Site icon Vistara News

Tips For Teenager Parents: ಉತ್ತಮ ಪೋಷಕರಾಗಿ; ಹರೆಯದ ಮಕ್ಕಳನ್ನು ಅರ್ಥ ಮಾಡಿಕೊಳ್ಳಿ!

Tips For Teenager Parents

ಪುಟ್ಟ ಮಕ್ಕಳನ್ನು (small kids) ಪಾಲನೆ ಮಾಡುವುದು ಪೋಷಕರಿಗೆ (Tips For Teenager Parents) ಎಷ್ಟು ಕಷ್ಟವೋ ಹದಿಹರೆಯದ ಮಕ್ಕಳನ್ನು (Teenager) ಸಂಭಾಳಿಸುವುದೂ ಅಷ್ಟೇ ಕಠಿಣವಾಗಿರುತ್ತದೆ. ಸಮಯಕ್ಕೆ ಸರಿಯಾಗಿ ಸರಿಯಾದ ಮಾರ್ಗದರ್ಶನ ದೊರೆಯದೇ ಇದ್ದರೆ ಹರೆಯದ ಮಕ್ಕಳು ಹಾದಿ ತಪ್ಪುವ ಅಪಾಯ ಹೆಚ್ಚಾಗಿರುತ್ತದೆ. ಹೀಗಾಗಿ ಹರೆಯದ ವಯಸ್ಸಿನ ಮಕ್ಕಳನ್ನು ಹೇಗೆ ತಿದ್ದುವುದು, ಅವರಿಗೆ ಹೇಗೆ ಸರಿಯಾದ ಮಾರ್ಗದರ್ಶನ ಮಾಡುವುದು ಎಂಬುದನ್ನು ತಿಳಿದುಕೊಳ್ಳುವುದು ಬಹು ಮುಖ್ಯ.

ಹರೆಯದ ಮಕ್ಕಳಿಗೆ ಹೆಚ್ಚು ಶಿಸ್ತು ಬಂಧನ ಎಂದೆನಿಸಿದರೆ, ಹೆಚ್ಚು ಸ್ವಾತಂತ್ರ್ಯ ಅಪಾಯ ತೊಂದೊಡ್ಡುವ ಆತಂಕವಿರುತ್ತದೆ. ಹೀಗಾಗಿ ಹರೆಯದ ಮಕ್ಕಳೊಡನೆ ಪೋಷಕರು ಹೇಗಿರಬೇಕು ಎಂಬುದು ಅರಿತುಕೊಳ್ಳಬೇಕು.

ಹದಿಹರೆಯದವರನ್ನು ಬೆಳೆಸುವುದು ಸಾಕಷ್ಟು ಸವಾಲಿನ ಕಾರ್ಯವಾಗಿರುತ್ತದೆ. ಹೆಚ್ಚಿನ ಪೋಷಕರು ತಮ್ಮ ಹದಿಹರೆಯದ ಮಕ್ಕಳೊಂದಿಗೆ ಉತ್ತಮ ಮತ್ತು ಆರೋಗ್ಯಕರ ಬಾಂಧವ್ಯವನ್ನು ಹಂಚಿಕೊಳ್ಳುವುದು ಅವರು ಸಂತೋಷದಿಂದ ಸಹಬಾಳ್ವೆ ನಡೆಸಲು ಉತ್ತಮ ಮಾರ್ಗವಾಗಿದೆ ಎಂದು ಅರಿತುಕೊಳ್ಳುತ್ತಾರೆ. ಇಲ್ಲಿ ಇಬ್ಬರೂ ಪರಸ್ಪರ ಅಭಿಪ್ರಾಯಗಳನ್ನು ಹೇರದೇ ಇರಲು ಪ್ರಯತ್ನಿಸುತ್ತಾರೆ.

ಹರೆಯದವರಿಗೆ ಒಳ್ಳೆಯ ತಾಯಿಯಾಗಲು ಬಯಸಿದರೆ ಅವರು ನಿಮ್ಮನ್ನು ಮತ್ತೆ ಇಷ್ಟಪಡಬೇಕೆಂದು ಬಯಸಿದರೆ ನೀವು ಅವರ ಆಯ್ಕೆಗಳನ್ನು ಗೌರವಿಸಲು ಕಲಿಯಬೇಕು. ಅವರ ಬಗ್ಗೆ ಸಂಪೂರ್ಣ ನಿರ್ಧಾರವನ್ನು ನೀವು ತೆಗೆದುಕೊಳ್ಳಬಾರದು.

ಹದಿಹರೆಯದವರು ಗೌರವಿಸಲು, ಕೇಳಲು, ಮೌಲ್ಯಯುತ ಮತ್ತು ಮೆಚ್ಚುಗೆ ಪಡೆಯಲು ಬಯಸುತ್ತಾರೆ.ಒಳ್ಳೆಯ ಪೋಷಕರಾಗಬೇಕು ಎಂದು ಬಯಸುವವರು ಹರೆಯದ ಮಕ್ಕಳನ್ನು ಪೋಷಿಸಲು ಪಾಲನೆಯ ಶೈಲಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬದಲಾವಣೆಗಳನ್ನು ಮಾಡಲು ಸಿದ್ಧರಾಗಿರಬೇಕು. ಹದಿಹರೆಯದವರಿಗೆ ಮಕ್ಕಳಿಗೆ ಒಳ್ಳೆಯ ಪೋಷಕರಾಗಲು ಸಹಾಯ ಮಾಡುವ ಕೆಲವು ಅಂಶಗಳು ಇಲ್ಲಿವೆ.


ಗೌಪ್ಯತೆಯನ್ನು ಕಾಪಾಡಿ

ಹದಿಹರೆಯದ ಮಕ್ಕಳು ತಮ್ಮ ಬಿಡುವಿನ ವೇಳೆಯಲ್ಲಿ ಏನು ಮಾಡಲು ಬಯಸುತ್ತಾರೆ ಎಂಬುದನ್ನು ಗೌಪ್ಯವಾಗಿ ಇಡಲು ಬಯಸುತ್ತಾರೆ. ಬಹಳಷ್ಟು ಪೋಷಕರು ಇದನ್ನು ವಿರೋಧಿಸುತ್ತಾರೆ. ಆದರೆ ಹದಿಹರೆಯದವರೊಂದಿಗೆ ಆರೋಗ್ಯಕರ ಬಾಂಧವ್ಯವನ್ನು ಹಂಚಿಕೊಳ್ಳಲು ಬಯಸಿದರೆ ಅವರ ಆಯ್ಕೆಗಳು ಮತ್ತು ಗಡಿಗಳನ್ನು ಗೌರವಿಸಬೇಕು ಮತ್ತು ಅವರಿಗೆ ಗೌಪ್ಯತೆಗೆ ಅವಕಾಶ ಕೊಡಬೇಕು. ಇದನ್ನು ಅವರು ಖಂಡಿತವಾಗಿ ಇಷ್ಟಪಡುತ್ತಾರೆ.

ಮನಸ್ಸನ್ನು ಅರ್ಥ ಮಾಡಿಕೊಳ್ಳಿ

ಹರೆಯದವರ ಪ್ರತಿಯೊಂದು ಕೆಲಸವನ್ನು ಪ್ರಶ್ನಿಸುವುದು, ಮೇಲ್ವಿಚಾರಣೆ ಮಾಡುವುದು ಅವರಿಗೆ ನಿಮ್ಮಿಂದ ಎಲ್ಲವನ್ನು ಮುಚ್ಚಿಡುವಂತೆ ಮಾಡಬಹುದು. ಹದಿಹರೆಯದ ಮಕ್ಕಳನ್ನು ಕೇಳಿ, ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಅನಗತ್ಯವೆಂದು ನಿಮಗನಿಸುವ ವಿಚಾರಗಳನ್ನು ತಿಳಿಸಿ. ಆದರೆ ಅದನ್ನು ಅವರ ಮೇಲೆ ಹೇರಲು ಹೋಗಬೇಡಿ. ಹದಿಹರೆಯದವರಿಗೆ ಕೊಂಚ ಸ್ವಾತಂತ್ರ್ಯ ನೀಡಿ.

ಹರೆಯದವರನ್ನು ಗೌರವಿಸಿ

ಹದಿಹರೆಯದವರು ತಮ್ಮೊಂದಿಗೆ ಯಾವ ರೀತಿಯ ಸಂಬಂಧವನ್ನು ಹಂಚಿಕೊಳ್ಳಲು ಬಯಸುತ್ತಾರೆ ಎಂಬುದನ್ನು ಪೋಷಕರು ಗುರುತಿಸುವುದು ಮುಖ್ಯವಾಗಿದೆ. ಹದಿಹರೆಯದವರು ನಿಮ್ಮೊಂದಿಗೆ ಸ್ನೇಹಿತರಾಗಲು ಬಯಸಬಹುದು, ಆದರೆ ಅವರು ತಮ್ಮ ಶಾಲೆ ಮತ್ತು ಇತರ ಸ್ನೇಹಿತರ ಬಗ್ಗೆ ಎಲ್ಲವನ್ನೂ ಹೇಳಲು ಬಯಸುವುದಿಲ್ಲ. ಪೋಷಕರಾಗಿ ನೀವು ಅವರೊಂದಿಗೆ ಸರಿಯಾಗಿ ವರ್ತಿಸಬೇಕು. ಹದಿಹರೆಯದವರ ಆಯ್ಕೆಗಳನ್ನು ಗೌರವಿಸಿ. ಅವರೊಂದಿಗೆ ಆರಾಮವಾಗಿ ಚರ್ಚಿಸಿ. ಇದು ನಿಮ್ಮ ಮತ್ತು ಅವರ ಸಂಬಂಧವನ್ನು ಆರೋಗ್ಯಕರಗೊಳಿಸುತ್ತದೆ.

ಸಂಭಾಷಣೆಗಳನ್ನು ನಡೆಸಿ

ಪೋಷಕರೊಂದಿಗೆ ಹರೆಯದ ಮಕ್ಕಳ ಭಿನ್ನಾಭಿಪ್ರಾಯ ಬರುವುದು ಸಹಜ. ಕೆಲವು ವಿಷಯಗಳ ಬಗ್ಗೆ ಸಮಯ, ಸಂದರ್ಭ ನೋಡಿ ಅವರೊಂದಿಗೆ ಸಂಭಾಷಣೆಗಳನ್ನು ನಡೆಸಿ. ಹದಿಹರೆಯದ ಮಗುವನ್ನು ಬೆಳೆಸುವುದು ಎಂದರೆ ಅವರೊಂದಿಗೆ ಹೆಚ್ಚು ಮುಕ್ತ ಮತ್ತು ಪ್ರಾಮಾಣಿಕವಾಗಿರಬೇಕು. ಹರೆಯದ ಮಕ್ಕಳೊಂದಿಗೆ ಮಾತನಾಡುವಾಗ ಮುಕ್ತ ಮನಸ್ಸಿನವರಾಗಿರಬೇಕು.


ಹೊಸ ವಿಷಯಗಳನ್ನು ಕಲಿಯಿರಿ

ಪೋಷಕರು ಮಾತ್ರ ತಮ್ಮ ಹರೆಯದ ಮಕ್ಕಳೊಂದಿಗೆ ತಮ್ಮ ಕಲಿಕೆಯನ್ನು ಹಂಚಿಕೊಳ್ಳಬಹುದು ಎಂಬುದು ಎಲ್ಲ ಕಾಲಕ್ಕೂ ಪ್ರಸ್ತುತವಲ್ಲ. ಈಗ ಮಕ್ಕಳ ಆಲೋಚನೆಗಳು ನಮಗಿಂತ ವೇಗವಾಗಿದೆ ಎಂಬುದನ್ನು ತಿಳಿದುಕೊಳ್ಳಿ. ತಮ್ಮ ಮಗುವಿನಿಂದ ಹೊಸ ವಿಷಯಗಳನ್ನು ಕಲಿಯಲು ನೀವು ಆಸಕ್ತರಾಗಿರಬೇಕು. ಹದಿಹರೆಯದವರು ವಿಭಿನ್ನ ಅಭಿರುಚಿಯನ್ನು ಹೊಂದಿರಬಹುದು. ಹೀಗಾಗಿ ಅವರೊಂದಿಗೆ ಮುಕ್ತ ಸಂಭಾಷಣೆಗಳನ್ನು ನಡೆಸಿ. ಅಲ್ಲಿ ಪರಸ್ಪರ ಹೊಸ ಆಲೋಚನೆಗಳು ಹುಟ್ಟಿಕೊಳ್ಳಬಹುದು. ಇದು ನಿಮ್ಮ ಹದಿಹರೆಯದ ಮಕ್ಕಳೊಂದಿಗೆ ನಿಮ್ಮ ಬಾಂಧವ್ಯವನ್ನು ಬಲಪಡಿಸುವುದಲ್ಲದೆ ಇತರ ವಿಷಯಗಳ ಜೊತೆಗೆ ಅವರ ವ್ಯಕ್ತಿತ್ವ, ಜೀವನ, ನಡವಳಿಕೆಯ ಒಳನೋಟವನ್ನು ನಿಮಗೆ ಒದಗಿಸುತ್ತದೆ.

ಇದನ್ನೂ ಓದಿ: Allergies During Monsoon: ಮಳೆಗಾಲದಲ್ಲಿ ಅಲರ್ಜಿ ಸಮಸ್ಯೆಯಿಂದ ಪಾರಾಗುವುದು ಹೇಗೆ?

ಆಲಿಸಿ, ಬೋಧಿಸಬೇಡಿ

ಹದಿಹರೆಯದವರನ್ನು ಬೆಳೆಸಲು ಸಾಕಷ್ಟು ತಾಳ್ಮೆ ಬೇಕಾಗಬಹುದು. ಅವರು ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ನಿಮ್ಮ ಬಳಿಗೆ ಬಂದಾಗ ಅವರು ನಿಮ್ಮಿಂದ ಬಯಸುವುದು ತಾಳ್ಮೆಯ ವಿಚಾರಣೆಯನ್ನು. ಹೀಗಾಗಿ ಹದಿಹರೆಯದವರನ್ನು ಬೆಳೆಸುವಾಗ ಪೋಷಕರು ತಿಳಿದಿರಬೇಕಾದ ಅತ್ಯಂತ ನಿರ್ಣಾಯಕ ಅಂಶವೆಂದರೆ ನಿಮ್ಮ ಮಗುವಿಗೆ ಏನು ತೊಂದರೆಯಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವರ ಮಾತನ್ನು ಆಲಿಸಿ, ಆದರೆ ಅವರಿಗೆ ಯಾವುದೇ ಬೋಧನೆ ಮಾಡಬೇಡಿ. ಅವರೊಂದಿಗೆ ಮುಕ್ತ ಮನಸ್ಸಿನಿಂದ ಮಾತನಾಡಿ.

Exit mobile version