Site icon Vistara News

Holiday Fashion | ಬಂತು ದಸರಾ ಹಾಲಿಡೇ ಫ್ಯಾಷನ್‌

Holiday Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ದಸರಾ ಹಾಲಿಡೇ ಫ್ಯಾಷನ್‌ ಸ್ಟೇಟ್‌ಮೆಂಟ್ಸ್‌ಗೆ ನಾನಾ ವಿನ್ಯಾಸದ ಕ್ಯಾಶುವಲ್‌ ಹಾಗೂ ವೆಸ್ಟರ್ನ್ವೇರ್‌ಗಳು ಎಂಟ್ರಿ ನೀಡಿವೆ. ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗೆ ಸೂಟ್‌ ಆಗುವಂತಹ ಔಟ್‌ಫಿಟ್‌ಗಳು ಈಗಾಗಲೇ ಟ್ರೆಂಡಿಯಾಗಿವೆ.

ಹೆಣ್ಣು ಮಕ್ಕಳಿಗೆ ಹಾಲಿಡೇ ಫ್ಯಾಷನ್‌ನಲ್ಲಿ ಏನಿದೆ ?

ಹಾಲಿಡೇ ಲುಕ್‌ಗೆ ಟಿನೇಜ್‌ ಹುಡುಗಿಯರಿಗೆ ಸೂಟ್‌ ಆಗುವಂತಹ ನಿಯಾನ್‌ ವರ್ಣದ ಫಂಕಿ ಲುಕ್‌ ನೀಡುವ ತ್ರಿ ಫೋರ್ತ್‌ ಜೆಗ್ಗಿಂಗ್ಸ್‌, ಟ್ರೆಗ್ಗಿಂಗ್ಸ್‌ ಹಾಗೂ ಶಾರ್ಟ್‌ ಲಾಂಗ್‌ ಟಾಪ್‌ಗಳು ಫ್ಯಾಷನ್‌ನಲ್ಲಿವೆ. ಇನ್ನು ವಿವಾಹಿತರಿಗೆಂದೇ ಸೆಮಿ ಫಾರ್ಮಲ್ಸ್‌ನಲ್ಲಿ ಶಾರ್ಟ್‌ ಕುರ್ತಾಗಳು ವೈಬ್ರೆಂಟ್‌ ಕಲರ್‌ಗಳಲ್ಲಿ ಲಭ್ಯವಿದೆ. ಹಾಲಿಡೇ ಫ್ಯಾಷನ್‌ ಎಂದಾಕ್ಷಣಾ ಆದಷ್ಟೂ ಟ್ರೆಡಿಷನಲ್‌ ಲುಕ್‌ಗೆ ಬೈ ಹೇಳುವುದು ಉತ್ತಮ. ವೆಸ್ಟರ್ನ್ ಔಟ್‌ಫೀಟ್‌ ಧರಿಸುವುದು ಸಾಧ್ಯವಾಗದಿದ್ದಲ್ಲಿ ಆದಷ್ಟೂ ಶಾರ್ಟ್ ಕುರ್ತಾ, ಶಾರ್ಟ್ ಪ್ಯಾಂಟ್‌ ಚೂಸ್‌ ಮಾಡಿ ಎನ್ನುತ್ತಾರೆ ಸ್ಟೈಲಿಸ್ಟ್‌ ದಿವಿಜಾ.

ಅದರಲ್ಲೂ ಭೇಟಿ ನೀಡುವ ಜಾಗಕ್ಕೆ ತಕ್ಕಂತೆ ಡ್ರೆಸ್‌ಕೋಡ್ ಆಯ್ಕೆ ಮಾಡುವುದು ಉತ್ತಮ. ಅದರಲ್ಲೂ ತಿರುಗಾಡಲು ಆರಾಮದಾಯಕವೆನಿಸುವ ಹಾಗೂ ಆಕರ್ಷಕವಾಗಿ ಕಾಣುವಂತಹ ಟ್ರೆಂಡಿ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳಿ ಎನ್ನುತ್ತಾರೆ.

ಟ್ರೆಂಡಿ ಮೆನ್ಸ್‌ ಹಾಲಿಡೇ ವೇರ್‌

ಬ್ರೈಟ್‌ ಕಲರ್ಸ್‌, ಫ್ಲೋರಲ್‌ ಡಿಸೈನ್‌ ಹಾಗೂ ಪ್ರಿಂಟೆಡ್‌ನ ಸ್ಲಿವ್‌ಲೆಸ್‌ ಇಲ್ಲವೇ ಫಂಕಿ ಟೀ ಶರ್ಟ್‌ಗಳು ದಸರಾ ಹಾಲಿಡೇಗೆ ಎಂಟ್ರಿ ನೀಡಿವೆ. ತ್ರಿ ಫೋರ್ತ್‌ 6 ಪ್ಯಾಕೇಟ್‌ಗಳಿರುವ ಪ್ಯಾಂಟ್‌ ಹಾಗೂ ಬರ್ಮಾಡಾಗಳು ನಾನಾ ಡಿಸೈನ್‌ನಲ್ಲಿ ಆಗಮಿಸಿವೆ. ಇನ್ನು ಲೆಯರ್‌ ಲುಕ್‌ ನೀಡುವ ಫರ್‌, ಸ್ಪೋಟ್ಸ್‌, ಬಾಂಬರ್‌ ಜಾಕೆಟ್‌ಗಳಲ್ಲೂ ಹೊಸ ಡಿಸೈನ್‌ವು ಲಭ್ಯ. ಇವುಗಳನ್ನು ಚೂಸ್‌ ಮಾಡಬಹುದು ಎನ್ನುತ್ತಾರೆ ಡಿಸೈನರ್‌ ಹರ್ಷ್.

ಮಕ್ಕಳಿಗೆ ಫಂಕಿ ಡ್ರೆಸ್‌ಗಳು :

ಇನ್ನು ಮಕ್ಕಳಿಗೆ ನಾನಾ ಬಗೆಯ ಫಂಕಿ ಲುಕ್‌ ನೀಡುವ ಡ್ರೆಸ್‌ಗಳು ಬಂದಿವೆ. ಮುದ್ದು ಮಕ್ಕಳಿಗೆ ಎಂದಿನಂತೆ ಡಂಗ್ರೀಸ್‌, ಶಾಟ್ರ್ಸ್, ಸ್ಮಾಲ್‌ ಜಾಕೆಟ್ಸ್, ಫಂಕಿ ನಿಯಾನ್‌ ಟೀ ಶಟ್ರ್ಸ್ ಸೇರಿದಂತೆ ಬಣ್ಣಬಣ್ಣದ ಉಡುಗೆಗಳು ಆಗಮಿಸಿವೆ. ಹೆಣ್ಣುಮಕ್ಕಳಿಗೆ ಮಿನಿ ಮಿಡಿಗಳು, ಸ್ಲೀವ್‌ಲೆಸ್‌ ಕ್ರಾಪ್‌ಟಾಪ್‌, ಪ್ರಿಂಟೆಡ್‌ ಕೇಪ್ರೀಸ್‌, ಮಿನಿ ಫ್ರಾಕ್ಸ್‌ ಸೇರಿದಂತೆ ಲೆಕ್ಕವಿಲ್ಲದಷ್ಟು ಡಿಸೈನರ್‌ವೇರ್‌ಗಳು ಬಂದಿವೆ.

ಹಾಲಿಡೇ ಜಾಗಕ್ಕೆ ತಕ್ಕಂತೆ ಔಟ್‌ಫಿಟ್ಸ್‌ :

ತೆರಳುವ ಜಾಗ ಹಿಲ್‌ ಸ್ಟೇಷನ್‌ ಆಗಿದ್ದಲ್ಲಿ ಆದಷ್ಟೂ ಲೆಯರ್‌ ಲುಕ್‌ ನೀಡುವಂತಹ ಡ್ರೆಸ್‌ಕೋಡ್‌ ನಿಮ್ಮದಾಗಿರಲಿ. ಬೀಚ್‌ ಆದಲ್ಲಿ ಅಲ್ಲಿಗೆ ಸೂಟ್‌ ಆಗುವಂತಹ ಲೈಟ್‌ವೇಟ್‌ ಸಿಂಥೆಟಿಕ್‌ ಉಡುಪುಗಳ ಆಯ್ಕೆ ಮಾಡಿ. ನೀರಿನ ಫಾಲ್ಸ್ ಆದಲ್ಲಿ ಮೈಗೆ ಅಂಟದಂತಹ ಔಟ್‌ಫಿಟ್ಸ್‌ ಧರಿಸುವುದು ಉತ್ತಮ.

ದಸರಾ ಹಾಲಿಡೇ ಫ್ಯಾಷನ್‌ ಟಿಪ್ಸ್‌ :

· ಫ್ಯಾಮಿಲಿ ಹಾಲಿಡೇಯಾದಲ್ಲಿ ಟ್ವಿನ್ನಿಂಗ್‌ ಇಲ್ಲವೇ ಮ್ಯಾಚಿಂಗ್‌ ಮಾಡಬಹುದು.

· ಮಕ್ಕಳ ಫ್ಯಾಷನ್‌ ಆದಷ್ಟೂ ಕಂಫರ್ಟಬಲ್‌ ಆಗಿರಲಿ.

· ಜಾಕೆಟ್‌-ಕೋಟ್‌ ಲೈಟ್‌ವೇಟ್‌ನದ್ದು ಚೂಸ್‌ ಮಾಡಿ.

· ಫ್ಯಾಷನ್‌ ಹೆಸರಲ್ಲಿ ಮೂಟೆಗಟ್ಟಲೆ ಲಗೇಜ್‌ ತುಂಬಬೇಡಿ.

· ಟ್ರೆಡಿಷನಲ್‌ ಉಡುಪಿನ ಆಯ್ಕೆ ಬೇಡ.

· ಆಕ್ಸೆಸರೀಸ್‌ ಆವಾಯ್ಡ್‌ ಮಾಡಿ.

· ಹೀಲ್ಸ್‌ ಧರಿಸುವ ಬದಲು ಶೂ ಅಥವಾ ಫ್ಲಿಪ್‌ ಫ್ಲಾಪ್‌ ಧರಿಸಿ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Celebrity Fashion corner | ಮಾಜಿ ಸಚಿವೆ ರಾಣಿ ಸತೀಶ್‌ ಡಿಸೈನಿಂಗ್‌ ಪ್ರಪಂಚ!

Exit mobile version