ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮೇಕಪ್ ನಿಂದ ಕೊಂಚ ಡಲ್ಲಾಗಿರುವ ಇಲ್ಲವೇ ಗಿಡ್ಡವಾಗಿರುವ ಮೂಗಿನ ಅಂದವನ್ನು ಸರಿಪಡಿಸಬಹುದು, ಇಲ್ಲವೇ ಹೆಚ್ಚಿಸಬಹುದು. ನೋಡಲು ಆಕರ್ಷಕವಾಗಿ ಕಾಣುವಂತೆ ಮಾಡಬಹುದು ಎನ್ನುತ್ತಾರೆ ಮೇಕಪ್ ತಜ್ಞರು.
“ಮುಖದ ಪ್ರಮುಖ ಆಕರ್ಷಣೀಯ ಅಂಗ ಮೂಗು. ಆದರೆ, ಕೆಲವರಲ್ಲಿ ಮೂಗಿನ ಆಕಾರ ಇಡೀ ವದನದ ಅಂದವನ್ನು ಹಿಡಿದಿಡುತ್ತದೆ. ಇಂತಹ ಸಂದರ್ಭದಲ್ಲಿ ಒಂದಿಷ್ಟು ನೋಸ್ ಮೇಕಪ್ ಟಿಪ್ಸ್ ಪಾಲಿಸಿದಲ್ಲಿ ವಧನವನ್ನು ಆಕರ್ಷಕವಾಗಿ ಕಾಣುವಂತೆ ಮಾಡಬಹುದು” ಎನ್ನುತ್ತಾರವರು.
ಮೊಗದ ಸೌಂದರ್ಯ ಹೈಲೈಟಾಗಲು ಹೀಗೆ ಮಾಡಿ
ತೀರಾ ಉದ್ದನೆಯ ಮೂಗು ಇರುವವರು ವದನದ ಸೌಂದರ್ಯ ಹೈಲೈಟಾಗಲು ಆದಷ್ಟೂ ಮುಖಕ್ಕೆ ಡಬಲ್ ಶೇಡ್ ಗಳನ್ನು ಬಳಸಬೇಕು. ಅದು ತ್ವಚೆಯ ಬಣ್ಣವಾಗಿರಕೂಡದು. ಮೇಕಪ್ ಮಾಡುವಾಗ ಮೂಗಿನ ತುದಿಗೆ ಕೆಲವು ಸ್ಟ್ರೋಕ್ಸ್ ಟಚ್ ಕೊಟ್ಟು ನೋಡಿ. ಇದು ಮೂಗು ಅತಿ ಉದ್ದವಾಗಿ ಬಿಂಬಿಸುವುದಿಲ್ಲ. ಬದಲಿಗೆ ಮೂಗಿನ ಜತೆ ಇಡೀ ವಧನವು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
ಇಲ್ಯೂಷನ್ ಸೃಷ್ಟಿಸಿ
ಇನ್ನು ಚಿಕ್ಕ ಮೂಗನ್ನು ಹೊಂದಿರುವಂಥವರು ಮೇಲೆ ತಿಳಿಸಿದ ಬಣ್ಣಕ್ಕೆ ತದ್ವಿರುದ್ಧವಾದ ಶೇಡ್ಸ್ ಬಳಸಿದರೇ ಒಳಿತು. ಡಾರ್ಕ್ ಹಾಗೂ ಲೈಟ್ ಶೇಡ್ಸ್ ನ ಫೌಂಡೇಶನ್ ಅನ್ನು ಮೂಗಿನ ಎರಡೂ ಬದಿಯಲ್ಲಿ ಹಚ್ಚಬೇಕಾಗುತ್ತದೆ. ಇದು ಮೂಗು ಉದ್ದಗಿರುವಂತೆ ಇಲ್ಯೂಷನ್ ಸೃಷ್ಟಿಸುತ್ತದೆ. ಆದಷ್ಟೂ ಮೇಕಪ್ ಮಾಡುವಾಗ ಮೂಗಿನ ಅಕ್ಕ ಪಕ್ಕ ಹಚ್ಚುವಾಗ ಲೈಟ್ ಶೇಡ್ಸ್ ಬಳಸಬೇಕು. ಹೀಗೆ ಮಾಡುವುದರಿಂದ ಮೂಗು ಗಿಡ್ಡವಾಗಿ ಕಾಣುವುದಿಲ್ಲ. ಇದರೊಂದಿಗೆ ಮೇಕಪ್ ಮಾಡುವಾಗ ನಿಮ್ಮ ಮೂಗಿನ ಸುತ್ತಮುತ್ತಲಿನ ತ್ವಚೆಯು ನಿಮ್ಮ ಚರ್ಮಕ್ಕೆ ಹೊಂದುವಂತೆ ಕಾಣುವುದು ಮುಖ್ಯ ಎಂಬುದು ನೆನಪಿರಲಿ.
ಈ ಮೇಲಿನ ಒಂದಿಷ್ಟು ಅಂಶಗಳನ್ನು ಪಾಲಿಸಿದಲ್ಲಿ ಮುಖದೊಂದಿಗೆ ಮೂಗು ಕೂಡ ಆಕರ್ಷಕವಾಗಿ ಕಾಣುವುದು.
ಇದನ್ನೂ ಓದಿ: Yoga Day 2022 | ತ್ವಚೆಯ ಸೌಂದರ್ಯ ಹೆಚ್ಚಿಸುವ ಯೋಗಾಸನ