Site icon Vistara News

SenSight : ಪಾರ್ಕಿನ್ಸನ್ ಕಾಯಿಲೆ ಚಿಕಿತ್ಸೆಗೆ ಸೆನ್‌ಸೈಟ್ ಡೈರೆಕ್ಷನಲ್ ಲೆಡ್ ಸಿಸ್ಟಮ್ ಲಾಂಚ್

SenSight

ಬೆಂಗಳೂರು: ಡೀಪ್ ಬ್ರೇನ್ ಸ್ಟಿಮ್ಯುಲೇಷನ್(ಡಿಬಿಎಸ್) ಥೆರಪಿ ಟ್ರೇಟ್ಮೆಂಟ್‌ಗೆ ಸಂಬಂಧಿಸಿದಂತೆ ಸೆನ್‌ಸೈಟ್(SenSight) ಲೆಡ್ ಸಿಸ್ಟಮ್ ಅನ್ನು ಇಂಡಿಯಾ ಮೆಡ್‌ಟ್ರಾನಿಕ್ ಕಂಪನಿಯು ಲಾಂಚ್ ಮಾಡಿದೆ. ಈ ಕಂಪನಿಯು ಮೆಡ್‌ಟ್ರಾನಿಕ್ ಪಿಎಲ್‌ಸಿಯ ಅಂಗಸಂಸ್ಥೆಯಾಗಿದೆ. ಅಪಸ್ಮಾರ ಮತ್ತು ಬೇನೆಯ ಶಮನಕ್ಕೆ ಡಿಬಿಎಸ್‌ ಥೆರಪಿಯನ್ನು ಬಳಸಲಾಗುತ್ತದೆ. ನಡುಕ, ಪೆಡಸು, ನಡೆಯುವುದರಲ್ಲಿ ತೊಂದರೆ ಸೇರಿದಂತೆ ಪಾರ್ಕಿನ್ಸನ್ ಕಾಯಿಲೆಗೆ ಚಿಕಿತ್ಸೆಗೆ ಡೀಪ್ ಬ್ರೇನ್ ಸ್ಟಿಮ್ಯುಲೇಷನ್ ಬಳಸಲಾಗುತ್ತದೆ.

ಪಾರ್ಕಿನ್ಸನ್ ಕಾಯಿಲೆಯು ಬೆಳೆಯಬಹುದಾದ ಕಾಯಿಲೆಯಾಗಿದ್ದು, ಚಿಕಿತ್ಸೆ-ನಿರೋಧಕ ಮೋಟಾರು ಸಮಸ್ಯೆ(motor problems)ಗಳು ಮತ್ತು ಮೋಟಾರು ಅಲ್ಲದ (non-motor symptoms) ರೋಗಲಕ್ಷಣಗಳ ಹೆಚ್ಚುತ್ತಿರುವ ತೀವ್ರತೆಯಿಂದಾಗಿ ಅಂತಿಮವಾಗಿ ತೀವ್ರ ಅಂಗವೈಕಲ್ಯವನ್ನು ಉಂಟುಮಾಡುತ್ತದೆ. 2016 ರಲ್ಲಿ ವಿಶ್ವದಾದ್ಯಂತ 6.1 ಮಿಲಿಯನ್ ಜನರು ಪಾರ್ಕಿನ್ಸನ್ ಕಾಯಿಲೆಯನ್ನು ಹೊಂದಿದ್ದಾರೆಂದು ಅಂದಾಜಿಸಲಾಗಿದೆ. ಭಾರತದಲ್ಲಿ ಈ ಕಾಯಿಲೆ ಪ್ರಸರಣವು ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಇದು 10% ಎಂದು ಅಂದಾಜಿಸಲಾಗಿದೆ. ಡಿಬಿಎಸ್ ಎಂಬುದು ಚಿಕಿತ್ಸೆಯಲ್ಲಿ ಒಂದು ಸಣ್ಣ ಪೇಸ್‌ಮೇಕರ್-ರೀತಿಯ ಸಾಧನವು ಅತ್ಯಂತ ತೆಳುವಾದ ತಂತಿಗಳ ಮೂಲಕ ವಿದ್ಯುತ್ ಸಂಕೇತಗಳನ್ನು ಕಳುಹಿಸುತ್ತದೆ. ರೋಗಲಕ್ಷಣಗಳಿಗೆ ಸಂಬಂಧಿಸಿದ ಮೆದುಳಿನ ಟಾರ್ಗೆಟೆಡ್ ಪ್ರದೇಶಕ್ಕೆ ವಿದ್ಯುತ್ ಸಂಕೇತಗಳನ್ನು ಕಳುಹಿಸಿ ಚಿಕಿತ್ಸೆ ನೀಡಲಾಗುತ್ತದೆ.

ಸೆನ್‌ಸೈಟ್ ಡೈರೆಕ್ಷನಲ್ ಲೆಡ್ ಸಿಸ್ಟಮ್ ಅನ್ನು ಇತ್ತೀಚೆಗೆ ಭಾರತದಲ್ಲಿ ಮೊದಲಿಗೆ ಬೆಂಗಳೂರಿನ ಆಸ್ಟರ್ ಆಸ್ಪತ್ರೆಗಳ ಬಹು-ಶಿಸ್ತಿನ ತಂಡಗಳಿಂದ ಅಳವಡಿಸಲಾಯಿತು. ಇದರಲ್ಲಿ ಡಾ ರವಿ ಗೋಪಾಲ್ ವರ್ಮಾ-ನರವಿಜ್ಞಾನದಲ್ಲಿ ಗ್ಲೋಬಲ್ ಸೆಂಟರ್ ಆಫ್ ಎಕ್ಸಲೆನ್ಸ್ ನಿರ್ದೇಶಕರು ಮತ್ತು ಲೀಡ್ ಕನ್ಸಲ್ಟೆಂಟ್ ನರಶಸ್ತ್ರಚಿಕಿತ್ಸಕ, ಡಾ ಮಿರ್ಜಾ ಮಾಸೂಮ್ ಅಬ್ಬಾಸ್- ನರರೋಗ ತಜ್ಞ ಮತ್ತು ಮೂವ್‌ಮೆಂಟ್ ಮತ್ತು ಡಾ ನಿರ್ಮಲಾ ಎಸ್- ಸಲಹೆಗಾರ ನರಶಸ್ತ್ರಚಿಕಿತ್ಸಕರಿದ್ದರು. ಕಳೆದ 8-9 ವರ್ಷಗಳಿಂದ ಪಾರ್ಕಿನ್ಸನ್ ಕಾಯಿಲೆಯ ಲಕ್ಷಣಗಳಿಂದ ಬಳಲುತ್ತಿರುವ 60 ವರ್ಷ ವಯಸ್ಸಿನ ಪುರುಷ ರೋಗಿಯಲ್ಲಿ ಈ ಚಿಕಿತ್ಸಕ ಅಳವಡಿಸಲಾಗಿದೆ.

ಉತ್ತೇಜನೆಯ ನಿಖರತೆಯನ್ನು ಹೆಚ್ಚಿಸಲು ಸಹಾಯ ಮಾಡುವ ಸಂವೇದನೆಗಾಗಿ ವಿನ್ಯಾಸಗೊಳಿಸಲಾದ ಏಕೈಕ ಡೈರೆಕ್ಷನಲ್ ಲೆಡ್ ಸಾಧನವಾಗಿದೆ” ಎಂದು ಡಾ ರವಿ ಗೋಪಾಲ್ ವರ್ಮಾ ಹೇಳಿದ್ದಾರೆ. ದಿಕ್ಕಿನ ಲೆಡ್‌ಗಳು ವಿಭಜಿತ ವಿದ್ಯುದ್ವಾರಗಳನ್ನು ಹೊಂದಿದ್ದು ಅದು ಮೆದುಳಿನ ಅಪೇಕ್ಷಿತ ಪ್ರದೇಶಗಳಲ್ಲಿ ಪ್ರಚೋದನೆಯನ್ನು ಗುರಿಯಾಗಿಸಲು ಸಹಾಯ ಮಾಡುತ್ತದೆ. ರೋಗಿಗಳ ಫಲಿತಾಂಶಗಳನ್ನು ಅತ್ಯುತ್ತಮವಾಗಿಸಲು ಮತ್ತು ಪ್ರಚೋದನೆ-ಪ್ರೇರಿತ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡಲು ಪ್ರೋಗ್ರಾಮ್ ಮಾಡಲಾಗಿದೆ. ಸೆನ್‌ಸೈಟ್ ಡೈರೆಕ್ಷನಲ್ ಮತ್ತು ಮೆದುಳಿನ ಸಂವೇದನಾ ಸಿನರ್ಜಿಗಳನ್ನು ನೀಡುವ ಮೊದಲ ಮತ್ತು ಏಕೈಕ ಡಿಬಿಎಸ್ ಲೆಡ್ ಸಿಸ್ಟಮ್ ಆಗಿದೆ. ಈ ಜೋಡಣೆಯು ಪಾರ್ಕಿನ್ಸನ್ ರೋಗಿಗಳಿಗೆ ಭರವಸೆ ನೀಡುತ್ತದೆ ಎಂದು ತಿಳಿಸಿದ್ದಾರೆ.

ಪಾರ್ಕಿನ್ಸನ್ ಬೆಳೆಯಬಹುದಾದ ಕಾಯಿಲೆಯಾಗಿದ್ದು, ನಿಧಾನವಾಗಿ ರೋಗಿಗಳಲ್ಲಿ ಅಂಗವೈಕಲ್ಯಕ್ಕೆ ಕಾರಣವಾಗುತ್ತದೆ. ಪಾರ್ಕಿನ್ಸನ್ ನಿರ್ವಹಣೆಯಲ್ಲಿ ಮೆಡ್‌ಟ್ರಾನಿಕ್ ಯಾವಾಗಲೂ ಅತ್ಯಾಧುನಿಕ ತಂತ್ರಜ್ಞಾನವನ್ನು ಒದಗಿಸುವ ಬದ್ಧತೆಯನ್ನು ತೋರಿದೆ. ದೇಶದಲ್ಲಿ ಸೆನ್‌ಸೈಟ್ ಡೈರೆಕ್ಷನಲ್ ಲೆಡ್ ಸಿಸ್ಟಮ್ ಪರಿಚಯಿಸುವ ಮೂಲಕ ಇಂಥ, ವ್ಯಾಧಿಗಳಗೆ ಸಂಬಂಧಿಸಿದಂತೆ ಕ್ಲಿನಿಕಲ್ ಫಲಿತಾಂಶ ಮತ್ತಷ್ಟು ಸುಧಾರಿಸುವುದು ಮತ್ತು ರೋಗಿಗಳು ಸುಧಾರಣೆಯ ಅನುಭವವನ್ನು ಪಡೆದುಕೊಳ್ಳುವ ಬಗ್ಗೆ ನಮಗೆ ವಿಶ್ವಾಸವಿದೆ ಎದು ಮೆಡ್‌ಟ್ರಾನಿಕ್ ಇಂಡಿಯಾ ನ್ಯೂರೋಸೈನ್ಸಸ್ ಥೆರಪಿಸ್, ಡೈರೆಕ್ಟರ್ ರಾಹುಲ್ ಅರೋರಾ ತಿಳಿಸಿದ್ದಾರೆ.

ಇದನ್ನೂ ಓದಿ| Woman health tips | ಹೀಗಾದಲ್ಲಿ ಮಹಿಳೆ ತನ್ನ ಆರೋಗ್ಯಕ್ಕೆ ಗಮನ ಕೊಡುವುದು ಯಾವಾಗ?

Exit mobile version