ಶೀಲಾ ಸಿ. ಶೆಟ್ಟಿ, ಬೆಂಗಳೂರು
2023 ವರ್ಷದ (Year Ender 2023) ಕೊನೆಯಲ್ಲಿ ಮಾಲ್‌ಗಳಲ್ಲಿ ಇಯರ್ ಎಂಡ್ ಸೇಲ್ ಆರಂಭಗೊಂಡಿದ್ದು, ಎಲ್ಲೆಡೆ ಔಟ್‌ಫಿಟ್‌ಗಳ ಭರ್ಜರಿ ಶಾಪಿಂಗ್ ಮಾಡುವವರು ಹೆಚ್ಚಾಗಿದ್ದಾರೆ. ವೀಕೆಂಡ್ ಮಾತ್ರವಲ್ಲದೇ, ವಾರದ ದಿನಗಳಲ್ಲೂ ನಾನಾ ಆಫರ್‌ಗಳು ಲಭ್ಯವಿದ್ದು, ಹಾಗಾಗಿ ದಿನದಿಂದ ದಿನಕ್ಕೆ ಶಾಪಿಂಗ್ ಕ್ರೇಝ್ ಮಾಲ್‌ಗಳಲ್ಲಿ ಹೆಚ್ಚಾಗಿದೆ.
“ಪ್ರತಿ ವರ್ಷದಂತೆ ಈ ವರ್ಷವೂ ಯಿಯರ್ ಎಂಡ್ ಸೇಲ್ ಮಾಲ್‌ಗಳಲ್ಲಿ ಕಾಲಿಟ್ಟಿದೆ. ಅದರಲ್ಲೂ ಬ್ರಾಂಡೆಡ್ ಔಟ್‌ಫಿಟ್‌ಗಳು ಅರ್ಧಕ್ಕರ್ದ ಬೆಲೆಯಲ್ಲಿ ದೊರೆಯುತ್ತಿರುವುದು ಹಾಗೂ ನಾನಾ ಆಫರ್‌ಗಳು ದಕ್ಕುತ್ತಿರುವುದು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇನ್ನು ಇದಕ್ಕೆ ಪೂರಕ ಎಂಬಂತೆ, ಜಾಹೀರಾತುಗಳ ಮೂಲಕವೂ ಈ ಸೇಲ್‌ನ ಪಬ್ಲಿಸಿಟಿ ಮಾಡುತ್ತಿರುವುದು ಯುವಕ-ಯುವತಿಯರನ್ನು ಸೆಳೆಯುತ್ತಿದೆ. ಪರಿಣಾಮ, ಮಾಲ್‌ಗಳಲ್ಲಿ ಶಾಪಿಂಗ್ ಪ್ರಿಯರ ಸಂಖ್ಯೆ ಹೆಚ್ಚಿದೆ” ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಫರ್ಟ್ಸ್ ರಜತ್ ಹಾಗೂ ರಾಗಿಣಿ ಶರ್ಮಾ.
ಯಿಯರ್ ಎಂಡ್ ಸೇಲ್ ವಿವರ ತಿಳಿದುಕೊಳ್ಳಿ
ಮೊದಲಿಗೆ ಇದ್ಯಾವ ಬಗೆಯ ಯಿಯರ್ ಎಂಡ್ ಸೇಲ್ ಎಂದು ತಿಳಿದುಕೊಳ್ಳಿ. ಯಾವುದೆಲ್ಲಾ ಔಟ್‌ಫಿಟ್ಸ್‌ಗೆ ಆಫರ್ಸ್ ಇದೆ. ಎಲ್ಲೆಲ್ಲಿ ಯಾವ್ಯಾವ ಮಾಲ್‌ಗಳಲ್ಲಿ ನಡೆಯುತ್ತಿದೆ ಎಂಬುದನ್ನು ಅರಿತು ತೆರಳಿ.
ಬ್ರಾಂಡೆಡ್ ಔಟ್‌ಫಿಟ್ಸ್‌ಗೆ ಆದ್ಯತೆ ನೀಡಿ
ಗುಣಮಟ್ಟದ ಬ್ರಾಂಡೆಡ್ ಔಟ್‌ಫಿಟ್ಸ್‌ಗೆ ಆಫರ್ಸ್ ಅಥವಾ ಡಿಸ್ಕೌಂಟ್ಸ್ ಇದ್ದಲ್ಲಿ ಖರೀದಿಸಿ. ಇಲ್ಲವಾದಲ್ಲಿ ಬೇಡ. ಕೆಲವೊಮ್ಮೆ ಸೆಕೆಂಡ್ ಹ್ಯಾಂಡ್ ಔಟ್‌ಫಿಟ್ಸ್‌ಗಳನ್ನು ಕೂಡ ಈ ಸೇಲ್‌ನಲ್ಲಿ ಮಾರಾಟಕ್ಕಿಡಲಾಗಿರುತ್ತದೆ. ನೋಡಿ ಖರೀದಿಸಿ.
ಸೀಸನ್‌ಗೆ ತಕ್ಕಂತಹ ಔಟ್‌ಫಿಟ್ಸ್ ಖರೀದಿಸಿ
ಯಿಯರ್ ಎಂಡ್ ಸೇಲ್‌ನಲ್ಲಿ ಕಡಿಮೆ ಬೆಲೆಗೆ ಸಿಕ್ಕಿತೆಂದು ಕಂಡ ಕಂಡ ಉಡುಪುಗಳನ್ನು ಖರೀದಿಸಬೇಡಿ. ಸೀಸನ್‌ಗೆ ಸೂಕ್ತವಾದ ಉಡುಪುಗಳನ್ನು ಖರೀದಿಸಿ. ಆದಷ್ಟೂ ಗುಣಮಟ್ಟ ಫ್ಯಾಬ್ರಿಕ್‌ಗೆ ಆದ್ಯತೆ ನೀಡಿ.
ಮಿಕ್ಸ್ ಮ್ಯಾಚ್ ಔಟ್ಫಿಟ್ಸ್ ಪ್ರಿಯರ ಖರೀದಿ
ಮಿಕ್ಸ್ ಮ್ಯಾಚ್ ಔಟ್ಫಿಟ್ಸ್ ಮಾಡುವಂತಹ ಫ್ಯಾಷನ್ ಪ್ರಿಯರು ಇಲ್ಲಿ ಖರೀದಿಸಬಹುದು. ಯಾಕೆಂದರೇ ಸೀಸನ್ ಬದಲಾದರೂ ಧರಿಸುವ ಐಡಿಯಾ ತಿಳಿದಲ್ಲಿ ಶಾಪಿಂಗ್ ವ್ಯರ್ಥವಾಗದು.
ಎಥ್ನಿಕ್ ಔಟ್‌ಫಿಟ್ಸ್‌ಗೆ ಆದ್ಯತೆ
ಎಥ್ನಿಕ್ ಔಟ್‌ಫಿಟ್ಸ್ ಕಡಿಮೆ ಬೆಲೆಯಲ್ಲಿ ಹಾಗೂ ಉತ್ತಮ ಗುಣ ಮಟ್ಟದ ಫ್ಯಾಬ್ರಿಕ್‌ನಲ್ಲಿ ದೊರಕಿದಲ್ಲಿ ಖರೀದಿಸಬಹುದು. ಟ್ರೆಂಡ್ ಬದಲಾದರೂ ಇವುಗಳನ್ನು ಕಾರ್ಯಕ್ರಮಗಳಲ್ಲಿ ಧರಿಸಬಹುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Model Fashion Life: ಏರ್ ಟ್ರಾಫಿಕ್ ಕಂಟ್ರೊಲರ್ ನಮ್ರತಾ ಜೈನ್ ವಿಂಟರ್ ಫ್ಯಾಷನ್ ಟಿಪ್ಸ್!