ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೋಳಿ ಹಬ್ಬಕ್ಕೆ ಮುನ್ನವೇ ಉದ್ಯಾನನಗರಿಯ ಸಾಕಷ್ಟು ಕ್ಲಬ್‌ಗಳು, ಹೋಟೆಲ್‌ಗಳು-ರೆಸಾರ್ಟ್‌ಗಳು, ಅಪಾರ್ಟ್ಮೆಂಟ್ ಅಸೋಸಿಯೇಷನ್‌ಗಳು ಹಾಗೂ ಡಾನ್ಸ್ ಸೆಂಟರ್‌ಗಳು ಸೇರಿದಂತೆ ನಾನಾ ಸಂಘ-ಸಂಸ್ಥೆಗಳು ವೀಕೆಂಡ್‌ನಿಂದಲೇ ಸಂಭ್ರಮಾಚರಣೆಗೆ ಸೈ ಎಂದಿವೆ. ವೀಕೆಂಡ್‌ನಿಂದ ನಾನಾ ಕಡೆ ಆರಂಭವಾಗುವ ಈ ಸೆಲೆಬ್ರೇಷನ್ ಮುಂದಿನ ವಾರ ಆಗಮಿಸುವ ಹಬ್ಬದ ದಿನದವರೆಗೂ ನಿಗದಿತ ಸಮಯದಲ್ಲಿ ಆಯೋಜನೆಗೊಂಡಿವೆ. ಒಟ್ಟಿನಲ್ಲಿ, ನಾನಾ ಶೈಲಿಯಲ್ಲಿ ಹೋಳಿ ಪಾರ್ಟಿಗೆ ರೆಡಿಯಾಗಿವೆ.
ವೀಕೆಂಡ್‌ನಲ್ಲಿ ಪ್ರೀ ಹೋಳಿ ಪಾರ್ಟಿ
ಕಾರ್ಪೋರೇಟ್ ಕ್ಷೇತ್ರದವರು, ಕಾಲೇಜು ಹುಡುಗ-ಹುಡುಗಿಯರು ಸೇರಿದಂತೆ ವೀಕೆಂಡ್‌ನಲ್ಲಿ ಆಚರಿಸಲು ಇಷ್ಟಪಡುವವರಿಗೆ ಅನುವಾಗುವಂತೆ ನಗರದ ಕ್ಲಬ್-ಪಬ್ ಹಾಗೂ ಹೋಟೆಲ್‌ಗಳು ಹೋಳಿ ಪಾರ್ಟಿಯನ್ನು ಆಯೋಜಿಸಿವೆ. ಇದಕ್ಕೆ ಸಮಯವನ್ನು ನಿಗದಿಪಡಿಸಿವೆ. ಆಯಾ ಪಾರ್ಟಿಯ ಕಾರ್ಯಕಮಗಳಿಗೆ ತಕ್ಕಂತೆ ದರ ನಿಗದಿಪಡಿಸಿವೆ. ಬಣ್ಣದಿಂದಿಡಿದು, ಫುಡ್-ಡ್ರಿಂಕ್ಸ್‌ವರೆಗೂ ಪ್ಯಾಕೇಜ್‌ನಲ್ಲಿ ಸೇರಿಸಿವೆ. ಅವರವರ ಅಭಿರುಚಿಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು ಎನ್ನುತ್ತಾರೆ ಹೋಳಿ ಪಾರ್ಟಿಯೊಂದರ ಆಯೋಜಕರು.
ನಾನಾ ಹೆಸರಲ್ಲಿ ಹೋಳಿಯ ರಂಗಿನಾಟ
ಸ್ಕೈ ಡೆಕ್‌ನಲ್ಲಿ ಹೋಳಿ ಫೆಸ್ಟ್, ಎಸ್‌ಪಿಟಿ ಸ್ಪೋಟ್ಸ್ ಕ್ಲಬ್‌ನಲ್ಲಿ ಕಲರ್‌ಲ್ಯಾಂಡ್, ರುಪ್ಪೀಸ್ ರೆಸಾರ್ಟ್‌ನಲ್ಲಿ ರಂಗ್ ರಂಗೀಲಾ ಹೋಳಿ, ಲಾಕಾಸಾ ಬ್ರ್ಯೂಸ್‌ನಲ್ಲಿ ಡಿಸ್ಕೋ ಹೋಳಿ, ಜಯಮಹಲ್ ಹೋಟೆಲ್‌ನಲ್ಲಿ ಹಲೋ ಹೋಳಿ, ಫೆದರ್‌ಲೈಟ್ ಎವೊಮಾದಲ್ಲಿ ಹೋಳಿವುಡ್, ವೈಟ್‌ಫಿಲ್ಡ್ ರಾಧಾ ಹೋಮಿಟೆಲ್‌ನಲ್ಲಿ ರಂಗೋತ್ಸವ್, ಇಂಡಿಗೋದಲ್ಲಿ ಹೋಳಿ ಬ್ಯಾಶ್, ದಿ ಪಾರ್ಕ್‌ನಲ್ಲಿ ರಂಗ್ 2023, ಸಿಟ್ರಸ್ ಹೋಟೆಲ್‌ನಲ್ಲಿ ರಂಗ್ ರಸೀಯಾ ಹೀಗೆ ದೇಸಿ ಹೋಳಿ, ಬಾಲಿವುಡ್ ಹೋಳಿ, ರೈನ್ ಡ್ಯಾನ್ಸ್ ಹೋಳಿ, ನಿಯಾನ್ ಹೋಳಿ ಸೇರಿದಂತೆ ನಾನಾ ಹೆಸರಲ್ಲಿ ನೂರಾರು ಹೋಳಿ ಪಾರ್ಟಿಗಳು ಆಯೋಜನೆಗೊಂಡಿವೆ.
ಹೋಳಿ ಪೂಲ್ ಪಾರ್ಟಿ
ಇನ್ನು ಟ್ರೆಂಡ್‌ನಲ್ಲಿರುವ ಹೋಳಿ ಪೂಲ್ ಪಾರ್ಟಿಗಳು ಸಾಕಷ್ಟು ಕಡೆ ಹಮ್ಮಿಕೊಳ್ಳಲಾಗಿದೆ. ಧವನಂ ಸರೋವರ್‌ನಲ್ಲಿ ಹೂಗಳ ಪೂಲ್ ಹೋಳಿ, ಬ್ರ್ಯೂ ಕಿಂಗ್ಸ್‌ನಲ್ಲಿ ಪೂಲ್ ಹೋಳಿ, ದಿರೆಂಗ್ ವೈಲ್ಡೆರ್‌ನೆಸ್ಟ್‌ನಲ್ಲಿ ಪೂಲ್ ಪಾರ್ಟಿ ಹೀಗೆ ಪೂಲ್ ಹೋಳಿ ಕೂಡ ಪಾಪ್ಯುಲರ್ ಲಿಸ್ಟ್‌ಗೆ ಸೇರಿದೆ.
ಓಪನ್ ಏರ್ ಹೋಳಿ ಸೆಲೆಬ್ರೇಷನ್
ಕೆಲವು ಮಂದಿ ಪಾರ್ಟಿ ಹೆಸರಲ್ಲಿ ಹೋಳಿಯಾಡಿದರೇ, ಮತ್ತೆ ಕೆಲವರು ಪೂಲ್ ಸೈಡ್ ಪಾರ್ಟಿ ಇಷ್ಟಪಡುತ್ತಾರೆ, ಇನ್ನು ಕೆಲವರು ಮೈದಾನ ಅಥವಾ ಹೊರಾಂಗಣದಲ್ಲಿ ನಡೆಯುವಂತಹ ಓಪನ್ ಏರ್ ಹೋಳಿ ಸೆಲೆಬ್ರೇಷನ್‌ಗೆ ಪ್ರಾಮುಖ್ಯತೆ ನೀಡುತ್ತಾರೆ ಎನ್ನುತ್ತಾರೆ ಆಯೋಜಕರೊಬ್ಬರು.
ಹೋಳಿ ಪಾರ್ಟಿಯಲ್ಲಿ ಭಾಗವಹಿಸುವವರಿಗೆ 3 ಟಿಪ್ಸ್
ಆನ್‌ಲೈನ್ ಬುಕ್ಕಿಂಗ್ ಸೌಲಭ್ಯಗಳು ದೊರೆಯುತ್ತವೆ.
ಪಾರ್ಟಿಯಲ್ಲಿ ನಿಗಧಿಪಡಿಸಿದ ಡ್ರೆಸ್‌ಕೋಡ್ ಫಾಲೋ ಮಾಡಿ.
ನಿಮ್ಮ ಪ್ಯಾಕೇಜ್‌ನಲ್ಲಿರುವುದರ ಬಗ್ಗೆ ಮೊದಲೇ ತಿಳಿದುಕೊಂಡಿರಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Holi 2023 : ಹೋಳಿ ಹಬ್ಬದ ವಿಶೇಷ ಮಾಲ್ಪುವಾ ಮಾಡುವುದು ಹೇಗೆ? ಇಲ್ಲಿದೆ ನೋಡಿ ರೆಸಿಪಿ