ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೋಳಿ ಹಬ್ಬದ ಸಂಭ್ರಮದ ಜೋಷ್ ಹೆಚ್ಚಿಸಲು ರಂಗು ರಂಗಾದ ಬಣ್ಣ ಬಣ್ಣದ ನೇಲ್ ಆರ್ಟ್ ಡಿಸೈನ್‌ಗಳು ಬಿಡುಗಡೆಯಾಗಿವೆ. ಡ್ರೆಸ್‌ಕೋಡ್‌ಗೆ ತಕ್ಕಂತೆ ಯುವತಿಯರ ಕೈಗಳ ಅಂದ ಹೆಚ್ಚಿಸುತ್ತಿವೆ. ಇದಕ್ಕೆ ಪೂರಕ ಎಂಬಂತೆ, ಈಗಾಗಲೇ ವೈವಿಧ್ಯಮಯ ಡಿಸೈನ್‌ನ ಹೋಳಿ ನೇಲ್ ಆರ್ಟ್ ಬ್ಯೂಟಿ ಬ್ಲಾಗ್, ವ್ಲಾಗ್ ಹಾಗೂ ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌ನ ಬ್ಯೂಟಿ ಕೆಟಗರಿಯಲ್ಲಿ ಅನಾವರಣಗೊಳ್ಳುತ್ತಿವೆ. ನಾಲ್ಕೈದು ಬಣ್ಣಗಳಿಂದಲೇ ಉಗುರುಗಳನ್ನು ಆಕರ್ಷಕವಾಗಿ, ಕ್ರಿಯಾತ್ಮಕವಾಗಿ ಚಿತ್ರಿಸಿರುವ ರಂಗು ರಂಗಾದ ನೇಲ್ ಆರ್ಟ್ ಚಿತ್ತಾರಗಳು ಯುವತಿಯರನ್ನು ಸೆಳೆಯುತ್ತಿವೆ.
ನೀವೂ ಚಿತ್ತಾರ ಮೂಡಿಸಬಹುದು
ಕೆಂಪು, ಹಸಿರು, ಗುಲಾಬಿ, ಹಳದಿ, ನೀಲಿ, ಕಿತ್ತಳೆ ಇನ್ನಿತರ ಕಡು ಅಥವಾ ತಿಳಿ ಬಣ್ಣಗಳಿಂದ ಹಾಗೂ ತಮಗೆ ಇಷ್ಟವಾದ ಬಣ್ಣಗಳಿಂದ ಉಗುರುಗಳ ಮೇಲೆ ಚಿತ್ತಾರ ಮಾಡಿಸಬಹುದು. ಅಷ್ಟು ಮಾತ್ರವಲ್ಲದೇ, ಕಲರ್ ವಾಟರ್ ಬಲೂನ್, ಪಿಚಕಾರಿ, ವಾಟರ್ ಗನ್, ರಾಧಾ-ಕೃಷ್ಣ, ಕಾಮನ ಬಿಲ್ಲು, ಹೋಳಿ ಶುಭಾಶಯವನ್ನು ಚಿತ್ರಿಸಬಹುದು. ಹಬ್ಬಕ್ಕೆ ಸಂಬಂಧಿಸಿದ ಚಿತ್ರಗಳನ್ನುಮೂಡಿಸಬಹುದು ಎನ್ನುತ್ತಾರೆ ಸೆಲೆಬ್ರಿಟಿ ಆರ್ಟಿಸ್ಟ್ ರಿಯಾ.
ನೇಲ್ ಆರ್ಟ್ ಸಿಂಗಾರ
ನೇಲ್ ಆರ್ಟ್ ಪ್ರಿಯರು ತಾವೇ ತಮ್ಮ ಉಗುರನ್ನು ಸಿಂಗರಿಸಿಕೊಳ್ಳಬಹುದು. ಹೋಳಿ ನೇಲ್ ಆರ್ಟ್‌ಗೆ ಆದಷ್ಟು ಐದಾರು ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಇವು ಉಗುರುಗಳ ಮೇಲೆ ಎದ್ದುಕಾಣುತ್ತವೆ. ಲೈಟ್ ಶೇಡನ್ನು ಬ್ಯಾಕ್‌ಗ್ರೌಂಡ್ ಬಣ್ಣವಾಗಿ ಉಪಯೋಗಿಸಿ ಅದರ ಮೇಲೆ ತಮಗಿಷ್ಟವಾದ ಬಣ್ಣಗಳನ್ನು ಮಿಕ್ಸ್ ಮ್ಯಾಚ್ ಮಾಡಿ ತಮ್ಮ ಕ್ರಿಯೇಟಿವಿಟಿಗೆ ತಕ್ಕಂತೆ ಸುಂದರವಾಗಿ ಡಿಸೈನ್ ಮಾಡಬಹುದು. ಸಿಲ್ವರ್ ಮತ್ತು ಗೋಲ್ಡ್ ಗ್ಲಿಟರ್ ನೇಲ್ ಪಾಲಿಷ್‌ಗಳಿಂದಲೂ ಸಿಂಗರಿಸಬಹುದು. ಇವು ಕೈ ಬೆರಳುಗಳಿಗೆ ರಿಚ್ ಲುಕ್ ನೀಡುತ್ತವೆ ಎಂದು ಸಲಹೆ ನೀಡುತ್ತಾರೆ ರಿಯಾ.
ಹೋಳಿ ನೇಲ್ ಆರ್ಟ್‌ಗೆ 5 ಸೂತ್ರಗಳು
- ನೇಲ್ ಆರ್ಟ್ ಕಿಟ್ ಹೊಂದಿರುವುದು ಅಗತ್ಯ.
- ಚಿತ್ತಾರ ಮೂಡಿಸುವವರಿಗೆ ಕ್ರಿಯೇಟಿವಿಟಿ ಅವಶ್ಯ.
- ನೇಲ್ ಆರ್ಟ್ ಮಾಡುವ ಮುಂಚೆ ಮೆನಿಕ್ಯೂರ್ ಮಾಡಿ.
- ಬೇಸ್ ಕಲರ್ ಆಯ್ಕೆ ಮಾಡಿ. ಎಲ್ಲಾ ಉಗುರುಗಳಿಗೆ ಹಚ್ಚಿ. 2ಕ್ಕಿಂತ ಹೆಚ್ಚು ಕೋಟ್ ಬೇಡ.
- ಐದಾರು ಬಣ್ಣದ ನೇಲ್ ಪಾಲಿಶ್ಗಳನ್ನು ಆಯ್ಕೆ ಮಾಡಿ. ಅವು ಬೇಸ್ ಕಲರ್ಗೆ ಕಾಂಟ್ರಾಸ್ಟ್ ಆಗಿರಲಿ.
- ಕ್ಯೂ- ಟಿಪ್ ಅಥವಾ ನೇಲ್ ಆರ್ಟ್ ಪೆನ್ಗಳಿಂದ ಎಲ್ಲಾ ಬಣ್ಣದ ಸಣ್ಣ ಸಣ್ಣ ಡಾಟ್ಗಳನ್ನು ಇಡಿ. ನಂತರ ಟಾಪ್ ಕೋಟ್ ಅನ್ನು ಕ್ಲಿಯರ್ ಪಾಲಿಶ್ನಿಂದ ಫಿನಿಶ್ ಮಾಡಿ.
- ನಿಮಗೆ ಬೇಕಾದಲ್ಲಿ ಗೋಲ್ಡ್ ಅಥವಾ ಸಿಲ್ವರ್ ಗ್ಲಿಟರ್ ಟ್ರಾನ್ಪರೆಂಟ್ ಕೋಟ್ ಹಚ್ಚಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Holi Party Trend: ಉದ್ಯಾನನಗರಿಯಲ್ಲಿ ವೀಕೆಂಡ್‌ಗೆ ಆರಂಭವಾಯ್ತು ಹೋಳಿ ಪಾರ್ಟಿ