ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕೊರಿಯನ್ ಗ್ಲಾಸ್ ಸ್ಕಿನ್ ಟ್ರೆಂಡ್ ತಮ್ಮದಾಗಿಸಿಕೊಳ್ಳುವ ಹುಡುಗಿಯರೇ ಕೊಂಚ ಸಾವಧಾನ ವಹಿಸಿ. ಕೊರಿಯನ್‌ರ ಸ್ಕಿನ್‌ನಂತೆಯೇ ಮೃದುವಾದ ಹಾಗೂ ಶೈನಿಂಗ್ ಸ್ಕಿನ್ ಪಡೆಯುವ ಆಸೆ ನಿಮಗಿದ್ದಲ್ಲಿ ಆದಷ್ಟೂ ಅಂತಹ ಆಸೆಗೆ ಇತಿಶ್ರೀ ಹಾಡಿ. ಯಾಕೆಂದರೆ, ನೀವು ಎಷ್ಟೇ ಆರೈಕೆ ಮಾಡಿದರೂ ಅವರಂತಹ ಗ್ಲಾಸ್ ಸ್ಕಿನ್ ಪಡೆಯಲು ಸಾಧ್ಯವಿಲ್ಲ. ಪಡೆದರೂ ಹೆಚ್ಚಿನ ದಿನ ಉಳಿಯುವುದಿಲ್ಲ! ಹಾಗೆನ್ನುತ್ತಾರೆ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪಟ್ರ್ಸ್.
ಮ್ಯಾಚ್ ಆಗದ ಕೊರಿಯನ್ನರ ಬ್ಯೂಟಿ ಕಾನ್ಸೆಪ್ಟ್
ಹೌದು, ಕಳೆದ ಕೆಲವು ವರ್ಷಗಳಿಂದ ಟ್ರೆಂಡ್‌ನಲ್ಲಿರುವ ಕೊರಿಯನ್ ಗ್ಲಾಸ್ ಸ್ಕಿನ್ ಯಾವ ಮಟ್ಟಿಗೆ ಟ್ರೆಂಡಿಯಾಗಿದೆ ಎಂದರೇ, ಹುಡುಗಿಯರು ಮಾತ್ರವಲ್ಲ, ವಿವಾಹಿತ ಮಹಿಳೆಯರೂ ಈ ಬಗೆಯ ತ್ವಚೆಯನ್ನು ತಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಆರೈಕೆ ಮಾಡಲಾರಂಭಿಸಿದ್ದರು. ಇಂದಿಗೂ ಕೊರಿಯನ್ ಆರೈಕೆ ಮುಂದುವರಿಸಿದ್ದಾರೆ. ಅಲ್ಲದೇ, ಇದಕ್ಕೆ ಪೂರಕ ಎಂಬಂತೆ ಆನ್‌ಲೈನ್‌ನಲ್ಲಿ ಬರುವ ಕೊರಿಯನ್ ಜಾಹೀರಾತುಗಳನ್ನು ನಂಬಿ ಅವುಗಳನ್ನು ಬಳಸುತ್ತಲೇ ಇದ್ದಾರೆ. ಆದರೆ, ಇದ್ಯಾವುದೂ ಕೈಗೂಡುತ್ತಿಲ್ಲ ಎಂಬ ಅನೇಕ ಅಸಹಾಯಕ ಧ್ವನಿ ಎಲ್ಲೆಡೆ ಕೇಳಿ ಬರುತ್ತಿದೆ. ದೇಸಿ ಬ್ಯೂಟಿ ಸಂಸ್ಥೆಯೊಂದರ ಸಮೀಕ್ಷೆಯೊಂದರ ಪ್ರಕಾರ, ಕೊರಿಯನ್ನರ ಶೈಲಿಯ ಆರೈಕೆ ಕೈಗೊಂಡ ನೂರಾರು ಹುಡುಗಿಯರ ಅಥವಾ ಮಹಿಳೆಯರ ಪೈಕಿ, ಕೇವಲ ಒಬ್ಬಿಬ್ಬರ ಫಲಿತಾಂಶ ಪಾಸಿಟಿವ್‌ಗೆ ಹತ್ತಿರವಾಗಿತ್ತಂತೆ. ಆದರೂ ಪರ್ಫೆಕ್ಟ್‌ಕೊರಿಯನ್ ಗ್ಲಾಸ್ ಸ್ಕಿನ್‌ನಂತೆ ಮಾರ್ಪಡಿಸಲಾಗಲಿಲ್ಲವಂತೆ ಹಾಗೆಂದಿದೆ ಸರ್ವೆ.
ಕೊರಿಯನ್ ಗ್ಲಾಸ್ ಸ್ಕಿನ್ ಹೊಂದುವ ಆಸೆ ಬಹಳಷ್ಟು ಭಾರತೀಯ ಹುಡುಗಿಯರದ್ದು. ಆದರೆ, ಅವರ ಆರೈಕೆ ಎಷ್ಟೇ ಕಾಪಿ ಮಾಡಿದರೂ ಅವರಂತಹ ತ್ವಚೆ ಪಡೆಯಲಾಗುತ್ತಿಲ್ಲವಲ್ಲ ಎಂಬ ಪಶ್ಚಾತ್ತಾಪ ಬಹಳಷ್ಟು ಹುಡುಗಿಯರಲ್ಲಿ ಇಂದಿಗೂ ಕಾಡುತ್ತಿದೆ. ಇದು ಯಾಕೆ ಎಂಬುದುನ್ನು ಮೊದಲು ತಿಳಿದುಕೊಳ್ಳಿ ಎನ್ನುತ್ತಾರೆ ಸೌಂದರ್ಯ ತಜ್ಞರು.
ಕೊರಿಯನ್ನರಿಗಿಂತ ಭಿನ್ನವಾಗಿರುವ ಭಾರತೀಯರ ತ್ವಚೆ
ಭಾರತೀಯರ ತ್ವಚೆ ಕೊರಿಯನ್ನರಿಗಿಂತ ಭಿನ್ನ ಎಂಬುದು ಮೊದಲಿಗೆ ತಿಳಿದುಕೊಳ್ಳಬೇಕು. ಕೊರಿಯನ್ನರದ್ದು ಅಲ್ಲಿನ ಹವಾಮಾನಕ್ಕೆ ತಕ್ಕಂತಿದೆ. ಮೃದುವಾದ ಸಾಫ್ಟ್ ಚರ್ಮ ಅವರದ್ದು,ಅದಕ್ಕೆ ತಕ್ಕಂತೆ ಅವರು ಬಳಸುವ ಬ್ಯೂಟಿ ಸಾಮಗ್ರಿಗಳು ತೀರಾ ಮೈಲ್ಡ್ ಆಗಿರುತ್ತವೆ. ಬಲು ಬೇಗ ಉತ್ತಮ ಫಲಿತಾಂಶ ನೀಡುತ್ತವೆ. ಆದರೆ, ಭಾರತೀಯರದ್ದು ಇದಕ್ಕೆ ತದ್ವಿರುದ್ಧ ಚರ್ಮ. ಈ ಆರೈಕೆಗಳು ಎಲ್ಲರಿಗೂ ಉತ್ತಮ ಫಲಿತಾಂಶ ನೀಡುವುದಿಲ್ಲ. ಅಲ್ಲದೇ ನಮ್ಮಲ್ಲಿ ಎಣ್ಣೆ, ಒರಟು, ಮಿಶ್ರ ಸೇರಿದಂದೆ ನಾನಾ ಬಗೆಯ ಚರ್ಮವನ್ನು ಹೊಂದಿರುತ್ತಾರೆ. ಹಾಗಾಗಿ ಎಲ್ಲರಿಗೂ ಕೊರಿಯನ್ನರು ಬಳಸುವ ಬ್ಯೂಟಿ ಕಾನ್ಸೆಪ್ಟ್ ವರ್ಕ್ ಆಗದು ಎನ್ನುತ್ತಾರೆ ಡರ್ಮಾಟಲಾಜಿಸ್ಟ್.
ಹಾಗಾಗಿ, ಇನ್ನೊಮ್ಮೆ ಕೊರಿಯನ್ನರ ಗ್ಲಾಸ್ ಸ್ಕಿನ್ ಪಡೆಯಲಾಗದಿದ್ದಲ್ಲಿ ಬೇಸರ ಪಟ್ಟುಕೊಳ್ಳದೆ ದೇಸಿ ಅಥವಾ ಅರ್ಗಾನಿಕ್ ಬ್ಯೂಟಿ ಆರೈಕೆಗಳನ್ನು ಕೈಗೊಂಡು ಸುಂದರವಾಗಲು ಪ್ರಯತ್ನಿಸಿ ಎಂದು ಸಲಹೆ ನೀಡುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ ಮಂಗಲಾ.
ಕೊರಿಯನ್ ಗ್ಲಾಸ್ ಸ್ಕಿನ್ ಪ್ರಿಯರಿಗೆ 3 ಸಲಹೆಗಳು
ನಿಮ್ಮ ತ್ವಚೆ ಮೃದುವಾಗಿದ್ದಲ್ಲಿ ಮಾತ್ರ ಈ ಬ್ಯೂಟಿ ಕಾನ್ಸೆಪ್ಟ್ ಅಳವಡಿಸಿಕೊಳ್ಳಿ.
ಮೇಕಪ್‌ನಿಂದಲೂ ತಾತ್ಕಲಿಕವಾಗಿ ಗ್ಲಾಸ್ ಲುಕ್ ಪಡೆಯಬಹುದು.
ವಿದೇಶಿ ಬ್ಯೂಟಿ ಕಾನ್ಸೆಪ್ಟ್ ನಮಗೆಎಲ್ಲರಿಗೂ ಹೊಂದದು ಎಂಬುದು ನೆನಪಿರಲಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Non wearable Fashion: ಫ್ಯಾಷನ್ ಪ್ರಿಯರ ಹುಬ್ಬೇರಿಸಿದ ನತಾಶಾ ಪ್ಯಾರಾಚೂಟ್ ಲುಕ್