Site icon Vistara News

Janhvi Kapoor Ramp Walk: ಬೆಂಗಳೂರು ಫ್ಯಾಷನ್‌ ಶೋನಲ್ಲಿ ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ಸೆಲೆಬ್ರೆಟಿ ವಾಕ್‌

Janhvi Kapoor Ramp Walk

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೆಂಗಳೂರು ನನಗಿಷ್ಟ, ಇಲ್ಲಿನ ಹಸಿರು ವಾತವಾರಣ, ಹವಾಮಾನ ಹಾಗೂ ಪರಿಸರ ಸದಾ ನನ್ನನ್ನೂ‌ ಸೆಳೆಯುತ್ತದೆ. ನಿಜಕ್ಕೂ ಬೆಂಗಳೂರು ಸುಂದರವಾದ ಸಿಟಿ. ಇಲ್ಲಿಗೆ ಬಂದಾಗ ಹೊರಗಿನ ತಂಗಾಳಿಯಲ್ಲಿ ಖುಲ್ಲಂ ಖುಲ್ಲಾ ಕೂದಲನ್ನು ಹಾರಾಡಿಸುತ್ತಾ ತಿರುಗಾಡಬೇಕೆನಿಸುತ್ತದೆ. ಹಾಗಿದೆ ಬೆಂಗಳೂರಿನ ವಾತಾವರಣ. ಹೀಗೆ ಉದ್ಯಾನನಗರಿಯನ್ನು ತಮ್ಮದೇ ಆದ ಪದಗಳಲ್ಲಿ ಹೊಗಳಿದವರು ಬೇರ್ಯಾರು ಅಲ್ಲ, ಸದ್ಯಕ್ಕೆ ಬಾಲಿವುಡ್‌ನ ಹಾಟ್ ತಾರೆ ಎನಿಸಿಕೊಂಡ ನಟಿ ಜಾನ್ವಿ ಕಪೂರ್‌. ಹೌದು, ಉದ್ಯಾನನಗರಿಯ ಪಂಚತಾರಾ ಹೋಟೆಲ್‌ನಲ್ಲಿ ನಡೆದ ರಿಲಯನ್ಸ್‌ ಜ್ಯುವೆಲ್ಸ್‌ನಲ್ಲಿ ಹೊಸದಾಗಿ ಬಿಡುಗಡೆಯಾಗಿರುವ ತಂಜಾವೂರ್‌ ಕಲೆಕ್ಷನ್‌ಗಳನ್ನು ಫ್ಯಾಷನ್‌ ಶೋನಲ್ಲಿ ಬಿಡುಗಡೆಗೊಳಿಸಿದರು. ಮಾತ್ರವಲ್ಲ, ಸೆಲೆಬ್ರೆಟಿ ಶೋ ಸ್ಟಾಪರ್‌ ಆಗಿ ವಾಕ್‌ ಮಾಡಿ (Janhvi Kapoor Ramp Walk), ಅಭಿಮಾನಿಗಳನ್ನು ಸೆಳೆದರು. ನಂತರ ಮಾಧ್ಯಮದೊಂದಿಗೆ ಮಾತನಾಡಿ, ಉದ್ಯಾನನಗರಿಯ ಬಗ್ಗೆ ತಮಗಿರುವ ಪ್ರೀತಿ ಬಗ್ಗೆ ಹೇಳಿದರು. ಜ್ಯುವೆಲರಿಗಳ ಬಗ್ಗೆ ತಮಗಿರುವ ಪ್ರೀತಿಯ ಬಗ್ಗೆಯೂ ಸಂಕ್ಷೀಪ್ತವಾಗಿ ತಿಳಿಸಿದರು.

ತಂಜಾವೂರ್‌ ಕಲೆಕ್ಷನ್‌ನಲ್ಲಿ ಕಂಗೊಳಿಸಿದ ಜಾನ್ವಿ ಕಪೂರ್‌

ಅಂದಹಾಗೆ, ಬಾಲಿವುಡ್‌ ನಟಿ ಜಾನ್ವಿ ಕಪೂರ್‌ಗೆ ಫ್ಯಾಷನ್‌ ಶೋಗಳು ಹೊಸತಲ್ಲ! ಅಲ್ಲದೇ ಸಖತ್‌ ಫ್ಯಾಷೆನಬಲ್‌ ನಟಿ ಎಂದು ಕೂಡ ಈಗಾಗಲೇ ಅವರು ಸಾಬೀತು ಮಾಡಿದ್ದಾಗಿದೆ. ಇದೇ ಮೊತ್ತ ಮೊದಲ ಬಾರಿಗೆ ಬೆಂಗಳೂರಿನ ಫ್ಯಾಷನ್‌ ಶೋನಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್‌ ಆಗಿ ಮಾಡಿದ್ದಾರೆ. ತಾಯಿ ಶ್ರೀದೇವಿ ಕೂಡ ಬೆಂಗಳೂರಿನ ಫ್ಯಾಷನ್‌ ಶೋನಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್‌ ಆಗಿ ವಾಕ್‌ ಮಾಡಿದ್ದರು. ಇದನ್ನು ಜಾನ್ವಿ ಕಪೂರ್‌ ನೆನಪಿಸಿಕೊಂಡರು ಕೂಡ. ಇನ್ನು ಈ ರಿಲಯನ್ಸ್‌ ಜ್ಯುವೆಲ್ಸ್‌ನ ಫ್ಯಾಷನ್‌ ಶೋನಲ್ಲಿ ಜಾನ್ವಿ ವಿಶೇಷವಾಗಿ ಕಾಣಿಸಿಕೊಂಡರು. ವಿಶೇಷವಾಗಿ ವಿನ್ಯಾಸಗೊಳಿಸಿದ ಕತ್ತಿನಿಂದ ಭುಜದವರೆಗೂ ಹರಡಿದಂತಹ ಚೋಕರ್‌ ಶೈಲಿಯ ಬಿಗ್‌ಲೆಯರ್‌ ತಂಜಾವೂರ್‌ ಡಿಸೈನ್‌ನ ನೆಕ್ಲೇಸ್‌ ಧರಿಸಿ ನೋಡುಗರ ಮನ ಸೆಳೆದರು. ನ್ಯೂಡ್‌ ಕಲರ್‌ನ ರೆಡಿ ಸೀರೆಯಂತೆ ಕಾಣುವ ಸಿಂಪಲ್‌ ಹಾಫ್‌ ಸೀರೆಯಂತೆ ಬಿಂಬಿಸುವ ಡಿಸೈನರ್‌ವೇರನ್ನು ಧರಿಸಿದ್ದರು. ಅವರ ಇಡೀ ಲುಕ್‌ ಅನ್ನು ಬಿಗ್‌ ತಂಜಾವೂರ್‌ ನೆಕ್ಲೇಸ್‌ ಹೈ ಲೈಟ್‌ ಮಾಡಿತ್ತು. ರೆಡ್‌ ಲಿಪ್‌ಸ್ಟಿಕ್‌ ಟ್ರೆಡಿಷನಲ್‌ ಲುಕ್‌ ನೀಡಿತ್ತು. ಟೈ ಮಾಡಿದ ಹೇರ್‌ಸ್ಟೈಲ್‌ ಬೇಸಿಗೆ ಸೀಸನ್‌ ಲುಕ್‌ಗೆ ಸಾಥ್‌ ನೀಡಿತ್ತು. ನೆಕ್ಲೇಸ್‌ ಹೊರತುಪಡಿಸಿಲ್ಲಿ ಜಾನ್ವಿ ಕಪೂರ್‌ ನಿರಾಭರಣ ಸುಂದರಿಯಾಗಿ ಕಾಣಿಸಿಕೊಂಡಿದ್ದರು.

ತಂಜಾವುರ್‌ ಡಿಸೈನ್ಸ್‌ ಬಗ್ಗೆ ಮಾತನಾಡಿದ ಜಾನ್ವಿ

ಪುರಾತನ ವಿನ್ಯಾಸಗಳನ್ನು ಒಳಗೊಂಡ ಜ್ಯುವೆಲರಿಗಳು, ಒಂದೊಂದು ವಿನ್ಯಾಸವನ್ನು ಹೈಲೈಟ್‌ಮಾಡುವಂತಹ ಆಭರಣಗಳು, ಚೋಕರ್‌ ಹೀಗೆ ನಾನಾ ವಿನ್ಯಾಸವನ್ನೊಳಗೊಂಡ ಜ್ಯುವೆಲರಿಗಳು ರಿಲಯನ್ಸ್ ಕಲೆಕ್ಷನ್‌ನಲ್ಲಿ ಬಿಡುಗಡೆಗೊಳಿಸಲಾಯಿತು. ಜ್ಯುವೆಲರಿಗಳು ಹೆಣ್ಣಿನ ಸೌಂದಯಕ್ಕೆ ಪೂರಕ ಹಾಗೂ ಇವು ನೋಡಲು ಸುಂದರವಾಗಿ ಬಿಂಬಿಸುತ್ತವೆ ಎಂದು ಹೇಳಿದರು. ತಮ್ಮ ತಾಯಿ ಶ್ರೀದೇವಿಯವರ ಬಳಿಯೂ ಸಾಕಷ್ಟು ಜ್ಯುವೆಲರಿಗಳ ಕಲೆಕ್ಷನ್‌ ಇದೆ. ಅವುಗಳನ್ನು ಜೋಪಾನವಾಗಿ ಇರಿಸಿದ್ದೇನೆ ಎಂದು ನೆನಪಿಸಿಕೊಂಡರು.

ನಾನಾ ಜ್ಯುವೆಲರಿ ವಿನ್ಯಾಸಗಳ ಅನಾವರಣ

ಈ ಫ್ಯಾಷನ್‌ ಶೋನಲ್ಲಿ ರಿಲಯನ್ಸ್‌ ಜ್ಯುವೆಲರಸ್‌ನ ತಂಜಾವೂರ್‌ ಅಕ್ಷಯ ತೃತೀಯ ಕಲೆಕ್ಷನ್‌ 2023ರ ನಾನಾ ಜ್ಯುವೆಲರಿಗಳ ವಿನ್ಯಾಸಗಳು ಅನಾವರಣಗೊಂಡವು. ಜ್ಯುವೆಲರಿಗಳನ್ನು ಧರಿಸಿದ ಮಾಡೆಲ್‌ಗಳು ರ್ಯಾಂಪ್‌ ಮೇಲೆ ವಾಕ್‌ ಮಾಡಿದರು. ಸಂಸ್ಥೆಯ ಗಣ್ಯರು ಪಾಲ್ಗೊಂಡಿದ್ದರು.

(ಲೇಖಕಿ : ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ: Wedding Jewel Fashion: ವೆಡ್ಡಿಂಗ್‌ ಸೀಸನ್‌ ಜ್ಯುವೆಲ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ಡಿಸೈನರ್‌ ಮಾಟಿ

Exit mobile version