Site icon Vistara News

Ash Gourd Benefits: ಸಕಲ ಸಂಪನ್ನ ಗುಣ ವಲ್ಲಭ ಈ ಬೂದುಕುಂಬಳಕಾಯಿ!

Ash Gourd Benefits

ಬೂದು ಕುಂಬಳಕಾಯಿ ಆಯುರ್ವೇದದಲ್ಲಿ ಅತ್ಯುನ್ನತ ಸ್ಥಾನ ಪಡೆದ ತರಕಾರಿಗಳಲ್ಲಿ ಒಂದು. ಪುರಾತನ ಕಾಲದಿಂದಲೂ ಕುಂಬಳಕಾಯಿಯ ಆರೋಗ್ಯದ ಲಾಭಗಳ ಬಗೆಗೆ ನಮ್ಮ ಹಿರಿಯರಿಗೆ ಸಾಕಷ್ಟು ತಿಳಿದಿದ್ದವು. ಹಾಗಾಗಿ, ಹಿಂದಿನಿಂದಲೂ ಹಿರಿಯರು ಬೂದುಕುಂಬಳಕಾಯಿಯ ಬಳಕೆಯನ್ನು ಪುಷ್ಠೀಕರಿಸುತ್ತಾರೆ. ಭಾರತದಾದ್ಯಂತ ನಾನಾ ಹೆಸರಿಂದ ಕರೆಯಲ್ಪಡುವ ಈ ತರಕಾರಿಯನ್ನು ಬಗೆಬಗೆಯಲ್ಲಿ ನಿತ್ಯಾಹಾರದಲ್ಲಿ ಬಳಕೆ ಮಾಡುತ್ತಾರೆ. ಅತ್ಯಂತ ಕಡಿಮೆ ಕ್ಯಾಲರಿಯಿರುವ, ಸಿಕ್ಕಾಪಟ್ಟೆ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಕುಂಬಳಕಾಯಿ ತೂಕ ಇಳಿಸುವ ಆಹಾರಕ್ರಮವೂ ಸೇರಿದಂತೆ ಹಲವು ಆರೋಗ್ಯವರ್ಧನಾ ಆಹಾರಕ್ರಮದಲ್ಲಿ ಬಳಸಲಾಗುತ್ತದೆ. ಹೊಟ್ಟೆ ತಿಂಬಿದಂತಹ ಅನುಭವವನ್ನು ಕೊಡುವ, ಬಹಳ ಕಾಲ ಏನೂ ತಿನ್ನಬೇಕೆಂದು ಅನಿಸದೆ ಇರುವಂತೆ ಮಾಡುವ ಕಾರಣ ತೂಕ ಇಳಿಸಲು ಹಾಗೂ ದೇಹಕ್ಕೆ ಬೇಕಾಗುವ ಎಲ್ಲ ಪೋಷಕಾಂಶಗಳನ್ನೂ (Ash Gourd Benefits) ನೀಡುವ ಆಹಾರವಿದು.

ಹೃದ್ರೋಗಿಗಳಿಗೆ ಒಳ್ಳೆಯದು

ಬೂದುಕುಂಬಳಕಾಯಿ ಹೃದ್ರೋಗಿಗಳಿಗೆ ಅತ್ಯಂತ ಒಳ್ಳೆಯದು. ಇದರ ಸೇವನೆಯಿಂದ ಕೊಲೆಸ್ಟೆರಾಲ್‌ ಮಟ್ಟದಲ್ಲಿ ಏರಿಕೆಯಾಗದು. ಇದು ರಕ್ತಪರಿಚಲನೆಯನ್ನೂ ಚುರುಕುಗೊಳಿಸುವುದರಿಂದ ಹೃದಯಕ್ಕೆ ಸರಿಯಾಗಿ ರಕ್ತಪೂರಣವಾಗಲು ಸಹಾಯ ಮಾಡುತ್ತದೆ.

ಕಿಡ್ನಿ ಸಮಸ್ಯೆಗೆ ಪರಿಹಾರ

ಕಿಡ್ನಿಯ ಸಮಸ್ಯೆಯಿರುವ ಮಂದಿಗೂ ಇದು ಬಹಳ ಒಳ್ಳೆಯದು. ಇದು ಕಿಡ್ನಿಯನ್ನು ಡಿಟಾಕ್ಸ್‌ ಮಾಡಿ, ದೇಹದಿಂದ ಕಲ್ಮಶಗಳನ್ನು ಹೊರಹಾಕುವಂತೆ ಮಾಡುತ್ತದೆ.

ಉಸಿರಾಟದ ಸಮಸ್ಯೆಗೆ ಪರಿಹಾರ

ಉಸಿರಾಟದ ಸಮಸ್ಯೆಯಿರುವ ಮಂದಿಗೂ ಬೂದುಕುಂಬಳಕಾಯಿ ಉತ್ತಮ. ಇದು ಕಫವನ್ನು ತೆಗೆದು ಹಾಕಿ, ಕಟ್ಟಿದ ಎದೆ, ಮೂಗನ್ನು ಸರಿಪಡಿಸುತ್ತದೆ. ಅಲರ್ಜಿ ಹಾಗೂ ಉಸಿರಾಟದ ಸಮಸ್ಯೆಯಿದ್ದರೆ ಇದು ಒಳ್ಳೆಯದು.

ಕಿಟೋ ಡಯಟ್‌ಗೆ ಪೂರಕ

ಇತ್ತೀಚೆಗಿನ ದಿನಗಳಲ್ಲಿ ಕಿಟೋ ಡಯಟ್‌ ಮಾಡುವ ಮಂದಿಗೂ ಇದು ಒಳ್ಳೆಯದು. ಇದರಲ್ಲಿ ಸಕ್ಕರೆ ಹಾಗೂ ಕಾರ್ಬೋಹೈಡ್ರೇಟ್‌ನ ಮಟ್ಟ ಬಹಳ ಕಡಿಮೆ ಇರುವುದರಿಂದ ಡಯೆಟ್‌ಗೆ ಬಹಳ ಒಳ್ಳೆಯ ಆಹಾರ.

ವಿಟಮಿನ್‌ ಇ ಆಗರ

ಇದರಲ್ಲಿ ಸಾಕಷ್ಟು ವಿಟಮಿನ್‌ ಇ ಹಾಗೂ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿರವುದರಿಂದ ಚರ್ಮಕ್ಕಿ ಇದು ಬಹಳ ಒಳ್ಳೆಯದು. ಚರ್ಮದಲ್ಲಿ ತೇವಾಂಶವನ್ನು ಉಳಿಸಿ ಒಣಗದಂತೆ ನೋಡಿಕೊಂಡು ಚರ್ಮವನ್ನು ಹೊಳಪಾಗಿಸುತ್ತದೆ.

ಚರ್ಮದ ಸಮಸ್ಯೆಗೆ ಔಷಧ

ಚರ್ಮದ ಸಮಸ್ಯೆಗಳಾದ ಕಜ್ಜಿ, ಅಲರ್ಜಿಗಳು, ಉರಿಯೂತದಂತಹ ಸಮಸ್ಯೆಗಳಿಗೆ ಈದು ಬಹಳ ಒಳ್ಳೆಯದು. ವಾತಾವರಣದ ಮಾಲಿನ್ಯದಿಂದ ಉಂಟಾಗುವ ಚರ್ಮದ ಸಮಸ್ಯೆಗಳಿಗೆ, ಸೂರ್ಯನ ಯುವಿ ಕಿರಣಗಳಿಂದಾಗುವ ಹಾನಿಗೆ ಕೂಡಾ ಇದು ಒಳ್ಳೆಯದು.

ಕೂದಲ ಬೆಳವಣಿಗೆಗೆ ಸಹಕಾರಿ

ಕೂದಲ ಬೆಳವಣಿಗೆಗೂ ಬೂದುಕುಂಬಳಕಾಯಿ ಒಳ್ಳೆಯದು. ಉದ್ದ ಹಾಗೂ ತುಂಡಾಗದ ಗಟ್ಟಿಮುಟ್ಟಾದ ಕೂದಲಿಗೆ ಇದು ಬಹಳ ಪೋಷಕಾಂಶಗಳನ್ನು ಒದಗಿಸುತ್ತದೆ. ಇದನ್ನು ಜೆಲ್‌ನಂತೆ ಕೂದಲಿಗೆ ಹಚ್ಚುವುದರಿಂದಲೂ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು.

ತಲೆ ಹೊಟ್ಟಿಗೆ ಪರಿಹಾರ

ತಲೆಯಲ್ಲಿ ಅತಿಯಾದ ಹೊಟ್ಟಿನಿಂದ ಬಳಲುತ್ತಿದ್ದೀರೆಂದಾದಲ್ಲಿ ನಿಮಗೆ ಉತ್ತರ ಬೂದುಕುಂಬಳಕಾಯಿಯಲ್ಲಿದೆ. ವಾತಾವರಣದ ಕಲುಶಿತತೆಯಿಂದ ಹೆಚ್ಚುವ ತಲೆಹೊಟ್ಟಿನ ಸಮಸ್ಯೆಗೂ ಇದು ಪರಿಹಾರ ಒದಗಿಸುತ್ತದೆ.

ವಿಟಮಿನ್‌ ಸಿ

ಇದರಲ್ಲಿ ಸಾಕಷ್ಟು ವಿಟಮಿನ್‌ ಸಿ ಇರುವುದರಿಂದ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿ ದೇಹದ ಉಷ್ಣತೆ ಕಡಿಮೆಗೊಳಿಸುವ ಶಕ್ತಿ ಇರುವುದರಿಂದ ಇದು ಜ್ವರವನ್ನು ಕಡಿಮೆ ಮಾಡುವಲ್ಲಿ ಸಹಾಯ ಆಡುತ್ತದೆ.

ಅರಿಶಿನ ಕಾಯಿಲೆ ಶಮನ

ಜಾಂಡೀಸ್‌ ಅಥವ ಅರಿಶಿನ ಕಾಯಿಲೆಯಂತಹ ರೋಗಕ್ಕೂ ಬೂದು ಕುಂಬಳಕಾಯಿಯಲ್ಲಿ ಉತ್ತರವಿದೆ. ಇದು ಪಿತ್ತಕೋಶಕ್ಕೆ ಅತ್ಯಂತ ಒಳ್ಳೆಯ ಆಹಾರವಾಗಿರುವುದರಿಂದ ಜಾಂಡೀಸ್‌ಗೂ ಒಳ್ಳೆಯದು. ಇದರ ಎಲೆಗಳು ಜ್ವರ ಹಾಗೂ ಅರಿಶಿನ ಕಾಯಿಲೆಗೆ ಒಳ್ಳೆಯ ಮದ್ದು.

ಅಸಿಡಿಟಿಗೆ ಮದ್ದು

ಅಸಿಡಿಟಿಯಂತಹ ಸಾಮಾನ್ಯವಾಗಿ ಎಲ್ಲರೂ ತೊಂದರೆ ಪಡುವ ಸಮಸ್ಯೆಗೂ ಬೂದುಕುಂಬಳದಲ್ಲಿ ಉತ್ತರವಿದೆ. ದೇಹದಲ್ಲಿರುವ ಅಸಿಡಿಕ್‌ ಅಂಶಗಳ ಪ್ರವರ್ಧನೆಗೆ ಇದು ಆಸ್ಪದ ಕೊಡುವುದಿಲ್ಲವಾದ್ದರಿಂದ ಇದು ಅಸಿಡಿಟಿಗೂ ಒಳ್ಳೆಯದು.

ನಿದ್ರಾಹೀನತೆಗೆ ಪರಿಹಾರ

ನಿದ್ದೆಯ ಸಮಸ್ಯೆಯಿಂದ ಬಳಲುವ ಮಂದಿಗೆ, ಇನ್‌ಸೋಮ್ನಿಯಾದಂತಹ ಕಾಯಿಲೆಯ ಸಮಸ್ಯೆ ಇರುವ ಮಂದಿಗೆ ಈ ಬೂದುಕುಂಬಳಕಾಯಿ ಒಳ್ಳೆಯ ನಿದ್ದೆಯನ್ನೂ ತಂದು ಕೊಡುವುದು. ಹಾಗಾಗಿ ಇದು ನಿದ್ರೆಗೂ ಬಹಳ ಒಳ್ಳೆಯದು.

ಇದನ್ನೂ ಓದಿ: Health Tips for Winter: ಚಳಿಗಾಲದಲ್ಲಿ ನ್ಯುಮೋನಿಯಾ, ಶ್ವಾಸಕೋಶದ ಸಮಸ್ಯೆಗಳಿಂದ ದೂರ ಇರಲು ಹೀಗೆ ಮಾಡಿ…

Exit mobile version