ನಮ್ಮ ಆರೋಗ್ಯ ನನ್ನದೇ ಕೈಯಲ್ಲಿ (health tips) ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಆರೋಗ್ಯ, ಆಯುಸ್ಸಿನ ವಿಚಾರ ಬಂದಾಗ, ಎಷ್ಟೇ ದುಡ್ಡು, ಆಸ್ತಿ ಅಂತಸ್ತು ಇದ್ದರೂ ಅವ್ಯಾವುವೂ ಆರೋಗ್ಯ ಕೊಡುವ (health guide) ಸಂತೋಷವನ್ನು (happy life guide) ನೆಮ್ಮದಿಯನ್ನು ಕೊಡಲಾರವು ಎಂಬುದು ಅಂತಿಮ ಸತ್ಯ. ಆದರೂ, ನಿತ್ಯವೂ ಹತ್ತಾರು ಜಂಜಡಗಳಿಂದ, ಬದುಕಿನ ತೂಗುಯ್ಯಾಲೆಯಲ್ಲಿ ಜೀಕುತ್ತಿರುತ್ತೇವೆ. ಯಾವುದಕ್ಕೆ ಮುಖ್ಯವಾಗಿ ಗಮನ ನೀಡಬೇಕೋ ಅದಕ್ಕೆ ಕೊಡದೆ ಒದ್ದಾಡುತ್ತೇವೆ. ಅಬ್ಬ, ಬದುಕಿನ ಎಲ್ಲ ಜವಾಬ್ದಾರಿಗಳು ಮುಗೀತು ಅಂತ ನಿಟ್ಟುಸಿರು ಬಿಡುವಾಗ, ಬದುಕಿಗೂ ಕೂಡಾ ಅಂತ್ಯ ಸಮೀಪಿಸಿರುತ್ತದೆ. ಹಾಗಾದರೆ, ನಮಗೆ ಬದುಕಿನ ನಗ್ನ ಸತ್ಯಗಳು ಯಾಕೆ ಬೇಗನೆ ಅರಿವಾಗುವುದಿಲ್ಲ? ನಮ್ಮ ಆಯುಸ್ಸನ್ನು ಆರೋಗ್ಯದ ಮೂಲಕ ವೃದ್ಧಿ ಮಾಡಲು ನಾವೇಕೆ ಕನಿಷ್ಟ ಪ್ರಯತ್ನವನ್ನೂ ಹಾಕುವುದಿಲ್ಲ ಅಂತ ಕೆಲವರಿಗಾದರೂ ಅನಿಸೀತು. ಅನಿಸಿದರೆ, ನೀವು ಮಾಡುವ ಸಿಂಪಲ್ ತಪ್ಪುಗಳನ್ನು ನೋಡಿ, ನಿಮ್ಮನ್ನು ನೀವು (Life tips) ಬದಲಾಯಿಸಿಕೊಳ್ಳಿ.
1. ಒಂದೇ ಜಾಗದಲ್ಲಿ ಪ್ರತಿದಿನ ಕೂತು ಕೆಲಸ ಮಾಡುತ್ತೀರಾ. ಬೆಳಗ್ಗಿನಿಂದ ಸಂಜೆ/ರಾತ್ರಿಯವರೆಗೆ ಒಂದೇ ಕುರ್ಚಿಗಂಟಿಕೊಂಡು ಕೂತು ಏಳೆಂಟು ಗಂಟೆಗಳ ಕಾಲ ಕೆಲಸ ಮಾಡುತ್ತೀರಾ? ಹಾಗಾದರೆ, ನಿಮ್ಮ ಈ ಮಾದರಿಯ ಕೆಲಸ ಖಂಡಿತವಾಗಿಯೂ ನಿಮ್ಮ ಆಯುಸ್ಸಿನ ಮೇಲೆ ಪರಿಣಾಮ ಬೀರುತ್ತದೆಯಂತೆ. ಒಂದೇ ಜಾಗದಲ್ಲಿ ಕೂತುಕೊಂಡೇ ಮೂರು ಗಂಟೆಗಳಿಂತ ಕಡಿಮೆ ಕೆಲಸ ಮಾಡುವ ಮಂದಿಯ ಆಯುಸ್ಸು ಎರಡು ವರ್ಷಗಳಷ್ಟು ಹೆಚ್ಚಾಗುತ್ತದೆ ಎಂದು ಸಂಶೋಧನಾ ವರದಿಯೊಂದು ಹೇಳುತ್ತದೆ. ಅಷ್ಟೇ ಅಲ್ಲ, ಪ್ರತಿದಿನ ಎರಡು ಗಂಟೆಗಳಿಗೂ ಕಡಿಮೆ ಟಿವಿ ನೋಡುವ ಮಂದಿಯ ಆಯುಸ್ಸು 1.4 ವರ್ಷಗಳಷ್ಟು ಹೆಚ್ಚಾಗುತ್ತದೆಯಂತೆ!
2. ಖಾರವಾದ ಆಹಾರ ಪದಾರ್ಥಗಳು ನಿಮಗಿಷ್ಟವೇ? ಹಾಗಾದರೆ ನಿಮಗಿದು ಶುಭಸುದ್ಧಿ. ತೀರಾ ಮಸಾಲೆಗಳೇ ಇಲ್ಲದೆ ಸಪ್ಪೆಯಾಗಿ ಉಣ್ಣುವ ಮಂದಿಗಿಂತ ಮಸಾಲೆಯುಕ್ತ, ಖಾರ ಇಷ್ಟಪಡುವ ಮಂದಿಯ ಆಯುಸ್ಸು ಶೇ 14ರಷ್ಟು ಹೆಚ್ಚಂತೆ. ಹಾಗಂತ, ಅತಿಯಾಗಿ ಮಸಾಲೆ ತಿನ್ನುವುದು ಎಂದು ಇದರರ್ಥವಲ್ಲ.
3. ಬೆಂಗಳೂರಿನಲ್ಲಿರುವ ಮಂದಿ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಲೇಬೇಕು. ನಿತ್ಯವೂ ಗಂಟೆಗಟ್ಟಲೆ ಟ್ರಾಫಿಕ್ಕಿನಲ್ಲಿ ಕಾರೊಳಗೆ ಬಂಧಿಯಾಗಿ ನಿಮ್ಮ ಸಮಯ ವ್ಯರ್ಥವಾಗುತ್ತಿದ್ದರೆ, ನಿಮ್ಮ ಆಯುಸ್ಸು ಕಡಿಮೆಯಾಗುತ್ತದಂತೆ. ಟ್ರಾಫಿಕ್ಕಿನಲ್ಲಿ ಸಿಕ್ಕಿಹಾಕಿಕೊಳ್ಳುವುದು ಸಾಮಾನ್ಯವಾಗಿ ಮಾನಸಿಕ ಒತ್ತಡವನ್ನು ಹೆಚ್ಚು ಮಾಡುವುದರಿಂದ ರಕ್ತದೊತ್ತಡದ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಇದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರುವ ಮೂಲಕ ಆಯುಸ್ಸಿನ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
4. ಮೈಮೇಲೆ ಸಿಕ್ಕಾಪಟ್ಟೆ ಹಣಕಾಸಿನ ಜವಾಬ್ದಾರಿಗಳನ್ನು ಎಳೆದುಕೊಳ್ಳುವುದರಿಂದಲೂ ಆಯುಸ್ಸು ಕ್ಷೀಣಿಸುತ್ತದೆಯಂತೆ. ಅಂದರೆ, ಅನಗತ್ಯ ಬೇಡದ ವಸ್ತುಗಳನ್ನು ಕೊಳ್ಳುವುದು, ಮನೆ, ಸೈಟು ಇತ್ಯಾದಿಗಳ ಸಾಲ ತೀರಿಸುವಿಕೆ, ಹಲವು ಲೋನುಗಳು ಅನಗತ್ಯ ಮಾನಸಿಕ ಒತ್ತಡವನ್ನು ಹೇರುವುದರಿಂದ ಇದು ರಕ್ತದೊತ್ತಡವ ಮೇಲೆ ಪರಿಣಾಮ ಬೀರುವ ಮೂಲಕ ಆಯುಸ್ಸಿನ ಮೇಲೆಯೂ ಪರೋಕ್ಷವಾಗಿ ಪರಿಣಾಮ ಬೀರುತ್ತದಂತೆ.
ಇದನ್ನೂ ಓದಿ: Life tips: ಅಂದುಕೊಂಡದ್ದನ್ನು ಮಾಡಲಾಗದಿದ್ದರೆ ನೀವು ಹೀಗಿದ್ದೀರಿ!
5. ಸರಿಯಾಗಿ ನಿದ್ದೆ ಮಾಡದೆ ಇರುವುದು ಕೂಡಾ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ದಿನಕ್ಕೆ ಐದು ಗಂಟೆಗಳಿಗಿಂತ ಕಡಿಮೆ ನಿದ್ದೆ ಮಾಡುವ ಮಂದಿಗೆ ಹೃದಯದ ಸಮಸ್ಯೆ, ಮಧುಮೇಹ ಸೇರಿದಂತೆ ಹಲ ವುಸಮಸ್ಯೆಗಳು ಕಾಡಲಾರಂಭಿಸುತ್ತದೆ. ಇದು ಆಯುಸ್ಸನ್ನು ಕುಂಠಿಸುತ್ತದೆ. ಹಾಘಂತ ಅತಿಯಾದ ನಿದ್ದೆಯೂ ಅಂದರೆ ದಿನಕ್ಕೆ ಒಂಬತ್ತಕ್ಕೂ ಹೆಚ್ಚು ಗಂಟೆಗಳ ಕಾಲ ನಿದ್ದೆ ಮಾಡುವುದೂ ಕೂಡಾ ಆರೋಗ್ಯಕ್ಕೆ ಹಾನಿಕರ.
6. ಯೋಗ, ವ್ಯಾಯಾಮ ಇದ್ಯಾವುದುದೂ ನೀವು ಮಾಡುವುದಿಲ್ಲವೇ? ಕನಿಷ್ಟ ಪಕ್ಷ ನಿತ್ಯವೂ ನಡೆಯುವ ಅಭ್ಯಾಸ ನಿಮಗಿಲ್ಲವೇ? ಹಾಗಿದ್ದರೆ ನಿಮ್ಮ ಆಯುಸ್ಸನ್ನು ನೀವು ಕೈಯಾರೆ ಕಡಿಮೆಗೊಳಿಸುತ್ತಿದ್ದೀರಿ ಎಂದೇ ಅರ್ಥ. ದಿನಕ್ಕೆ ಕನಿಷ್ಟ ಎರಡು ಕಿಮೀಗಳಷ್ಟಾದರೂ ಅಂದರೆ ಸುಮಾರು 2,700 ಹೆಜ್ಜೆಗಳಷ್ಟು ನಡೆಯುವುದರಿಂದ ನಿಮ್ಮ ಎಷ್ಟೋ ಸಮಸ್ಯೆಗಳು ಸರಿಯಾಗುತ್ತವೆ. ನೀವು ಚುರುಕಾಗುತ್ತೀರಿ. ಮಾನಸಿಕವಾಗಿ ಒತ್ತಡದಿಂದ ಮುಕ್ತರಾಗಿ ದೇಹ ಮನಸ್ಸು ಹಗುರಾಗುತ್ತದೆ. ನಡಿಗೆ ನಿಮ್ಮನ್ನು ಖುಷಿಯಾಗಿರಿಸುತ್ತದೆ. ಹಾಗಾಗಿ ನಿತ್ಯವೂ ನಡೆಯಿರಿ, ಆಯುಸ್ಸು ವೃದ್ಧಿ ಮಾಡಿ.
ಇದನ್ನೂ ಓದಿ: Life Tips: ಹೇಗೇ ಇದ್ದರೂ ಬದುಕು ಸುಂದರವಾಗಿ ಕಾಣಬೇಕೆಂದರೆ ಇಲ್ಲಿದೆ ಕೀಲಿಕೈ!