Site icon Vistara News

Weight Loss Tips: ವ್ಯಾಯಾಮ, ಡಯಟ್‌ ಸಾಧ್ಯವಾಗುತ್ತಿಲ್ಲವಾದರೆ, ತೂಕ ಇಳಿಸಲು ಇಷ್ಟಾದರೂ ಮಾಡಿ!

walking

ಬಹಳ ಮಂದಿಗೆ ತನ್ನ ತೂಕ ಇಳಿಸಬೇಕೆಂಬ (Weight Loss) ಆಸೆ ಇದ್ದರೂ ಯಾವುದೇ ಬಗೆಯ ಡಯಟ್‌ (Weight Loss diet) ಅಥವಾ ವ್ಯಾಯಾಮವನ್ನು (exercise) ಆಯ್ಕೆ ಮಾಡಿಕೊಳ್ಳಲು ಹಾಗೂ ಅದನ್ನು ದಿನಗಟ್ಟಲೆ ತಿಂಗಳುಗಟ್ಟಲೆ ಪಾಲಿಸಲು ಮಾತ್ರ ಸಾಧ್ಯವಾಗುವುದಿಲ್ಲ. ಯಾವುದೇ ಡಯಟ್‌ ಅಥವಾ ವ್ಯಾಯಾಮ ಕ್ರಮವನ್ನು ಪಾಲಿಸಲು ಆರಂಭಿಸಿ (health tips) ಕೆಲವೇ ದಿನಗಳಲ್ಲಿ ಏನಾದರೊಂದೊಂದು ಸಮಸ್ಯೆಗಳಾಗಿ, ಯಾವುದೋ ಕೆಲಸದೊತ್ತಡದಿಂದ ಅದನ್ನು ಅರ್ಧಕ್ಕೇ ನಿಲ್ಲಿಸುವ ಪರಿಸ್ಥಿತಿಗಳು ಬರುತ್ತವೆ. ಹೀಗಾಗಿ, ಅಂದುಕೊಂಡ ಗುರಿಯನ್ನು ತಲುಪಲು ಸಾದ್ಯವಾಗುವುದಿಲ್ಲ. ತಮ್ಮ ಕೆಲಸದ ಒತ್ತಡ, ಗಡಿಬಿಡಿಯ ದಿನಚರಿ ಇತ್ಯಾದಿಗಳಿರುವ ಮಂದಿಗಂತೂ ಸರಿಯಾದ ಸಮಯಕ್ಕೆ ವ್ಯಾಯಾಮ ಮಾಡುವುದೂ ಗಗನಕುಸುಮವಾಗುತ್ತದೆ. ಅಂಥ ಮಂದಿಗೆ ತೂಕ ಇಳಿಸುವುದು, ಫಿಟ್‌ (fitness practice) ಆಗಿರುವುದು ಸಾಧ್ಯವೇ ಇಲ್ಲದ ಮಾತೇ ಎಂಬ ಪ್ರಶ್ನೆ ಅನೇಕರಿಗೆ ಬರಬಹುದು. ಹಾಗಾದರೆ, ಅಂತಹ ಮಂದಿ ತಮ್ಮ ತೂಕವನ್ನ ಸಮತೋಲನದಲ್ಲಿರಿಸಲು ಅಥವಾ ಫಿಟ್‌ ಆಗಿ ಆರೋಗ್ಯದಿಂದಿರಲು ಏನು ಮಾಡಬಹುದು (Weight Loss Tips) ಎಂಬುದನ್ನು ನೋಡೋಣ ಬನ್ನಿ.

1. ಪ್ರೊಟೀನ್‌ ಬಗ್ಗೆ ಗಮನ ಇರಲಿ: ಸೇವಿಸುವ ಆಹಾರದಲ್ಲಿರುವ ಪೋಷಕಾಂಶದ ಬಗ್ಗೆ ಅರಿವಿರಲಿ. ಮುಖ್ಯವಾಗಿ ಎಷ್ಟು ಪ್ರಮಾಣದ ಪ್ರೊಟೀನ್‌ ದೇಹ ಸೇರುತ್ತದೆ ಎಂಬುದು ಗೊತ್ತಿರಲಿ. ದೇಹಕ್ಕೆ ಸರಿಯಾದ ಪ್ರಮಾಣದ ಪೋಷಕಾಂಶಗಳು ಸಿಗುತ್ತಿದ್ದರೆ ಹೊಟ್ಟೆ ಅನಗತ್ಯ ಆಹಾರ ಬೇಡುವುದಿಲ್ಲ.

2. ನೀರು ಚೆನ್ನಾಗಿ ಕುಡಿಯಿರಿ: ಯಾವುದೇ ಕೆಲಸ ನೀವು ಮಾಡುತ್ತಾ ಬ್ಯುಸಿಯಾಗಿದ್ದರೂ ನೀರು ಕುಡಿಯುತ್ತಿರುವುದನ್ನು ಮರೆಯಬೇಡಿ. ನೀರು ದೇಹದಲ್ಲಿರುವ ಕಲ್ಮಶಗಳನ್ನು ಹೊರಕ್ಕೆ ಕಳಿಸಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಮಿದುಳಿನ ಶಕ್ತಿ ಹೆಚ್ಚಿಸುತ್ತದೆ. ಪಚನಶಕ್ತಿಯನ್ನು ಚುರುಕುಗೊಳಿಸುತ್ತದೆ. ಆಗಾಗ ಇನ್ಫ್ಯೂಸ್ಡ್‌ ವಾಟರ್‌ ಅಂದರೆ ನೀರಿಗೆ ನಿಂಬೆಹಣ್ಣು ಸೇರಿಸಿ ಕುಡಿಯುವುದು ಅಥವಾ ಪುದಿನ ಎಲೆಗಳನ್ನು ಹಾಕಿ ಕುಡಿಯುವುದು ಇತ್ಯಾದಿಗಳನ್ನೂ ಮಾಡಬಹುದು.

3. ತರಕಾರಿ ತಿನ್ನಿ: ಪ್ರತಿ ಊಟದಲ್ಲೂ ತರಕಾರಿಗಳನ್ನು ಸಾಕಷ್ಟು ತಿನ್ನುವುದನ್ನು ಮರೆಯಬೇಡಿ. ಇದು ನಿಮಗೆ ಬೇಕಾದ ವಿಟಮಿನ್ನುಗಳನ್ನೂ ಖನಿಜಾಂಶಗಳನ್ನೂ ನೀಡುತ್ತದೆ.

4. ಉಪವಾಸ ಕೂರಬೇಡಿ: ನಿಮ್ಮ ದೇಹಕ್ಕೆ ಬೇಕಾದಷ್ಟು ಪ್ರಮಾಣದ ಆಹಾರ ಸೇವಿಸಿ. ಅತಿಯಾಗಿ ತಿನ್ನದಿದ್ದರೂ, ಅವಶ್ಯವಿರುವಷ್ಟು ತಿನ್ನುವುದನ್ನು ರೂಢಿ ಮಾಡಿಕೊಳ್ಳಿ. ಆದರೆ, ಉಪವಾಸ ಮಾಡಿ ಆರೋಗ್ಯ ಹದಗೆಡಿಸಬೇಡಿ. ಉಪವಾಸ ಮಾಡಿದಾಗ ದೇಃಕ್ಕೆ ಬೇಕಾದ ಶಕ್ತಿಯನ್ನು ಅದು ಮಾಂಸಖಂಡಗಳನ್ನು ಕರಗಿಸುವ ಮೂಲಕ ಪಡೆದುಕೊಳ್ಳುತ್ತದೆ. ಇದರಿಂದ ಪಚನಕಿಯೆಯಲ್ಲೂ ಏರುಪೇರಾಗುತ್ತದೆ. ಹಾಗಾಗಿ ಹಸಿವಿನಿಂದ ಕೂರಬೇಡಿ.

ಇದನ್ನೂ ಓದಿ: Weight Loss: ಈ ಸಣ್ಣ ಪುಟ್ಟ ಬದಲಾವಣೆಗಳೇ ನಿಮ್ಮ ತೂಕ ಇಳಿಕೆಯ ಹಾದಿಯ ಮೊದಲ ಹೆಜ್ಜೆ!

5. ಹೊರಗೆ ತಿನ್ನಬೇಡಿ: ಹೊರಗೆ ಕೆಲಸದ ಮೇಲೆ ಸುತ್ತಾಡುವಾಗ, ಕಚೇರಿ ಕೆಲಸದ ನಡುವೆ ಹಸಿವಾಯಿತೆಂದು, ಅಥವಾ ಬ್ರೇಕ್‌ ಬೇಕೆಂದು ಸಹುದ್ಯೋಗಿಗಳ ಜೊತೆ ಹೊರಗೆ ಹೋಗಿ, ಚಹಾ, ಕಾಫಿ, ಜೊತೆಗೆ ಏನಾದರೊಂದು ಕರಿದ ತಿಂಡಿ, ಜಂಕ್‌, ಚಾಟ್‌ ಇತ್ಯಾದಿಗಳನ್ನು ನಿತ್ಯವೂ ಹೊಟ್ಟೆಗೆ ಹಾಕಿ ಬರುವುದು ಸಾಮಾನ್ಯ. ಇಂತಹ ಅಭ್ಯಾಸವನ್ನು ಬಿಡುವುದು ಕಷ್ಟವೇನೋ ನಿಜ. ಆದರೆ, ನಿಮ್ಮ ಆರೋಗ್ಯದ ವಿಚಾರ ಬಂದಾಗ ಯಾವುದಕ್ಕೆ ಗಮನ ಬೇಕು ಎಂಬ ಬಗ್ಗೆ ಯೋಚಿಸಿ. ಹಾಗಾಗಿ, ಇಂತಹ ಅಭ್ಯಾಸವನ್ನು ಆದಷ್ಟು ಕಡಿಮೆ ಮಾಡಿ. ಮನೆಯಿಂದಲೇ, ಆರೋಗ್ಯಕರ ಸ್ನ್ಯಾಕ್‌ ತರುವುದನ್ನು ಅಭ್ಯಾಸ ಮಾಡಿ.

ವ್ಯಾಯಾಮ ಮಾಡುವುದು ನಿಮಗೆ ಹೊಂದುವುದಿಲ್ಲವೆಂದರೆ ಬಿಡಿ. ತೊಂದರೆಯೇನಿಲ್ಲ. ಆದರೆ, ಅವಕಾಶ ಸಿಕ್ಕಿದಾಗಲೆಲ್ಲ ನಡೆಯುವುದು, ಲಿಫ್ಟ್‌ ಬದಲು ಹತ್ತಿ ಇಳಿದು ಮಾಡುವುದು ಇತ್ಯಾದಿಗಳನ್ನು ಮಾಡಿ. ಸಮಯ ಸಿಕ್ಕಿದಾಗ ನಡೆಯಿರಿ. ನೀವು ಈಗಾಗಲೇ ಆರೋಗ್ಯಕರ ಆಹಾರ ಸೇವನೆ ಮಾಡುತ್ತಿದ್ದರೂ, ತೂಕ ಏರುತ್ತಲೇ ಇದ್ದರೆ, ಬೇರಾವ ಸಮಸ್ಯೆಯೂ ಇಲ್ಲದೇ ಇದ್ದರೆ ನಿಧಾನವಾಗಿ ಸ್ವಲ್ಪ ಸ್ವಲ್ಪವಾಗಿ ಡಯಟ್‌ ಆರಂಭಿಸಿ. ಅನಾರೋಗ್ಯಕರ ಅಭ್ಯಾಸಗಳನ್ನು ನಿಲ್ಲಿಸಿ ಆರೋಗ್ಯಕರ ಅಭ್ಯಾಸಗಳನ್ನು (healthy diet) ತರುವುದೇ ದೊಡ್ಡ ಕೆಲಸ. ಅದು ಸಾಧ್ಯವಾದರೆ, ಉಳಿದದ್ದುದ್ದು ಆರಾಮವಾಗಿ ಮಾಡಬಹುದು. ಆಹಾರದಲ್ಲಿ ಶಿಸ್ತು ತರುವುದಷ್ಟೇ ಮೊದಲ ಮೆಟ್ಟಿಲು.

ಇದನ್ನೂ ಓದಿ: Heath Tips For Weight Loss: ತೂಕ ಇಳಿಸುವ ಪ್ರಯತ್ನವೇ? ಹೀಗೆ ಮಾಡಿ

Exit mobile version