ಭಾರತದಲ್ಲಿ ಸಸ್ಯಾಹಾರಿ ಊಟವು ಮಾಂಸಾಹಾರಿ ಊಟಕ್ಕಿಂತ (Veg v/s Non Veg Thali) ದುಬಾರಿಯಾಗಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಈರುಳ್ಳಿ (onion) ಬೆಲೆ ಶೇ. 41, ಟೊಮೆಟೊ (tomato) ಬೆಲೆ ಶೇ.40 ಮತ್ತು ಆಲೂಗಡ್ಡೆ (potato) ಬೆಲೆ ಶೇ. 38ರಷ್ಟು ಹೆಚ್ಚಳವಾಗಿರುವ ಕಾರಣ ಮನೆಯಲ್ಲಿ ತಯಾರಿಸುವ ಸಸ್ಯಾಹಾರಿ ಊಟದ ಪ್ಲೇಟ್ ಬೆಲೆ ಶೇ. 13ರಷ್ಟು ಹೆಚ್ಚಾಗಿದೆ ಎಂದು ಸಿಆರ್ ಐಎಸ್‌ಐಎಲ್ (CRISIL) ವರದಿ ತಿಳಿಸಿದೆ.
ಮನೆಯಲ್ಲಿ ತಯಾರಿಸುವ ಥಾಲಿಯಲ್ಲಿ ಧಾನ್ಯ, ಬೇಳೆಕಾಳು, ತರಕಾರಿ, ಮಸಾಲೆ, ಖಾದ್ಯ ತೈಲ ಮತ್ತು ಅಡುಗೆ ಅನಿಲವೆಲ್ಲ ಸೇರಿ ಸರಾಸರಿ ವೆಚ್ಚವನ್ನು ಅಧ್ಯಯನಕ್ಕೆ ಪರಿಗಣಿಸಲಾಗಿದೆ. ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾರತದಲ್ಲಿ ಚಾಲ್ತಿಯಲ್ಲಿರುವ ಬೆಲೆಗಳ ಆಧಾರದ ಮೇಲೆ ಲೆಕ್ಕಹಾಕಲಾಗಿದೆ. ಇದು ಸಾಮಾನ್ಯ ಮನುಷ್ಯನ ವೆಚ್ಚದ ಮೇಲೆ ತೀವ್ರ ಪ್ರಭಾವ ಬೀರುತ್ತಿದೆ.
ವೆಜ್ ಥಾಲಿ ಬೆಲೆ ಎಷ್ಟು ಹೆಚ್ಚಳ?
ಮನೆಯಲ್ಲಿ ಬೇಯಿಸಿದ ವೆಜ್ ಥಾಲಿಯ ಬೆಲೆ ಏಪ್ರಿಲ್‌ನಲ್ಲಿ ಶೇ. 8ರಷ್ಟು ಏರಿಕೆಯಾಗಿದೆ. ಆದರೆ ಮಾಂಸಾಹಾರಿ ಥಾಲಿಯ ಬೆಲೆ ಶೇ.4ರಷ್ಟು ಕಡಿಮೆಯಾಗಿದೆ.
ಕಾರಣ ಏನು?
ಕಳೆದ ಆರ್ಥಿಕ ವರ್ಷದ ಕ್ರಮವಾಗಿ ಈರುಳ್ಳಿ, ಟೊಮ್ಯಾಟೊ ಮತ್ತು ಆಲೂಗೆಡ್ಡೆಗಳ ಬೆಲೆಗಳು ವರ್ಷಕ್ಕೆ ಶೇ.41, ಶೇ. 40 ಮತ್ತು ಶೇ. 38ರಷ್ಟು ಏರಿಕೆಯಾದ ಕಾರಣ ಸಸ್ಯಾಹಾರಿ ಥಾಲಿಯ ಬೆಲೆ ಹೆಚ್ಚಾಗಿದೆ. ಬೆಳೆ ಬೆಳೆಯುವ ಪ್ರಮಾಣದಲ್ಲಿ ಗಮನಾರ್ಹ ಕುಸಿತ ಮತ್ತು ಪಶ್ಚಿಮ ಬಂಗಾಳದಲ್ಲಿ ಆಲೂಗಡ್ಡೆ ಬೆಳೆ ಹಾನಿ, ಕಡಿಮೆ ಈರುಳ್ಳಿ ಮಾರುಕಟ್ಟೆಗೆ ಬಂದಿದ್ದು ಬೆಲೆ ಏರಿಕೆಗೆ ಮುಖ್ಯ ಕಾರಣ.
ಅಕ್ಕಿಯ ಬೆಲೆ ಶೇ. 13ರಿಂದ ಶೇ.14ರಷ್ಟು, ಬೇಳೆಕಾಳುಗಳ ಬೆಲೆ ಶೇ. 9ರಿಂದ ಶೇ. 20ರಷ್ಟು ವರ್ಷಕ್ಕೆ ಏರಿಕೆಯಾಗಿದೆ.
ಜೀರಿಗೆ, ಮೆಣಸಿನಕಾಯಿ ಮತ್ತು ಸಸ್ಯಜನ್ಯ ಎಣ್ಣೆಯ ಬೆಲೆಗಳು ಕ್ರಮವಾಗಿ ಶೇ. 40, ಶೇ. 31 ಮತ್ತು ಶೇ. 10ರಷ್ಟು ಕುಸಿತವಾಗಿದೆ. ಇದು ಥಾಲಿ ವೆಚ್ಚದಲ್ಲಿ ಮತ್ತಷ್ಟು ಹೆಚ್ಚಾಳಕ್ಕೆ ಕೊಂಚ ನಿಯಂತ್ರಣ ಹಾಕಿದೆ.
ಮಾಂಸಾಹಾರಿ ಥಾಲಿ ಬೆಲೆಯಲ್ಲಿ ಇಳಿಕೆ
ಕಳೆದ ಹಣಕಾಸು ವರ್ಷದಲ್ಲಿ ಮಾಂಸದ ಕೋಳಿಗಳ ಬೆಲೆಯಲ್ಲಿ ವರ್ಷದಲ್ಲಿ ಕುಸಿತವಾಗಿದ್ದರೂ ತಿಂಗಳಿನಲ್ಲಿ ಸ್ಥಿರವಾಗಿತ್ತು. ಇದರಿಂದ ಮಾಂಸಾಹಾರಿ ಥಾಲಿಯ ಬೆಲೆ ಕೇವಲ ಶೇ. 3ರಷ್ಟು ಹೆಚ್ಚಳವಾಗಿತ್ತು. ಈರುಳ್ಳಿ ಬೆಲೆಯಲ್ಲಿನ ಶೇ. 4ರಷ್ಟು ಇಳಿಕೆಯಿಂದಾಗಿ ಮಾಂಸಾಹಾರಿ ಥಾಲಿಯು ತಿಂಗಳ ಬೆಲೆ ಸ್ಥಿರವಾಗಿತ್ತು. ಇಂಧನ ವೆಚ್ಚದಲ್ಲಿ ಶೇ. 3ರಷ್ಟು ಕುಸಿತವಾಗಿದ್ದು, ಟೊಮೆಟೊ ಮತ್ತು ಆಲೂಗಡ್ಡೆ ಬೆಲೆ ಏರಿಕೆಯಾಗಿತ್ತು.
ಮಾಂಸಾಹಾರಿ ಥಾಲಿಯ ಬೆಲೆಯು ಬ್ರಾಯ್ಲರ್‌ಗಳ ಬೆಲೆಯಲ್ಲಿ ಅಂದಾಜು ಶೇ. 4ರಷ್ಟು ಹೆಚ್ಚಳದಿಂದಾಗಿ ಏರಿಕೆಯಾಗಿದೆ. ಇದು ಹೆಚ್ಚಿನ ಬೇಡಿಕೆ ಮತ್ತು ಹೆಚ್ಚುತ್ತಿರುವ ವೆಚ್ಚಗಳ ಕಾರಣದಿಂದಾಗಿ ಎನ್ನಲಾಗಿದೆ.
ಕಡಿಮೆ ಕೋಳಿ ಬೆಲೆಗಳಿಂದಾಗಿ ಮನೆಯಲ್ಲಿ ಬೇಯಿಸಿದ, ಮಾಂಸಾಹಾರಿ ಥಾಲಿಯ ಬೆಲೆ ಏಪ್ರಿಲ್‌ನಲ್ಲಿ ಕಡಿಮೆಯಾಗಿದೆ. ಆದರೆ ಈರುಳ್ಳಿ, ಆಲೂಗೆಡ್ಡೆ ಮತ್ತು ಟೊಮ್ಯಾಟೊ ಬೆಲೆಗಳ ಏರಿಕೆಯೊಂದಿಗೆ ಸಸ್ಯಾಹಾರಿ ಥಾಲಿಯನ್ನು ತಯಾರಿಸುವ ವೆಚ್ಚವನ್ನು ಹೆಚ್ಚಾಗಿದೆ.
ಇದನ್ನೂ ಓದಿ: Digestion Tips: ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುವುದು ಹೇಗೆ?
ಎಷ್ಟು ಹೆಚ್ಚಳ?
ಮನೆಯಲ್ಲಿ ತಯಾರಿಸುವ ವೆಜ್ ಥಾಲಿ ಬೆಲೆ 2022ರ ಡಿಸೆಂಬರ್‌ನಿಂದ 2023ರ ಜೂನ್‌ವರೆಗೆ 26.7ರ ಒಳಗೆ ಇತ್ತು ಹಾಗೂ ಮಾಂಸಾಹಾರಿ ಥಾಲಿ ಬೆಲೆ 60.5ರ ಒಳಗಿತ್ತು. ಜುಲೈ ಮತ್ತು ಆಗಸ್ಟ್ ನಲ್ಲಿ ವೆಜ್ ಥಾಲಿ ಬೆಲೆ 34.1ರ ಸಮೀಪವಿದ್ದು, ಮಾಂಸಾಹಾರಿ ಥಾಲಿ 62.8 ರವರೆಗೆ ತಲುಪಿತ್ತು. ಬಳಿಕ ವೆಜ್ ಮತ್ತು ನಾನ್ ವೆಜ್ ಥಾಲಿ ಬೆಲೆ ಇಳಿಕೆಯಾಗಿದ್ದು, 2024ರ ಏಪ್ರಿಲ್ ನಲ್ಲಿ ವೆಜ್ ಥಾಲಿ ಬೆಲೆ 27.4ಕ್ಕೆ ತಲುಪಿದ್ದು, ನಾನ್ ವೆಜ್ ಥಾಲಿ ಬೆಲೆ 56.3ಕ್ಕೆ ತಲುಪಿದೆ.