-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುವೆಯಲ್ಲಿ ಮದುಮಗಳ ಸಿಂಗಾರವನ್ನು (Wedding Fashion) ಹೆಚ್ಚಿಸುವ ಡಿಸೈನರ್ ಮಾಂಗ್‌ಟೀಕಾ(ಬೈತಲೆ ಬೊಟ್ಟು )ಇದೀಗ ವೆಡ್ಡಿಂಗ್ ಫ್ಯಾಷನ್ ಜ್ಯುವೆಲರಿ ಲೋಕದಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ನೋಡಲು ಮನಮೋಹಕವಾಗಿ ಕಾಣುವ ಈ ವೆಡ್ಡಿಂಗ್ ಡಿಸೈನರ್ ಮಾಂಗ್‌ಟೀಕಾಗಳು ಇದೀಗ ಲೆಕ್ಕಿವಲ್ಲದಷ್ಟು ಡಿಸೈನ್‌ನಲ್ಲಿ ಧರಿಸುವ ಸೀರೆ ಹಾಗೂ ಲೆಹೆಂಗಾಕ್ಕೆ ಮ್ಯಾಚ್ ಆಗುವಂತಹ ವಿನ್ಯಾಸಗಳಲ್ಲಿ ಬಿಡುಗಡೆಗೊಂಡಿವೆ.
ಗ್ರ್ಯಾಂಡ್ ಲುಕ್‌ಗಾಗಿ ಮಾತಾ ಪಟ್ಟಿ ಮಾಂಗ್‌ಟೀಕಾ
ಗ್ರ್ಯಾಂಡ್ ಟ್ರೆಡಿಷನಲ್ ಮದುವೆಗಳಲ್ಲಿ ಮದುಮಗಳ ಅಂದವನ್ನು ಹೆಚ್ಚಿಸುವ ಪರ್ಲ್, ಬೀಡ್ಸ್, ಕ್ರಿಸ್ಟಲ್‌ನ ಹಣೆಯ ಸಿಂಗಾರವನ್ನು ಹೆಚ್ಚಿಸುವ ಮಾತಾಪಟ್ಟಿ ಮಾಂಗ್ ಟೀಕಾಗಳು ಹೆಚ್ಚು ಟ್ರೆಂಡಿಯಾಗಿದೆ.
ಇದರೊಂದಿಗೆ ಮೊಗಲ್ ಸ್ಟೈಲ್, ಚಾಂದ್ ಬಾಲಿ, ಟಿಯರ್ ಟ್ರಾಪ್, ಮಲ್ಟಿ ಚೈನ್, ಪಂಜಾಬಿ, ಪೋಲ್ಕಿ, ಓವರ್‌ಸೈಜ್ಡ್, ಜುಮ್ಕಾ, ಪೆಂಡೆಂಟ್ , ಮಹಾರಾಷ್ಟ್ರೀಯನ್ ಸ್ಟೈಲ್‌ಗಳವು ಹೊಸ ವಿನ್ಯಾಸದಲ್ಲಿ ಬಿಡುಗಡೆಗೊಂಡಿದ್ದು, ಮದುಮಗಳ ಡಿಸೈನರ್‌ವೇರ್‌ನ ಕಲರ್ ಹಾಗೂ ಡಿಸೈನ್‌ಗೆ ಸೂಟ್ ಆಗುವಂತಹ ವಿನ್ಯಾಸಗಳಲ್ಲಿ ಎಂಟ್ರಿ ನೀಡಿವೆ ಎನ್ನುತ್ತಾರೆ ಜ್ಯುವೆಲರಿ ಡಿಸೈನರ್ ರಕ್ಷಾ. ಅವರ ಪ್ರಕಾರ, ಎಷ್ಟೇ ಬಂಗಾರದ ಆಭರಣಗಳನ್ನು ಧರಿಸಿದರೂ ಕೂಡ ಹಣೆಯನ್ನು ಅಲಂಕರಿಸುವ ಮಾಂಗ್‌ಟೀಕಾ ಧರಿಸುವುದು ಅಗತ್ಯ. ಇದು ಇಡೀ ಮುಖದ ಅಂದವನ್ನು ಇಮ್ಮಡಿಗೊಳಿಸುತ್ತದೆ. ಜತೆಗೆ ಮದುಮಗಳಿಗೆ ಗ್ರ್ಯಾಂಡ್ ಲುಕ್ ನೀಡುತ್ತದೆ.
ಮುಖದ ಆಕಾರಕ್ಕೆ ತಕ್ಕಂತೆ ಧರಿಸಿ
ಇತ್ತೀಚಿನ ಮದುವೆಗಳಲ್ಲಿ ಮದುಮಗಳು ಮಾತ್ರವಲ್ಲ, ಆಕೆಯ ಸ್ನೇಹಿತೆಯರು, ಆಪ್ತರು ಕೂಡ ಗ್ರ್ಯಾಂಡ್ ಲುಕ್‌ಗಾಗಿ ಮಾಂಗ್‌ಟೀಕಾ ಧರಿಸುವುದು ಹೆಚ್ಚಾಗಿದೆ. ಅದು ಯಾರೇ ಇರಲಿ, ಮುಖದ ಆಕಾರಕ್ಕೆ ತಕ್ಕಂತೆ ಮಾಂಗ್‌ಟೀಕಾ ಧರಿಸಿದಲ್ಲಿ ಮುಖದ ಸೌಂದರ್ಯ ಹೆಚ್ಚುವುದು. ಮೊಟ್ಟೆಯಾಕಾರದ ವಧನದವರಿಗೆ ಎಲ್ಲವೂ ಸೂಟ್ ಆಗುತ್ತವೆ. ಉದಾಹರಣೆಗೆ., ಓವರ್ ಸೈಝಿನ ಚಾಂದ್‌ಬಾಲಿ ಮಾಂಗ್‌ಟೀಕಾ, ಬೋರ್ಲಾ ಹೀಗೆ ಯಾವುದೂ ಬೇಕಾದರೂ ಧರಿಸಬಹುದು. ದುಂಡಾಕಾರದ ಮುಖದವರು ಕಡಿಮೆ ವಿನ್ಯಾಸದ ಚೈನ್ ಲೆಂತ್ ಇರುವಂತಹ ಉದ್ದನೆಯ ಪೆಂಡೆಂಟ್ ರೀತಿಯ ಬೈತಲೆ ಬೊಟ್ಟು ಧರಿಸಬಹುದು. ಕುಂದನ್ ಹಾಗೂ ಬಿಗ್ ಟಿಯರ್ ಡ್ರಾಪ್ ಪೆಂಡೆಂಟ್ ಶೈಲಿಯವು ಆಯಾತಾಕಾರ ಮುಖದವರಿಗೆ ಬೆಸ್ಟ್. ಹೃದಯಾಕಾರದ ಮುಖದವರಿಗೆ ಟ್ರಯಾಂಗಲ್ ಶೇಪ್‌ನದ್ದು ಓಕೆ. ಚೌಕಾಕಾರದ ಮುಖದವರಿಗೆ ಮಾತಾ ಪಟ್ಟಿ ಪರ್ಫೆಕ್ಟ್ ಎಂದು ಸಿಂಪಲ್ ಸಲಹೆ ನೀಡುತ್ತಾರೆ ಸ್ಟೈಲಿಸ್ಟ್ ದಿವಿಜಾ.
ಮಾಂಗ್‌ಟೀಕಾ ಪ್ರಿಯರಿಗೆ ಒಂದಿಷ್ಟು ಸಲಹೆ
- ನಿಮ್ಮ ಮುಖದ ಆಕಾರಕ್ಕೆ ತಕ್ಕಂತೆ ಆಯ್ಕೆ ಮಾಡಿ.
- ಪರ್ಲ್ ಹಾಗೂ ಬೀಡ್ಸ್ನವು ಗ್ರ್ಯಾಂಡ್ ಲುಕ್ ನೀಡುತ್ತವೆ.
- ಹೇರ್ಸ್ಟೈಲ್ ನಂತರ ಮಾಂಗ್‌ಟೀಕಾ ಧರಿಸಿ.
- ಮಧ್ಯಭಾಗ ಬೈತಲೆ ತೆಗೆದು ನಂತರ ಮಾಂಗ್‌ಟೀಕಾ ಧರಿಸಿ.
- ಟ್ರೆಡಿಷನಲ್ ಲುಕ್‌ಗಾಗಿ ಮಾಂಗ್‌ಟೀಕಾ ಕೆಳಗೆ ಅಗಲವಾದ ಬಿಂದಿ ಇರಿಸಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)