ಡಿಜಿಟಲ್ ಕ್ಷೇತ್ರದಲ್ಲಿ (digital wave) ಈಗ ಕ್ರಾಂತಿಯಾಗುತ್ತಿದೆ. ಎಲ್ಲ ಕಡೆಯೂ ಯುಪಿಐ ಆಧಾರಿತ ಪಾವತಿಗಳು (UPI in Healthcare) ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಆರೋಗ್ಯ ಕ್ಷೇತ್ರದಲ್ಲೂ (health sector) ಡಿಜಿಟಲ್ ಪಾವತಿ, ಇತರ ತಂತ್ರಜ್ಞಾನಗಳ ಬಳಕೆ ಹೊಸ ಅಲೆಯನ್ನೇ ಸೃಷ್ಟಿಸುತ್ತಿದೆ. ಭಾರತದ (India) ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ತರಂಗ ಹೊರಹೊಮ್ಮುವ ಲಕ್ಷಣಗಳು ಕಾಣುತ್ತಿರುವುದು ಸರ್ಕಾರದ ಅಂಕಿಅಂಶಗಳಿಂದ ತಿಳಿದುಬರುತ್ತವೆ.
ಪ್ರತಿ ದಿನ ಸುಮಾರು ಒಂದು ಲಕ್ಷ ರೋಗಿಗಳು ಭಾರತದಾದ್ಯಂತ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳ ಹೊರರೋಗಿ ವಿಭಾಗದಲ್ಲಿ (OPD) ತಮ್ಮನ್ನು ನೋಂದಾಯಿಸಿಕೊಳ್ಳಲು ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡುತ್ತಾರೆ. ಈ ಟ್ರೆಂಡ್ ವೇಗವನ್ನು ಪಡೆದಿರುವುದು ಕೇವಲ ಮೆಟ್ರೋಪಾಲಿಟನ್ ಪ್ರದೇಶಗಳಲ್ಲ. ಉತ್ತರ ಪ್ರದೇಶವು ಆಂಧ್ರಪ್ರದೇಶ, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ದೆಹಲಿಯಲ್ಲೂ ಹೆಚ್ಚಾಗಿ ಜನರು ಡಿಜಿಟಲ್ ಬಳಕೆಯನ್ನು ಹೆಚ್ಚಿಸಿದ್ದಾರೆ. ಯುಪಿಯಲ್ಲಿ, 86 ಲಕ್ಷಕ್ಕೂ ಹೆಚ್ಚು ಕ್ಯೂಆರ್ ಕೋಡ್ ಆಧಾರಿತ ನೋಂದಣಿಗಳನ್ನು ನೋಂದಾಯಿಸಲಾಗಿದೆ. ಕಾನ್ಪುರ್ ನಗರ ಮತ್ತು ಪ್ರಯಾಗ್‌ರಾಜ್ ನಲ್ಲೂ ಗರಿಷ್ಠ ನೋಂದಣಿಗಳು ನಡೆದಿವೆ.
ಎಲ್ಲ ವರದಿಗಳೂ ಡಿಜಿಟಲ್‌ನಲ್ಲಿ ಲಭ್ಯ
ರೋಗಿಗಳು ಸ್ಕ್ಯಾನಿಂಗ್ ಮಾಡುವುದಲ್ಲದೆ ತಮ್ಮ ಡಿಜಿಟಲ್ ಆರೋಗ್ಯ ದಾಖಲೆಗಳನ್ನು ರಚಿಸುತ್ತಿದ್ದಾರೆ ಅಥವಾ ಬಳಸುತ್ತಿದ್ದಾರೆ. ಇದರರ್ಥ ಅವರು ಡಿಜಿಟಲ್ ಪ್ರಿಸ್ಕ್ರಿಪ್ಷನ್‌ಗಳು, ಫಾರ್ಮಸಿ ದಾಖಲೆಗಳು, ರೋಗನಿರ್ಣಯದ ವರದಿಗಳು ಮತ್ತು ಬಹು ಆರೋಗ್ಯ ದಾಖಲೆಗಳನ್ನು ಒಂದೇ ಸ್ಥಳದಲ್ಲಿ ಸಂಗ್ರಹಿಸಿಡುತ್ತಿದ್ದಾರೆ. ಮೊಬೈಲ್ ಫೋನ್‌ನಲ್ಲಿ ಎಲ್ಲ ದಾಖಲೆ ಲಭ್ಯವಾಗುವುದರಿಂದ ಕಾಗದ ಆಧಾರಿತ ಪ್ರಿಸ್ಕ್ರಿಪ್ಷನ್‌ಗಳು ಅಥವಾ ವರದಿಗಳನ್ನು ಸಾಗಿಸುವ ಅಗತ್ಯವಿರುವುದಿಲ್ಲ.
1 ಲಕ್ಷ ಮಂದಿ ಬಳಕೆ
ಸರಕಾರದ ಅಂಕಿಅಂಶಗಳು ಪ್ರತಿದಿನ ಸರಾಸರಿ 1 ಲಕ್ಷಕ್ಕೂ ಹೆಚ್ಚು ನಾಗರಿಕರು ಈ ವೈಶಿಷ್ಟ್ಯವನ್ನು ಬಳಸುತ್ತಿದ್ದಾರೆ. ಇದು ಏಪ್ರಿಲ್ 2023 ಮತ್ತು ಏಪ್ರಿಲ್ 2024 ರ ನಡುವೆ ಮಾಸಿಕ ಟೋಕನ್‌ಗಳ ಸಂಖ್ಯೆಯಲ್ಲಿ ನಾಲ್ಕು ಪಟ್ಟು ಹೆಚ್ಚಳವನ್ನು ತೋರಿಸುತ್ತಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (NHA) ವಿಶೇಷ ಕರ್ತವ್ಯದ ಅಧಿಕಾರಿ ಹಿಮಾಂಶು ಬುರಾದ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಹೆಚ್ಚು ಬಳಸಿದ ಆಸ್ಪತ್ರೆಗಳು
ಏಪ್ರಿಲ್‌ನಲ್ಲಿ ಸ್ಕ್ಯಾನ್ ಮತ್ತು ಟೋಕನ್ ಹಂಚಿಕೆ ವೈಶಿಷ್ಟ್ಯವನ್ನು ಹೆಚ್ಚು ವ್ಯಾಪಕವಾಗಿ ಬಳಸಿದ ಉತ್ತಮ ಪ್ರದರ್ಶನ ನೀಡುವ ಆಸ್ಪತ್ರೆಗಳೆಂದರೆ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS), ನವದೆಹಲಿ ಅನಂತರ AIIMS ಭೋಪಾಲ್ (ಮಧ್ಯಪ್ರದೇಶ), ಸರ್ಕಾರಿ ಜನರಲ್ ಆಸ್ಪತ್ರೆ, ಕಾಕಿನಾಡ (ಆಂಧ್ರ ಪ್ರದೇಶ) , ಗೌತಮ್ ಬುದ್ಧ ನಗರದಲ್ಲಿ (ಉತ್ತರ ಪ್ರದೇಶ) ಜಿಲ್ಲಾ ಸಂಯೋಜಿತ ಆಸ್ಪತ್ರೆ ಮತ್ತು ಉತ್ತರ ಪ್ರದೇಶದ ಝಾನ್ಸಿಯಲ್ಲಿರುವ ಮಹಾರಾಣಿ ಲಕ್ಷ್ಮೀ ಬಾಯಿ ವೈದ್ಯಕೀಯ ಕಾಲೇಜು.
ಅತೀ ಹೆಚ್ಚು ನೋಂದಣಿ
ಅಧಿಕೃತವಾಗಿ ‘ಸ್ಕ್ಯಾನ್ ಮತ್ತು ಶೇರ್’ ಎಂದು ಕರೆಯಲ್ಪಡುವ ವೈಶಿಷ್ಟ್ಯವನ್ನು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ABDM) ಅಡಿಯಲ್ಲಿ ಅಕ್ಟೋಬರ್ 2022 ರಲ್ಲಿ ಪರಿಚಯಿಸಲಾಯಿತು. ಇದು ರೋಗಿಗಳಿಗೆ OPD ನೋಂದಣಿ ಕೌಂಟರ್‌ನಲ್ಲಿ ಇರಿಸಲಾದ QR ಕೋಡ್ ಅನ್ನು ಸ್ಕ್ಯಾನ್ ಮಾಡಲು ಮತ್ತು ತ್ವರಿತ ನೋಂದಣಿಗಾಗಿ ಅವರ ABHA ಪ್ರೊಫೈಲ್ ಅನ್ನು ಹಂಚಿಕೊಳ್ಳಲು ಅನುಮತಿಸುತ್ತದೆ.
ABHA ಎಂಬುದು ಆಯುಷ್ಮಾನ್ ಭಾರತ್ ಆರೋಗ್ಯ ಖಾತೆಯ ಪೂರ್ಣ ರೂಪವಾಗಿದೆ. ABHA ಕಾರ್ಡ್ ABHA ID ಎಂಬ ವಿಶಿಷ್ಟ 14-ಅಂಕಿಯ ಗುರುತಿನ ಸಂಖ್ಯೆಯನ್ನು ಒಳಗೊಂಡಿದೆ. ಸಂಪೂರ್ಣ ವೈದ್ಯಕೀಯ ಇತಿಹಾಸ, ಸಮಾಲೋಚನೆ ವಿವರಗಳು ಮತ್ತು ಪ್ರಿಸ್ಕ್ರಿಪ್ಷನ್‌ಗಳನ್ನು ABHA ID ಯಲ್ಲಿ ಸೇರಿಸಲಾಗಿದೆ.
ಈ ಸೇವೆಯು ಪ್ರಸ್ತುತ ಭಾರತದ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 529 ಜಿಲ್ಲೆಗಳಾದ್ಯಂತ 4,694 ಕ್ಕೂ ಹೆಚ್ಚು ಆರೋಗ್ಯ ಸೌಲಭ್ಯಗಳಲ್ಲಿ ಸಕ್ರಿಯವಾಗಿದೆ. ಮೇ 14ರಂದು 1.60 ಲಕ್ಷಕ್ಕೂ ಹೆಚ್ಚು ಟೋಕನ್‌ಗಳನ್ನು ಪಡೆಯಲಾಗಿದೆ ಎಂದು ಬುರಾದ್ ತಿಳಿಸಿದ್ದು, ಈ ಪ್ರವೃತ್ತಿಯು ಭಾರತೀಯರು ಡಿಜಿಟಲ್ ಆರೋಗ್ಯದ ಸೌಕರ್ಯವನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಮತ್ತು ಕ್ರಮೇಣ ತಮ್ಮ ಡಿಜಿಟಲ್ ಆರೋಗ್ಯ ದಾಖಲೆಗಳನ್ನು ರಚಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಸರಾಸರಿ, ಒಂದು ಲಕ್ಷ ರೋಗಿಗಳು ಈಗ ಪ್ರತಿದಿನ ಈ ಸೌಲಭ್ಯವನ್ನು ಬಳಸುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: Hepatitis-A: ಅಲರ್ಟ್..ಅಲರ್ಟ್! ಜನರ ನಿದ್ದೆಗೆಡಿಸ್ತಿದೆ ಮತ್ತೊಂದು ಡೆಡ್ಲಿ ವೈರಸ್
ಶೀಘ್ರದಲ್ಲೇ ವಿಸ್ತರಣೆ
ಒಪಿಡಿ ಕೌಂಟರ್‌ಗಳಲ್ಲಿ ನೀಡಲಾಗುವ ಸ್ಕ್ಯಾನ್ ಮತ್ತು ಶೇರ್ ಸೇವೆಯು ತಂತ್ರಜ್ಞಾನ ಆಧಾರಿತ ಪರಿಹಾರವಾಗಿದ್ದು ಇದು ಸುಮಾರು ಒಂದು ಲಕ್ಷ ರೋಗಿಗಳಿಗೆ ಪ್ರತಿದಿನ ಆಸ್ಪತ್ರೆಯ ಸರತಿ ಸಾಲಿನಲ್ಲಿ ಕಾಯುವ ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ. ರೋಗಿಗಳು ತಮ್ಮ ಆರೋಗ್ಯ ಭೇಟಿಗಳ ಸಮಯದಲ್ಲಿ ಎದುರಿಸುವ ಹೊರೆಗಳನ್ನು ಕಡಿಮೆ ಮಾಡಲು, ನಾವು ಇದನ್ನು ವಿಸ್ತರಿಸುವ ಗುರಿಯನ್ನು ಹೊಂದಿದ್ದೇವೆ. ಔಷಧಾಲಯ ಕೌಂಟರ್‌ಗಳು ಮತ್ತು ಪ್ರಯೋಗಾಲಯಗಳನ್ನು ಈ ಸೇವೆಯಡಿ ಸೇರಿಸಲು ನಿರ್ಧರಿಸಿದ್ದೇವೆ ಎಂದರು.
ವಯಸ್ಸಾದ ರೋಗಿಗಳು, ಗರ್ಭಿಣಿಯರು ಮತ್ತು ಇತರ ನಾಗರಿಕರು ಆರೋಗ್ಯ ಸೇವೆಗಳನ್ನು ಪಡೆಯಲು ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಸರ್ಕಾರದ ಗುರಿಯಾಗಿದೆ. ಹೆಚ್ಚುವರಿಯಾಗಿ, ABHA- ಆಧಾರಿತ ನೋಂದಣಿಗಳು ರೋಗಿಗಳಿಗೆ ಅವರ OPD ಡಿಜಿಟಲ್ ಪ್ರಿಸ್ಕ್ರಿಪ್ಷನ್‌ಗಳು, ಫಾರ್ಮಸಿ IPD ದಾಖಲೆಗಳು ಮತ್ತು ರೋಗನಿರ್ಣಯದ ವರದಿಗಳಿಗೆ ಇದು ಡಿಜಿಟಲ್ ಪ್ರವೇಶಕ್ಕೆ ಅನುಮತಿಯನ್ನು ನೀಡುತ್ತದೆ.