ಕೆಲವು ಮಂದಿಯ ಸಮಸ್ಯೆ ಗಂಭೀರವಾದದ್ದು. ಅವರು ನಿತ್ಯವೂ ವ್ಯಾಯಾಮ (Exercise) ಮಾಡುತ್ತಾರೆ, ವಾಕಿಂಗ್ (walking) ಮಾಡುತ್ತಾರೆ ಅಥವಾ ಯೋಗವೋ, ಜಿಮ್‌ಗೆ ಹೋಗಿ ವ್ಯಾಯಾಮವೋ ಮಾಡುತ್ತಾರೆ. ಆದರೆ, ತೂಕ ಮಾತ್ರ ಜಪ್ಪಯ್ಯ ಎಂದರೂ (Weight Loss) ಕಡಿಮೆಯಾಗೋದಿಲ್ಲ. ಎಲ್ಲೋ ಒಂದೆರಡು ಕೆಜಿ ಹೆಚ್ಚು ಕಡಿಮೆಯಾಗೋದು ಬಿಟ್ಟರೆ ಗಮನಾರ್ಹ ಬದಲಾವಣೆಯೇನೂ ಆಗುವುದಿಲ್ಲ. ಹೀಗ್ಯಾಕೆ ಎಂಬ ಪ್ರಶ್ನೆ ನಿಮ್ಮಲ್ಲನೇಕರಿಗೆ ಕಾಡಿರಬಹುದು. ಹೌದು ಹೀಗ್ಯಾಕೆ? ಯಾಕೆ ನಮ್ಮ ಪ್ರಯತ್ನಗಳು ಫಲ ಕೊಡುವುದಿಲ್ಲ ಎಂಬ ಪ್ರಶ್ನೆ ನಿಮಗೆ ಬಹಳವಾಗಿ ಕಾಡಿದ್ದರೆ, ನೀವು ತೂಕ ಇಳಿಕೆಯ (Weight Loss tips, Weight Loss guide) ಈ ಹಾದಿಯಲ್ಲಿ ಏನೆಲ್ಲ ತಪ್ಪುಗಳನ್ನು ಮಾಡಿರಬಹುದು, ಹಾಗೂ ಯಾವೆಲ್ಲ ಕಡೆ ಎಡವಿರಬಹುದು ಎಂಬುದನ್ನು ನೋಡೋಣ ಬನ್ನಿ.
1. ನೀವು ಇತ್ತೀಚೆಗಷ್ಟೇ ತೂಕ ಇಳಿಕೆಯ ಯೋಜನೆ ಆರಂಭಿಸಿದ್ದರೆ, ಅಷ್ಟು ಬೇಗ ತೂಕ ಇಳಿಯುವುದಿಲ್ಲ ಎಂಬ ಸತ್ಯವನ್ನು ಮೊದಲು ನೀವು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಮಾಂಸಖಂಡಗಳು ಬಲಗೊಂಡು, ಕೊಬ್ಬು ಇಳಿದಿರಬಹುದು, ಆದರದು ತೂಕದಲ್ಲಿ ಕಾಣದೆ ಇರಬಹುದು. ನೀವು ಪ್ರೊಟೀನ್ ಆಧಾರಿತ ಆಹಾರ ತೆಗೆದುಕೊಳ್ಳುತ್ತಿದ್ದರೆ ಈ ಬದಲಾವಣೆಗಳು ಆಗುತ್ತವೆ.
2. ಎಲ್ಲ ವ್ಯಾಯಾಮಗಳನ್ನು ಮಾಡುತ್ತಿದ್ದರೂ ತೂಕ ಇಳಿಯುವುದು ಕಾಣುತ್ತಿಲ್ಲ ಎಂದಾದರೆ, ಬಹುಶಃ ನೀವು ಹೆಚ್ಚು ತಿನ್ನುತ್ತಿರಬಹುದು. ಹಾಗಾಗಿ ನೀವು ತಿನ್ನುವ ಕ್ಯಾಲರಿಯ ಬಗೆಗೂ ಗಮನ ಇರಲಿ.
3. ಬಿಂಜ್ ಈಟಿಂಗ್ ಅಭ್ಯಾಸ ನಿಮಗಿರಲೂ ಬಹುದು. ಅಂರೆ. ಹೊಟ್ಟೆಬಾಕನಂತೆ ಒಮ್ಮೆ ತಿನ್ನುವಾಗ ಅಗತ್ಯಕ್ಕಿಂತ ಹೆಚ್ಚು ತಿನ್ನುವುದು. ಯಾವಾಗಲೂ ಹೊಟ್ಟೆಯಲ್ಲಿ ಇನ್ನೊಂದು ಭಾಗಕ್ಕೆ ಜಾಗ ಇರುವಾಗಲೇ ಅಂದರೆ ಮೂರನೇ ಒಂದು ಪಾಲು ಖಾಲಿ ಇಟ್ಟುಕೊಂಡೇ ತಿನ್ನಬೇಕು.
4. ನಿಮ್ಮ ಊಟದ ಶೈಲಿ ಅತಿ ವೇಗದ್ದಾಗಿರಬಹುದು. ಅಂದರೆ, ಬೇಗ ಬೇಗ ಊಟ ಮಾಡುವುದರಿಂದ ಅಗತ್ಯಕ್ಕಿಂತ ಹೆಚ್ಚು ತಿಂದುಬಿಡುವ ಸಂಭವ ಹೆಚ್ಚು. ಹೀಗಾಗಿ ನಿಧಾನವಾಗಿ, ಊಟವನ್ನು ಅನುಭವಿಸಿಕೊಂಡು ಚೆನ್ನಾಗಿ ಜಗಿದುಕೊಂಡು ಉಣ್ಣಿ.
5. ತೂಕ ಇಳಿಸಿಕೊಳ್ಳಬೇಕಾದರೆ, ಎಲ್ಲ ಬಗೆಯ ಪೋಷಕಾಂಶಗಳ ಅಗತ್ಯವೂ ಇದೆ. ಪ್ರೊಟೀನ್ ಬಹಳ ಮುಖ್ಯ. ಹಾಗಾಗಿ ನಿಮ್ಮ ಪ್ರೊಟೀನ್‌ನ ಅಗತ್ಯತೆಯನ್ನು ನಿಮ್ಮ ಆಹಾರದಿಂದ ಪಡೆದುಕೊಳ್ಳುತ್ತಿದ್ದೀರಾ ಎಂಬುದನ್ನು ಗಮನಿಸಿ.
6. ನೀವು ಉಣ್ಣುವ ಆಹಾರದ ಗುಣಮಟ್ಟ ಸರಿಯಾಗಿ ಇಲ್ಲದೆಯೂ ಇರಬಹುದು. ಯಾಕೆಂದರೆ, ನಿಮ್ಮ ಮನಸ್ಸಿನಲ್ಲಿ, ನಾನು ಆರೋಗ್ಯಕರ ಆಹಾರ ಉಣ್ಣುತ್ತಿದ್ದೇನೆ ಎಂದಿರಬಹುದು. ಆದರೆ, ಎಲ್ಲ ಪೋಷಕಾಂಶಗಳನ್ನೂ ನಿಮ್ಮ ದೇಹ ಸರಿಯಾದ ಪ್ರಮಾಣದಲ್ಲಿ ಪಡೆದುಕೊಳ್ಳುತ್ತಿದೆಯಾ ಗಮನಿಸಿ.
7. ನೀವು ಸರಿಯಾದ ಮಾದರಿಯಲ್ಲಿ ವ್ಯಾಯಾಮ ಮಾಡದೆ ಇರಬಹುದು. ಅಂದರೆ ನಿಮ್ಮ ದೇಹದ ಯಾವ ಭಾಗಕ್ಕೆ ಸರಿಯಾದ ವ್ಯಾಯಾಮ ಬೇಕೋ, ಅಲ್ಲಿಗೆ ಫೋಕಸ್ ಸಿಗದೇ ಇರಬಹುದು.
8. ನೀವು ಸಕ್ಕರೆಯನ್ನು ತಿನ್ನುವುದೂ ಕೂಡಾ ನಿಮ್ಮ ತೂಕ ಇಳಿಕೆಯ ದೊಡ್ಡ ತಡೆಯಾಗಿರಬಹುದು. ಸಕ್ಕರೆ ಹೆಚ್ಚಿರುವ ಆಹಾರವನ್ನು ಆದಷ್ಟು ಕಡಿಮೆ ಮಾಡಿ.
9. ಎಲ್ಲಕ್ಕಿಂತ ಮುಖ್ಯವಾಗಿ ನೀವು ಸರಿಯಾಗಿ ನಿದ್ದೆ ಮಾಡದೆ ಇರಬಹುದು. ಸರಿಯಾದ ಸಮಯಕ್ಕೆ ನಿದ್ದೆ ಮಾಡುವುದು ಹಾಗೂ ನಿಮ್ಮ ದೇಹಕ್ಕೆ ಅಗತ್ಯವಾಗಿ ಬೇಕಿರುವ ಕನಿಷ್ಟ ಎಂಟು ಗಂಟೆಗಳ ನಿದ್ದೆ ಮಾಡುವುದು ಅತ್ಯಂತ ಅಗತ್ಯ. ಕಡಿಮೆ ನಿದ್ದೆಯಿಂದ ಬೊಜ್ಜು ಹೆಚ್ಚುತ್ತದೆ.
10. ನಿಮ್ಮ ಆಹಾರದಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಿರಬಹುದು. ನಿಮ್ಮ ಆಹಾರದ ಮೂಲಕ ದೇಹಕ್ಕೆ ಸೇರುವ ಪೋಷಕಾಂಶಗಳ ಬಗ್ಗೆ ಗಮನ ಇರಲಿ.
ಇದನ್ನೂ ಓದಿ: Weight Loss Drink: ತೂಕ ಇಳಿಸಬೇಕೆ? ಈ 8 ಪಾನೀಯಗಳು ಸಹಾಯಮಾಡುತ್ತವೆ
11. ನೀವು ಸರಿಯಾಗಿ ನೀರು ಕುಡಿಯದೆ ಇರಬಹುದು. ದೇಹಕ್ಕೆ ನೀರು ಅತ್ಯಗತ್ಯ. ಬಾಯಾರಿಕೆಯೆ ಕ್ಯಾಲರಿಯುಕ್ತ ಪೇಯಗಳನ್ನು ಕುಡಿಯುವ ಬದಲು ನೀರು ಕುಡಿಯಿರಿ.
12. ಆಲ್ಕೋಹಾಲ್‌ನಂತಹ ಅಭ್ಯಾಸ ನಿಮಗಿದ್ದರೆ ಅದೂ ಕೂಡಾ ಕಾರಣವಾಗಿರಬಹುದು.
13. ಡಯಟ್ ಹೆಸರಿನಲ್ಲಿ ನೀವು ಸೇವಿಸುವ ಆಹಾರ ತಾಜಾ ಅಲ್ಲದೆ ಇರಬಹುದು. ಸಂಸ್ಕರಿಸಿ ಆಹಾರವನ್ನೇ ನೀವು ಹೆಚ್ಚು ಸೇವಿಸುತ್ತಿರಬಹುದು.
14. ನಿಮಗೇನಾದರೂ ಆರೋಗ್ಯದ ತೊಂದರೆಗಳೂ ಇರಬಹುದು. ಪಿಸಿಒಎಸ್, ಥೈರಾಯ್ಡ್ ಸಮಸ್ಯೆ ಅಥವಾ ಯಾವುದಾದರೂ ಪೋಷಕಾಂಶಗಳ ಕೊರತೆ ಇತ್ಯಾದಿಗಳು. ಹಾಗಾಗಿ, ವೈದ್ಯರ ಸಲಹೆಯನ್ನೂ ಪಡೆಯುವುದು ಉತ್ತಮ.
ಇದನ್ನೂ ಓದಿ: Weight Loss Drinks: ತೂಕ ಇಳಿಕೆಗೆ ನೆರವಾಗುವ ಪೇಯಗಳಿವು