ಶೀಲಾ ಸಿ. ಶೆಟ್ಟಿ, ಬೆಂಗಳೂರು
ನವವಿನ್ಯಾಸದ ಶಾಂಡೆಲಿಯರ್ ಹ್ಯಾಂಗಿಂಗ್ಸ್-ಇಯರಿಂಗ್ಸ್ ಜುವೆಲರಿ ಲೋಕಕ್ಕೆ ಲಗ್ಗೆ ಇಟ್ಟಿವೆ. ಧರಿಸಿದರೆ ಸೆಲೆಬ್ರೆಟಿಯಂತೆ ಬಿಂಬಿಸುವ ಬಿಗ್ ಹಾಗೂ ಬೋಲ್ಡ್ ಡಿಸೈನ್‌ನ ಶಾಂಡೆಲಿಯರ್ ಇಯರಿಂಗ್ಸ್ ಜುವೆಲರಿ ಫ್ಯಾಷನ್‌ನ ಹಿಟ್ ಲಿಸ್ಟ್ ಸೇರಿದೆ.
ವಿನೂತನ ವಿನ್ಯಾಸದಲ್ಲಿ ಶಾಂಡೆಲಿಯರ್ ಇಯರಿಂಗ್ಸ್
ಕಿವಿಗಿಂತ ಅಗಲವಾಗಿರುವ, ಉದ್ದವಾಗಿರುವ ಭಾರಿ ಡಿಸೈನ್ ಒಳಗೊಂಡಿರುವ ಈ ಶಾಂಡೆಲಿಯರ್ ಇಯರಿಂಗ್ಸ್ ಕ್ರಿಸ್ಟಲ್ಸ್, ಸೆಮಿ ಅಮೆರಿಕನ್ ಡೈಮಂಡ್ಸ್, ಮುತ್ತು ಹಾಗೂ ನಾನಾ ವರ್ಣದ ಹರಳುಗಳಲ್ಲಿ ಕಾಣಿಸಿಕೊಂಡಿವೆ. ಪಾರ್ಟಿ ಪ್ರಿಯ ಮಾನಿನಿಯರ ಕಿವಿಗಳನ್ನು ಅಲಂಕರಿಸುತ್ತಿವೆ.
ಸ್ಟೈಲಿಸ್ಟ್ ರೋಸಿ ಪ್ರಕಾರ, ದೊಡ್ಡ ಬಂಗಲೆಗಳ ಮಧ್ಯಭಾಗದಲ್ಲಿ ಬೃಹತ್ ಲೈಟಿಂಗ್‌ನಿಂದ ಅಲಂಕರಿಸುವ ಶಾಂಡೆಲಿಯರ್‌ಗಳನ್ನು ಹೋಲುವಂತಹ ಈ ಇಯರಿಂಗ್‌ಗಳಿಗೆ ಶಾಂಡೆಲಿಯರ್ ಇಯರಿಂಗ್ ಎಂಬ ಹೆಸರು ಬಂದಿದೆಯಂತೆ.
ಶಾಂಡೆಲಿಯರ್ ಇಯರಿಂಗ್ಸ್ ರಾಯಲ್ ಲುಕ್
ರಾಯಲ್ ಕುಟುಂಬಗಳಲ್ಲಿ ಅದರಲ್ಲೂ ಈ ಹಿಂದೆ ರಾಣಿ-ಮಹಾರಾಣಿಯರು ಧರಿಸುತ್ತಿದ್ದ ಈ ಶೈಲಿಯ ಅತಿ ದೊಡ್ಡ ಇಯರಿಂಗ್‌ಗಳು ಬರಬರುತ್ತಾ ಶ್ರೀಮಂತರನ್ನು ಸೆಳೆದವು. ದ್ರಾಕ್ಷಿಯ ಗೊಂಚಲು ಗೊಂಚಲಂತೆ ಕಾಣುವ ನೇತಾಡುವ ಹರಳುಗಳನ್ನು ಹೊಂದಿರುವ ಈ ಉದ್ದನೆಯ ಕಿವಿಯೊಲೆಗಳು, ನಾಲ್ಕೈದು ಲೆಯರ್ ಲುಕ್ ನೀಡುವ ಹ್ಯಾಂಗಿಂಗ್ಸ್, ಕ್ರಿಸ್ಟಲ್ ಹಾಗೂ ಮಣಿ, ರುಬಿ, ಜೇಡ, ಹವಳ, ಗಾಜು, ಪ್ಲಾಸ್ಟಿಕ್ ಮಣಿಗಳಿಂದ ಅಲಂಕೃತವಾಗಿರುವ ಈ ಇಯರಿಂಗ್ ರಾಯಲ್ ಲುಕ್‌ಗೆ ಸೀಮಿತವಾಗಿತ್ತು.
ಇವನ್ನು ಸಾಮಾನ್ಯ ಮಹಿಳೆಯರು ಕೊಳ್ಳುವುದು ಕಷ್ಟಕರವಾಗಿತ್ತು. ಬೆಲೆ ದುಬಾರಿಯಾಗಿರುತ್ತಿತ್ತು. ಬರಬರುತ್ತಾ ಈ ಡಿಸೈನ್ ಇಮೀಟೇಷನ್ ಜುವೆಲರಿಗಳಲ್ಲೂ ಕಾಣಿಸಿಕೊಳ್ಳತೊಡಗಿತು. ದುಬಾರಿಯಲ್ಲದ ಸ್ಟೋನ್‌ಗಳನ್ನು ಬಳಸಿ ತಯಾರಿಸಿದವು ಎಲ್ಲಾ ವರ್ಗದ ಮಹಿಳೆಯರನ್ನು ತಲುಪುವಲ್ಲಿ ಯಶಸ್ವಿಯಾದವು. ಪರಿಣಾಮ, ಇದೀಗ ವಿಂಟೇಜ್, ಬೋಹೆಮನ್ ಶೈಲಿಯ ಜ್ಯುವೆಲರಿ ಡಿಸೈನ್‌ಗಳಲ್ಲೂ ಊಹೆಗೂ ಮೀರಿದ ವಿನ್ಯಾಸದಲ್ಲಿ ಆಗಮಿಸಿವೆ ಎನ್ನುತ್ತಾರೆ ಜುವೆಲರಿ ಡಿಸೈನರ್ ಅರ್ಚನಾ.
ಪಾರ್ಟಿಗೆ ಶಾಂಡೆಲಿಯರ್ ಇಯರಿಂಗ್ಸ್
ನೈಟ್ ಪಾರ್ಟಿಗೆ ಶಾಂಡೆಲಿಯರ್ ಇಯರ್ ರಿಂಗ್ಸ್ ಹೇಳಿ ಮಾಡಿಸಿದ ಆಕ್ಸೆಸರಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಧರಿಸುವ ಉಡುಪಿಗೆ ತಕ್ಕಂತೆ ಈ ಇಯರಿಂಗ್ ಮ್ಯಾಚ್ ಮಾಡಿದಲ್ಲಿ ಸೆಲೆಬ್ರೆಟಿ ಲುಕ್ ಗ್ಯಾರಂಟಿ. ಬಾಲಿವುಡ್ ತಾರೆಯರು ಇವುಗಳ ಪ್ರೇಮಿಗಳು. ಮಾರುಕಟ್ಟೆಯಲ್ಲಿ ದೊರೆಯುವ ನಾನಾ ವಿನ್ಯಾಸದ ಹೊಳೆಯುವ ಕ್ರಿಸ್ಟಲ್ ಬೀಡ್ಸ್‌ನವನ್ನು ಧರಿಸಿ ಸೆಲೆಬ್ರೆಟಿ ಲುಕ್ ಪಡೆಯಬಹುದು.
ಹೀಗಿರಲಿ ಶಾಂಡೆಲಿಯರ್ ಇಯರಿಂಗ್ಸ್ ಆಯ್ಕೆ
ಈ ಇಯರಿಂಗ್ಸ್ ಧರಿಸುವ ಮುನ್ನ, ಅದು ನಿಮ್ಮ ಕಿವಿಗೆ ಮುಖಕ್ಕೆ ಹೊಂದುತ್ತದೆಯೇ, ನಿಮ್ಮ ಉಡುಪಿಗೆ ಸೂಟ್ ಆಗುತ್ತದೆಯೇ ಎಂಬುದನ್ನು ಗಮನಿಸಿ.
- ಈ ಇಯರಿಂಗ್ನ ಗಾತ್ರ, ಆಕಾರ ಎಲ್ಲ ಬಗೆಯ ಮುಖದ ಆಕಾರಕ್ಕೂ ಹೊಂದುವುದಿಲ್ಲ. ಹಾಗಾಗಿ ಟ್ರಯಲ್ ನೋಡಿ ಖರೀದಿಸಿ.
- ಉದ್ದ ಮುಖ ಹಾಗೂ ಕತ್ತು ಹೊಂದಿರುವವರಿಗೆ ಆಕರ್ಷಕವಾಗಿ ಕಾಣುತ್ತದೆ.
- ಮೊಟ್ಟೆಯಾಕಾರದ ಮುಖದವರಿಗೆ ಅಗಲವಾದ ಇಯರಿಂಗ್ ಮ್ಯಾಚ್ ಆಗುತ್ತದೆ.
- ದೊಡ್ಡ ಇಯರಿಂಗ್ಗಳನ್ನು ಸದಾ ಧರಿಸುವುದು ತರವಲ್ಲ, ಕಿವಿಯ ಚರ್ಮ ಜಗ್ಗಬಹುದು. ಲೈಟ್ವೇಟ್ ಖರೀದಿಸಿ.
ಇದನ್ನೂ ಓದಿ| Jewel Fashion: ಫಂಕಿ ಲುಕ್‌ಗಾಗಿ ಧರಿಸಿ ಟ್ರೆಂಡಿ ಜೆಮೆಟ್ರಿಕ್ ಜುವೆಲರಿ