Site icon Vistara News

Food Poisoning: ಬಟರ್‌ ಚಿಕನ್‌ ತಿಂದಿದ್ದಕ್ಕೂ ದಿಢೀರ್‌ ಸಾವಿಗೂ ಏನು ಸಂಬಂಧ? ಇದೊಂದು ವಿಚಿತ್ರ ಕಾಯಿಲೆ!

Food Poisoning Butter chicken

ನಿಮಗೆ ಅನಾಫಿಲಾಕ್ಸಿಸ್‌ ಎಂಬ ಕಾಯಿಲೆ ಬಗ್ಗೆ ಗೊತ್ತೇ? ಜಗತ್ತಿನ ಅಪರೂಪದ ಕಾಯಿಲೆ ಇದಾದರೂ, ಇದೊಂದು ವಿಚಿತ್ರವಾದ (Food Poisoning) ಕಾಯಿಲೆ. ವಿಚಿತ್ರ ಎಂದರೆ, ಇಲ್ಲಿ ತನಗೇನಾಗುತ್ತಿದೆ ಎಂಬ ಯೋಚನೆ ಮಾಡುವ ಮೊದಲೇ ಪ್ರಾಣಪಕ್ಷಿ ಹಾರಿ ಹೋಗಿರುತ್ತದೆಯಂತೆ!
ಇದೀಗ ಬ್ರಿಟನ್‌ನ 27 ವರ್ಷದ ಜೋಸೆಫ್‌ ಹಿಗ್ಗಿನ್‌ಸನ್‌ ಎಂಬ ಯುವಕ ಬಟರ್‌ ಚಿಕನ್‌ ಬಾಯಿಗಿಡುತ್ತಿದ್ದ ಹಾಗೆ ಕುಸಿದು ಬಿದ್ದು ಪ್ರಾಣ ಕಳೆದುಕೊಂಡ. ಬಟರ್‌ ಚಿಕನ್‌ಗೂ ಈತನ ಪ್ರಾಣಕ್ಕೂ ಏನು ಸಂಬಂಧ ಎಂದು ನೀವು ಕೇಳಬಹುದು. ಬಟರ್‌ ಚಿಕನ್‌ನಲ್ಲಿ ಬಳಸಿದ ಬೀಜಗಳಿಂದ ಈತನಿಗಾದ ಅಲರ್ಜಿಯೇ ಈತನ ಸಾವಿಗೆ ಕಾರಣ ಎಂದು ವೈದ್ಯರು ದೃಢಪಡಿಸಿದ್ದಾರಂತೆ.
ರಾತ್ರಿಯೂಟಕ್ಕೆ ಬಟರ್‌ ಚಿಕನ್‌ನ್ನು ಆರ್ಡರ್‌ ಮಾಡಿದ ಈತ ಒಂದು ತುತ್ತು ಬಾಯಿಗಿಡುತ್ತಿದ್ದಂತೆ ಹೃದಯಾಘಾತವಾಗಿ ಕೊನೆಯುಸಿರೆಳಿದಿದ್ದನಂತೆ. ಈತನಿಗಿದ್ದ ಸಮಸ್ಯೆ ಎಂದರೆ ಅನಾಫಿಲಾಕ್ಸಿಸ್‌. ಇದು ಮಾರಣಾಂತಿಕ ಕಾಯಿಲೆಯಾಗಿದ್ದು, ಈ ಸಮಸ್ಯೆಯಿದ್ದವರು ಕೆಲವೊಮ್ಮೆ, ಕೆಲವ ಬೀಜಗಳನ್ನು ಅಡುಗೆಗೆ ಬಳಸಿದ್ದರೆ, ಅದರಿಂದಾಗುವ ಅಲರ್ಜಿಯಿಂದ ಇದ್ದಕ್ಕಿದ್ದಂತೆ ಸಾಯಲೂ ಬಹುದು. ಬಹಳಷ್ಟು ಸಾರಿ, ಇಲ್ಲಿ ಅಲರ್ಜಿಯಾದ ಮೇಲೆ ಇದಕ್ಕೆ ಚಿಕಿತ್ಸೆ ನೀಡುವಷ್ಟೂ ಸಮಯ ಇರುವುದಿಲ್ಲವಂತೆ. ಒಂದೆರಡು ನಿಮಿಷದಲ್ಲೇ ಸಾವು ಬರಬಹುದು. ಆತನಿದಾದುದೂ ಇದೇ ಎನ್ನುತ್ತಾರೆ ವೈದ್ಯರು.

ಏನು ತಿಂದಿದ್ದರು?

ಇವರ ಕುಟುಂಬಸ್ಥರು ಹೇಳುವಂತೆ, ಜೋಸೆಫ್‌ ಮೊದಲಿನ ದಿನವೂ ಬೀಜಗಳನ್ನು ಹಾಕಿದ ಯಾವುದೋ ಅಡುಗೆಯನ್ನು ಉಂಡಿದ್ದರು. ಆದರೆ, ಆಗ ಅವರಿಗೆ ಏನೂ ತೊಂದರೆಯಾಗಿರಲಿಲ್ಲ. ಆದರೆ, ಮಾರನೇ ದಿನ ಉಂಡಿದ್ದು ಅವರ ಪ್ರಾಣವನ್ನೇ ಕಿತ್ತುಕೊಂಡಿದೆ.
ಜೋಸೆಫ್‌ಗೆ ಈ ಸಮಸ್ಯೆ ಇರುವ ಬಗ್ಗೆ ಅರಿವಿತ್ತು. ಹಾಗೂ ಆತ ಎಪಿಪೆನ್‌ ಎಂಬ ಇಂಜೆಕ್ಷನ್‌ ಉಪಕರಣವನ್ನೂ ಬಳಸುತ್ತಿದ್ದ. ಅಲರ್ಜಿಯಂತ ಸಮಸ್ಯೆಗೆ ತಕ್ಷಣ ನೆರವಿಗೆ ಬರುವ ಇಂಜೆಕ್ಷನ್‌ ಇದು. ಇವೆಲ್ಲ ಇದ್ದರೂ, ಒಂದು ತುತ್ತು ಬಾಯಿಗಿಡುತ್ತಿದ್ದಂತೆ ಅಲರ್ಜಿಯಾಗಿ ತಕ್ಷಣ ಕೆಲವೇ ಸೆಕೆಂಡುಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ ಎಂದು ವರದಿ ಹೇಳಿದೆ.

ವೈದ್ಯರು ಹೇಳೋದೇನು?

ವೈದ್ಯರ ಪ್ರಕಾರ, ಅನಾಫಿಲಾಕ್ಸಿಸ್‌ ಎಂಬ ಈ ಸಮಸ್ಯೆ ಸಾಮಾನ್ಯವಾಗಿ ಬೀಜಗಳನ್ನು ಹಾಕಿ ಮಾಡಿದ ಅಡುಗೆಯಿಂದ ಇತ್ಯಾದಿಗಳಿಂದ ಬರಿವ ಬೀಜಗಳ ಅಲರ್ಜಿ ಸಮಸ್ಯೆ ಅಥವಾ ಒಂದು ಬಗೆಯ ಸೊಳ್ಳೆಯ ಕಚ್ಚುವಿಕೆಯಿಂದಲೂ ಬರಬಹುದಾದ ಅಲರ್ಜಿ. ಕೆಲವೊಮ್ಮೆ ಇದು ಎಷ್ಟು ಗಂಭೀರ ಸ್ವರೂಪದ್ದು ಎಂದರೆ, ಇಲ್ಲಿ ಇಂಜೆಕ್ಷನ್‌ ತೆಗೆದುಕೊಳ್ಳಲೂ ಕೂಡಾ ಸಮಯವಿರುವುದಿಲ್ಲ, ತನಗೇನಾಗುತ್ತಿದೆ ಎಂದು ಯೋಚುಸುವ ಮೊದಲೇ ಪ್ರಾಣಪಕ್ಷಿ ಹೋಗಿರುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಗಮನಕ್ಕೆ ಬಂದು ಸೂಕ್ತ ಚಿಕಿತ್ಸೆಯ ಮೂಲಕ ಇದನ್ನು ಗುಣಪಡಿಸಬಹುದಾಗಿದೆ. ತೊಡೆಗೆ ನೀಡುವ ಎಪಿನಫ್ರಿನ್‌ ಇಂಜೆಕ್ಷನ್‌ ಮೂಲಕ ಇದನ್ನು ಹತೋಟಿಗೆ ತರಬಹುದು ಎಂದು ವೈದ್ಯರು ಹೇಳುತ್ತಾರೆ.

ತುರ್ತು ಚಿಕಿತ್ಸೆ ಅಗತ್ಯ

ಆದರೆ ಕೆಲವೊಮ್ಮೆ ಈ ಇಂಜೆಕ್ಷನ್‌ ತಮ್ಮ ಬಳಿಯೇ ಇದ್ದರೂ, ಇಂಥ ಸಂದರ್ಭಗಳಲ್ಲಿ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಾಗಬೇಕಾಗುತ್ತದೆ.ಉಸಿರುಕಟ್ಟುವುದು, ತುರಿಕೆ, ಉಸಿರಾಡಲು ಕಷ್ಟವಾಗುವುದು, ವಾಂತಿ ಇತ್ಯಾದಿಗಳು ಇದರ ಲಕ್ಷಣಗಳು. ಇದರ ಜೊತೆಗೆ ಮೈಕೈ ಊದಿಕೊಳ್ಳುವುದು, ಇದ್ದಕ್ಕಿದ್ದ ಹಾಗೆ ರಕ್ತದೊತ್ತಡ ಅತ್ಯಂತ ಕಡಿಮೆಗೆ ತಲುಪುವುದು, ಶ್ವಾಸಕೋಶದ ಅಂಗಾಂಶಗಳು ಊದಿಕೊಳ್ಳುವುದು, ಅರಿವಿಲ್ಲದಂತಾಗುವುದು ಇತ್ಯಾದಿಗಳಿಂದಾಗಿ ಇದು ಇದ್ದಕ್ಕಿದ್ದ ಹಾಗೆ ಮಾರಣಾಂತಿಕವಾಗಿ ಬದಲಾಗಬಹುದು.

ಇದನ್ನೂ ಓದಿ: Stress can cause neck pain: ಕುತ್ತಿಗೆ ನೋವೇ?‌ ಮಾನಸಿಕ ಒತ್ತಡವೂ ಕಾರಣವಾಗಿರಬಹುದು!

Exit mobile version