ನವ ದೆಹಲಿ: ಕೊರೊನಾ ಮೂರನೇ ಅಲೆಯಲ್ಲಿ ಸೋಂಕಿತರು ಆಸ್ಪತ್ರೆಗೆ ದಾಖಲಾಗದೇ ಇರುವುದಕ್ಕೆ ಇಸ್ರೇಲ್ನ ಸಂಶೋಧನಾ ಸಂಸ್ಥೆಯೊಂದು ಕಾರಣ ಪತ್ತೆ ಹಚ್ಚಿದೆ. ಬೂಸ್ಟರ್ ಡೋಸ್ ಪಡೆದಿರುವ ಕಾರಣ ಅವರ ದೇಹ ಒಮಿಕ್ರಾನ್ ತಳಿಯನ್ನೂ ಪ್ರತಿರೋಧಿಸಿತು ಎಂಬುದಾಗಿ ಸಂಶೋಧನೆ ಹೇಳಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೇ ಏಕಾಏಕಿ ಶೇಕಡಾ 81 ಇಳಿಕೆಯಾಯಿತು ಎಂದು ಹೇಳಿದೆ.
ಬೆನ್ ಗುರಿಯಾನ್ ವಿಶ್ವ ವಿದ್ಯಾಲಯದ ಸಂಶೋಧಕರು ಈ ಸಂಶೋಧನೆ ಮಾಡಿದ್ದು, ಬೂಸ್ಟರ್ ಡೋಸ್ನಿಂದಾಗಿ ಹಲವರ ಪ್ರಾಣ ಉಳಿದಿದೆ ಹಾಗೂ ಆಸ್ಪತ್ರೆಗೆ ದಾಖಲಾಗುವ ಪ್ರಮೇಯವೂ ಕಡಿಮೆಯಾಗಿದೆ ಎಂದು ಹೇಳಿದೆ.
ಪ್ರಮುಖವಾಗಿ 65 ವರ್ಷಕ್ಕಿಂತ ಹಚ್ಚಿನ ವಯಸ್ಸಿನವರು ಬೂಸ್ಟರ್ ಡೋಸ್ ಪಡೆದ ಬಳಿಕ ಸೋಂಕಿಗೆ ಒಳಗಾದರೂ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಎದುರಾಗಿಲ್ಲ. ಒಮಿಕ್ರಾನ್ ವೈರಸ್ ತಳಿಯನ್ನೂ ಇದು ಪ್ರತಿರೋಧಿಸಿದೆ ಎಂದು ಸಂಶೋಧನೆ ಹೇಳಿದೆ.
ಬೂಸ್ಟರ್ ಡೋಸ್ ವಿತರಣೆ ಆರಂಭಗೊಂಡ ಬಳಿಕ ಕೊರೊನಾ ಸಾವಿನ ಪ್ರಕರಣ ಶೇ. 86ರಷ್ಟು ಕಡಿಮೆಯಾಗಿದೆ ಎಂಬುದಾಗಿಯೂ ಸಂಶೋಧನೆ ಹೇಳಿದೆ.
ಇದನ್ನೂ ಓದಿ | Covishield Vaccine | ಕೊರೊನಾ ಭೀತಿ ಮಧ್ಯೆಯೇ ಕೇಂದ್ರಕ್ಕೆ ಉಚಿತವಾಗಿ 2 ಕೋಟಿ ಕೋವಿಶೀಲ್ಡ್ ಡೋಸ್ ನೀಡಲು ಸೀರಂ ತೀರ್ಮಾನ