ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಸೀಸನ್ ಫ್ಯಾಷನ್‌ನಲ್ಲಿ ಮಕ್ಕಳಿಗೆಂದೇ ವೈವಿಧ್ಯಮಯ ವಿಂಟರ್‌ವೇರ್‌ಗಳು ಬಿಡುಗಡೆಗೊಂಡಿವೆ. ಮೊದಲೇ ಕ್ಯೂಟ್ ಆಗಿರುವ ಮುದ್ದು ಮಕ್ಕಳಿಗೆ ಮತ್ತಷ್ಟು ಕ್ಯೂಟ್ ಆಗಿ ಕಾಣಿಸುವಂತಹ ನಾನಾ ಬಗೆಯ ವಿಂಟರ್ ಫ್ಯಾಷನ್‌ವೇರ್‌ಗಳು ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟಿವೆ.
ಟ್ರೆಂಡಿಯಾಗಿರುವ ಕಿಡ್ಸ್ ವುಲ್ಲನ್‌ವೇರ್‌ಗಳಿವು
ವುಲ್ಲನ್‌ವೇರ್‌ಗಳಲ್ಲಿ ಕಲರ್‌ಫುಲ್ ಕಾರ್ಟೂನ್ ಕ್ಯಾರೆಕ್ಟರ್ ಜಂಪ್‌ಸೂಟ್, ತ್ರೀ ಪೀಸ್ ಸ್ವೆಟರ್ಸ್, ಟರ್ಟಲ್‌ನೆಕ್ ಸ್ವೆಟರ್ಸ್, ಕಾರ್ಡಿಗಾನ್ ಸ್ವೆಟರ್ಸ್, ಹ್ಯಾಂಡ್‌ನಿಟ್ ಸ್ವೆಟರ್ಸ್ ಅಂತೆಯೇ, ನೋಡಲು ಲೆಯರ್ ಲುಕ್ ನೀಡುವ ಸಾಫ್ಟ್ ಸ್ವಿಂಗ್ ಕೋಟ್ಸ್, ವಿಂಟರ್ ಕೋಟ್ಸ್, ಕ್ಯೂಟ್ ಪರ್ಕಾಸ್, ಫರ್ ಕೋಟ್ಸ್, ಯೂನಿಸೆಕ್ಸ್ ಪಫರ್ ಜಾಕೆಟ್ಸ್, ನೈಲಾನ್ ಜಾಕೆಟ್ಸ್, ಟುಟು ವಿಂಟರ್ ಇಯರ್ ಮಫ್ಸ್, ಕಾಕಿ ವಿಂಟರ್ ಜಾಕೆಟ್ಸ್, ಓವರ್‌ಸೈಝ್ ಜಾಕೆಟ್ಸ್, ಕೇಪ್ಸ್, ಸ್ಕಾರ್ಫ್ ಸೇರಿದಂತೆ ನಾನಾ ವೈವಿಧ್ಯಮಯ ವುಲ್ಲನ್ ವಿಂಟರ್‌ವೇರ್‌ಗಳು ಈ ಸೀಸನ್‌ನಲ್ಲಿ ಮತ್ತಷ್ಟು ಹೊಸ ವಿನ್ಯಾಸದಲ್ಲಿ, ವೈಬ್ರೆಂಟ್ ಕಲರ್ಸ್‌ನಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ ಡಿಸೈನರ್ ರಾಶಿ.
ಮಕ್ಕಳಿಗಿರಲಿ ಕಲರ್‌ಫುಲ್ ಲೇಯರ್‌ಲುಕ್
ಇನ್ನು ಲೇಯರ್ ಲುಕ್ ನೀಡುವ ಡೆನೀಮ್ ಜಾಕೆಟ್‌ಗಳು, ಟ್ರೆಂಚ್ ಕೋಟ್‌ಗಳು, ಲಾಂಗ್ ಕಾರ್ಡಿಗಾನ್‌ಗಳು ಮಕ್ಕಳಿಗೆ ಪ್ರಿಯವಾಗುವಂತಹ ಕಾರ್ಟೂನ್ ಕ್ಯಾರೆಕ್ಟರ್ ಪ್ಯಾಚ್ ವರ್ಕ್ ಅಥವಾ ಪ್ರಿಂಟ್‌ನಲ್ಲಿ ಬಂದಿವೆ. ಇನ್ನು ಟೀನೇಜ್ ಹುಡುಗ-ಹುಡುಗಿಯರಿಗೆ ಒಂದಿಷ್ಟು ಕಾಲರ್ ಹಾಗೂ ಮಲ್ಟಿಪಲ್ ಪಾಕೆಟ್ಸ್ ಇರುವಂತಹ ವಿನ್ಯಾಸಗಳಲ್ಲಿ ಆಗಮಿಸಿವೆ. ಇದರೊಂದಿಗೆ ಒಂದರ ಮೇಲೊಂದು ಧರಿಸುವ ಕಾನ್ಸೆಪ್ಟ್ ಹೊಂದಿರುವ ಲೇಯರ್ ಲುಕ್ ಉಡುಪುಗಳಲ್ಲಿ ತ್ರೀ ಪೀಸ್, ಫೋರ್ ಪೀಸ್ ಉಡುಪುಗಳು ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಹೀಗಿರಲಿ ಮಕ್ಕಳ ವಿಂಟರ್ ಉಡುಪುಗಳು
ಇನ್ನು ಮಕ್ಕಳ ವಿಂಟರ್ ಸೀಸನ್‌ನ ಉಡುಪುಗಳನ್ನು ಕೊಳ್ಳುವಾಗ ಸಾಕಷ್ಟು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಯಾಕೆಂದರೆ, ಮಕ್ಕಳಿಗೆ ಟ್ರೆಂಡಿ ಉಡುಪುಗಳನ್ನು ಹಾಕಿಸುವ ನೆಪದಲ್ಲಿ ತೀರಾ ದಪ್ಪನೆಯ ಹಾಗೂ ಬಿಗಿಯಾಗಿರುವುದನ್ನು ಖರೀದಿಸಬಾರದು. ಅವರ ಅಭಿರುಚಿಗೆ ತಕ್ಕಂತೆ ಆಯ್ಕೆ ಮಾಡಬೇಕು. ಆದಷ್ಟೂ ಉತ್ತಮ ಗುಣಮಟ್ಟದ್ದನ್ನು ಕೊಳ್ಳಬೇಕು ಎನ್ನುತ್ತಾರೆ ಸ್ಟೈಲಿಸ್ಟ್ ಜಾಯ್.
ಮಕ್ಕಳ ವಿಂಟರ್‌ವೇರ್‌ಗೆ ಒಂದಿಷ್ಟು ಸಲಹೆಗಳು :
- ಆದಷ್ಟೂ ಸಾಫ್ಟ್ ಫ್ಯಾಬ್ರಿಕ್ನದ್ದನ್ನು ಚೂಸ್ ಮಾಡಿ.
- ಇನ್ನರ್ ಲೈನಿಂಗ್ ಅಥವಾ ಸ್ಟಿಚ್ಚಿಂಗ್ ಚುಚ್ಚುವಂತಿರಬಾರದು.
- ಲೇಯರ್ ಲುಕ್ ಉಸಿರುಗಟ್ಟಿಸುವಂತಿರಬಾರದು.
- ಆದಷ್ಟೂ ಫ್ರೀ ಸೈಝ್ನದ್ದನ್ನು ಪ್ರಿಫರ್ ಮಾಡಬೇಕು.
- ಕಿರಿಕಿರಿಯಾದಲ್ಲಿ ತಕ್ಷಣ ಬದಲಿಸಿ.
ಇದನ್ನೂ ಓದಿ| Winter Fashion | ಚಳಿಗಾಲಕ್ಕೆ ಬೆಚ್ಚಗಿಡುವ ಔಟ್‌ಫಿಟ್ ಶರ್ಟ್ ಹೂಡಿ