ನು ಅನುಭವಿಸುವುದಿಲ್ಲ. ಆದರೆ ಇತರ ಕೆಲವು ಲಕ್ಷಣಗಳು ಕಂಡುಬರುತ್ತವೆ.

ಇದನ್ನೂ ಓದಿ: Self Harming: ಅಪ್ಪನಿಗೆ ಗುಡ್ ಬೈ ಹೇಳಿಸಿ ಮಗುವನ್ನು ಕೊಂದ ತಾಯಿ!

ಮೌನ ಹೃದಯಾಘಾತದ ಲಕ್ಷಣಗಳು

ಮೌನ ಹೃದಯಾಘಾತದ ಲಕ್ಷಣಗಳು ಇಂತಿವೆ. ಶೀತ ಜ್ವರ, ಎದೆಯ ಬಳಿ ಅಥವಾ ಭುಜಗಳ ಬಳಿ ಮೇಲಿನ ಬೆನ್ನಿನ ಬಳಿ ಊತ, ಪಾದದ ಬಳಿ ನೋವು, ತೋಳು ಅಥವಾ ಮೇಲಿನ ಬೆನ್ನಿನಲ್ಲಿ ಸ್ನಾಯು ನೋವು, ಸುಸ್ತಾಗಿರುವ ಭಾವನೆ ಕಂಡು ಬರುತ್ತದೆ.

ಸಾಮಾನ್ಯ ಹೃದಯಾಘಾತದ ಲಕ್ಷಣಗಳು

ಕೆಲವು ನಿಮಿಷಗಳಿಗಿಂತ ಹೆಚ್ಚು ಎದೆ ನೋವು, ಉಸಿರಾಟದ ತೊಂದರೆ, ಚಡಪಡಿಕೆ ಭಾವನೆ, ಲಘುವಾದ ಹಠಾತ್ ಬೆವರುವಿಕೆ, ವಾಂತಿ, ತುಂಬಾ ದಣಿದ ಭಾವನೆ ಮತ್ತು ಸುಸ್ತು ಕೆಲವು ದಿನಗಳವರೆಗೆ ಇರುತ್ತದೆ.

Exit mobile version