Site icon Vistara News

April Fool’s Day : ಏಪ್ರಿಲ್‌ ಫೂಲ್ಸ್‌ ದಿನದ ಹಿನ್ನೆಲೆಯೇನು? ನಿಮ್ಮ ಸ್ನೇಹಿತರನ್ನು ಬಕ್ರಾ ಮಾಡುವುದು ಹೇಗೆ?

#image_title

ಬೆಂಗಳೂರು: ಏಪ್ರಿಲ್‌ 1 ಎಂದಾಕ್ಷಣ ನೆನಪಾಗುವುದು ಏಪ್ರಿಲ್‌ ಫೂಲ್ಸ್‌ ಡೇ(April Fool’s Day). ಅಂದರೆ ಬಕ್ರಾ ಆಗುವ ಮತ್ತು ಬಕ್ರಾ ಮಾಡುವ ದಿನ ಎಂದೇ ಹೇಳಬಹುದು. ಈ ದಿನದಂದು ನಿಮ್ಮ ಸ್ನೇಹಿತರಿಗೆ ಸುಳ್ಳು ಹೇಳಿಯೋ ಅಥವಾ ಏನಾದರೂ ಸಣ್ಣ ತಮಾಷೆ ಮಾಡಿ ಯಾಮಾರಿಸುವುದು ವಿಶೇಷ. ಹಾಗಾದರೆ ಈ ದಿನದ ಆಚರಣೆ ಏಕಾಗಿ ಬಂತು? ಯಾರಿಂದ ಬಂತು? ಎನ್ನುವಂತಹ ಸಾಕಷ್ಟು ಪ್ರಶ್ನೆಗಳು ನಿಮ್ಮಲ್ಲಿರಬಹುದು. ಅವುಗಳಿಗೆ ಉತ್ತರ ಇಲ್ಲಿದೆ.

ಇದನ್ನೂ ಓದಿ: Viral Video: ಅರ್ಧ ರಾತ್ರೀಲಿ ಮಧ್ಯ ರಸ್ತೇಲಿ ಮೊಬೈಲ್‌ ಹಿಡಿದು ನಿಂತಿದ್ದ ಇನ್ಫ್ಲುಯೆನ್ಸರ್‌; ಮುಂದಾಗಿದ್ದೇನು?
ಏಪ್ರಿಲ್‌ ಫೂಲ್ಸ್‌ ಡೇ ಯಾವಾಗ ಆರಂಭವಾಯಿತು ಎನ್ನುವುದಕ್ಕೆ ಯಾರ ಬಳಿಯೂ ನಿಖರವಾದ ಉತ್ತರವಿಲ್ಲ. ಆದರೆ ಕೆಲವು ಇತಿಹಾಸತಜ್ಞರು ಹೇಳುವ ಪ್ರಕಾರ ಈ ದಿನದ ಆಚರಣೆ 1582ರಲ್ಲಿ ಆರಂಭವಾಯಿತು. ಫ್ರಾನ್ಸ್‌ನಲ್ಲಿ ಅದಕ್ಕೂ ಮೊದಲು ಗ್ರೆಗೊರಿಯನ್‌ ಕ್ಯಾಲೆಂಡರ್‌ ಬಳಕೆ ಮಾಡಲಾಗುತ್ತಿತ್ತು. 1582ರಲ್ಲಿ ಜೂಲಿಯನ್‌ ಕ್ಯಾಲೆಂಡರ್‌ನ್ನು ಬಳಸಲಾರಂಭಿಸಲಾಯಿತು. ಜೂಲಿಯನ್‌ ಕ್ಯಾಲೆಂಡರ್‌ ಪ್ರಕಾರ ಹೊಸ ವರ್ಷ ಏಪ್ರಿಲ್‌ 1ರ ಸನಿಹದಲ್ಲಿ ಬರುತ್ತದೆ. ಅದೇ ಕಾರಣಕ್ಕೆ ಅನೇಕರು ಏಪ್ರಿಲ್‌ ಆರಂಭವನ್ನು ಹೊಸ ವರ್ಷ ಎಂದು ಆಚರಿಸಲಾರಂಭಿಸಿದರು. ಆದರೆ ಜನವರಿ 1ನ್ನು ಹೊಸ ವರ್ಷ ಎಂದು ನಂಬುತ್ತಿದ್ದ ಜನರು ಇದನ್ನು ವಿರೋಧಿಸಿದರು. ಹಾಗೆಯೇ ಏಪ್ರಿಲ್‌ನಲ್ಲಿ ಹೊಸ ವರ್ಷ ಎನ್ನುತ್ತಿದ್ದವರನ್ನು ಏಪ್ರಿಲ್‌ ಫೂಲ್‌ಗಳು ಎಂದು ಕರೆಯಲಾರಂಭಿಸಿದರು ಎಂದು ಹೇಳಲಾಗಿದೆ. ಅದೇ ಹಿನ್ನೆಲೆ ಈ ದಿನಾಚರಣೆ ಆಚರಣೆಗೆ ಬಂದಿದ್ದಾಗಿ ಹೇಳಲಾಗುತ್ತದೆ.

18ನೇ ಶತಮಾನದಲ್ಲಿ ಬ್ರಿಟನ್‌ನಲ್ಲಿ ಈ ಏಪ್ರಿಲ್‌ ಫೂಲ್‌ ದಿನವನ್ನು ವ್ಯಾಪಕವಾಗಿ ಆಚರಣೆ ಮಾಡಲಾರಂಭಿಸಲಾಯಿತು. ಸ್ಕಾಟ್ಲೆಂಡ್‌ನಲ್ಲಿ ಪ್ರತಿ ವರ್ಷ ಎರಡು ದಿನಗಳ ಕಾಲ ಈ ದಿನವನ್ನು ಅತ್ಯಂತ ವಿಶೇಷವಾಗಿ ಆಚರಣೆ ಮಾಡಲಾಯಿತು. ಆ ದಿನಗಳಂದು ಜನರು ತಮ್ಮ ಸ್ನೇಹಿತರಿಗೆ ಸುಳ್ಳು ಹೇಳಿ, ತಮಾಷೆ ಮಾಡಿ ಸಂಭ್ರಮಿಸಲಾರಂಭಿಸಿದರು.

ಏಪ್ರಿಲ್‌ ಫೂಲ್‌ ದಿನವನ್ನು ಒಂದು ಒಳ್ಳೆಯ ಉದ್ದೇಶದಿಂದಲೂ ಆಚರಿಸಲಾಗುತ್ತದೆ. ಯಾರಾದರೂ ಜಗಳ ಆಡಿಕೊಂಡು ಮನಸ್ತಾಪ ಮಾಡಿಕೊಂಡಿದ್ದರೆ, ಈ ದಿನದಂದು ಸಣ್ಣದೊಂದು ತಮಾಷೆ ಮೂಲಕ ಮನಸ್ತಾಪ ಮರೆಯಬಹುದಾಗಿದೆ.

April Fool’s Day : ಬಕ್ರಾ ಮಾಡುವುದಕ್ಕೆ ಐಡಿಯಾಗಳು

* ಮಾರುಕಟ್ಟೆಯಿಂದ ಕೃತಕ ಬಾಲವನ್ನು ತಂದು ನಿಮ್ಮ ಸ್ನೇಹಿತರಿಗೆ ಅಂಟಿಸಿ. ಅವರಿಗೆ ಅದು ಗೊತ್ತಾದ ತಕ್ಷಣ ಏಪ್ರಿಲ್‌ ಫೂಲ್‌ ಎಂದು ಕೂಗಿ ಅವರ ಮುಖದಲ್ಲಿ ನಗು ತರಿಸಿ.
*ನಿಮ್ಮ ಸ್ನೇಹಿತರು ಇನ್ನೇನು ಖುರ್ಚಿ ಮೇಲೆ ಕೂರುತ್ತಾರೆ ಎನ್ನುವಷ್ಟರಲ್ಲಿ ಖುರ್ಚಿ ಮೇಲೆ ಬಲೂನ್‌ ಇಡಿ. ಬಲೂನ್‌ ಒಡೆದ ಸದ್ದಿಗೆ ಒಮ್ಮೆಲೆ ಅವರು ಗಾಬರಿ ಬಿದ್ದು, ಆಮೇಲೆ ನಗಲಾರಂಭಿಸುತ್ತಾರೆ.
*ನಿಮ್ಮ ಸ್ನೇಹಿತರ ಮೊಬೈಲ್‌ನಲ್ಲಿ ಆಟೋ ಕರೆಕ್ಟ್‌ ವರ್ಲ್ಡ್‌ ತೆಗೆದು ಅಲ್ಲಿ ನೀವೇ ಒಂದಿಷ್ಟು ಬದಕ್ಕೆ ಬೇರೆ ಪದಗಳನ್ನು ಬದಲಾಯಿಸಿಡಿ. ಉದಾಹರಣೆಗೆ ಹಲೋ ಬದಲು ಬನಾನಾ. ಈ ರೀತಿ ಮಾಡುವುದರಿಂದ ನಿಮ್ಮ ಸ್ನೇಹಿತರು ಏನೋ ಸಂದೇಶ ಕಳುಹಿಸುವುದಕ್ಕೆ ಹೋಗಿ ಇನ್ನೇನೋ ಕಳುಹಿಸಿ ಪರದಾಡುತ್ತಾರೆ. ನಂತರ ಅವರಿಗೆ ತಿಳಿಸಿ, ಬಕ್ರಾವಾದ ವಿಚಾರವನ್ನು ಹೇಳಿ.
*ಯಾವುದಾದರೂ ಸಂದೇಶಗಳಿರುವ ಸ್ಕ್ರೀನ್‌ಶಾಟ್‌ ಅನ್ನು ಎಡಿಟ್‌ ಮಾಡಿ ನಿಮ್ಮ ಸ್ನೇಹಿತರಿಗೆ ಕಳುಹಿಸಿ. ನೋಡಿದಾಕ್ಷಣ ಅವರು ನಂಬುವಂತಿರಬೇಕು. ಅವರು ಬಕ್ರಾ ಆದ ನಂತರ ನಿಜ ವಿಚಾರ ತಿಳಿಸಿ.
*ಹೊಸ ನಂಬರ್‌ನಿಂದ ನಿಮ್ಮ ಸ್ನೇಹಿತರಿಗೆ ಅಪರಿಚಿತರಂತೆ ಸಂದೇಶ ಕಳುಹಿಸಿ. ಅವರ ಪ್ರತಿಕ್ರಿಯೆ ನೋಡಿ, ಒಂದಿಷ್ಟು ಕಾಡಿಸಿ.

Exit mobile version