Site icon Vistara News

New Year Fashion 2024 : ಈ ವರ್ಷ ಟ್ರೆಂಡಿಯಾಗಲಿರುವ ವೆಸ್ಟರ್ನ್ ವೇರ್ಸ್ ಡಿಟೇಲ್ಸ್ ಇಲ್ಲಿದೆ!

Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ನ್ಯೂ ಇಯರ್‌ ಫ್ಯಾಷನ್‌ ಟ್ರೆಂಡ್‌ ಫ್ಯಾಷನ್‌ (New Year Fashion 2024) ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದೆ. ಲೈಫ್‌ಸ್ಟೈಲ್‌ಗೆ ಹಾಗೂ ಮುಂಬರುವ ಒಂದೊಂದು ಸೀಸನ್‌ಗೆ ತಕ್ಕಂತೆ ಬಿಡುಗಡೆಯಾಗುವ ನಯಾ ಶೇಡ್ಸ್, ಡಿಸೈನ್ಸ್, ಆಕ್ಸೆಸರೀಸ್‌ ಎಲ್ಲವೂ ಫ್ಯಾಷನ್‌ಲೋಕದಲ್ಲಿ ಈಗಾಗಲೇ ಒಂದೊಂದಾಗಿ ನಿರ್ಧಾರವಾಗುತ್ತಿದೆ. ಆಯಾ ರಾಷ್ಟ್ರದ ಹವಾಮಾನ ಹಾಗೂ ಸಂಸ್ಕೃತಿಗೆ ತಕ್ಕಂತೆ ಬದಲಾಗುವ ವಿನ್ಯಾಸ ಹಾಗೂ ಶೇಡ್ಸ್ ಟ್ರೆಂಡ್‌ ಹುಟ್ಟುಹಾಕಲಿವೆ.

“2024ರ ಈ ಹೊಸ ವರ್ಷಕ್ಕೆ ಫ್ಯಾಷನ್‌ ಟ್ರೆಂಡ್‌ನಲ್ಲಿ ಏನೇನೆಲ್ಲಾ ಎಂಟ್ರಿ ನೀಡಿದೆ, ನೀಡಲಿದೆ, ಬರಲಿದೆ ಎಂಬುದರ ಬಗ್ಗೆ ಎಲ್ಲರಿಗೂ ಕುತೂಹಲವಿರುವುದು ಸಹಜ. ಸೀಸನ್‌ಗೆ ತಕ್ಕಂತೆ ಬದಲಾಗುವ ಫ್ಯಾಷನ್‌ ವರ್ಷ ಬದಲಾದಂತೆ ಹೊಸತಾಗಿ ಎಂಟ್ರಿ ನೀಡುತ್ತದೆ. ಕೆಲವೊಮ್ಮೆ ಇವು ಸೀಸನ್‌ಗೆ ತಕ್ಕಂತೆ ಕೊನೆಯ ಕ್ಷಣದಲ್ಲಿ ಬದಲಾಗಬಹುದು. ಆದರೂ ಇಲ್ಲಿ ನೀಡಿರುವ ಪಕ್ಷಿನೋಟ ಒಂದಿಷ್ಟು ಸಂಕ್ಷೀಪ್ತ ಮಾಹಿತಿ ಕಲ್ಪಿಸುತ್ತದೆ” ಎನ್ನುತ್ತಾರೆ ಸ್ಟೈಲಿಸ್ಟ್ಗಳು ಹಾಗೂ ಫ್ಯಾಷನಿಸ್ಟಾಗಳು.

2024 ಫ್ಯಾಷನ್‌ ಪ್ರಿಡಿಕ್ಷನ್‌

ಈಗಾಗಲೇ ಆರಂಭವಾಗಿರುವ ಹೊಸ ವರ್ಷದ ಶೇಡ್‌ಗಳಲ್ಲಿ ಇಂಗ್ಲೀಷ್‌ ಬಣ್ಣಗಳೆಂದು ಏನಿಸಿಕೊಂಡಿರುವ ಪೀಚ್‌ ಫಝ್‌ , ಇಂಟೆನ್ಸ್ , ಮಿಡ್‌ನೈಟ್‌ ಪ್ಲಮ್‌, ಎಪ್ರಿಕಾಟ್‌, ಗ್ರೇ, ನ್ಯೂಟ್ರಲ್‌ ಯೆಲ್ಲೋ ಶೇಡ್‌ಗಳು ಎಂಟ್ರಿ ನೀಡಿವೆ. ಇನ್ನು ಈ ಶೇಡ್‌ಗಳು ನಮ್ಮ ಲೋಕಲ್‌ ಕಲರ್‌ಗೆ ಹೊಂದುವಂತಹ ಶೇಡ್‌ಗಳಲ್ಲಿ ನಮ್ಮಲ್ಲಿ ಕಾಣಿಸಿಕೊಳ್ಳಲಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ ರಿಚಾ ಹಾಗೂ ಸಾದ್ವಿ.

ಇನ್ನು ಫ್ಯಾಷನಿಸ್ಟಾ ಜೀನತ್‌ ಹಾಗೂ ರೀಟಾ ಪ್ರಕಾರ, ಡಿಸೆಂಬರ್‌ನಲ್ಲಿದ್ದ ಒಂದಿಷ್ಟು ಕಲರ್‌ಗಳು ವಿಂಟರ್ ಸೀಸನ್‌ ಮುಗಿಯುವವರೆಗೂ ಮುಂದುವರೆಯಲಿವೆ ಎನ್ನುತ್ತಾರೆ.

ಪ್ರಿಂಟ್ಸ್ ಫ್ಯಾಷನ್‌ ಹಂಗಾಮ

ಮೆಟಾಲಿಕ್‌ ಶೇಡ್ಸ್, ಫ್ಲವರ್‌ ಪ್ಯಾಚ್‌ ವರ್ಕ್, ಡಿಫರೆಂಟ್‌ ಫ್ಲೋರಲ್ಸ್, ಸ್ಪೋರ್ಟಿ ಚಿಕ್‌, ಫ್ರಿಂಝ್‌, ಅನಿಮಲ್‌ ಪ್ರಿಂಟ್ಸ್‌, ಚಂಕಿ ಎಂಬಾಲಿಶ್‌ಮೆಂಟ್ಸ್, ಸಮ್ಮರ್‌ ಸೀಸನ್‌ನ ವೆಸ್ಟರ್ನ್ ಔಟ್‌ಫಿಟ್ಸ್ ಕೆಟಗರಿಯಲ್ಲಿ ಎಂಟ್ರಿ ನೀಡಲಿವೆ.

ಬದಲಾಗುವ ವೆಸ್ಟರ್ನ್ ಔಟ್‌ಫಿಟ್ಸ್

ಮೆಟಾಲಿಕ್‌ ಶೇಡ್ಸ್ ಸ್ಕಟ್ರ್ಸ್, ಟಾಪ್ಸ್‌, ಕೋ ಆರ್ಡ್ ಸೆಟ್ಸ್, ಸ್ಪೋಟ್ರ್ಸ್ ಪರ್ಸನ್‌ನಂತೆ ಕಾಣುವ ಯೂನಿಸೆಕ್ಸ್ ಔಟ್‌ಫಿಟ್ಸ್, ಹಾಫ್‌ ವೈಟ್‌, ಕ್ರೀಮ್‌ ವೈಟ್‌ ವೆಸ್ಟರ್ನ್ ಔಟ್‌ಫಿಟ್ಸ್, ಒವರ್‌ಸೈಝ್‌ ಡ್ರೆಸ್ಗಳು, ಫ್ರಿಂಝ್‌ ಸ್ಕರ್ಟ್, ಟಾಪ್‌, ಪ್ಯಾಂಟ್‌, ಫ್ರಾಕ್‌, ಶಾರ್ಟ್ ಸೂಟ್ಸ್, ಟ್ರಾಕ್‌ ಸ್ಟಾರ್‌ ಸ್ಟೈಲ್‌ ಡ್ರೆಸ್‌, ಫುಲ್‌ ಸ್ಕಟ್ರ್ಸ್, ಕಟೌಟ್‌ ಜಂಪ್‌ಸೂಟ್ಸ್, ಕ್ರಾಪ್‌ ಅಸ್ಸೆಮ್ಮೆಟ್ರಿಕಲ್‌ ಟಾಪ್ಸ್ ಸೀಸನ್‌ಗೆ ತಕ್ಕಂತೆ ಬದಲಾಗಿ ಎಂಟ್ರಿ ನೀಡಲಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Exit mobile version