Site icon Vistara News

Holi 2023 : ಹೋಳಿ ಹಬ್ಬದ ವಿಶೇಷ ಮಾಲ್ಪುವಾ ಮಾಡುವುದು ಹೇಗೆ? ಇಲ್ಲಿದೆ ನೋಡಿ ರೆಸಿಪಿ

#image_title

ಹೋಳಿ ಹಬ್ಬ (Holi 2023) ಇನ್ನೇನು ಬಂದೇ ಬಿಟ್ಟಿತು. ಬಣ್ಣಗಳ ಈ ಹಬ್ಬದಲ್ಲಿ ಭಾರತ ಪೂರ್ತಿಯಾಗಿ ವರ್ಣಮಯವಾಗಿಬಿಡುತ್ತದೆ. ಕಾಮನ ದಹನ ಮಾಡುವ ಈ ಶುಭವಾದ ಹಬ್ಬದಲ್ಲಿ ಬಾಯಿಗೂ ಹಬ್ಬವೇ. ಉತ್ತರ ಭಾರತದಲ್ಲಿ ಈ ಹಬ್ಬಕ್ಕೆಂದೇ ವಿಶೇಷವಾಗಿ ಮಾಲ್ಪುವಾ ಹೆಸರಿನ ಸಿಹಿಯನ್ನು ತಯಾರಿಸಲಾಗುತ್ತದೆ. ಇದನ್ನು ಭಾರತದ ಪ್ಯಾನ್‌ ಕೇಕ್‌ ಎಂದು ಕರೆದರೂ ತಪ್ಪಾಗದು. ಕ್ರಸ್ಪಿ ಜತೆ ಸಾಫ್ಟ್‌ ಆಗಿಯೂ ಇರುವ ಈ ವಿಶೇಷ ತಿನಿಸು ಮಾಡುವ ಪರಿಯನ್ನು ತಿಳಿಯೋಣ ಬನ್ನಿ.

ಇದನ್ನೂ ಓದಿ: Organic Holi: ಕಲರ್‌ಫುಲ್‌ ಹೋಳಿ ಆಚರಣೆಗೆ ಬಂತು ನೈಸರ್ಗಿಕ ಬಣ್ಣಗಳು

ಬೇಕಾಗುವ ಸಾಮಾಗ್ರಿಗಳು:
ಹಿಟ್ಟು – 1 ಕಪ್
ರವೆ – 1/2 ಕಪ್
ಸಕ್ಕರೆ – 1/2 ಕಪ್
ಹಾಲು – 2 ಕಪ್
(ಸಕ್ಕರೆ ಪಾಕ ಮಾಡಲು)
ಸಕ್ಕರೆ – 2 ಕಪ್
ನೀರು – 1 ಕಪ್
ಏಲಕ್ಕಿ ಪುಡಿ – 1/2 ಚಮಚ
ಕೇಸರಿ ಬಣ್ಣ – 1/2 ಚಮಚ

ಮಾಡುವ ವಿಧಾನ

ಮಿಕ್ಸಿಂಗ್ ಬೌಲ್ ತೆಗೆದುಕೊಂಡು 1 ಕಪ್ ಹಿಟ್ಟು, 1/2 ಕಪ್ ರವೆ ಮತ್ತು 1/2 ಕಪ್ ಸಕ್ಕರೆ ಸೇರಿಸಿ ಮತ್ತು ಮಿಶ್ರಣ ಮಾಡಿಕೊಳ್ಳಿ. ಅದಕ್ಕೆ ಬೆಚ್ಚಗಿನ ಹಾಲನ್ನು ಸೇರಿಸಿ ಕಲಿಸಿರಿ. ಈ ಮಿಶ್ರಣವನ್ನು 30 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿಡಿ.
ಈಗ ಸಕ್ಕರೆ ಪಾಕವನ್ನು ತಯಾರಿಸಲು, ಬಾಣಲೆಯಲ್ಲಿ 2 ಕಪ್ ಸಕ್ಕರೆ ಮತ್ತು 1 ಕಪ್ ನೀರು ಸೇರಿಸಿ. 2 ನಿಮಿಷಗಳ ಕಾಲ ಅಥವಾ ಸಕ್ಕರೆ ಚೆನ್ನಾಗಿ ಕರಗುವವರೆಗೆ ಬೇಯಿಸಿ. ನಂತರ 1/2 ಚಮಚ ಏಲಕ್ಕಿ ಪುಡಿ ಮತ್ತು ಕೇಸರಿ ಬಣ್ಣವನ್ನು ಸೇರಿಸಿ. 2 ನಿಮಿಷ ಅಥವಾ ಪಾಕ ಸರಿಯಾಗುವವರೆಗೆ ಬೇಯಿಸಿ.

ಇದನ್ನೂ ಓದಿ: ಬೇಡಿಕೆ ಈಡೇರಿಸಿದರೆ CMಗೆ ಶೇಂಗಾ ಹೋಳಿಗೆ ಊಟ, ಕಲ್ಲುಸಕ್ಕರೆ ತುಲಾಭಾರ!

ನಂತರ, ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಒಂದು ಚಮಚದಷ್ಟು ಹಿಟ್ಟಿನ ಮಿಶ್ರಣವನ್ನು ಸುರಿಯಿರಿ. ಅದು ಪ್ಯಾನ್‌ಕೇಕ್‌ ರೀತಿಯಲ್ಲಿ ಆಗುತ್ತದೆ. ಅದನ್ನು ಎರಡೂ ಬದಿಯಲ್ಲಿ ಸರಿಯಾಗಿ ಬೇಯಿಸಿ. ಕಡಿಮೆ ಮತ್ತು ಮಧ್ಯಮ ಉರಿಯಲ್ಲಿ ಬೇಯಿಸಬೇಕು. ಸರಿಯಾಗಿ ಬೆಂದ ಮಾಲ್ಪುವಾವನ್ನು ಬೆಚ್ಚಗಿನ ಸಕ್ಕರೆ ಪಾಕಕ್ಕೆ ಹಾಕಿರಿ. ಸ್ವಲ್ಪ ಹೊತ್ತು ಅದನ್ನು ನೆನೆಯಲು ಬಿಡಿ. ಕೊನೆಯದಾಗಿ ಮಾಲ್ಪುವಾಗೆ ಕತ್ತರಿಸಿದ ಪಿಸ್ತಾ ಮತ್ತು ಬಾದಾಮಿಗಳಿಂದ ಅಲಂಕರಿಸಿ. ಈಗ ನಿಮ್ಮ ಮಾಲ್ಪುವಾ ಸವಿಯಲು ಸಿದ್ಧ.

Exit mobile version