Site icon Vistara News

Indo-western fashion | ಟ್ರೆಂಡಿಯಾಯ್ತು ಇಂಡೋ-ವೆಸ್ಟರ್ನ್ ಸೀರೆ ಬ್ಲೌಸ್‌

Indo-western fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸೀರೆಗಳಿಗೆ ಧರಿಸುವ ಬ್ಲೌಸ್‌ಗಳ ರೂಪ ಬದಲಾಗಿದೆ. ಟ್ರೆಡಿಷನಲ್‌ ಬ್ಲೌಸ್‌ ರೂಪ ಇದೀಗ ನಯಾ ಲುಕ್‌ ಪಡೆದಿದ್ದು, ಊಹೆಗೂ ಮೀರಿದ ಕಂಟೆಂಪರರಿ ಡಿಸೈನ್‌ ಹೊಂದಿದ ಇಂಡೋ-ವೆಸ್ಟರ್ನ್ ಲುಕ್‌ ನೀಡುವ ಬ್ಲೌಸ್‌ಗಳು ಟ್ರೆಂಡಿಯಾಗಿವೆ.

ಟ್ರೆಡಿಷನಲ್‌ ರೂಲ್ಸ್‌ ಬ್ರೇಕ್‌ ಮಾಡಿದ ಬ್ಲೌಸ್‌

“ ಈ ಹಿಂದೆ ಸೀರೆ ಬ್ಲೌಸ್‌ ಎಂದಾಕ್ಷಣ ಹೀಗೆಯೇ ಇರಬೇಕೆಂಬ ರೂಲ್ಸ್‌ ಇತ್ತು. ಜೊತೆಗೆ ನೋಡಲು ಗೌರವಯುತವಾಗಿ ಕಾಣುವಂತಹ ವಿನ್ಯಾಸ ಹೊಂದಿರುತ್ತಿದ್ದವು. ಆದರೆ, ಇದೀಗ ಕಂಪ್ಲೀಟ್‌ ಸೀರೆ ಬ್ಲೌಸ್‌ನ ಚಿತ್ರಣ ಬದಲಾಗಿದೆ. ಉಡುವ ಸೀರೆಗೆ ಮ್ಯಾಚಿಂಗ್‌ ಆಗಲಿ ಬಿಡಲಿ, ನೋಡಲು ಆಕರ್ಷಕವಾಗಿರಲಿ, ಬಿಡಲಿ ಬಿಂದಾಸ್‌ ಡಿಸೈನ್‌ ಹೊಂದಿದ ಕಂಟೆಂಪರರಿ ವಿನ್ಯಾಸದ ವೆಸ್ಟರ್ನ್ ಲುಕ್‌ ನೀಡುವ ಬ್ಲೌಸ್‌ಗಳು ಸಿನಿಮಾ ತಾರೆಯರನ್ನು ಸವಾರಿ ಮಾಡತೊಡಗಿವೆ. ಅಷ್ಟೇಕೆ! ಯುವತಿಯರನ್ನು ಸೆಳೆದಿವೆ” ಎನ್ನುತ್ತಾರೆ ಬ್ಲೌಸ್‌ ಡಿಸೈನರ್‌ ಸುಧಾ.

ಇಂಡೋ-ವೆಸ್ಟರ್ನ್ ಬ್ಲೌಸ್‌ ವಿನ್ಯಾಸ

ಟೀ ಶರ್ಟ್‌ ಸ್ಟೈಲ್‌, ಬ್ಯಾಕ್‌ ಟೈಯಿಂಗ್‌, ಕ್ರಾಪ್‌ ಟಾಪ್‌ ಬ್ಲೌಸ್‌, ಕಟ್‌ಔಟ್‌, ಶರ್ಟ್ ಸ್ಟೈಲ್‌, ಲಾಂಗ್‌ ಲೆಂಥ್‌, ಸ್ಲಿಟ್‌ ಬ್ಲೌಸ್‌, ಟಾಪ್‌ ಸ್ಟೈಲ್‌ ಬ್ಲೌಸ್‌ ಸೇರಿದಂತೆ ನಾನಾ ಬಗೆಯವು ವಿಶೇಷವಾಗಿ ಯಂಗ್‌ ಜನರೇಷನ್‌ ಯುವತಿಯರನ್ನು ಆಕರ್ಷಿಸುತ್ತಿವೆ. ಇನ್ನು ಹಳೆಯ ಸೀರೆಗಳಿಗೂ ಹೊಸ ಲುಕ್‌ ನೀಡಬಲ್ಲ ಕಂಟೆಂಪರರಿ ಡಿಸೈನ್‌ನ ಬ್ಲೌಸ್‌ಗಳು ಚಾಲ್ತಿಯಲ್ಲಿವೆ.

ವೆಸ್ಟರ್ನ್ ಟಾಪ್‌ಗಳಿಗೂ ಬ್ಲೌಸ್‌ ರೂಪ

ಕಾರ್ಪೋರೇಟ್‌ ಕ್ಷೇತ್ರದ ಬಹಳಷ್ಟು ಮಂದಿ ಇದೀಗ ಸೀರೆಗೆ ವೆಸ್ಟರ್ನ್ ಲುಕ್‌ನ ಟಾಪ್‌ ಅಂದರೆ, ಶಾರ್ಟ್ ಟೀ ಶರ್ಟ್, ಟಾಪ್‌ಗಳನ್ನು ಪ್ರಯೋಗಿಸತೊಡಗಿದ್ದಾರೆ. ಇವು ಕಂಟೆಂಪರರಿ ಲುಕ್‌ ನೀಡುವುದರೊಂದಿಗೆ ಡಿಫರೆಂಟ್‌ ಲುಕ್‌ ನೀಡುತ್ತದೆ. ಇದೇ ರೀತಿ ಸಿನಿಮಾ ತಾರೆಯರು ಕೂಡ ಈ ಪ್ರಯೋಗ ಮಾಡತೊಡಗಿದ್ದಾರೆ. ಇವು ಸೀರೆಯನ್ನು ವಿಭಿನ್ನವಾಗಿ ಬಿಂಬಿಸುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

“ಯಾವುದೇ ಬಗೆಯ ಸೀರೆಗಳಾದರೂ ಸರಿ, ಅವುಗಳಿಗೆ ನಯಾ ಲುಕ್‌ ನೀಡಬೇಕೆಂದಲ್ಲಿ, ಬ್ಲೌಸ್‌ ವಿನ್ಯಾಸ ವಿಭಿನ್ನವಾಗಿರಬೇಕು. ತಮ್ಮ ವಾರ್ಡ್ರೋಬ್‌ನಲ್ಲಿರುವ ವೆಸ್ಟರ್ನ್ ಲುಕ್‌ ನೀಡುವ ಕಾಲರ್‌ ಶಾರ್ಟ್ ಟಾಪ್‌ ಆದರೂ ಸರಿಯೇ ಅಥವಾ ಕ್ರಾಪ್‌ ಟಾಪ್‌ ಆದರೂ ಓಕೆ. ಮ್ಯಾಚ್‌ ಮಾಡಿ ಸೀರೆಯೊಂದಿಗೆ ಧರಿಸಿದರಾಯಿತು”ಎನ್ನುತ್ತಾರೆ ಸೀರೆ ಎಕ್ಸ್‌ಪರ್ಟ್ ವನ್‌ ಮಿನಟ್‌ ಉಮಾ.

ಸೀರೆಗಿಂತ ಬ್ಲೌಸ್‌ಗೆ ಹೆಚ್ಚಿದ ಪ್ರಾಮುಖ್ಯತೆ

ಮೊದಲೆಲ್ಲಾ ಆಯಾ ಸೀರೆಗೆ ಅದೇ ಬಣ್ಣದ ಬ್ಲೌಸ್‌ ಧರಿಸುವ ನಿಯಮವಿತ್ತು. ಆದರೆ, ಇಂದು ಈ ಕಾನ್ಸೆಪ್ಟ್‌ ಕಂಪ್ಲೀಟ್‌ ಬದಲಾಗಿದೆ. ಸೀರೆಗಿಂತ ಬ್ಲೌಸ್‌ಗೆ ಆದ್ಯತೆ ಹೆಚ್ಚಾಗಿದೆ. ಸೀರೆಗಿಂತ ಆಕರ್ಷಕವಾಗಿ ಕಾಣಿಸುವ ರೆಡಿಮೇಡ್‌ ಬ್ಲೌಸ್‌ಗಳು ಕೂಡ ಈ ಜಾಗವನ್ನು ಆಕ್ರಮಿಸಿವೆ. ಇವಕ್ಕೆ ಸೀರೆಯ ಯಾವುದೋ ಒಂದು ಭಾಗದ ವರ್ಣ ಮ್ಯಾಚ್‌ ಆದರೂ ಸಾಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಇಂಡೋ-ವೆಸ್ಟರ್ನ್ ಬ್ಲೌಸ್‌ ಪ್ರಿಯರಿಗೆ ಸ್ಟೈಲಿಂಗ್‌ ಸಲಹೆ:

( ಲೇಖಕಿ :ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Saree draping | ವರಮಹಾಲಕ್ಷ್ಮಿಗೆ ಕಲಾತ್ಮಕವಾಗಿ ಸೀರೆ ಉಡಿಸಿ

Exit mobile version