ಕೆಜಿಎಫ್ 2 ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿ ಬಾಚಿರಬಹುದು. ಅದರಲ್ಲಿ ಯಶ್ ನಿಜಕ್ಕೂ ಎಷ್ಟು ಪಡೆದಿದ್ದಾರೋ ನಮಗೆ ಗೊತ್ತಿಲ್ಲ. ಆದರೆ ತಮ್ಮ ಸ್ಟೇಟಸ್ ಅನ್ನು ಪ್ಯಾನ್ ಇಂಡಿಯಾ ಲೆವೆಲ್ಲಿಗೆ ಹೆಚ್ಚಿಸಿಕೊಂಡಿರುವುದಂತೂ ನಿಜ.
ಕೆಜಿಎಫ್ 2 ಫಿಲಂಗೆ ಸಂಭಾವನೆಯಾಗಿ ಅವರು ₹ 30 ಕೋಟಿ ಪಡೆದಿದ್ದಾರೆ ಎಂಬ ವರದಿಯಿದೆ. ಇದಲ್ಲದೆ ಫಿಲಂನ ಲಾಭದಲ್ಲಿ ಶೇರ್ ಕೂಡ ಪಡೆಯಲಿದ್ದಾರೆ. ಇದಲ್ಲದೇ ಇತರ ಹೂಡಿಕೆಗಳೂ ಇವೆ. ಬ್ರಾಂಡ್ ಪ್ರಮೋಷನ್‌ಗಳಿಗೆ ಅವರು ಪಡೆಯುವ ಹಣ ಸುಮಾರು ₹ 60 ಲಕ್ಷ. ಅವರ ಆಸ್ತಿಯ ಒಟ್ಟಾರೆ ಮೌಲ್ಯ 53 ಕೋಟಿ ಆಗಬಹುದು ಎಂದು ಅಂದಾಜು.
ಒಳ್ಳೆಯ ಕಾರುಗಳ ಸಂಗ್ರಹ ಯಶ್ ಅವರ ಹವ್ಯಾಸಗಳಲ್ಲಿ ಒಂದು. 2020ರಲ್ಲಿ ಅವರು ಬ್ರಾಂಡ್ ನ್ಯೂ ಮಹೀಂದ್ರ ಸ್ಕಾರ್ಪಿಯಾದ ಒಡೆಯರಾದರು. ಅದನ್ನು ಹೊಂದುವುದು ಅವರ ಕನಸು ಆಗಿತ್ತಂತೆ. ಬೆಲೆ ₹ 12 ಲಕ್ಷ. ಇನ್ನೊಂದು ಕಾರು ಆಡಿ ಎ6, ಬೆಲೆ 50 ಲಕ್ಷ. ಇದನ್ನು ಅವರಿಗೆ ಕೊಡಿಸಿದವರು ಪತ್ನಿ ರಾಧಿಕಾ ಪಂಡಿತ್, ಯಶ್ ಅವರ ಬರ್ತ್‌ಡೇ ಗಿಫ್ಟ್ ಆಗಿ.
ಯಶ್ ಅವರ ಬಳಿ ಒಂದು ರೇಂಜ್ ರೋವರ್ ಇವೋಕ್ ಎಸ್‌ಯುವಿ ಇದೆ. ಅದರ ಬೆಲೆ ₹ 60- 80 ಲಕ್ಷ. ಲಾಂಗ್ ಡ್ರೈವ್‌ಗಳಿಗೆ ಇದರಲ್ಲಿ ಹೋಗುತ್ತಾರೆ. ಮರ್ಸಿಡಿಸ್ ಬೆಂಜ್‌ನ ಜಿಎಲ್‌ಸಿ 250ಡಿ ಕೂಪೆ ಎಂಬ 5 ಸೀಟಿನ ಕಾರು ಅವರ ಬಳಿ ಇದೆ. ಇದರ ಬೆಲೆ ಸುಮಾರು ₹ 78 ಲಕ್ಷ. ಮರ್ಸಿಡಿಸ್ ಬೆಂಜ್‌ನ ಜಿಎಲ್‌ಎಸ್ 350ಡಿ ಎಂಬ ಎಸ್‌ಯುವಿ ಕೂಡ ಇದೆ. ಡೀಸೆಲ್ ಎಂಜಿನ್‌ನ ಈ ಹೆವ್ವಿ ಡ್ಯೂಟಿ ವಾಹನದ ಬೆಲೆ ₹ 85 ಲಕ್ಷ.
ಹೆಚ್ಚಿನ ಓದಿಗೆ: ಶ್..! ʼKGFʼ2 ಮಾನ್‌ಸ್ಟರ್ ಇಸ್ ಹಿಯರ್