Site icon Vistara News

Symptoms Of Mouth Cancer: ಇವು ಬಾಯಿ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳು, ನಿರ್ಲಕ್ಷಿಸಬೇಡಿ

Symptoms Of Mouth Cancer

ಆರಂಭಿಕ ಹಂತದಲ್ಲಿ ಪತ್ತೆಯಾಗುವ ಕ್ಯಾನ್ಸರ್‌ಗಳನ್ನು (Symptoms Of Mouth Cancer) ಗುಣಪಡಿಸಬಹುದು ಎನ್ನುತ್ತದೆ ವೈದ್ಯ ವಿಜ್ಞಾನ. ಸವಾಲು ಇರುವುದು ಇಲ್ಲಿಯೇ. ಆರಂಭಿಕ ಹಂತದಲ್ಲಿ ಕೆಲವೊಮ್ಮೆ ಅದರ ಲಕ್ಷಣಗಳು ಬೇರೇನನ್ನೊ ಸೂಚಿಸಬಹುದು; ಬೇರೇನೋ ರೋಗದಂತೆ ಗೊಂದಲ ಹುಟ್ಟಿಸಬಹುದು. ಉದಾಹರಣೆಗೆ ಬಾಯಿಯ ಕ್ಯಾನ್ಸರ್‌ ಸಹ ಆರಂಭದಲ್ಲಿ ಹುಣ್ಣಿನಂತೆ ಗೋಚರಿಸಬಹುದು. ಹಾಗಿರುವಾಗ ಬಾಯಲ್ಲಿ ಆಗುವ ಹುಣ್ಣುಗಳನ್ನೆಲ್ಲ ಶಂಕಿಸುತ್ತಾ ಇರಲು ಸಾಧ್ಯವೇ? ಈ ಬಗ್ಗೆ (Symptoms Of Mouth Cancer) ವಿವರವಾಗಿ ತಿಳಿಯೋಣ.
ಬಾಯಿಯ ಕ್ಯಾನ್ಸರ್‌ನ ಲಕ್ಷಣಗಳು ಬಾಯಿಯ ಯಾವುದೇ ಭಾಗವನ್ನೂ ಬಾಧಿಸಬಹುದು. ಒಸಡು, ನಾಲಿಗೆ, ಗಂಟಲು, ತುಟಿ, ಬಾಯಿಯ ಒಳಗು ಮುಂತಾದ ಯಾವುದೇ ಭಾಗದಲ್ಲಿ ಗೋಚರಿಸುವ ಲಕ್ಷಣಗಳ ಬಗ್ಗೆ ಗಮನ ನೀಡಿ. ಈಗ ಲಕ್ಷಣಗಳ ಬಗ್ಗೆ ಹೇಳುವುದಾದರೆ

ಇಂಥ ಯಾವುದೇ ಸಂದರ್ಭದಲ್ಲಿ ವೈದ್ಯರಲ್ಲಿ ತೋರಿಸಬೇಕು. ಈ ಲಕ್ಷಣಗಳು ಯಾರಿಗಾದರೂ ಬರಬಹುದು. ಹೀಗೆ ಲಕ್ಷಣಗಳು ಇದ್ದವರಿಗೆಲ್ಲ ಕ್ಯಾನ್ಸರ್‌ ಬಂದಿದೆ ಎಂದು ಖಂಡಿತ ಹೇಳಲಾಗದು. ಅದನ್ನು ಪರೀಕ್ಷೆಗಳ ಮೂಲಕ ವೈದ್ಯರು ನಿರ್ಧರಿಸಬೇಕು. ಇದಕ್ಕಾಗಿ ಜನರಲ್‌ ಫಿಸಿಶಿಯನ್‌ ಅಥವಾ ದಂತ ವೈದ್ಯರಲ್ಲೂ ತೋರಿಸಬಹುದು. ಪ್ರಾರಂಭಿಕ ಹಂತದಲ್ಲಿರುವ ಬಾಯಿಯ ಕ್ಯಾನ್ಸರ್‌ ಸಾಮಾನ್ಯವಾಗಿ ಗುಣವಾಗುತ್ತದೆ. ಬಾಯಲ್ಲಿನ ಟ್ಯೂಮರ್‌ ತೆಗೆದು, ರೇಡಿಯೇಶನ್‌, ಕಿಮೊ ಮುಂತಾದ ಚಿಕಿತ್ಸೆಗಳನ್ನು ನೀಡಿ, ಕ್ಯಾನ್ಸರ್‌ ಕೋಶಗಳನ್ನು ನಾಶ ಪಡಿಸಲಾಗುತ್ತದೆ. ಪ್ರಾರಂಭಿಕ ಹಂತವನ್ನು ಮೀರಿದ್ದರೆ ಚಿಕಿತ್ಸೆಯೂ ಸಂಕೀರ್ಣವಾಗಬಹುದು.

ತಡೆಯಿಲ್ಲವೇ?

ಬಾಯಿಯ ಕ್ಯಾನ್ಸರ್‌ನ್ನು ನಿಶ್ಚಿತವಾಗಿ ತಡೆಯುವಂಥ ಮಾರ್ಗಗಳಿಲ್ಲ. ಆದರೆ ಇದರ ಭೀತಿಯನ್ನು ದೂರ ಮಾಡುವಂಥ ಕ್ರಮಗಳು ಖಂಡಿತವಾಗಿಯೂ ಇವೆ.

ತಂಬಾಕು ಬೇಡ

ಸಿಗರೇಟ್‌, ಗುಟ್ಕಾ ಮುಂತಾದ ಯಾವುದೇ ರೂಪದಲ್ಲಿ ತಂಬಾಕು ಸೇವನೆಯು ಕ್ಯಾನ್ಸರ್‌ಗೆ ಆಹ್ವಾನ ನೀಡುತ್ತದೆ. ಹಾಗಾಗಿ ತಂಬಾಕಿನ ಅಭ್ಯಾಸವಿದ್ದರೆ ಮೊದಲು ದೂರ ಮಾಡಿ. ಆಲ್ಕೋಹಾಲ್‌ ಸೇವನೆಯಿಂದ ಆರೋಗ್ಯದ ಗತಿ ಬಿಗಡಾಯಿಸುತ್ತದೆ. ಇಂಥ ಎಲ್ಲ ಅಭ್ಯಾಸಗಳಿಗೂ ಕಡಿವಾಣ ಹಾಕಿ

ಬಿಸಿಲು

ತುಟಿ ಮತ್ತು ಮುಖದ ಮೇಲೆ ತೀಕ್ಷ್ಣವಾದ ಬಿಸಿಲು ಬೀಳದಂತೆ ಎಚ್ಚರಿಕೆ ವಹಿಸಿ. ಬೇಸಿಗೆಯಲ್ಲಿ ಮುಖಕ್ಕೆ ನೆರಳು ಬೀಳುವಂತೆ ಟೋಪಿ ಧರಿಸಿ. ಮುಖಕ್ಕೆ ಸನ್‌ಸ್ಕ್ರೀನ್‌ ಹಚ್ಚಿದಂತೆ, ತುಟಿಗಳಿಗೂ ಎಸ್‌ಎಫ್‌ಪಿ ಇರುವ ಕ್ರೀಮ್‌ಗಳು ಲಭ್ಯವಿದೆ, ಗಮನಿಸಿ.

ತಪಾಸಣೆ

ಕಾಲಕಾಲಕ್ಕೆ ನಿಯಮಿತವಾಗಿ ದಂತ ವೈದ್ಯರಲ್ಲಿ ತಪಾಸಣೆಗೆ ಹೋಗಿ. ಇದರಿಂದ ಬಾಯಿಯ ಆರೋಗ್ಯವೂ ಚೆನ್ನಾಗಿರುತ್ತದೆ. ಇಂಥ ಯಾವುದೇ ಮಾರಿಯನ್ನು ಪ್ರಾರಂಭದಲ್ಲೇ ಚಿವುಟುವುದಕ್ಕೆ ಸಹಾಯ ಆಗುತ್ತದೆ.

ಇದನ್ನೂ ಓದಿ: No Smoking Day: ಎಳೆದರೆ ದಂ, ಪ್ರಾಣ ಖತಂ! ಧೂಮಪಾನದಿಂದ ದೂರ ಸರಿಯಲು ಹೀಗೆ ಮಾಡಿ

Exit mobile version