Site icon Vistara News

k–pop Stars Fashion | ಕೆ-ಪಾಪ್‌ ಸ್ಟಾರ್ಸ್ ಕ್ರೇಝಿ ಫ್ಯಾಷನ್‌ಗೆ ಯಂಗ್‌ಸ್ಟರ್ಸ್ ಫಿದಾ

k –pop Stars Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕೆ-ಪಾಪ್‌ ಸ್ಟಾರ್‌ಗಳ ಕ್ರೇಝಿ ಫ್ಯಾಷನ್‌ಗೆ ನಮ್ಮ ಯಂಗ್‌ಸ್ಟರ್ಸ್‌ಗಳು ಫಿದಾ ಆಗತೊಡಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಈಗಾಗಲೇ ಖ್ಯಾತಿ ಗಳಿಸಿರುವ ಕೆ-ಪಾಪ್‌ ಬ್ಯಾಂಡ್‌ಗಳು ಇದೀಗ ತಮ್ಮದೇ ಆದ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳ ಮೂಲಕ ಕಾಲೇಜು ಯುವಕ-ಯುವತಿಯರನ್ನು ಬರಸೆಳೆದುಕೊಳ್ಳತೊಡಗಿವೆ.

BTS

ಏನಿದು ಕೆ-ಪಾಪ್‌ ಸ್ಟಾರ್ಸ್‌ ಫ್ಯಾಷನ್‌?

ಬಿಟಿಎಸ್‌, ಬ್ಲಾಕ್‌ ಪಿಂಕ್‌, ಎಕ್ಸೋ, ರೆಡ್‌ವೆಲ್ವೆಟ್‌, ಟ್ವೈಸ್‌, ಎನ್‌ಸಿಟಿ, ಮಾನ್ಸಟಾ ಸೇರಿದಂತೆ ಕೊರಿಯಾದ ನಾನಾ ಪಾಪ್‌ ಬ್ಯಾಂಡ್‌ಗಳು ಯುಟ್ಯೂಬ್‌ ಮೂಲಕ ಪ್ರಪಂಚದೆಲ್ಲೆಡೆ ಖ್ಯಾತಿ ಗಳಿಸಿವೆ. ಈ ಪಾಪ್ಯುಲರ್‌ ಬ್ಯಾಂಡ್‌ಗಳು ತಮ್ಮ ಪ್ರೈವೆಟ್‌ ಆಲ್ಬಂಗಳ ಮೂಲಕ ಯುವಕ-ಯುವತಿಯರನ್ನು ಸೆಳೆಯುವುದರೊಂದಿಗೆ ತಾವು ಧರಿಸುವ ಕಾಸ್ಟ್ಯೂಮ್‌, ಡ್ರೆಸ್‌ಕೋಡ್‌ ಹಾಗೂ ಪಾಪ್ ಕಲ್ಚರ್‌ನ ಸ್ಟ್ರೀಟ್‌ ಫ್ಯಾಷನ್‌ವೇರ್‌ಗಳಿಂದಲೂ ಗುರುತಿಸಿಕೊಳ್ಳಲಾರಂಭಿಸಿವೆ. ತಮ್ಮದೇ ಆದ ಬ್ರ್ಯಾಂಡ್‌ ಫ್ಯಾಷನನ್ನು ಸೃಷ್ಟಿಸಿಕೊಂಡಿವೆ. ಇದನ್ನು ಕೆ-ಪಾಪ್ ಸ್ಟಾರ್ಸ್ ಫ್ಯಾಷನ್‌ ಎನ್ನಲಾಗುತ್ತದೆ ಎಂದು ವಿವರಿಸುತ್ತಾರೆ ಫ್ಯಾಷನಿಸ್ಟಾ ವಿದ್ಯಾ.

Blackpink

ಇನ್ನು ಕೊರಿಯಾದ ಪಾಪ್‌ ಬ್ಯಾಂಡ್‌ಗಳಲ್ಲಿ ಅತಿ ಹೆಚ್ಚು ಪಾಪ್ಯುಲರ್‌ ಆಗಿರುವ ಬಿಟಿಎಸ್‌, ಬ್ಲಾಕ್‌ಪಿಂಕ್‌, ಅತೀಝ್‌, ಸೆವೆನ್‌ಟೀನ್‌ನಂತಹ ಟೀಮ್‌ನಲ್ಲಿರುವ ಸ್ಟಾರ್‌ಗಳು ಒಂದೊಂದು ಆಲ್ಬಂನಲ್ಲೂ ಯಾವ ಮಟ್ಟಿಗೆ ಯುವಕ-ಯುವತಿಯರಲ್ಲಿ ಪ್ರಪಂಚಾದಾದ್ಯಂತ ಯಾವ ಮಟ್ಟಿಗೆ ಕ್ರೇಝ್‌ ಹುಟ್ಟಿಸಿದ್ದಾರೆಂದರೆ, ಬಹುತೇಕ ರಾಷ್ಟ್ರಗಳಲ್ಲಿ ಸಾಕಷ್ಟು ಹುಡುಗ-ಹುಡುಗಿಯರು ಅವರಂತೆಯೇ ಕಾಣಿಸಲು ಕೇವಲ ಡ್ರೆಸ್‌ಗಳನ್ನು ಕಾಪಿ ಮಾಡುವುದಲ್ಲ! ಬದಲಿಗೆ, ನಾನಾ ಕಾಸ್ಮೆಟಿಕ್‌ ಸರ್ಜರಿಗಳಿಗೂ ಒಳಗಾಗಿದ್ದಾರೆ. ಇದು ಅತಿರೇಕವೆನಿಸಬಹುದು. ಆದರೆ ಇದು ನಿಜ. ಆ ಮಟ್ಟಿಗೆ ಕೆ-ಪಾಪ್‌ ಸ್ಟಾರ್‌ಗಳು ಪ್ರಪಂಚ ಜಾಗತೀಕ ಮಟ್ಟದಲ್ಲಿ ತಮ್ಮದೇ ಆದ ಕ್ರೇಝ್‌ ಹುಟ್ಟಿಸಿದ್ದಾರೆ.

Montax

ಫ್ಯಾಷೆನಬಲ್‌ ಕೆ-ಪಾಪ್‌ ಸ್ಟಾರ್ಸ್

ಜಾಕ್ಸನ್‌ ವಾಂಗ್‌, ಬ್ಲಾಕ್‌ ಪಿಂಕ್‌ನ ಲೀಸಾ, ಜೆನ್ನಿ, ಸಂದರಾ ಪಾರ್ಕ್, ರೋಸ್‌, ರೆಡ್‌ ವೆಲ್ವೆಟ್‌ ಜಾಯ್‌, ಬಿಗ್‌ ಬ್ಯಾಂಗ್‌ನ ಜಿ ಡ್ರಾಗನ್‌, ಎಕ್ಸೋನ ಸೇಹೂನ್‌, ಕಾಯ್‌ ಕೆ-ಪಾಪ್‌ನ ಫ್ಯಾಷೆನಬಲ್‌ ಲಿಸ್ಟ್‌ನಲ್ಲಿ ಟಾಪ್‌ನಲ್ಲಿದ್ದಾರೆ. ಅವರು ಧರಿಸುವ ಒಂದೊಂದು ಫ್ಯಾಷನ್‌ವೇರ್‌ ಹಾಗೂ ಆಕ್ಸೆಸರೀಸ್‌ಗಳು ಕೂಡ ಪ್ರಪಂಚಾದಾದ್ಯಂತ ಟ್ರೆಂಡಿ ಲಿಸ್ಟ್‌ಗೆ ಸೇರುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ ಜಿನತ್‌.

Redvelvet

ಟ್ರೆಂಡ್‌ ಸೆಟ್ಟರ್ಸ್‌ ಆದ ಕೆ-ಪಾಪ್‌ ಸ್ಟಾರ್ಸ್‌

ಕೆ-ಪಾಪ್‌ ಸ್ಟಾರ್‌ಗಳು ಧರಿಸುವ ಒಂದೊಂದು ಸ್ಟ್ರೀಟ್‌ವೇರ್‌, ಸನ್‌ಗ್ಲಾಸ್‌, ಟೀ ಶಟ್ರ್ಸ್, ಆಕ್ಸೆಸರೀಸ್‌, ಬೆಲ್ಟ್, ಓವರ್‌ಕೋಟ್‌ಗಳು, ಜಾಕೆಟ್‌, ಹಾಟ್‌ ಕಲರ್‌ ಪ್ಯಾಂಟ್ಸ್, ಕಟ್‌ಔಟ್‌ ಕ್ರಾಪ್‌ ಟಾಪ್ಸ್‌, ಶಾಟ್ರ್ಸ್, ಗ್ಲಿಟ್ಟೆರಿ ಎಂಬಾಲಿಶ್‌ಮೆಂಟ್ಸ್ ಸೇರಿದಂತೆ ನಾನಾ ಸ್ಟೈಲಿಶ್‌ ಡಿಸೈನರ್‌ ಉಡುಗೆಗಳು ಇದೀಗ ಇಂಟರ್‌ನ್ಯಾಷನಲ್‌ ಬ್ರಾಂಡ್‌ಗಳಲ್ಲಿ ಬಿಡುಗಡೆಗೊಳ್ಳುತ್ತಿವೆ. ಇದು ಯಂಗ್‌ಸ್ಟರ್ಸ್‌ಗಳು ಇದರತ್ತ ವಾಲಲು ಮತ್ತಷ್ಟು ಸಹಕಾರಿಯಾಗುತ್ತಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

ಕೆ-ಪಾಪ್‌ ಸ್ಟಾರ್ಸ್‌ ಫ್ಯಾಷನ್‌ ಹೈಲೈಟ್ಸ್‌

ಪಾಪ್‌ ಲೋಕದ ಫ್ಯಾಷನ್‌ ದಿಕ್ಕನ್ನು ಬದಲಿಸಿದ ಕ್ರೆಡಿಟ್‌ ಕೆ-ಪಾಪ್‌ ಕಲ್ಚರ್‌ಗೆ ಸಲ್ಲುತ್ತದೆ.

ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಫ್ಯಾಷೆನಬಲ್‌ ಪಾಪ್‌ ಸ್ಟಾರ್ಸ್‌ಗಳನ್ನು ಹೊಂದಿರುವ ರಾಷ್ಟ್ರ ಸೌತ್‌ ಕೊರಿಯಾ.

ಸಮೀಕ್ಷೆಯೊಂದರ ಪ್ರಕಾರ, ಭಾರತದ ಅತಿ ಹೆಚ್ಚು ಟೀನೇಜ್‌ ಹುಡುಗ-ಹುಡುಗಿಯರು ಕೆ-ಪಾಪ್‌ ಕ್ರೇಝಿ ಸ್ಟೈಲ್‌ಗಳನ್ನು ಫಾಲೋ ಮಾಡತೊಡಗಿದ್ದಾರಂತೆ.

ಕೆ-ಪಾಪ್‌ ಸ್ಟ್ರೀಟ್‌ ಫ್ಯಾಷನ್‌ ಟ್ರೆಂಡ್‌ನ ಮೊದಲ ಸ್ಥಾನದಲ್ಲಿದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Celebrity Fashion Corner | ವ್ಯಕ್ತಿತ್ವಕ್ಕೆ ತಕ್ಕಂತೆ ಡ್ರೆಸ್ಸಿಂಗ್‌ ಸೆನ್ಸ್‌ ಇರಲಿ ಎನ್ನುವ ಮಧುಮತಿ

Exit mobile version